Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಕುಂದಾಪುರ: ಕಲ್ಮಶರಹಿತ ಶುದ್ಧ ಮನಸ್ಸು, ಗುರುಹಿರಿಯರ ಆಶಿರ್ವಾದ ಹಾಗೂ ಸ್ಪಷ್ಟ ಗುರಿಯೊಂದಿಗೆ ಮುನ್ನಡೆದರೇ ಮಾತ್ರ ಬದುಕಿನಲ್ಲಿ ಸಾಧನೆಗೈಯಲು ಸಾಧ್ಯ ಎಂದು ಅಬುದಾಬಿಯ ಖ್ಯಾತ ಉದ್ಯಮಿ ಪದ್ಮಶ್ರೀ ಡಾ| ಬಿ. ಆರ್. ಶೆಟ್ಟಿ ಹೇಳಿದರು ಅವರು ಇಲ್ಲಿನ ಆರ್. ಎನ್. ಶೆಟ್ಟಿ ಕಲ್ಯಾಣ ಭವನದಲ್ಲಿ ಕೀರ್ತಿಶೇಷ ಶ್ರೀ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್ ನ ಯಡ್ತರೆ ಮಂಜಯ್ಯ ಶೆಟ್ಟಿ ಜಯಂತಿ ಉತ್ಸವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಕಷ್ಟ-ಸುಖ ಎರಡನ್ನೂ ಅರಿತು ಜೀವನದಲ್ಲಿ ಮೇಲೆ ಬಂದರೆ ಅದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿರುವುದಿಲ್ಲ. ಬದುಕಿನಲ್ಲಿ ಹಣವೇ ಮುಖ್ಯವಲ್ಲ. ನಿಷ್ಠೆಯಿಂದ ಕೆಲಸ ಮಾಡುವುದೂ ಅಷ್ಟೇ ಮುಖ್ಯ. ನೀವು ನಿಷ್ಠೆಯಿಂದಿದ್ದರೇ, ನಿಮ್ಮನ್ನನುಸರಿಸುವವರೂ ನಿಷ್ಠೆಯಿಂದ ಇರುತ್ತಾರೆ ಮತ್ತು ನೀವು ಎತ್ತರಕ್ಕೆ ಬೆಳೆಯುತ್ತೀರಿ ಎಂದವರು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಶಾಸಕ ಎ.ಜಿ. ಕೊಡ್ಗಿ ಮಾತನಾಡಿ ಯಡ್ತರೆ ಮಂಜಯ್ಯ ಶೆಟ್ಟಿಯವರ ವ್ಯಕ್ತಿತ್ವದಲ್ಲಿ ರಾಜಕೀಯ ಕಾಣಲು ಸಾಧ್ಯವಿಲ್ಲ. ಅವರು ಬದುಕಿನುದ್ದಕ್ಕೂ…

Read More

ಕುಂದಾಪುರ: ಚಿಕ್ಕನ್‌ಸಾಲು ರಸ್ತೆಯ ಶ್ರೀ ಬಗಳಾಂಬ ತಾಯಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿದಾನಗಳು ಅಚ್ಚುಕಟ್ಟಾಗಿ ನೆರವೇರಿತು. ಪ್ರತಿದಿನ ಭಜನೆ ವಿವಿಧ ಪೂಜೆ, ಅಲಂಕಾರ ಸೇವೆಗಳು ಪ್ರದಾನ ಅರ್ಚಕ ಗಣಪತಿ ಸುವರ್ಣ ಅವರ ಮಾರ್ಗದರ್ಶನದಲ್ಲಿ ವಿದ್ಯುಕ್ತವಾಗಿ ಜರುಗಿತು. ಈ ಸಂದರ್ಭದಲ್ಲಿ ನಡೆದ ಚಂಡಿಕಾ ಯಾಗದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. ಉತ್ಸವ ಸಮಿತಿ ಅಧ್ಯಕ್ಷ ಸೀತರಾಮ ಹೇರಿಕುದ್ರು, ಗೌರವಾಧ್ಯಕ್ಷ ಕೆ. ಬಿ. ಪ್ರಕಾಶ್ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Read More

