ಕೋಟ: ಕಸಾಯಿಖಾನೆಗೆ ಸಾಗಿಸಲು ಪ್ರಯತ್ನಿಸುತ್ತಿದ್ದ ಮೂರು ಜಾನುವಾರುಗಳನ್ನು ರಕ್ಷಿಸಿ, ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದ ಪ್ರಕರಣ ಬೆಳಗಿನ ಜಾವ ಶಿರಿಯಾರ ಸಮೀಪ ನೈಲಾಡಿಯಲ್ಲಿ ನಡೆದಿದೆ. ಇಲ್ಲಿನ ಚಿಕ್ಕು ದೇವಸ್ಥಾನಕ್ಕೆ ಹೋಗುವ ಕ್ರಾಸ್ ಬಳಿ ಹಾಡಿಯಲ್ಲಿ ಅಕ್ರಮವಾಗಿ ಮೂರು ಹೆಣ್ಣು ಕರುಗಳನ್ನು ಕಟ್ಟಿ ಹಾಕಿಕೊಂಡಿರುವ ಬಗ್ಗೆ ಖಚಿತ ವರ್ತಮಾನ ಪಡೆದ ಕೋಟ ಠಾಣಾಧಿಕಾರಿ ಕಬ್ಟಾಳ್ರಾಜ್ ಅವರು ತಮ್ಮ ಸಿಬಂದಿಗಳೊಂದಿಗೆ ದಾಳಿ ನಡೆಸಿದ್ದು, ಈ ಸಂದರ್ಭ ಮೂವರು ಆರೋಪಿಗಳಲ್ಲಿ ಸಂತೋಷ್ ಶೆಟ್ಟಿ ಹಾಗೂ ರಜಾಕ್ ಪರಾರಿಯಾಗಿದ್ದು ಕೃಷ್ಣ ಗಿಳಿಯಾರು ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಬಜಾಜ್ ಡಿಸ್ಕವರ್ ಬೈಕ್, ವ್ಯಾಪಾರಕ್ಕೆ ಬಳಿಸಿದ 3200ರೂ ನಗದು ಹಾಗೂ 3 ಮೊಬೆ„ಲ್ ಪೋನ್ ವಶಪಡಿಸಿಕೊಳ್ಳಲಾಗಿದೆ. ರಕ್ಷಿಸಿದ ಗೋವುಗಳನ್ನು ಗೋಶಾಲೆ ಹಸ್ತಾಂತರಿಸಲಾಗಿದ್ದು, ಕೋಟ ಠಾಣಾಧಿಕಾರಿಗಳ ಈ ಯಶಸ್ವಿ ಕಾರ್ಯಾಚರಣೆಗೆ ಹಿಂದೂಜಾಗರಣಾ ವೇದಿಕೆ ಕೋಟ ಹಾಗೂ ಶಿರಿಯಾರ ಘಟಕ ಶ್ಲಾಘನೆ ವ್ಯಕ್ತಪಡಿಸಿದೆ.
