ಗಂಗೊಳ್ಳಿ: ನಮ್ಮ ಅಂಗೈಯಲ್ಲಿಯೇ ನಮ್ಮ ಆರೋಗ್ಯವಿದೆ. ಪ್ರತಿನಿತ್ಯ ನಮ್ಮ ಹಸ್ತ ಮತ್ತು ಪಾದಗಳನ್ನು ನಿರ್ದಿಷ್ಟ ರೀತಿಯಲ್ಲಿ ಸ್ಪರ್ಶಿಸುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ. ನಿಯಮಿತ ಆಹಾರ ಪದ್ಧತಿ ಹಾಗೂ ಅಕ್ಯೂಪ್ರೆಶರ್ ಪದ್ಧತಿ ನಮ್ಮ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಸಹಕಾರಿಯಾಗುತ್ತದೆ. ಪ್ರತಿನಿತ್ಯ ಇದನ್ನು ಮಾಡುವುದರಿಂದ ನಮ್ಮ ಆರೋಗ್ಯದಲ್ಲಿ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಸಾಕಷ್ಟು ಬದಲಾವಣೆ ಕಂಡುಕೊಳ್ಳಲು ಸಾಧ್ಯವಿದೆ ಎಂದು ನಾರಾಯಣ ಆಚಾರ್ ಸಾಲಿಗ್ರಾಮ ಹೇಳಿದರು. ಅವರು ಗಂಗೊಳ್ಳಿಯ ಸೇವಾಸಂಗಮ ನಿವೇದಿತಾ ಶಿಶು ಮಂದಿರದ ಆಶ್ರಯದಲ್ಲಿ ಶಿಶು ಮಂದಿರದ ನಗರ ಜಯವಂತ ನಾಯಕ್ ಸಭಾಭವನದಲ್ಲಿ ಜರಗಿದ ಮಾತೆಯ ದಸರಾ ಶಿಬಿರದಲ್ಲಿ ’ಅಂಗೈಯಲ್ಲಿ ಆರೋಗ್ಯ – ಅಕ್ಯೂಪ್ರೆಶರ್’ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಶು ಮಂದಿರದ ಅಧ್ಯಕ್ಷ ಶ್ರೀನಿವಾಸ ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಶು ಮಂದಿರದ ಸಂಚಾಲಕ ಡಾ.ಕಾಶೀನಾಥ ಪೈ, ಕಾರ್ಯದರ್ಶಿ ಸವಿತಾ ಯು.ದೇವಾಡಿಗ, ಶಿಶು ಮಂದಿರದ ಸದಸ್ಯರಾದ ಬಿ.ರಾಘವೇಂದ್ರ ಪೈ, ಉಷಾ ಪಿ.ಮಡಿವಾಳ, ವಸಂತಿ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು. ಮಾತಾಜಿ ಶೈಲಾ ಸ್ವಾಗತಿಸಿದರು. ಮಾತಾಜಿ…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪುರ: ವ್ಯಾಯಾಮ ಆಸನಗಳಿಗಿಂತ ಮುಂದುವರಿದು ದೇಹ, ಮನಸ್ಸು ಮತ್ತು ಉಸಿರಿನ ಮೇಲೆ ನಿಯಂತ್ರಣ ಸಾಧಿಸುವುದೇ ಯೋಗ, ಮನಸ್ಸನ್ನು ಒಂದೆಡೆ ತಡೆಗಟ್ಟಿ ಅಂತರಾತ್ಮದ ಕಡೆಗೆ ತಿರುಗಿಸಿ ಆತ್ಮಾಭಿಮುಖವಾಗಿ ಶರೀರ ರೋಮಾಂಚನ ಸ್ಥಿತಿಯತ್ತ ಸಾಗುವುದೇ ಕುಂಡಲಿನಿ ಜಾಗೃತಿ ಎಂದು ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ಹೇಳಿದರು. ಅವರು ಶಂಕರನಾರಾಯಣ ಮಾವಿನಕೊಡ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ.ಪೂ ಶಿಕ್ಷಣ ಇಲಾಖೆ ಬೆಂಗಳೂರು, ಶ್ರೀ ಮೂಕಾಂಬಿಕ ಪ.ಪೂ.