ಕುಂದಾಪುರ: ಇತ್ತಿಚಿನ ದಿನಗಳಲ್ಲಿ ಪತ್ರಿಕೆಯನ್ನು ಓದುವವರಿಗಿಂತ ಹೆಚ್ಚಾಗಿ ನೋಡುಗರ ಸಂಖ್ಯೆ ಜಾಸ್ತಿಗಾಗುತ್ತಿದೆ. ಮೊಬೈಲ್, ಟಿ.ವಿಯ ಕಾರಣದಿಂದಾಗಿ ಯುವಜನತೆ ಪತ್ರಿಕೆ ಓದುವ ಹವ್ಯಾಸದಿಂದಲೇ ದೂರ ಸರಿಯುತ್ತಿದ್ದಾರೇನೋ ಎಂಬ ಜಿಜ್ಞಾಸೆ ಕಾಡುತ್ತಿದೆ ಎಂದು ಸುದ್ದಿಮನೆ ವಾರಪತ್ರಿಕೆಯ ಸಂಪಾದಕ ಸಂತೋಷ ಕೋಣಿ ಆತಂಕ ವ್ಯಕ್ತಪಡಿಸಿದರು. ಅವರು ಮೇಲ್ಕಟ್ಕೆರೆ ಸ.ಹಿ.ಪ್ರಾ. ಶಾಲೆಯಲ್ಲಿ ಜರುಗಿದ ಬಸ್ರೂರು ಶ್ರೀ ಶಾರದಾ ಪದವಿಪೂರ್ವ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರದ ನಾಲ್ಕನೇ ದಿನದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಪತ್ರಿಕಾ ಮಾಧ್ಯಮ ಮತ್ತು ಯುವಜನತೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಪ್ರತಿದಿನವೂ ಪತ್ರಿಕೆಯನ್ನು ಓದಿ ಆಲೋಕಿಸುವ, ಸತ್ಯ-ಅಸತ್ಯಗಳನ್ನು ವಿಚಾರ ಮಾಡುವ ಕೆಲಸ ಮಾಡಿದರೇ ನಮಗೆ ಗೊತ್ತಿಲ್ಲದೇ ನಮ್ಮಲ್ಲೊಬ್ಬ ವಿಮರ್ಷಕ ಹುಟ್ಟಿಕೊಳ್ಳುತ್ತಾನೆ ಜೊತೆಗೆ ನಮ್ಮ ವಿವೇಕವೂ ಬೆಳೆಯುತ್ತದೆ ಎಂದ ಅವರು ಯುವಜನತೆ ಪತ್ರಿಕೋದ್ಯಮದ ಅಂಕುಡೊಂಕುಗಳನ್ನು ಅವಲೋಕಿಸುವುದರೊಂದಿಗೆ ಒಳಿತನ್ನು ಪ್ರಶಂಶಿಸುವ, ಕೆಡುಕನ್ನು ಪ್ರಶ್ನಿಸುವ ಜಾಗೃತ ಮನಸ್ಥಿತಿಯನ್ನು ಬೆಳೆಸಿಕೊಳ್ಳವುದು ಇಂದಿನ ಅಗತ್ಯವಾಗಿದೆ ಎಂದರು. ಕಾಳಾವಾರ ಗ್ರಾ.ಪಂ ಸದಸ್ಯ ರತ್ನಾಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೋಟ ವಿವೇಕ ಪದವಿಪೂರ್ವ…
Author: ಸುನಿಲ್ ಹೆಚ್. ಜಿ. ಬೈಂದೂರು
ಬಿ. ರಾಘವೇಂದ್ರ ಪೈ ಗಂಗೊಳ್ಳಿ : ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇದ್ದೇ ಇರುತ್ತದೆ. ಪ್ರತಿಯೊಬ್ಬರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಅನೇಕ ಸಂಘ ಸಂಸ್ಥೆಗಳು ವಿವಿಧ ಇಲಾಖೆಗಳು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರೂ ಅನೇಕ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಅವಕಾಶ ದೊರೆಯುತ್ತಿಲ್ಲ. ಕಲಾವಿದ ಆರ್ಥಿಕ ಸ್ಥಿತಿವಂತನಾಗಿದ್ದರೆ ಮಾತ್ರ ಆತನ ಕಲೆಗೆ ಹೆಚ್ಚಿನ ಪ್ರೋತ್ಸಾಹ, ಸಹಕಾರ ದೊರೆಯುತ್ತಿರುತ್ತದೆ ಎಂಬ ಮಾತುಗಳಿಗೆ ಇಂಬು ನೀಡುವಂತಿದೆ ಗಂಗೊಳ್ಳಿ ಸಮೀಪದ ಗುಜ್ಜಾಡಿಯ ಕಲಾವಿದನೊಬ್ಬನ ಕಲಾ ಬದುಕು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗುಜ್ಜಾಡಿ ಎಂಬ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿರುವ ದಿ. ಚಂದ್ರ ಆಚಾರಿ ಮತ್ತು ಸುಶೀಲಾ ಆಚಾರಿ ದಂಪತಿಯ ಪುತ್ರ ಮಂಜುನಾಥ ಆಚಾರಿ (36) ಎಂಬಾತ ಕಲಿತದ್ದು 7ನೇ ತರಗತಿ ಮಾತ್ರ. ಆದರೆ ಈತನಲ್ಲಿರುವ ಪ್ರತಿಭೆ ಮಾತ್ರ ಅತ್ಯದ್ಬುತವಾದದ್ದು. ವಿವಿಧ ರೀತಿಯ ಕೈಚಳಕ, ಕಲೆಗಳನ್ನು ಕರಗತ ಮಾಡಿಕೊಂಡಿರುವ ಅದೆಷ್ಟೋ ಕಲಾವಿದರು ನಮ್ಮ ಮುಂದೆ ಇದ್ದರೂ ಕಡಿಮೆ ಶಿಕ್ಷಣ ಪಡೆದುಕೊಂಡ ಮಂಜುನಾಥನ ಕಲಾ ಸಾಧನೆ ಎಲ್ಲರನ್ನೂ ನಿಬ್ಬೆರಗಾಗುವಂತೆ…
ಕುಂದಾಪುರ: ಯುವ ಸಾಹಿತಿ ಸಂದೀಪ್ ಶೆಟ್ಟಿ ಹೆಗ್ಗದ್ದೆ ಅವರನ್ನು ಇತ್ತಿಚಿಗೆ ಜೇಸಿಐ ಚಿತ್ತೂರು-ಮಾರಣಕಟ್ಟೆಯ ಅದ್ವಿತಾ 2015 ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಹಿರಿಯ ಸಾಹಿತಿ ಎ.ಎಸ್.ಎನ್ ಹೆಬ್ಬಾರ್ ಸಂದೀಪ್ ಅವರನ್ನು ಸನ್ಮಾನಿಸಿರು. ಜೇಸಿಐ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕುಂದಾಪುರ: ವಂಡ್ಸೆ ಗ್ರಾಮವನ್ನು ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಮರು ಸೇರ್ಪಡೆಗೊಳಿಸಿದ್ದನ್ನು ಖಂಡಿಸಿ, ಅ. ೧೩ ರಂದು ವಂಡ್ಸೆಯಲ್ಲಿ ಬೃಹತ್ ಪ್ರತಿಭಟನೆ, ರಸ್ತೆ ತಡೆ ನಡೆಸಲಾಯಿತು. ಅವೈಜ್ಞಾನಿಕವಾದ ವರದಿಯಿಂದ ವಂಡ್ಸೆ ಗ್ರಾಮವನ್ನು ತಕ್ಷಣ ಕೈಬಿಡಬೇಕು. ನಮ್ಮ ಅಹವಾಲನ್ನು ಜಿಲ್ಲಾಧಿಕಾರಿಗಳು ಅಥವಾ ತಹಶೀಲ್ದಾರರು ಸ್ಥಳಕ್ಕೆ ಬಂದು ಸ್ವೀಕರಿಸಬೇಕು ಎಂದು ಪಟ್ಟು ಹಿಡಿದ ಪ್ರತಿಭಟನಾ ನಿರತರು ಕೆಲವೊಷ್ಟು ಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು. ವಂಡ್ಸೆಯ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ತಾ.ಪಂ.ಸದಸ್ಯ ಹೆಚ್. ಮಂಜಯ್ಯ ಶೆಟ್ಟಿ, ಕಸ್ತೂರಿ ರಂಗನ್ ವರದಿ ಬಗ್ಗೆ ಜನರಲ್ಲಿ ಗೊಂದಲವಿದೆ. ಸ್ಪಷ್ಟ ಮಾಹಿತಿಯನ್ನು ನೀಡುವ ಕೆಲಸ ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡಿಲ್ಲ. ಅವೈಜ್ಞಾನಿಕವಾಗಿ ಪಶ್ಚಿಮಘಟ್ಟಗಳಿಂದ ದೂರವಿರುವ ಗ್ರಾಮಗಳನ್ನು ಮರು ಸೇರ್ಪಡೆಯಾಗಲು ಯಾವ ಬೇಜಬ್ದಾರಿ ಕಾರಣವೋ ಗೊತ್ತಿಲ್ಲ. ಒಟ್ಟಾರೆಯಾಗಿ ಜನರಿಗೆ ತೊಂದರೆ ಆಗಬಾರದು ಎಂದರು. ಬಿ.ಎಂ.ಸುಕುಮಾರ್ ಶೆಟ್ಟಿ ಮಾತನಾಡಿ, ಕಸ್ತೂರಿ ರಂಗನ್ ವರದಿಯ ಅವೈಜ್ಞಾನಿಕತೆಯ ಬಗ್ಗೆ…
ಕುಂದಾಪುರ: ಸಮಾಜ ತಿದ್ದಲಿಕ್ಕೆ ಆಗದ ಮನಸ್ಥಿತಿಯನ್ನು ಹೊಂದಿರುವ ವ್ಯಕ್ತಿಗಳಿಗೆ ಕಾನೂನು ಬುದ್ದಿ ಹೇಳುವ ಕೆಲಸ ಮಾಡುತ್ತದೆ. ಸಮಾಜದ ಶಾಂತಿ ಕದಡುವ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ವ್ಯಕ್ತಿಗಳ ಸಂಖ್ಯೆ ಇರುವುದು ಬೆರಳೆಣಿಕೆ ಮಾತ್ರ. ಅಂತಹ ವ್ಯಕ್ತಿಗಳನ್ನು ಹುಡುಕಿ ಅವರನ್ನು ಕಾನೂನು ಕೈಗೆ ಒಪ್ಪಿಸುವ ಕೆಲಸವನ್ನು ಪೊಲೀಸ್ ಇಲಾಖೆ ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಹೇಳಿದರು. ತಾಲ್ಲೂಕಿನ ಬೆಳ್ವೆ ಗೋಳಿಯಂಗಡಿಯಲ್ಲಿ ನಡೆದ ಸಾರ್ವಜನಿಕ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇತ್ತೀಚೆಗೆ ಅಮಾನುಷವಾಗಿ ಹತ್ಯೆಯಾಗಿದ್ದ ಯುವತಿಯ ಕೊಲೆ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದ ಅವರು ಕೊಲೆಯಾದ ಅಮಾಯಕ ಹುಡುಗಿ ನಮ್ಮ ಮನೆ ಮಗಳು ಎನ್ನುವ ಭಾವನೆ ನಮ್ಮಲ್ಲಿದೆ. ಸಾರ್ವಜನಿಕರ ಸಹಕಾರದಿಂದ ಆಕೆಯನ್ನು ಅಮಾನುಷವಾಗಿ ಹತ್ಯೆ ಮಾಡಿದ ಆರೋಪಿಯನ್ನು ಕಾನೂನು ತೆಕ್ಕೆಗೆ ಒಪ್ಪಿಸುವ ಕೆಲಸವನ್ನು ಇಲಾಖೆ ಮಾಡಿದೆ. ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಆರೋಪಿಗೆ ಕಾನೂನು ವ್ಯಾಪ್ತಿಯ ಒಳಗೆ ಗರಿಷ್ಠ ಶಿಕ್ಷೆಯಾಗುವಂತೆ ಇಲಾಖೆ ಪ್ರಾಮಾಣಿಕ ಪ್ರಯತ್ನ…