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪುರ: ಈ ದೇಶದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಮಾಹಿತಿ, ತಿಳುವಳಿಕೆಗಳನ್ನು ಪಡೆದುಕೊಂಡು ಸತ್ಪ್ರಜೆಗಳಾಗಿ ಮೂಡಿಬರಬೇಕು. ಉನ್ನತ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಸೂಕ್ತ ತರಬೇತಿಗಳನ್ನು ಪಡೆದುಕೊಳ್ಳುವ ಮೂಲಕ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಾಲ್ಯದಿಂದಲೇ ಸಿದ್ಧರಾಗಬೇಕು. ಆ ನೆಲೆಯಲ್ಲಿ ಇಂಥಹ ತರಬೇತಿಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕುಂದಾಪುರ ತಾ.ಪಂ.ಅಧ್ಯಕ್ಷರಾದ ಭಾಸ್ಕರ ಬಿಲ್ಲವ ಹೇಳಿದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಕುಂದಾಪುರ ತಾಲೂಕು ಶಾಖೆಯ ನೇತೃತ್ವದಲ್ಲಿ ಸಂಘದ ನೇತಾಜಿ ಸಭಾಭವನದಲ್ಲಿ ನವೋದಯ ವಿದ್ಯಾರ್ಥಿಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ದೇಶದ ಸಂಸ್ಕೃತಿ-ಸಂಸ್ಕಾರ ಶ್ರೇಷ್ಠವಾದುದು. ಈ ದೇಶವನ್ನು ಸಂಪದ್ಭರಿತಗೊಳಿಸಲು ಆನೇಕ ಮಹನೀಯರು ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ದೇಶಕ್ಕಾಗಿ ಪ್ರಾಣದ ಹಂಗನ್ನೇ ತೋರೆದು ದೇಶ ಕಾಯುವ ಸೈನಿಕರು ನಮಗಿಂದು ನಿಜವಾದ ನಾಯಕರು. ದೇಶಪ್ರೇಮವನ್ನು ಬೆಳೆಸಿಕೊಳ್ಳುವ ಮೂಲಕ ದೇಶಕ್ಕೆ ನಮ್ಮಿಂದಾದ ಕೊಡುಗೆ ನೀಡಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮುಖ್ಯ ಅತಿಥಿ ಮುಂಬಯಿ ಥಾಣೆಯ ಉದ್ಯಮಿ ರತ್ನಾಕರ ಶೆಟ್ಟಿ ಮಾತನಾಡಿ, ತಮ್ಮ ಮಕ್ಕಳಿಗೆ ನವೋದಯ…
ಬೈಂದೂರು: ಉರ್ದು ಭಾಷೆಯ ಜನಪ್ರಿಯ ಸಂಗೀತ ಪ್ರಕಾರದಲ್ಲೊಂದಾದ ಕವ್ವಾಲಿ ಹಾಡುವಿಕೆಯಲ್ಲಿ ಜಿಲ್ಲಾ ಮಟ್ಟದ ಸಮೂಹ ಗಾನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಪಡೆದ ನಾಗೂರಿನ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನಾಗೂರಿನಲ್ಲಿ ಜರುಗಿದ ೫ವಲಯಗಳ ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಅಜಿತ್, ಅನುಷಾ ಪೈ, ವಿಜೇತಾ ಪ್ರಭು ಗಾಯನದಲ್ಲಿ, ಗೌರವ್ ಕಾಮತ್ ತಬಲಾ, ಹಾಗೂ ಅಜಿತ್ ಭಂಡಾರ್ಕಾರ್ ಹಾರ್ಮೋನಿಯಂನಲ್ಲಿದ್ದರು. ವಾದನ ಗಾಯನ ಹಾಗೂ ಅಭಿನಯದಲ್ಲಿ ಒಂದಾಗಿ ಉತ್ತಮವಾದ ಪ್ರತಿಭೆ ಪ್ರದರ್ಶಿಸಿ ಪ್ರಥಮ ಸ್ಥಾನಕ್ಕೆ ಆಯ್ಕೆಯಾಗಿದ್ದರು. ಈ ತಂಡದ ಎಲ್ಲಾ ವಿದ್ಯಾರ್ಥಿಗಳ ಮಾತೃ ಭಾಷೆ ಕೊಂಕಣಿಯಾಗಿದ್ದರೂ ಉರ್ದುವಿನಲ್ಲಿ ಸ್ಪರ್ಧಿಸಿ ಗೆದ್ದರುವುದು ವಿಶೇಷವಾಗಿದೆ. 10 ನಿಮಿಷ ಅವಧಿಯ ಈ ಸುಧೀರ್ಘ ಸ್ಪರ್ದೆಗೆ ಕವ್ವಾಲಿ ಹಾಡಿನ ಹೊಂದಾಣಿಕೆ ಅಭಿನಯ ಮತ್ತು ವಿನ್ಯಾಸವನ್ನು ಶಿಕ್ಷಕಿ ಶ್ರೀಮತಿ ವರ್ಷಾ ಆರ್ ನಾಯಕ್ ಹಾಗೂ ಶಿಕ್ಷಕ ಶ್ರೀನಿವಾಸ ಪ್ರಭು ಸಂಗೀತ ನಿರ್ದೇಶನ ನೀಡಿದ್ದರು.