ಕಾಲೇಜು ಕೊಲ್ಲೂರು ಇವರ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ‘ಕುಂಡಲಿನಿ ಯೋಗದಿಂದ ವ್ಯಕ್ತಿತ್ವ ವಿಕಸನ’ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು. ನಿವೃತ್ತ ಮುಖ್ಯ ಶಿಕ್ಷಕ ಮಂಜಯ್ಯ ಹೆಗ್ಡೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಅರುಣ ಪ್ರಕಾಶ ಶೆಟ್ಟಿ ಮಾತನಾಡಿ, ಸದೃಢವಾದ ದೇಹದಲ್ಲಿ ಉತ್ತಮ ಮನಸ್ಸನ್ನು ಸೇರಿದಾಗ ಮನೋಬಲ ಸಾಧಿಸಲು ಸಾದ್ಯ ಎಂದರು. ಅಂಗನವಾಡಿ ಶಿಕ್ಷಕಿ ಸುಜಾತ, ಆಶಾ ಕಾರ್ಯರ್ತೆ ವಸಂತಿ, ಶಿಬಿರಾಧಿಕಾರಿ ನಾಗರಾಜ ಅಡಿಗ, ವಾಸುದೇವ…
ಗಂಗೊಳ್ಳಿ : ಸುಮಾರು 450 ವರ್ಷಗಳ ಇತಿಹಾಸವುಳ್ಳ ಉಡುಪಿ ಜಿಲ್ಲೆಯ ಪುರಾತನ ದೇವಾಲಯಗಳಲ್ಲಿ ಒಂದಾಗಿರುವ ಕುಂದಾಪುರ ತಾಲೂಕಿನ ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ನವರಾತ್ರಿ ಮಹೋತ್ಸವವು ಅ.13 ರಿಂದ 23ರವರೆಗೆ ಜರುಗಲಿದೆ. ನವರಾತ್ರಿ ಮಹೋತ್ಸವದಲ್ಲಿ ಶ್ರೀದೇವಿಯ ಸನ್ನಿಧಿಯಲ್ಲಿ ದುರ್ಗಾಷ್ಟಮಿಯಂದು ದುರ್ಗಾ ದೀಪ ನಮಸ್ಕಾರ ಸೇವೆ, ವಿಜಯ ದಶಮಿಯಂದು ರಜತ ಪಲ್ಲಕಿ ಸೇವೆ, ಅ.25ರಂದು ಚಂಡಿಕಾ ಹವನ, ಗ್ರಾಮಪುರುಷ ದರ್ಶನ ಸೇವೆ, ಹರಕೆ ಸೀರೆಗಳ ಏಲಂ, ಸಂಜೆ ರಜತ ಪಲ್ಲಕಿ ಉತ್ಸವ ಸೇವೆ ಜರುಗಲಿದೆ. ನವರಾತ್ರಿ ದಿನದಂದು ಪ್ರತಿದಿನ ಮಧ್ಯಾಹ್ನ ಮಹಾಪೂಜೆ, ಮಹಾಸಮಾರಾಧನೆ, ಸಂಜೆ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಲಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೋಟ: ನಮ್ಮೊಂದಿಗೆ ಬದುಕಲು ಭೂಮಿಗೆ ಬಂದ ಜೀವಿ ಹಾವುಗಳು. ಅವಗಳನ್ನು ಕಂಡಾಕ್ಷಣ ಭಯಭೀತರಾಗಿ ಆತಂಕಿತರಾಗಿ ಮಾಡುವ ಎಡವಟ್ಟುಗಳಿಂದ ಅನಾಹುತ ಸಂಭವಿಸುತ್ತದೆ ಹೊರತು, ತನ್ನಷ್ಟಕ್ಕೆ ಬಂದು ಕಚ್ಚುವ ಅಭ್ಯಾಸ ಅವುಗಳಿಗೆ ಇಲ್ಲ. ಹಾವುಗಳು ನಿರುಪದ್ರವಿ ಮತ್ತು ಸ್ನೇಹ ಜೀವಿಗಳು ಎಂದು ಶ್ರೀ ಕ್ಷೇತ್ರ ಅಂಬಲಪಾಡಿಯ ಧರ್ಮದರ್ಶಿ ಡಾ.ನಿ.ವಿಜಯ ಬಲ್ಲಾಳ್ ಹೇಳಿದರು. ಅವರು ಕೋಟ ಕಾರಂತ ಥೀಂ ಪಾರ್ಕನಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಕಾರ್ಯಕ್ರಮದ ೮ನೇ ದಿನದ ಅಂಗವಾಗಿ ದಿ.ಸಿ.