ಶಂಕರನಾರಾಯಣ: ಇಲ್ಲಿನ ವ್ಯಾಪ್ತಿಯ ಮಾವಿನಕೊಡ್ಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕೊಲ್ಲೂರು ಶ್ರೀ ಮೂಕಾಂಬಿಕಾ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಎಸ್. ಅರುಣ್‌ಪ್ರಕಾಶ್ ಶೆಟ್ಟಿಯವರನ್ನು ಸ್ಥಳೀಯರು ಸನ್ಮಾನಿಸಿ ಗೌರವಿಸಿದರು.

Read More

ಕುಂದಾಪುರ: ರೋಟರ‍್ಯಾಕ್ಟ್ ಕ್ಲಬ್ ಕುಂದಾಪುರ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ಇಂಜಿನಿಯರ್ ಕಿಶೋರ್ ಕೊಡಮಾಡಿದ ವೀಲ್ ಚೇರ್‌ನ್ನು ವೆಂಕಟರಮಣ ಆಚಾರ್ಯ ಅವರಿಗೆ ಹಾಗೂ ವಾಟರ್ ಪ್ಯೂರಿಫಯರ್‌ನ್ನು ಕೋಣಿಯ ಮಾನಸ ಜ್ಯೋತಿ ಸಂಸ್ಥೆಗೆ ಹಸ್ತಾಂತರಿಸಲಾಯಿತು. ಭಾರತೀಯ ಜೀವವಿಮಾ ಪ್ರತಿನಿಧಿ ಶಂಕರ ಐತಾಳ್, ರೋಟರ‍್ಯಾಕ್ಟ್ ಕ್ಲಬ್ ಕುಂದಾಪುರ ಪೂರ್ವಾಧ್ಯಕ್ಷರಾದ ಪ್ರವೀಣ ಕುಮಾರ್ ಟಿ, ಎಚ್. ಎಸ್. ಹತ್ವಾರ್, ಶ್ರೀಧರ ಸುವರ್ಣ, ಕಿಶೋರ್, ದಾಮೋದರ ಪೈ ಉಪಸ್ಥಿತರಿದ್ದರು.