ಕುಂದಾಪುರ: ಕಾರವಾರ-ಬೆಂಗಳೂರು ರೈಲು ವೇಗ ಹೆಚ್ಚಳಕ್ಕಾಗಿ ಕಾರವಾರದಿಂದ ಹಾಸನ – ಅರಸಿಕೆರೆ ಮಾರ್ಗವಾಗಿ ನೇರ ಬೆಂಗಳೂರಿಗೆ ಮತ್ತೊಂದು ರೈಲು ಆರಂಭಿಸಲು ಆಗ್ರಹಿಸಿ, ರದ್ದು ಮಾಡಿರುವ ಇಂಟರ್ಸಿಟಿ ರೈಲನ್ನು ಓಡಿಸಲು, ರೈಲು ಸೌಲಭ್ಯಗಳಿಂದ ವಂಚಿತರಾಗಿರುವ ಉಡುಪಿ ಜನತೆಗೆ ನ್ಯಾಯ ಒದಗಿಸಬೇಕೆಂದು ಸಿಪಿಎಂ ಪಕ್ಷ ಕಾರವಾರ-ಬೆಂಗಳೂರಿನ ರೈಲಿನಲ್ಲಿ ಪ್ರಯಾಣಿಕರಿಂದ ಕುಂದಾಪುರದಿಂದ ಚಲಿಸುವ ರೈಲಿನಲ್ಲಿ ಸಹಿ ಸಂಗ್ರಹ ಮಾಡಲಾಯಿತು. ಸುಮಾರು ೩೦೦ ಜನರು ಸಹಿ ಸಂಗ್ರಹದಲ್ಲಿ ಪಾಲ್ಗೊಂಡು ತಮ್ಮ ಆಕ್ರೋಶ ಹೊರಗೆಡಹವಿದರು. ಸಹಿ ಸಂಗ್ರಹ ಚಳುವಳಿಯ ನೇತೃತ್ವವನ್ನು ಕುಂದಾಪುರ ವಲಯ ಕಾರ್ಯದರ್ಶಿ ಹೆಚ್. ನರಸಿಂಹ, ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಬಲ್ಕೀಸ್, ರಾಜು ದೇವಾಡಿಗ, ಗಣೇಶ್ ಬೈಂದೂರು, ಪ್ರಕಾಶ ಕೋಣಿ, ಲಕ್ಷ್ಮಣ ಡಿ. ಶ್ರೀಧರ ಉಪ್ಪುಂದ, ವೆಂಕಟೇಶ ಕೋಣಿ ಉಪಸ್ಥಿತರಿದ್ದರು.
ಗಂಗೊಳ್ಳಿ: ಹೃದಯರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡ ಖಾಯಿಲೆ, ನವಜಾತ ಶಿಶುಗಳ ಶಸ್ತ್ರಚಿಕಿತ್ಸೆ, ಸುಟ್ಟಗಾಯ ಮೊದಲಾದವುಗಳಿಗೆ ರಾಜ್ಯ ಸರಕಾರ ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿದ ರೋಗಿಗಳಿಗೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ಉಡುಪಿ ಜಿಲ್ಲಾ ವ್ಯವಸ್ಥಾಪಕ ಸಚ್ಚಿದಾನಂದ ಹೇಳಿದರು. ಅವರು ಮೇಲ್ಗಂಗೊಳ್ಳಿಯ ಅಂಬೇಡ್ಕರ್ ಭನದ ವಠಾರದಲ್ಲಿ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಬೆಂಗಳೂರು, ಆದರ್ಶ ಆಸ್ಪತ್ರೆ ಉಡುಪಿ ಇವರ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಮಂಡಲ ಮೇಲ್ಗಂಗೊಳ್ಳಿ, ಅಮೃತಾ ಯುವತಿ ಮಂಡಲ ಹಾಗೂ ಅರ್ಚನಾ ಯುವತಿ ಮಂಡಲ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಶಾಲಾ ಮಕ್ಕಳಿಗೂ ರಾಜ್ಯ ಸರಕಾರ ಉಚಿತ ಚಿಕಿತ್ಸೆ ನೀಡುವ ಯೋಜನೆ ಜಾರಿಗೊಳಿಸಿದ್ದು, ಇದೀಗ ಮುಖ್ಯಮಂತ್ರಿ ಸಾಂತ್ವನ ಯೋಜನೆಯ ಮೂಲಕ ಇನ್ನಷ್ಟು ಸೌಲಭ್ಯ ನೀಡಲು ಸರಕಾರ ಮುಂದಾಗಿದೆ. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಷ್ಮಾ…
ಕುಂದಾಪುರ: ವಂಡ್ಸೆ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಂಡ್ಸೆ ಒಕ್ಕೊಟದ ಸವಿನಯ ಸ್ವ-ಸಹಾಯ ಸಂಘ 10ನೇ ವರ್ಷದ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಜಿ. ಶ್ರೀಧರ ಶೆಟ್ಟಿ ಅವರು ಮಾತನಾಡಿ, 2005ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವಂಡ್ಸೆಗೆ ಕಾಲಿಟ್ಟಂದಿನಿಂದ ವಂಡ್ಸೆಯಲ್ಲಿ ಬದಲಾವಣೆ ಆರಂಭವಾಗಿದೆ. ಯೋಜನೆಯಿಂದ ಜನಸೇವಾ ಮನೋಭಾವನೆ, ಧಾರ್ಮಿಕ ಪ್ರಜ್ಞೆ ಜಾಗೃತವಾಗಿದೆ. ಆರ್ಥಿಕ ಪ್ರಗತಿ, ಸಮಯಪ್ರಜ್ಞೆ ಮೂಡಿದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ವಂಡ್ಸೆ ಒಕ್ಕೂಟದ ಅಧ್ಯಕ್ಷೆ ಜಯಂತಿ ಪಿ.ಶೆಟ್ಟಿ ವಹಿಸಿದ್ದರು. ತಿರುಮಲ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಶ್ವರರಾದ ವಿ.ಕೆ.ಶಿವರಾಮ ಶೆಟ್ಟಿ , ತಾಲೂಕು ಜನ ಜಾಗೃತಿ ಸಮಿತಿ ಸದಸ್ಯರಾದ ತ್ಯಾಂಪಣ್ಣ ಶೆಟ್ಟಿ, ಅರ್ಚಕರಾದ ಗೋಪಾಲಕೃಷ್ಣ ಉಪಾಧ್ಯಾಯ, ರಾಜಶೇಖರ ಉಪಾಧ್ಯಾಯ, ವಂಡ್ಸೆ ಸಿ.ಎ. ಬ್ಯಾಂಕ್ ನಿರ್ದೆಶಕರಾದ ಸಂಜೀವ ಪೂಜಾರಿ, ಜಡ್ಕಲ್ ಗ್ರಾಮ ಪಂಚಾಐತ್ ಪಿ ಡಿ ಓ…
ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಕಟ್ಟಡ ಗೊಂಬೆಮನೆಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ನವೆಂಬರ್ ತಿಂಗಳ ಕಾರ್ಯಕ್ರಮದ ಸಂದರ್ಭದಲ್ಲಿ ಕಲಾ ಪ್ರೋತ್ಸಾಹಕ ಉಪ್ಪಿನಕುದ್ರು ವಾಸುದೇವ ಐತಾಳ್ ಮತ್ತು ಗಣೇಶ್ ಐತಾಳ್ ಅವರನ್ನು ಸನ್ಮಾನಿಸಲಾಯಿತು. ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕರಾದ ಶ್ರೀಧರ ಹಂದೆ ಮಾತನಾಡಿ 350 ವರ್ಷಗಳ ಹಿನ್ನೆಲೆಯ ಉಪ್ಪಿನಕುದ್ರು ಗೊಂಬೆಯಾಟ ಪರಂಪರೆ ಇಂದು ಆರನೇ ತಲಾಂತರದಲ್ಲಿ ನಡೆಯುತ್ತಿರುವುದೇ ಒಂದು ದಾಖಲೆ. ಇಂತಹ ಒಂದು ಅಕಾಡೆಮಿಯಲ್ಲಿ ಪರಂಪರೆಯ ಮಕ್ಕಳ ಮೇಳಕ್ಕೂ ಅವಕಾಶ ಸಿಕ್ಕಿರುವುದು ಸಂತೋಷದ ವಿಷಯ. ಸಂಪ್ರದಾಯ, ಪರಂಪರೆ ಉಳಿಸಬೇಕಾದವರು ಪ್ರೇಕ್ಷಕರು ಎಂದು ತಿಳಿಸಿದರು. ತಿಂಗಳ ಗೊಂಬೆ ಮನೆ ಅತಿಥಿಯಾಗಿ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಅಸೋಸಿಯೇಶನ್ ಅಧ್ಯಕ್ಷ ಡಾ. ಕಾಶೀನಾಥ ಪೈ ಗಂಗೊಳ್ಳಿ ಭಾಗವಹಿಸಿದ್ದರು. ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಸ್ವಾಗತಿಸಿದರು. ಶ್ರೀಧರ ಹಂದೆಯವರ ನೇತೃತ್ವದಲ್ಲಿ ಸಾಲಿಗ್ರಾಮ ಮಕ್ಕಳ ಮೇಳದವರಿಂದ ಸಂಪ್ರದಾಯದ ಚೌಕಟ್ಟಿನಲ್ಲಿ ವೀರ ವೃಷಸೇನ ಯಕ್ಷಗಾನ ಬಯಲಾಟ ಜರುಗಿತು. ಮಕ್ಕಳ ಯಕ್ಷಗಾನ ನೆರದ ಪ್ರೇಕ್ಷಕರನ್ನು ರಂಜಿಸಿತು. ನಾಗೇಶ್ ಶ್ಯಾನುಭಾಗ್ ಕಾರ್ಯಕ್ರಮ ನಿರ್ವಹಿಸಿದರು.
ಆಳ್ವಾಸ್ ನುಡಿಸಿರಿಯ ರೂವಾರಿ ಡಾ. ಎಂ ಮೋಹನ್ ಆಳ್ವ್ ಅವರೊಂದಿಗೆ ಮಾತುಕತೆ. ಸಂದರ್ಶನ: ಶ್ರೀಗೌರಿ ಎಸ್. ಜೋಶಿ ‘ಕನ್ನಡಭಾಷೆಯನ್ನು ಬೆಳೆಸುವ, ಕನ್ನಡ ಕಟ್ಟುವ ಕಾರ್ಯಗಳನ್ನು ಕೇವಲ ಸರಕಾರ, ಅಕಾಡೆಮಿಗಳೇ ಏಕೆ ಮಾಡಬೇಕು?ಕನ್ನಡ ಮನಸ್ಸುಗಳನ್ನು ಕಟ್ಟುವ ಕೈಂಕರ್ಯ ಒಬ್ಬ ಶ್ರೀಸಾಮಾನ್ಯನಿಂದ ಏಕೆ ಆಗಬಾರದು?’ ಎಂಬ ಆಶಯದೊಂದಿಗೆ ಆರಂಭವಾದ ಕನ್ನಡದ ಹಬ್ಬ ‘ಆಳ್ವಾಸ್ ನುಡಿಸಿರಿ’. ಈ ಕನ್ನಡ ಉತ್ಸವದ ರೂವಾರಿ ‘ಸಂಸ್ಕೃತಿಯ ಹರಿಕಾರ’ ಎಂದೇ ಖ್ಯಾತರಾದ ಡಾ.