ಮನೋಹರ ತೋಳಾರ್ ದತ್ತಿನಿಧಿ ಪ್ರಾಯೋಜಕತ್ವದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಕಾರ್ಕಡ, ಅಜೇಯ ಕ್ರಿಕೆಟರ್ಸ್ ಕುಂಜಿಗುಡಿ, ಸೆಲ್ಕೋ ಸೋಲಾರ್ ಪ್ರೈ ಲಿಮಿಟೆಡ್, ಸಿಂಡಿಕೇಟ್ ಬ್ಯಾಂಕ್ ಸಾಲಿಗ್ರಾಮ ಶಾಖೆ, ಚೇಂಪಿ ನಾರಾಯಣ ಶ್ಯಾನುಭಾಗ ಫ್ಯಾಮಿಲಿ ಟ್ರಸ್ಟ್ ಸಹಯೋಗದಲ್ಲಿ ಉರಗ ತಜ್ಞ ಗುರುರಾಜ ಸನಿಲ್ ಪ್ರಸ್ತುತ ಪಡಿಸಿದ ಉರಗ ಪ್ರದರ್ಶನ ಪ್ರಾತ್ಯಕ್ಷಿಕೆ ಹಾವು ನಾವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮೊದಲು ನಮ್ಮಲ್ಲಿನ ಭಯ ನಿವಾರಣೆಯಾಗಬೇಕು. ಕೇವಲ ಉರಗಗಳ ವಿಚಾರಕ್ಕೆ ಹೊರತುಪಡಿಸಿ ಕೂಡ ನಮ್ಮಲ್ಲಿ ಭಯ ದೂರವಾದರೆ ಸಾಧನೆಗೆ ಅವಕಾಶವಾಗುತ್ತದೆ…
ಕೋಟ: ಅನುಕೂಲತೆಗಳು ಜಾಸ್ತಿಯಾದಂತೆ ಜನರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಒಂದರ್ಥದಲ್ಲಿ ಜನ ಸಂಪತ್ಭರಿತರಾಗುತ್ತಿದ್ದಾರೆ ಎನ್ನಬಹುದು. ಕೃಷಿಯನ್ನು ನೆಚ್ಚಿಕೊಂಡು ಬದುಕು ಸಾಗಿಸಬೇಕಾದ ಅಗತ್ಯತೆ ಇಂದು ಇಲ್ಲವಾಗಿದೆ. ಕೃಷಿ ದೇಶವಾಗಿ ಗುರುತಿಸಿಕೊಂಡ ನಮ್ಮ ದೇಶ ಮುಂದೆ ಕೃಷಿ ದೇಶವಾಗಿ ಉಳಿಯುವ ಲಕ್ಷಣಗಳು ಕಾಣುತ್ತಿಲ್ಲ. ನಿರಾಸಕ್ತಿ ಕೃಷಿಗೆ ಮಾರಕವಾಗುತ್ತಿದೆ ಎಂದು ಸಾಂಸ್ಕೃತಿಕ ಚಿಂತಕ, ಕೃಷಿಕ ಶಿವಾನಂದ ಹಂದೆ ಹೇಳಿದರು. ಅವರು ಕೋಟ ಕಾರಂತ ಥೀಂ ಪಾರ್ಕನಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಕಾರ್ಯಕ್ರಮದ ೭ ದಿನದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಕೋಟತಟ್ಟು ಒಕ್ಕೂಟ, ರೋಟರಿ ಕ್ಲಬ್ ಕೋಟ ಸಿಟಿ, ಅಘೋರೇಶ್ವರ ಫ್ರೆಂಡ್ಸ್ ಕಾರ್ತಟ್ಟು ಚಿತ್ರಪಾಡಿ ಇವರ ಆಶ್ರಯದಲ್ಲಿ ಆಯೋಜಿಸಲಾದ ಪ್ರಗತಿ ಪರ ರೈತರ ಸಮಾವೇಶ ಒತ್ತಾಸೆ ಅನುಭವದ ಭಾವಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಕಾರ್ಯಕ್ರಮವನ್ನು ನಾಟಿ ಮಾಡುವುದರ ಮೂಲಕ ಉದ್ಘಾಟಿಸಲಾಯಿತು. ಕೋಟತಟ್ಟು ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಹಂದೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕೋಟ ಸಿಟಿ…
ಕುಂದಾಪುರ: ಇಲ್ಲಿನ ಒಂಭತ್ತು ದಂಡಿಗೆ ನಿವಾಸಿ ದಿ. ಶಂಕರ ಬೀರೆಯವರ ಪುತ್ರ ದಿನೇಶ್ ಬೀರೆ (೪೭ ವ.) ಹೃದಯಾಘಾತದಿಂದ ಅ. ೦೮ರಂದು ಕುಂದಾಪುರದಲ್ಲಿ ನಿಧನರಾದರು. ಕುಂದಾಪುರದಲ್ಲಿ ಟ್ಯಾಕ್ಸಿಯನ್ನು ಹೊಂದಿದ್ದ ಮೃತರು ಪತ್ನಿ, ಇಬ್ಬರೂ ಪುತ್ರಿಯರನ್ನು ಅಗಲಿದ್ದಾರೆ.