Read More

ಕುಂದಾಪುರ: ವಂಡ್ಸೆ ಗ್ರಾಮದ ಹಳಂಡಿಯ ಪುರಾಣ ಪ್ರಸಿದ್ಧ ವನದುರ್ಗಾಪರಮೇಶ್ವರಿ(ಕಾನಮ್ಮ) ದೇವಸ್ಥಾನ ಶಿಲಾಮಯವಾಗಿ ಜೀರ್ಣೋದ್ಧಾರಗೊಳ್ಳುತ್ತಿದ್ದು, ಜೀರ್ಣೋದ್ಧಾರ ಪ್ರಕ್ರಿಯೆಯ ಅಂಗವಾಗಿ ಶಿಲಾ ಕೆತ್ತನೆಗೆ ಅ.22ರಂದು ಚಾಲನೆ ನೀಡಲಾಯಿತು. ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ವಂಡ್ಸೆ ತಿರುಮಲ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಿ.ಶ್ರೀಧರ ಶೆಟ್ಟಿ, ವನದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರರಾದ ಚಂದ್ರಶೇಖರ ಹೆಗ್ಡೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿ.ಕೆ.ಶಿವರಾಮ ಶೆಟ್ಟಿ, ಕಾರ್ಯದರ್ಶಿ ಶಶಿಧರ ಶೆಟ್ಟಿ, ಕೋಶಾಧಿಕಾರಿ ಬೆಳ್ವೆ ಆನಂದ ಶೆಟ್ಟಿ, ಕುಂದಾಪುರ ಭೂ ಬ್ಯಾಂಕ್ ಅಧ್ಯಕ್ಷ ಎಸ್.ದಿನಕರ ಶೆಟ್ಟಿ, ಕಟ್ಟೆಮನೆ ರತ್ನಾಕರ ಶೆಟ್ಟಿ, ತೊಂಭತ್ತು ನಾರಾಯಣ ಶೆಟ್ಟಿ, ಬಿ.ಕರುಣಾಕರ ಶೆಟ್ಟಿ ಶಿರಾ, ವಂಡ್ಸೆ ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ನಿವೃತ್ತ ಶಿಕ್ಷಕ ಎನ್.ರತ್ನಾಕರ ಶೆಟ್ಟಿ, ತಿರುಮಲ ಲಕ್ಞ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಗಣೇಶ ವಿ.ನಾಯ್ಕ್, ಗೋಪಾಲಕೃಷ್ಣ ಉಪಾದ್ಯ, ಹಾಲು ಉತ್ಪಾದಕರ ಸಹಕಾರಿಸಂಘದ ಅಧ್ಯಕ್ಷ ತ್ಯಾಂಪಣ್ಣ ಶೆಟ್ಟಿ, ಗ್ರಾ.ಪಂ.ಸದಸ್ಯ ಉದಯ ನಾಯ್ಕ್, ಸುರೇಂದ್ರ ಶೆಟ್ಟಿ, ಗುತ್ತಿಗೆದಾರರಾದ ಹರ್ಜಿ ಕರುಣಾಕರ ಶೆಟ್ಟಿ, ರುದ್ರಯ್ಯ ಆಚಾರ್ಯ…

Read More

ಕುಂದಾಪುರ: ದೇಶದಲ್ಲಿ 75ಕೋಟಿ ಸಂಖ್ಯೆಯಲ್ಲಿ ಯುವಕರು ಇದ್ದಾರೆ. ಈ ಯುವಕ ಪಡೆ ಅನೇಕ ಧಾರ್ಮಿಕ ಉತ್ಸವಗಳನ್ನು ಮಾಡುತ್ತಿದ್ದಾರೆ. ಧಾರ್ಮಿಕ ಉತ್ಸವಗಳು ಜಾತಿ, ಧರ್ಮ, ಪಂಗಡಗಳ ನಡುವೆ ಸಂಘರ್ಷವಾಗಬಾರದು. ಯುವ ಪಡೆ ಧರ್ಮಕ್ಕಾಗಿ ಜಗಳ ಮಾಡದೆ, ಅಭಿವೃದ್ಧಿಗಾಗಿ ಜಗಳವಾಡಬೇಕು ಎಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಕಾರಿ ಅಣ್ಣಾಮಲೈ ಅವರು ಹೇಳಿದರು. ಅವರು ಕಂಡ್ಲೂರು ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ರಾತ್ರಿ ಜರುಗಿದ ಕಂಡ್ಲೂರು ಸಾರ್ವಜನಿಕ ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿಯ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕಂಡ್ಲೂರು ಪರಿಸರದಲ್ಲಿ ಸಮಾನ ಸಂಖ್ಯೆಯಲ್ಲಿ ಹಿಂದುಗಳು ಹಾಗೂ ಮುಸ್ಲಿಂ ಬಾಂಧವರು ಇದ್ದಾರೆ. ಇಲ್ಲಿ ಸಣ್ಣ ಪುಟ ಘಟನೆಗಳು ಹೋರತು ಪಡಿಸಿದ್ದರೆ, ಶ್ರೀ ಶಾರದೋತ್ಸವ ಸಮಿತಿಯವರು ಸೌರ್ಹಾದತೆಯಿಂದ ಉತ್ಸವವನ್ನು ಮಾಡಿದ್ದಾರೆ. ನವರಾತ್ರಿ ಮಹೋತ್ಸವವು ವಿಶೇಷವಾದ ದಿನವಾಗಿದೆ. ದೇವರು ದುಷ್ಠರನ್ನು ಸಂಹಾರ ಮಾಡಿ, ಧರ್ಮ ರಕ್ಷಿಸಿದ್ದಾರೆ. ಇದರ ಪ್ರತಿಕವಾದ ನವರಾತ್ರಿ ಮಹೋತ್ಸವವು ದೂರದ ಊರುಗಳಲ್ಲಿರುವರಿಗೆ, ಊರಿಗೆ ಬಂದು ಆತ್ಮೀಯತೆ ಹಾಗೂ ಸೌರ್ಹಾದತೆಯಿಂದ ಬೇರೆಯುವ ದಿನವಾಗಿದೆ. ಸೌರ್ಹದತೆಯಿಂದ…

