ಕುಂದಾಪುರ: ರಾಮಕ್ಷತ್ರೀಯ ಸಮಾಜದಲ್ಲಿ ಕುಂದಾಪುರದವರು ಮಾದರಿಯಾಗಿ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈ ಭಾರಿ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಯುವಕ ಮಂಡಳಿಯು ಸಮಾಜದ ಅಭಿವೃದ್ಧಿಗಾಗಿ ಮತ್ತಷ್ಟು ಶ್ರಮಿಸಲಿ ಎಂದು ಉದ್ಯಮಿ ದತ್ತಾನಂದ ಜಿ. ಹೇಳಿದರು. ಅವರು ಕುಂದಾಪುರ ರಾಮಕ್ಷತ್ರಿಯ ಯವಕ ಮಂಡಳಿಯ ಶ್ರೀ ಗಣೇಶೋತ್ಸವದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಮಕ್ಷತ್ರಿಯ ಯುವಕ ಮಂಡಳಿಯ ಸ್ಥಾಪಕಾಧ್ಯಕ್ಷ ಡಿ. ಕೆ. ರತ್ನಾಕರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಯುವಕ ಮಂಡಳಿಗೆ ಸ್ಮರಣೀಯ ಸೇವೆ ಸಲ್ಲಿಸಿದ ಚಂದ್ರಶೇಖರ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ರವೀಂದ್ರ ಶೇರುಗಾರ್, ಕೊಲ್ಲೂರು ಮೂಕಾಂಬಿಕಾ ದೇವಳದ ಧರ್ಮದರ್ಶಿ ಜಯಾನಂದ ಹೋಬಳಿದಾರ್ ಉಪಸ್ಥಿತರಿದ್ದರು. ಕುಂದಾಪುರ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಸುರೇಶ್ ಬೆಟ್ಟಿನ್, ಸುವರ್ಣ ಸಂಭ್ರಮ ಸಮಿತಿಯ ಗೌರವಾಧ್ಯಕ್ಷ ಅಜೀತ್ ಕುಮಾರ್ ಬಾಣ, ಯುವಕ ಮಂಡಳಿಯ ಪೂವಾಧ್ಯಕ್ಷರುಗಳು ವೇದಿಕೆಯಲ್ಲಿದ್ದರು. ರಾಮಕ್ಷತ್ರಿಯ ಯುವಕ ಮಂಡಳಿ ಸುವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಯು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ರಾಜಶೇಖರ ಹೆಗ್ಡೆ ಧನ್ಯವಾದಗೈದರು.…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪುರ: ಇಲ್ಲಿನ ಖಾರ್ವಿಕೇರಿ ಶ್ರೀಮಹಾಕಾಳಿ ಗಣೇಶೋತ್ಸವ ಸಮಿತಿಯ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಹಾಗೂ ರಾಮಕ್ಷತ್ರೀಯ ಯುವಕ ಮಂಡಳಿ ಕುಂದಾಪುರ ಇವರ ಗಣೇಶೋತ್ಸವ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಪೂಜನೀಯ ಡಾ| ಡಿ ವೀರೇಂದ್ರ ಹೆಗ್ಗಡೆಯವರು ಕ್ರಮವಾಗಿ 5:30 ಹಾಗೂ 7ಗಂಟೆಗೆ ಆಗಮಿಸಲಿದ್ದಾರೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.