ಕುಂದಾಪುರ: ಕಳೆದ ಜೂನ್ ತಿಂಗಳಿನಿಂದಿಚೆಗೆ ಕುಂದಾಪುರ ತಾಲೂಕಿನಲ್ಲಿ ಆರಕ್ಕೂ ಹೆಚ್ಚು ದೇವಾಲಯಗಳ ಕಳ್ಳತನ ಪ್ರಕರಣ ವರದಿಯಾಗಿದೆ. ಆದರೆ ಈವರೆಗೆ ಕಳ್ಳರು ಮಾತ್ರ ಪತ್ತೆಯಾಗಿಲ್ಲ. ಮಳೆಗಾಲ ಆರಂಭಗೊಳ್ಳುತ್ತಿದ್ದಂತೆಯೇ ಕಳ್ಳತನ ಶುರುವಿಟ್ಟುಕೊಂಡಿದ್ದ ಚೋರರು ಪ್ರಮುಖ ದೇವಾಲಯಗಳನ್ನೇ ಟಾರ್ಗೇಟ್ ಮಾಡಿ ದೇವರ ಆಭರಣ, ಹುಂಡಿಯಲ್ಲಿದ್ದ ದುಡ್ಡು ಹಾಗೂ ಇತರೆ ಸೊತ್ತುಗಳನ್ನು ಎಗರಾಯಿಸಿದ್ದರು. ಹೀಗೆ ಒಂದರ ಹಿಂದೊಂದು ಸರಣಿ ಕಳ್ಳತನ ನಡೆಯುತ್ತಿದ್ದರೂ ಮೌನಕ್ಕೆ ಶರಣಾಗಿರುವ ಪೊಲೀಸ್ ಇಲಾಖೆ ಶೀಘ್ರವೇ ಕಳ್ಳರನ್ನು ಪತ್ತೆಹಚ್ಚಿ ಬಂಧಿಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ತಾಲೂಕಿನ ಎಲ್ಲೆಲ್ಲಿ ಕಳ್ಳತನ? ಕುಂದಾಪುರ ತಾಲೂಕಿನ ಕಾಲ್ತೋಡು ಮಹಾಲಸಾ ಮಾರಿಕಾಂಬ ದೇವಸ್ಥಾನ, ಕಿರಿಮಂಜೇಶ್ವರದ ಅಗಸ್ತೇಶ್ವರ ದೇವಸ್ಥಾನ, ವಂಡ್ಸೆ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಹಾಗೂ ಸಮೀಪದ ದೈವಸ್ಥಾನ, ಸೌಕೂರು ದುರ್ಗಾಪರಮೇಶ್ವರಿ ದೇವಸ್ಥಾನ, ತಲ್ಲೂರು ರಕ್ತೇಶ್ವರ ದೇವಸ್ಥಾನ ಸೇರಿದಂತೆ ಉಡುಪಿ ಜಿಲ್ಲೆಯ ಹಲವು ದೇವಸ್ಥಾನದಲ್ಲಿ ಕಳವು ನಡೆದಿತ್ತು. ಲೆಕ್ಕಕ್ಕೆ ಸಿಕ್ಕವು ಇವಿಷ್ಟು ಮಾತ್ರ. ಇನ್ನು ಸಣ್ಣ ದೇವಸ್ಥಾನಗಳಲ್ಲಾದ ಸಣ್ಣ-ಪುಟ್ಟ ಕಳವಿನ ಬಗ್ಗೆ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿಲ್ಲ. ಕಳೆದ ವರ್ಷ…
ಕೊಲ್ಲೂರು: ನಿರಂತರವಾಗಿ ರಕ್ತದಾನ ಶಿಬಿರಗಳ ಆಯೋಜಿಸುವ ಮೂಲಕ ಇವತ್ತು ಗ್ರಾಮಾಂತರ ಪ್ರದೇಶಗಳಲ್ಲಿಯೂ ರಕ್ತದಾನದ ಅರಿವು ಮೂಡಿದ್ದ, ಜಿಲ್ಲೆಯಾದ್ಯಂತ ಜನತೆ ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡುವುದರ ಮೂಲಕ ಉಡುಪಿ ಜಿಲ್ಲೆ ಇವತ್ತು ರಕ್ತದಾನಿಗಳ ಜಿಲ್ಲೆ ಎಂದು ಘೋಷಿಸಲ್ಪಟ್ಟಿದೆ. ಈಗಾಗಳೆ ಮೊಗವೀರ ಯುವ ಸಂಘಟನೆ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವಿವಿಧ ಸಂಘ ಸಂಸ್ಥೆಗಳ ನೆರವಿನಿಂದ ೬೦ ಸಾವಿರ ಯೂನಿಟ್ ರಕ್ತ ಸಂಗ್ರಹ ಮಾಡುವ ಮೂಲಕ ಸಾಧನೆ ಮಾಡಿದೆ ಎಂದು ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಇದರ ಅಧ್ಯಕ್ಷ ಸದಾನಂದ ಬಳ್ಕೂರು ಹೇಳಿದರು. ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಉಡುಪಿ ಇವರ ನೇತೃತ್ವದಲ್ಲಿ ರಕ್ತನಿಧಿ, ಕೆಎಂಸಿ ಮಣಿಪಾಲ, ಜಿಲ್ಲಾಡಳಿತ ಉಡುಪಿ ಮತ್ತು ಶ್ರೀ ವಿನಾಯಕ ಯುವಕ ಸಂಘ ರಿ, ನೆಂಪು ಇವರ ಸಹಯೋಗದಲ್ಲಿ ನೆಂಪುವಿನ ಸ.ಪ.ಪೂ.ಕಾಲೇಜಿನಲ್ಲಿ ನqದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ…
ಕುಂದಾಪುರ: ಇಲ್ಲಿನ ಚಿಕ್ಕನ್ಸಾಲು ರಸ್ತೆಯ ಶ್ರೀ ಬಗಳಾಂಬ ತಾಯಿ ದೇವಸ್ಥಾನದ ಉತ್ಸವ ಸಮಿತಿ ರಚನೆಗೊಂಡಿದ್ದು, ನೂತನ ಸಮಿತಿಯ ಅಧ್ಯಕ್ಷರಾಗಿ ಸೀತರಾಮ ಹೇರಿಕುದ್ರು ಆಯ್ಕೆಯಾದರು. ವ್ಯವಸ್ಥಾಪನಾ ಮಾರ್ಗದರ್ಶಕರಾಗಿ ಗಣಪತಿ ಸುವರ್ಣ, ಗೌರವಾಧ್ಯಕ್ಷರಾಗಿ ಕೆ. ಬಿ. ಪ್ರಕಾಶ್, ಉಪಾಧ್ಯಕ್ಷರಾಗಿ ರಾಜು ಮಠದಬೆಟ್ಟು, ಚಂದ್ರಶೇಖರ, ವೀಣಾ ಪ್ರಕಾಶ್, ಕಾರ್ಯದರ್ಶಿ ರಮೇಶ್ ಮಕ್ಕಿ, ಜೊತೆ ಕಾರ್ಯದರ್ಶಿ ಶರತ್, ಲೆಕ್ಕಪರಿಶೋಧಕರಾಗಿ ಸಂತೋಷ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಧೀರ್ ಕೃಷ್ಣ, ಸಂಘಟನಾ ಕಾರ್ಯದರ್ಶಿಯಾಗಿ ಉದಯ, ಮುಖ್ಯ ಸಲಹೆಗಾರರಾಗಿ ಜನಾರ್ಧನ, ವಿನಯ ಹೇರಿಕುದ್ರು, ಗಣೇಶ್ ಡಿ. ನಾಯಕ್, ಸುಧೀರ್ ಬಿ. ಕುಂದರ್, ರತ್ನಾಕರ ಗಾಣಿಗ, ಅಣ್ಣಯ್ಯ ಹೋಬಳಿದಾರ್, ಪೂರ್ಣಿಮ ಕೋಟೇಶ್ವರ, ಸುಮತಿ, ಸರಸ್ವತಿ, ಸದಸ್ಯರಾಗಿ ಕಿರಣ್ ಮೆಂಡನ್, ನಿತ್ಯಾನಂದ, ವಿಜೇಂದ್ರ, ಪ್ರಜ್ವಲ್, ದೀಕ್ಷಿತ್, ಪವನ್, ರಂಜಿತ್, ರಾಜೇಂದ್ರ, ರಾಘವೇಂದ್ರ ಕೋಟೇಶ್ವರ ಆಯ್ಕೆಯಾದರು.