ಎಂ. ಮೋಹನ್ ಆಳ್ವರು. ಪ್ರಸ್ತುತ ಕಾಲಘಟ್ಟದಲ್ಲಿ ಅವಶ್ಯಕತೆಗಳಿಗೆ ತಕ್ಕಂತೆ ಹೊಸತನಗಳಿಗೆ ಸ್ಪಂದಿಸುವುದು ಅಗತ್ಯವೆಂದು ಹೇಳುವ ಡಾ.ಆಳ್ವರು ‘ಕರ್ನಾಟಕ:ಹೊಸತನದ ಹುಡುಕಾಟ’ ಎಂಬ ಮುಖ್ಯ ಪರಿಕಲ್ಪನೆಯಡಿಯಲ್ಲಿ ಈ ಸಲದ ನುಡಿಸಿರಿಯನ್ನು ಆಯೋಜಿಸಿದ್ದಾರೆ. ಹೊಸತನ ಎಂದರೇನು, ಹೊಸತನದಡಿಯಲ್ಲಿ ನುಡಿಸಿರಿಯ ಆಯಾಮಗಳೇನು ಎಂಬುದರ ಕುರಿತು ಅವರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದ್ದು ಹೀಗೆ….. 1. ‘ಆಳ್ವಾಸ್ ನುಡಿಸಿರಿ’ ಪ್ರತಿಸಲವೂ ‘ಕನ್ನಡ ಮನಸ್ಸು’ ಎಂಬ ಮುಖ್ಯ ಪರಿಕಲ್ಪನೆಯಡಿಯಲ್ಲಿ ನಡೆಯುತ್ತಿತ್ತು.ಆದರೆ ಈ ಸಲದ ಕೇಂದ್ರ ವಿಷಯವನ್ನು ‘ಕರ್ನಾಟಕ: ಹೊಸತನದ ಹುಡುಕಾಟ’ ಎಂದು ಬದಲಾಯಿಸಿದ್ದೀರಿ. ಈ ಬದಲಾವಣೆಯ ಹಿನ್ನೆಲೆಯೇನು? 12…
ಬೈಂದೂರು: ಇಂದಿನ ಸೋಲಿನ ಬಗ್ಗೆ ಆತ್ಮ ವಿಮರ್ಶೆ ಮಾಡಿ ಮುಂದಿನ ದಿನಗಳಲ್ಲಿ ಗೆಲುವಿಗಾಗಿ ಶ್ರಮಿಸಬೇಕು. ನಮ್ಮಲ್ಲಿರುವ ಪ್ರತಿಭೆಯನ್ನು ಉಜ್ವಲಗೊಳಿಸಲು ಸರಿಯಾಗಿ ವಿವೇಚಿಸಿ ನ್ಯಾಯವಾದ ರಹದಾರಿಯಲ್ಲಿ ಧೈರ್ಯದಿಂದ ಮುಂದುವರಿದಾಗ ಸಾಧನೆಗೆ ಯಾವ ಅಡ್ಡಿಯೂ ಆಗಲಾರದು ಎಂದು ಆರ್.ಕೆ. ಸಂಜೀವರಾವ್ ಜನ್ಮಶತಾಬ್ದಿ ಆಚರಣಾ ಸಮಿತಿಯ ಗೌರವಾಧ್ಯಕ್ಷ ಬಸ್ರೂರು ಅಪ್ಪಣ್ಣ ಹೆಗ್ಡೆ ಹೇಳಿದರು. ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರ್.ಕೆ. ಸಂಜೀವರಾವ್ ಜನ್ಮಶತಾಬ್ದಿ ಆಚರಣಾ ಸಮಿತಿ ಸಹಯೋಗದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಗುರಿಯಿಲ್ಲದಿದ್ದರೆ. ಏನನ್ನೂ ಸಾಧಿಲಾಗದು. ಸುಸ್ಥಿರತೆ ನೆಮ್ಮದಿಯಿಂದ ನಮ್ಮ ಕರ್ತವ್ಯಗಳನ್ನು ಅರಿತು ಭೌತಿಕ ಮತ್ತು ಮಾನಸಿಕವಾಗಿ ಮೊದಲು ಸಧೃಡರಾಗಬೇಕು. ಪ್ರತಿಭೆಯ ಸಾಮರ್ಥ್ಯ ಪ್ರದರ್ಶಿಸಲು ಪ್ರತಿಭಾ ಕಾರಂಜಿಗಳು ಸೂಕ್ತ ವೇದಿಕೆ ಕಲ್ಪಿಸಿಕೊಡುತ್ತಿದೆ. ಬಹುಮುಖ ಪ್ರತಿಭೆಗಳಿಗೆ ಇಲ್ಲಿ ಪೂರಕವಾದ ವ್ಯವಸ್ಥೆ ರೂಪಿಸಲಾಗಿದೆ. ಇದೂ ಕೂಡಾ ನಿಮಗೆ ಸಾಧನೆಯ ಒಂದು ಮೆಟ್ಟಿಲಾಗಿದ್ದು, ಸ್ವಂತ ಪರಿಶ್ರಮದಿಂದ ನಿಮ್ಮಲ್ಲಿರುವ ಪ್ರತಿಭೆಯನ್ನು ಅರಳಿಸಲು ಇಂತಹ ವೇದಿಕೆಗಳಲ್ಲಿ ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು…
ಕುಂದಾಪುರ: ಎಲ್ಲರ ನಡೆ ಹಾಗೂ ನುಡಿ ಬಹಳ ಅಂತರವನ್ನು ಕಾಣುತ್ತೆವೆ. ಇಂದು ಯಾರೂ ಮಾತನ್ನು ಕೇಳಲು ಸಿದ್ದರಿಲ್ಲ. ಯಾರು ನಡೆದಂತೆ ನುಡಿಯುತ್ತಾರೋ ಅವರ ಮಾತಿಗೆ ಎಂದಿಗೂ ಬೆಲೆಯಿದೆ. ನಮ್ಮ ಮಾತು, ನಗು, ನಡತೆ ಎಲ್ಲವೂ ಬೇರೆಯವರಿಗೆ ನೋವಾಗದಂತಿರಬೇಕು ಎಂದು ಶಿವಮೊಗ್ಗ ಕಸ್ತೂರ್ಬಾ ಬಾಲಿಕಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನಟೇಶ್ ಹೇಳಿದರು. ಅವರು ಇಲ್ಲಿನ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಕನ್ನಡ ವೇದಿಕೆಯ ಕುಂದಾಪುರದ ಡಿಂಡಿಮ ಮೂರನೇ ಭಾನುವಾರದ ಕಾರ್ಯಕ್ರಮದ ಮಾತಿನರಮನೆಯಲ್ಲಿ ಕಗ್ಗ – ಕನ್ನಡದಲ್ಲಿ ಕಟ್ಟಿದ ಜೀವನ ದರ್ಶನ ಎಂಬ ವಿಷಯದ ಕುರಿತು ಮಾತನಾಡಿದರು. ಡಿವಿಜಿಯವರ ಕಗ್ಗದಲ್ಲಿ ನಮ್ಮೆಲ್ಲರ ಬದುಕನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಜೀವನದಲ್ಲಿ ಎದುರಾಗುವ ಪ್ರತಿ ಸಮಸ್ಯೆಗಳನ್ನು ಹಾಗೂ ಅದನ್ನು ಎದುರಿಸುವ ರೀತಿಯನ್ನು ಎಂದೀ ಡಿವಿಜಿ ತೆರೆದಿಟ್ಟಿದ್ದರು. ಅದು ಎಂದಿಗೂ ಪ್ರಸ್ತುತ ಎಂದವರು ಹೇಳಿದರು. ಕುಂದಾಪುರದ ಹಿರಿಯ ಛಾಯಾಚಿತ್ರಕಾರ ಪುಂಡಲೀಕ ಶ್ಯಾನುಭೋಗ್ ಅವರಿಗೆ ನುಡಿ ಗೌರವ ಸಮರ್ಪಿಸಲಾಯಿತು. ಕನ್ನಡ ವೇದಿಕೆಯ ಅಧ್ಯಕ್ಷ ಸುಬ್ರಮಣ್ಯ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಮನಾ ಎನ್.…