ಗಂಗೊಳ್ಳಿ: ಗಂಗೊಳ್ಳಿಯ ಶ್ರೀ ವೀರೇಶ್ವರ ದೀಪೋತ್ಸವ ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ಅಶೋಕ ಪೂಜಾರಿ ಆಯ್ಕೆಯಾಗಿದ್ದಾರೆ. ಇತ್ತೀಚಿಗೆ ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ಜರಗಿದ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ಇವರನ್ನು ಆಯ್ಕೆ ಮಾಡಲಾಯಿತು. ಸುಧೀರ ಪಂಡಿತ್ (ಗೌರವಾಧ್ಯಕ್ಷ), ವೇದಮೂರ್ತಿ ಜಿ.ಲಕ್ಷ್ಮೀನಾರಾಯಣ ಭಟ್ (ಮಾರ್ಗದರ್ಶಕರು), ಕೃಷ್ಣ ಪೂಜಾರಿ ಹೆಮ್ಮಾಡಿಮನೆ (ಪ್ರಧಾನ ಕಾರ್ಯದರ್ಶಿ), ಪ್ರವೀಣ ಗಾಣಿಗ, ಜಿ.ರಾಮ ಖಾರ್ವಿ ಗುಡ್ಡೆಕೇರಿ, ಮಹೇಶ ಎಸ್ಆರ್ಜಿ, ಶಂಕರ ಪೂಜಾರಿ, ಗಜೇಂದ್ರ ಗಾಣಿಗ, ಲಕ್ಷ್ಮಣ ಪಿ.ಖಾರ್ವಿ ಗುಡ್ಡೆಕೇರಿ (ಉಪಾಧ್ಯಕ್ಷರು), ರಾಜ ಟಿ.ಎಸ್. (ಕಾರ್ಯದರ್ಶಿ), ಗೋಪಾಲ ಖಾರ್ವಿ ದಾವನಮನೆ (ಕೋಶಾಧಿಕಾರಿ), ಶೇಖರ ಜಿ. (ಲೆಕ್ಕ ಪರಿಶೋಧಕ), ಎಚ್.ಎಸ್.ಚಿಕ್ಕಯ್ಯ ಪೂಜಾರಿ (ಸಲಹೆಗಾರ), ಸತೀಶ ಜಿ., ದಿನೇಶ ಪೂಜಾರಿ ಕೋಟೆಬೈಲು ಮನೆ, ಎಂ.ಪಿ. ಮಣಿ ಖಾರ್ವಿ, ಗುಡ್ಡೆ ಸಂತೋಷ ಖಾರ್ವಿ, ನಾಗರಾಜ ಗಾಣಿಗ, ನಾರಾಯಣ ಖಾರ್ವಿ ದಾವನಮನೆ, ಶ್ರೀನಿವಾಸ ಖಾರ್ವಿ ಹೊಳೆಬದಿ, ಗುಡ್ಡೆ ಹರೀಶ ಖಾರ್ವಿ, ನವೀನ ಜಿ., ಶ್ರೀನಿವಾಸ ಖಾರ್ವಿ ದಾವನಮನೆ, ನಾಗರಾಜ ಖಾರ್ವಿ ದಾವನಮನೆ, ರಘುವೀರ ಕೆ., ಉತ್ತ…
ಗಂಗೊಳ್ಳಿ: ಕಳೆದ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಗಂಗೊಳ್ಳಿ ಮೆಸ್ಕಾಂ ಸಬ್ಸ್ಟೇಶನ್ ಆರಂಭಕ್ಕೆ ಒತ್ತಾಯಿಸಿ ಹೋರಾಟ ನಡೆಸಲು ಸಬ್ಸ್ಟೇಶನ್ ವ್ಯಾಪ್ತಿಯ ನಾಗರಿಕರು ನಿರ್ಧರಿಸಿದ್ದಾರೆ. ಇತ್ತೀಚಿಗೆ ಗುಜ್ಜಾಡಿಯ ಶ್ರೀ ನಾರಾಯಣಗುರು ಕಲ್ಯಾಣ ಮಂದಿರದಲ್ಲಿ ಸಭೆ ಸೇರಿದ ಗಂಗೊಳ್ಳಿ, ಗುಜ್ಜಾಡಿ ಗ್ರಾಮದ ಪ್ರಮುಖರು ಈ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ. ಉದ್ಯಮಿ ರಾಜೇಂದ್ರ ಸುವರ್ಣ ಅಧ್ಯಕ್ಷತೆಯಲ್ಲಿ ಗಂಗೊಳ್ಳಿ ಮೆಸ್ಕಾಂ ಸಬ್ಸ್ಟೇಶನ್ ಹೋರಾಟ ಸಮಿತಿಯನ್ನು ರಚಿಸಲಾಗಿದ್ದು, ಉದ್ಯಮಿಗಳಾದ ಎಚ್.