ಕುಂದಾಪುರ: ಕರ್ನಾಟಕ ವಿಕಾಸ ಬ್ಯಾಂಕ್ ಕುಂದಾಪುರ ಶಾಖೆಯಲ್ಲಿ ಪ್ರಧಾನಮಂತ್ರಿ ಮುದ್ರಾ ಯೋಜನೆಯ ಮಾಹಿತಿ ಹಾಗೂ ಸಾಲ ಮಂಜೂರಾತಿ ಕರ್ಯಕ್ರಮ ಜರುಗಿತು. ಶಾಖಾ ಪ್ರಬಂಧಕ ಮೋಹನದಾಸ್ ಕಿಣಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮುದ್ರಾ ಯೋಜನೆಯ ಕಿಶೋರ ಸಾಲ ರುಪಾಯಿ 4 ಲಕ್ಷದ ಮಂಜೂರಾತಿ ಪತ್ರವನ್ನು ಫಲಾನುಭವಿ ಕುಂದಾಪುರದ ಬಾಲಾಜಿ ಟೆಕ್ಸ್ಟೈಲ್ಸ್ ಮಾಲಕ ಚಂದ್ರರವರಿಗೆ ಹಸ್ತಾಂತರಿಸಿದರು. ಮುದ್ರಾ ಯೋಜನೆಯ ಹಾಗೂ ಇತರ ಸಾಲ ಸೌಲಭ್ಯದ ಮಾಹಿತಿಯನ್ನು ಶಾಖಾ ಉಪ ಪ್ರಬಂಧಕಿ ಅನಿತಾ ಕಟ್ಟಿಯವರು ಗ್ರಾಹಕರಿಗೆ ಸುವಿಸ್ತಾರವಾಗಿ ವಿವರಿಸಿದರು. ಬ್ಯಾಂಕ್ನ ಸಿಬ್ಬಂದಿ ಜಗದೀಶ್ ಕೆದಿಲಾಯ, ಮನೋಜ ಕುಮಾರ್ ಹಾಗೂ ರೇಷ್ಮಾ ಶೇಟ್ ಕಾರ್ಯಕ್ರಮ ನಿರ್ವಹಿಸಿದರು. ನಿತ್ಯನಿಧಿ ಸಂಗ್ರಾಹಕರಾದ ಬಿ.ಎಸ್.ದಾಮೋದರ್ ನಾಯಕ್ ಸ್ವಾಗತಿಸಿದರು ಹಾಗೂ ಸಚ್ಚಿದಾನಂದ ಎಮ್.ಎಲ್. ವಂದಿಸಿದರು.
ಕುಂದಾಪುರ: ದಶಮಾನೋತ್ಸವದ ಹೊಸ್ತಿನಲ್ಲಿರುವ ಬಸ್ರೂರು ರಥಬೀದಿ ಫ್ರೆಂಡ್ಸ್ನ ಲಾಂಛನ ಬಿಡುಗಡೆ ಸಮಾರಂಭವು ಗೌರವ ಅಧ್ಯಕ್ಷರಾದ ರಾಮ್ ಕಿಶನ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಕಛೇರಿಯಲ್ಲಿ ಜರುಗಿತು. ಬೆಂಗಳೂರಿನ ಉದ್ಯಮಿ ಬಸ್ರೂರು ಗಣೇಶ್ ಪಡಿಯಾರ್ ಲಾಂಛನ ಬಿಡುಗಡೆ ಮಾಡಿ ದಶಮಾನೋತ್ಸವ ಆಚರಿಸುತ್ತಿರುವ ಸಮಿತಿಯ ಉತ್ತರೋತ್ತರ ಅಭಿವೃದ್ಧಿ ಹೊಂದಲಿ, ದಶಮಾನೋತ್ಸವ ಸಮಾರಂಭವು ಅದ್ದೂರಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು. ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಹರೀಶ್ ಪಡಿಯಾರ್ ದಶಮಾನೋತ್ಸವ ಸಮಾರಂಭ ಯಶಸ್ವಿಗೊಳಿಸುವಂತೆ ಸಮಿತಿಯ ಸದಸ್ಯರಿಗೆ ಕರೆನೀಡಿದರು. ಬಸ್ರೂರು ರಥಬೀದಿ ಫ್ರೆಂಡ್ಸ್ನ ಅಧ್ಯಕ್ಷ ಶ್ರೀಕಾಂತ್ ಕೆರೆಕಟ್ಟೆ ಉಪಸ್ಥಿತರಿದ್ದರು. ದಶಮಾನೋತ್ಸವ ಸಮಿತಿಯ ಕಾರ್ಯದರ್ಶಿ ಉಮೇಶ ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ನಾಗೇಶ್ ಬಳ್ಕೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಕೇಶ್ ಕೆಳಾಮನೆ ವಂದಿಸಿದರು.