Read More

ಗಂಗೊಳ್ಳಿ: ಗಂಗೊಳ್ಳಿಯ ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಶ್ರೀ ಶಾರದಾ ಮಹೋತ್ಸವದ ೪೧ನೇ ವರ್ಷದ ಧಾರ್ಮಿಕ, ಸಾಂಸ್ಕೃತಿಕ ಸಭಾ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸವಿತಾ ಸಮಾಜದ ತ್ರಾಸಿ-ಗಂಗೊಳ್ಳಿ ವಲಯದ ಅಧ್ಯಕ್ಷ ಮಂಜುನಾಥ ಸಾಲಿಯಾನ್ ಮಾತನಾಡಿ, ಸೇವಾ ಸಂಘದ ಮುಖಾಂತರ ಗಂಗೊಳ್ಳಿಯಲ್ಲಿ ಎಲ್ಲಾ ಜಾತಿ ಧರ್ಮದವರು ಒಂದಾಗಿ ಶ್ರೀ ಶಾರದೋತ್ಸವವನ್ನು ಆಚರಿಸಿಕೊಂಡು ಬಂದಿರುವುದು ಶ್ಲಾಘನೀಯ. ನಿರಂತರ ೪೧ವರ್ಷ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಎಲ್ಲರನ್ನು ಒಂದುಗೂಡಿಸುವ ಸಮಿತಿಯ ಕಾರ್ಯ ಅಭಿನಂದನಾರ್ಹವಾದುದು ಎಂದರು. ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷ, ಪುರೋಹಿತರಾದ ವೇದಮೂರ್ತಿ ಜಿ.ನಾರಾಯಣ ವಿಶ್ವನಾಥ ಆಚಾರ್ಯ ಮತ್ತು ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಆನಂದ ಬಿಲ್ಲವ ಶುಭ ಹಾರೈಸಿದರು. ಇದೇ ಸಂದರ್ಭ ದಸರಾ ಹಬ್ಬದ ಪ್ರಯುಕ್ತ ಮಹಿಳೆಯರು ಹಾಗೂ ಮಕ್ಕಳಿಗೆ ನಡೆದ ವಿವಿಧ ಸ್ಪರ್ಧೆಗಳ ವಿಜೇತರರಿಗೆ ಬಹುಮಾನ ವಿತರಿಸಲಾಯಿತು. ಪ್ರಧಾನ ಕಾರ್ಯದರ್ಶಿ ಶ್ರೀಧರ ಸಕ್ಲಾತಿ, ಕಾರ್ಯದರ್ಶಿ ಗೋಪಾಲ ಚಂದನ್, ಮಹಿಳಾ ಮಂಡಳಿಯ ರೇಣುಕಾ…