ಗಣೇಶ ಕಾಮತ್, ಎಂ.ಎಂ.ಸುವರ್ಣ ಹಾಗೂ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಗೌರವಾಧ್ಯಕ್ಷರಾಗಿ, ರಾಮನಾಥ ಚಿತ್ತಾಲ್ ಗುಜ್ಜಾಡಿ ಮತ್ತು ಬಿ.ಗಣೇಶ ಶೆಣೈ ಕಾರ್ಯದರ್ಶಿಯಾಗಿ, ಮಾಜಿ ತಾಪಂ ಸದಸ್ಯ ಸುರೇಂದ್ರ ಖಾರ್ವಿ ಗಂಗೊಳ್ಳಿ ಮತ್ತು ರವೀಂದ್ರ ಪಟೇಲ್ ಜೊತೆ ಕಾರ್ಯದರ್ಶಿಯಾಗಿ, ಗಂಗೊಳ್ಳಿ ಸಬ್ ಸ್ಟೇಶನ್ ವ್ಯಾಪ್ತಿಗೆ ಬರುವ ಗ್ರಾಮಗಳ ಪ್ರಮುಖ ಕೈಗಾರಿಕೋದ್ಯಮಿಗಳು ಸಮಿತಿಯ ಉಪಾಧ್ಯಕ್ಷರಾಗಿ ಮತ್ತು ಎಲ್ಲಾ ಗ್ರಾಪಂ.ಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರುಗಳು ಸಮಿತಿಯ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ. ಸಬ್ಸ್ಟೇಶನ್ನ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಅರಣ್ಯ ಇಲಾಖೆ…
ಬೈಂದೂರು, ಅ.09: ಇಂದು ಬೈಂದೂರಿನ ಸಂತೆಯ ಗೌಜಿಗಿಂತ ತಗ್ಗರ್ಸೆ ಶಾಲಾ ಆವರಣದಲ್ಲಿನ ಸಂತೆಯ ಗೌಜು ಜೋರಾಗಿತ್ತು. ಟೊಮೆಟೋ 20ರೂಪಾಯ್, ಆಲೂಗೆ ಬರೀ 15ರೂಪಾರ್, ಫ್ರೇಶ್ ಮೀನ್ ಇತ್ತ್ ತಕನಿ, ಊರ್ ಕೋಳಿ ಬೇಕಾ 1,000 ಕೊಡಿ, ಬಟ್ಟಿಗೆ ಇವತ್ ಮಾತ್ರ ಫುಲ್ ಡಿಸ್ಕೌಂಟ್ ಇತ್ತ್ ಕಾಣಿ, ಬನ್ನಿ ಸರ್ 2ರೂಪಾಯಾಗ್ ನಿಮ್ ತೂಕ ಕಾಣ್ಲಾಕ್, ಹೊಯ್ ಒಂದು ಆಟ ಆಡಿ ಹೋಯ್ನಿ ಬರೀ ಹತ್ತೇ ರೂಪಾಯಿ… ಹೀಗೆ ಅಲ್ಲಿನ ವ್ಯಾಪಾರಿಗಳು ಕೂಗಿ ಕರೆಯುತ್ತಿದ್ದರೇ ಗ್ರಾಹಕರು ತಮಗೆ ಬೇಕಾದ್ದನ್ನು ಕೊಂಡು ತೆರಳುತ್ತಿದ್ದರು. ಅಸಲಿಗೆ ಅಲ್ಲಿದ್ದವರ್ಯಾರೂ ವ್ಯಾಪಾರಿಗಳೂ ಆಗಿರಲಿಲ್ಲ, ಕೊಳ್ಳಲು ಹೋದವರು ಅಲ್ಲಿನ ಗ್ರಾಹಕರೂ ಆಗಿರಲಿಲ್ಲ, ಅಷ್ಟೇ ಏಕೆ ಅದು ದಿನವೂ ಸಂತೆ ನಡೆಯುವ ಸ್ಥಳವೂ ಆಗಿರಲಿಲ್ಲ. ಆದರೆ ಈ ದಿನದ ಮಟ್ಟಿಗೆ ತಗ್ಗರ್ಸೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗಿನಿಂದಲೇ ಒಂದು ವಿಶೇಷ ಸಡಗರ ಆರಂಭಗೊಂಡಿತ್ತು. ಅಲ್ಲಿ ಅಕ್ಷರಶಃ ಸಂತೆಯ ವಾತಾವರಣ ನಿರ್ಮಾಣಗೊಂಡಿತ್ತು. ಆ ಹೊತ್ತಿಗೆ ಶಾಲೆಯ ಮಕ್ಕಳೆಲ್ಲ ವ್ಯಾಪಾರಿಗಳಾಗಿದ್ದರು. ಪೋಷಕರು, ಊರವರೆಲ್ಲ…
ಮತ್ತೆ ಬಂದಿದೆ ನಾಡು-ನುಡಿ-ಸಂಸ್ಕೃತಿಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಆಳ್ವಾಸ್ ನುಡಿಸಿರಿ. ಕಳೆದ 12ವರ್ಷಗಳಿಂದ ಮೂಡುಬಿದಿರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ವು ನಿರಂತರವಾಗಿ ನುಡಿಸಿರಿ ಸಂಘಟಿಸಿಕೊಂಡು ಬರುವ ಮೂಲಕ ನಾಡಿನಾದ್ಯಂತ ನಾಡು-ನುಡಿಯ ಎಚ್ಚರವನ್ನು, ಸಂಸ್ಕೃತಿ ಪ್ರೀತಿ-ಗೌರವಗಳನ್ನು ವೃದ್ಧಿಸಲು ತನ್ನದೇ ಆದ ಸೇವೆ ನೀಡುತ್ತಿದೆ. ಈ ಭಾರಿಯ ಕಾರ್ಯಕ್ರಮವು ನವೆಂಬರ್ 26, 27, 28 ಮತ್ತು 29ರಂದು ನಾಲ್ಕು ದಿನಗಳ ಕಾಲ ಮೂಡುಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ವಿಜೃಂಭಣೆಯಿಂದ ಜರುಗಲಿದೆ. ಆಳ್ವಾಸ್ ನುಡಿಸಿರಿ 2015ರ ಸರ್ವಾಧ್ಯಕ್ಷತೆಗೆ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ ಆಯ್ಕೆ. ರಾಮನಗರ ಜಿಲ್ಲೆಯ ಕನಕಪುರದಲ್ಲಿ ಜನಿಸಿದ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀಯವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ, ರೀಡರ್ ಆಗಿ, ಪ್ರೊಫೆಸರರಾಗಿ, ವಿಭಾಗ ನಿರ್ದೇಶಕರಾಗಿ ಕಲಾವಿಭಾಗದ ಡೀನ್ ಆಗಿ ಸುಮಾರು 40 ವರ್ಷಗಳ ಸೇವೆ ಸಲ್ಲಿಸಿರುವ ಹಿರಿಯ ಪ್ರಾಧ್ಯಾಪಕರು ಹಾಗೂ ಈ ಶತಮಾನದ ಹಿರಿಯ ವಿದ್ವಾಂಸರು. ಹಳೆಗನ್ನಡ ಸಾಹಿತ್ಯ, ವ್ಯಾಕರಣ, ಛಂದಸ್ಸು, ಅಲಂಕಾರ ಶಾಸ್ತ್ರ, ಸಾಹಿತ್ಯ ಚರಿತ್ರೆ, ಗ್ರಂಥಸಂಪಾದನೆ, ನಿಘಂಟು…