Read More

ಗಂಗೊಳ್ಳಿ: ಹೌದು. ನವರಾತ್ರಿ ಬಂತೆಂದರೆ ಎಲ್ಲೆಡೆ ವಿವಿಧ ವೇಷಧಾರಿಗಳು ಅದರಲ್ಲೂ ವಿಶೇಷವಾಗಿ ಹುಲಿವೇಷಧಾರಿಗಳು ಕಾಣ ಸಿಗುತ್ತಾರೆ. ಗಂಗೊಳ್ಳಿಯ ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಶ್ರೀ ಶಾರದಾ ಮಹೋತ್ಸವದ 41ನೇ ವರ್ಷದ ಸಮಾರಂಭದಲ್ಲಿ ಭಾಗವಹಿಸಲು ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಶ್ರೀದೇವಿಯ ಭಕ್ತರು ಹುಲಿವೇಷ ಧರಿಸಿ ಎಲ್ಲರ ಕಣ್ಮನ ಸೆಳೆಯುತ್ತಿದ್ದಾರೆ. ಈ ಹುಲಿವೇಷಧಾರಿಗಳ ತಂಡ ಗಂಗೊಳ್ಳಿಯ ವಿವಿಧೆಡೆ ಘರ್ಜಿಸುತ್ತಿದ್ದು ನವರಾತ್ರಿಯ ಸಂಭ್ರಮ ಮನಮಾಡುವಂತಾಗಿದೆ.

Read More

ಗಂಗೊಳ್ಳಿ: ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್ ಗಂಗೊಳ್ಳಿ, ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವ್ಯಕ್ತಿ ವಿಕಾಸ ಕೇಂದ್ರ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಶ್ರೀ ರವಿಶಂಕರ ಗುರುಜೀಯವರ ಆರ್ಟ್ ಎಕ್ಸೆಲ್ ಮಕ್ಕಳ ಬೇಸಿಗೆ ಶಿಬಿರ ಇತ್ತೀಚಿಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಸರ್ವಾಂಗೀಣ ಬೆಳವಣಿಗೆಗಾಗಿ 8 ರಿಂದ 13 ವರ್ಷಗಳ ವಯೋಮಿತಿಯ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಶಿಬಿರದಲ್ಲಿ ಮಾಹಿತಿ ನೀಡಿ ಮಾತನಾಡಿದ ಆರ್ಟ್ ಆಫ್ ಲೀವಿಂಗ್‌ನ ಶಿಕ್ಷಕಿಯರಾದ ಅನುಷಾ ಹಾಗೂ ಭಾನುಮತಿ ಶೇಟ್ ಅವರು, ಆಧುನಿಕ ಜೀವನ ಶೈಲಿಯಲ್ಲಿರುವ ಒತ್ತಡಗಳನ್ನು ಸಮರ್ಪಕವಾಘಿ ನಿಭಾಯಿಸಲು ಬೇಕಾಗುವ ಮಾನಸಿಕ ಸಿದ್ಧತೆಗಳನ್ನು ಮಾಡಿಸುವುದರೊಂದಿಗೆ, ವ್ಯಕ್ತಿ ಮೌಲಿಕತೆಯ ಬೋಧನೆ, ನಾಚಿಕೆ ಮತ್ತು ಪುಕ್ಕಲು ಸ್ವಭಾವದ ಹೋಗಲಾಡಿಸುವಿಕೆ, ಸುಪ್ತ ಪ್ರತಿಭೆಯ ಅನಾವರಣ, ಆತ್ಮವಿಶ್ವಾಸ ಮತ್ತು ಯೋಗ್ಯತೆಯ ಅರಿವನ್ನು ಮೂಡಿಸುವುದರಲ್ಲಿ ಶಿಬಿರವು ಸಹಕಾರಿಯಾಗುತ್ತದೆ ಎಂದರು. ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್‌ನ ನಾಗರಾಜ ಖಾರ್ವಿ ಉಪಸ್ಥಿತರಿದ್ದರು. ಕ್ಲಬ್‌ನ ಹಿರಿಯ ಸದಸ್ಯ ಜಿ.ಸೂರ್ಯಕಾಂತ ಖಾರ್ವಿ ಸ್ವಾಗತಿಸಿದರು. ಕ್ಲಬ್‌ನ ಕಾರ್ಯದರ್ಶಿ ಸತೀಶ…

Read More

ನರೇಂದ್ರ ಎಸ್ ಗಂಗೊಳ್ಳಿ. ಒಂದು ಸಮುದಾಯವನ್ನು ಓಲೈಸುವವರಂತೆ ತೋರುವ ಒಂದಷ್ಟು ಸಾಹಿತಿ ಗಣ್ಯರೆನ್ನಿಸಿಕೊಂಡವರು ಒಬ್ಬರ ಹಿಂದೊಬ್ಬರಂತೆ ಪ್ರಶಸ್ತಿ ವಾಪಾಸ್ ಪ್ರಕ್ರಿಯೆ ಎನ್ನುವ ಬೂಟಾಟಿಕೆ ಕಾರ್ಯದಲ್ಲಿ ತೊಡಗಿಕೊಂಡಿರುವುದನ್ನು ನೋಡಿ ನಮ್ಮ ದೇಶದ ಪ್ರಜ್ಞಾವಂತ ಜನ ನಗುತ್ತಿರುವುದು ಸುಳ್ಳಲ್ಲ. ಅಷ್ಟರ ಮಟ್ಟಿಗೆ ಈ ಸಾಹಿತಿಗಳ ಪ್ರಶಸ್ತಿ ವಾಪಾಸಾತಿ ಪ್ರಹಸನ ನಗೆಪಾಟಲಿನ ವಿಷಯವಾಗಿ ಮಾರ್ಪಟ್ಟಿದೆ ಎನ್ನುವುದೇ ಸ್ವತಃ ಅವರಿಗೂ ತಿಳಿಯದ ವಿಚಾರವೇನಲ್ಲ. ಅದು ಗೊತ್ತಿದ್ದೂ ಅವರುಗಳು ಮತ್ತೇ ತಮ್ಮ ಕಾರ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದರೆ ಅವರುಗಳ ಸಾಮಾಜಿಕ ಬದ್ಧತೆ, ನೈತಿಕತೆಯನ್ನು ಪ್ರಶ್ನಿಸದೆ ವಿಧಿಯಿಲ್ಲ. ಪ್ರಶಸ್ತಿ ವಾಪಾಸಾತಿ ಸಾಹಿತಿಗಳೇ ನಿಮಗ್ಗೊತ್ತಾ? ನಿಮ್ಮ ಈ ಕಾರ್ಯವನ್ನು ಜನರು ಗಣನೆಗೆ ತೆಗೆದುಕೊಂಡೇ ಇಲ್ಲ. ನೀವೇನೇ ಮಾಡಿದರೂ ಅಷ್ಟೇ. ಬರೇ ಪ್ರಶಸ್ತಿಯಲ್ಲ ನೀವುಗಳು ಈಗ ನೀಡಿದ್ದೀರಲ್ಲಾ ಅದೇ ಕಾರಣಗಳಿಗಾಗಿ ನೀವು ಬೇರೇನನ್ನೇ ತ್ಯಾಗ ಮಾಡಿದರೂ ಜನ ಖಂಡಿತ ಮಾತನಾಡುವುದಿಲ್ಲ .ಜನ ನೀವಂದುಕೊಂಡಷ್ಟು ದಡ್ಡರಲ್ಲ. ಪ್ರತೀ ಮನುಷ್ಯನಿಗೂ ವಿವೇಚನೆ ಅನ್ನುವುದು ಇರುತ್ತದೆ. ಜನರನ್ನು ಪದೇ ಪದೇ ಮೋಸಗೊಳಿಸಲು ಸಾಧ್ಯವಿಲ್ಲ ಎನ್ನುವುದು ನಿಮಗಿನ್ನೂ ಅರ್ಥವಾಗದಿರುವುದು ನಿಜಕ್ಕೂ…

Read More