ಕುಂದಾಪುರ: ವಿಘ್ನನಿವಾರಕ ಶ್ರೀ ವಿಫ್ನೇಶ್ವರನ ಆರಾಧನೆ ಎಲ್ಲೆಡೆಯೂ ಸಂಭ್ರಮ, ಸಡಗರದಿಂದ ಜರುಗುತ್ತಿದೆ. ತಾಲೂಕಿನ ಪ್ರಮುಖ ವಿನಾಯಕ ದೇವಸ್ಥಾನಗಳಾದ ಆನೆಗುಡ್ಡೆ, ಹಟ್ಟಿಯಂಗಡಿ ಸೇರಿದಂತೆ ಇತರ ಗಣಪತಿ ದೇವಾಲಯಗಳಲ್ಲಿ ವಿಶೇಷ ಹೋಮ, ಹವನ, ಪೂಜಾಕೈಂಕರ್ಯಗಳು ಜರುಗುತ್ತಿದ್ದೇ, ಸಾರ್ವಜನಿಕ ಗಣೇಶೋತ್ಸವದಲ್ಲೂ ಗಣಪತಿಯನ್ನು ಪ್ರತಿಷ್ಠಾಪಿಸಿ ಭಕ್ತಿಭಾವದಿಂದ ಪೂಜಿಸಲಾಗುತ್ತಿದೆ. ಕುಂದಾಪುರ ತಾಲೂಕಿನಲ್ಲಿ ಸುಮಾರು 80ಕ್ಕೂ ಹೆಚ್ಚು ಕಡೆಗಳಲ್ಲಿ ಸಾರ್ವಜನಿಕವಾಗಿ ಗಣಪತಿಗಳನ್ನು ಪ್ರತಿಷ್ಠಾಪಿಸಿದ್ದರೇ, ಹಲವು ಮನೆ, ಅಂಗಡಿಗಳಲ್ಲಿಯೂ ಗಣಪನನ್ನು ಪ್ರತಿಷ್ಠಾಪಿಸಲಾಗಿದೆ. ಆನೆಗುಡ್ಡೆ, ಹಟ್ಟಿಯಂಗಡಿ ಮುಂತಾದೆಡೆಗಳಲ್ಲಿ ಭಕ್ತರ ಅಧಿಕ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು. ಕುಂದಾಪುರದ ರಾಮಕ್ಷತ್ರಿಯ ಯುವಕ ಮಂಡಲದ ಗಣೇಶೋತ್ಸವವು ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದರೇ, ಖಾರ್ವಿಕೇರಿಯ ಶ್ರೀ ಮಹಾಕಾಳಿ ದೇವಳದ ಗಣೇಶೋತ್ಸವ ರಜತ ಮಹೋತ್ಸವದ ಸಂಭ್ರಮದಲ್ಲಿದ್ದು ಕುಂದಾಪುರ ನಗರವನ್ನು ಸಿಂಗರಿಸಲಾಗಿದೆ. *** ಕುಂದಾಪುರದ ಶ್ರೀ ಮಹಾಕಾಳಿ ದೇವಸ್ಥಾನ, ರಾಮಕ್ಷತ್ರಿಯ ಯುವಕ ಮಂಡಳಿ, ಕುಂದೇಶ್ವರ ದೇವಸ್ಥಾನ, ನೇರಂಬಳ್ಳಿ ವಿಫ್ನೇಶ್ವರ ಯುವಕ ಮಂಡಲ, ಹಂಗಳೂರು ವಿನಾಯಕ ಮಿತ್ರವೃಂದ, ವಂಡೇರಹೋಬಳಿ ಬಿ.ಸಿ. ರಸ್ತೆ ಶ್ರೀ ವಿಘ್ನೇಶ್ವರ ಯುವಕ ಮಂಡಳಿ, ಕೋಟೇಶ್ವರ,…
ಜಗನ್ಮಾತೆಯಾದ ಪಾರ್ವತೀದೇವಿಯು ತನ್ನ ಮೈಮಣ್ಣಿನಿಂದ ಗಣಪತಿಯನ್ನು ನಿರ್ಮಿಸಿದಳು. ಪಾರ್ವತೀ ದೇವಿ ಎಂದಿನಂತೆ ಸ್ನಾನಕ್ಕೆ ಹೋಗುವಾಗ ‘‘ಗಣಪತಿ’’ಯನ್ನು ದ್ವಾರದಲ್ಲಿ ಕಾವಲಿರಿಸಿರುತ್ತಾಳೆ. ‘‘ಪರಶಿವ’’ ಎಂದಿನಂತೆ ಒಳಪ್ರವೇಶಕ್ಕೆ ಮುಂದಾಗುತ್ತಾನೆ. ಗಣಪತಿ ಇದನ್ನು ವಿರೋಧಿಸುತ್ತಾನೆ. ಇದರಿಂದ ‘‘ಕ್ರೋಧಿತ’’ನಾದ ಶಿವ ಗಣಪತಿಯ ತಲೆಯನ್ನು ತುಂಡರಿಸುತ್ತಾನೆ. ಇದರಿಂದ ಪಾರ್ವತಿ ದುಃಖೀಸಿ ನೋವಿನಿಂದ ಬಳಲುತ್ತಾಳೆ. ಪತಿಪರಮೇಶ್ವರನಲ್ಲಿ ‘‘ನನ್ನ ಮಗನನ್ನು ಬದುಕಿಸಿ’’ ಎಂದು ಪ್ರಾರ್ಥಿಸುತ್ತಾಳೆ. ಪರಮೇಶ್ವರ ತನ್ನ ಗಣಗಳಿಗೆ ‘‘ಉತ್ತರಕ್ಕೆ’’ ತಲೆ ಹಾಕಿ ಮಲಗಿದವರ ತಲೆಯನ್ನು ತನ್ನಿರಿ ಎಂದು ಆದೇಶ ನೀಡುತ್ತಾನೆ. ಅದರಂತೆ ಗಣಗಳು ಹುಡುಕಿ, ಹುಡುಕಿ ಮುಂದೆ ಹೋಗ್ತಾ ಇರುವಾಗ ಒಂದು ಆನೆ ‘‘ಉತ್ತರಕ್ಕೆ ’’ ತಲೆ ಹಾಕಿ ಮಲಗಿತ್ತು. ಅದರ ತಲೆಯನ್ನು ತುಂಡರಿಸಿ ತಂದು ಶಿವನಿಗೆ ಗಣಗಳು ತಂದೊಪ್ಪಿಸುತ್ತಾರೆ. ಆಗ ಶಿವ ಗಜದ ತಲೆಯನ್ನು ಗಣಪತಿಯ ಕುತ್ತಿಗೆಗೆ ಜೋಡಿಸಿ ‘‘ಆಶೀರ್ವಾದ’’ ಮಾಡಿ ಅನುಗ್ರಹಿಸುತ್ತಾನೆ. ಅಂದಿನಿಂದ ಗಣಪತಿ ‘‘ಗಜಮುಖ’’ನಾಗುತ್ತಾನೆ. ಗಜಮುಖನಿಗೆ ಮೊದಲ ಪೂಜೆ ಆಗಲಿ ಎಂದು ಪರಶಿವ ತಿಳಿಸುತ್ತಾ ಭಕ್ತರ ‘‘ಸಂಕಷ್ಟ’’ಗಳನ್ನು ಗಜಮುಖ ಶೀಘ್ರ ಪರಿಹರಿಸುವಂತಾಗಲಿ ಎಂದು ಹಾರೈಸುತ್ತಾನೆ. ಅಂತೆಯೇ ಎಲ್ಲಾ…
ಕುಂದಾಪುರ: ಹೆಣ್ಣು ಮತ್ತು ಗಂಡುವಿನ ನಡುವೆ ಜೈವಿಕ ಭಿನ್ನತೆ ಇದೆ. ಇದರ ಹೊರತಾಗಿ ಇಬ್ಬರು ಸಮಾನರೆ. ಪುರುಷರು ಸಾಂಪ್ರಾದಾಯಿಕ ನಿಯಮ, ಕಟ್ಟಳೆ, ನಂಬಿಕೆಯ ಹೆಸರಿನಲ್ಲಿ ಮಹಿಳೆಯನ್ನು ತಮ್ಮ ಕೈ ಕೆಳಗೆ ಇರುವಂತೆ ಮಾಡಿದರು. ಹೆಣ್ಣು ಗಂಡಿನ ನಡುವೆ ಇರುವ ಅಸಮತೋಲನವನ್ನು ಸರಿಪಡಿಸಬೇಕು. ಸಮಾನತೆ ಮತ್ತು ಸಾಧನೆಯ ನಿಟ್ಟಿನಲ್ಲಿ ಸಮಾಜ ಬೆಳೆಯಬೇಕು. ಅಸಮಾನತೆ ತೊರೆದು, ಸಮಾನತೆಯ ಆಧಾರದ ಮೇಲೆ ಸಮಾಜ ಕಟ್ಟಬೇಕು ಎಂದು ಭಂಡಾರ್‌ಕಾರ್ಸ್ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥೆ ಡಾ| ಪಾರ್ವತಿ ಜಿ ಐತಾಳ್ ಹೇಳಿದರು. ಅವರು ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ, ಕುಂದಾಪುರ ಇಲ್ಲಿ ನಡೆದ ಮಹಿಳಾ ದೌರ್ಜನ್ಯ ನಿರ್ಮೂಲ ಸಂಘದ ಆಶ್ರಯದಲ್ಲಿ ನಡೆದ ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಪ್ರಾಂಶುಪಾಲರಾದ ಪ್ರೋ. ದೋಮ ಚಂದ್ರಶೇಖರ್ ಮಾತನಾಡಿ ಅಸಮಾನತೆ ನಿಸರ್ಗ ಸಹಜ ಸಮಾಜದಲ್ಲಿ ಎಲ್ಲರು ಪರಸ್ವರ ಗೌರವದಿಂದ ಕಾಣುವುದು ಮುಖ್ಯ ಎಂಬುದಾಗಿ ತಿಳಿಸಿದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆದ್ಯಕ್ಷರಾದ ಹಾಜಿ ಮಾಸ್ಟರ್ ಮೆಹಮೂದ್ ರವರು…
ಕುಂದಾಪುರ: ವರ್ತಮಾನದ ಬೇಡಿಕೆಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಸಮಾಜ ವಿಜ್ಞಾನದ ಎಲ್ಲಾ ಚಟುವಟಿಕೆಗಳು ಸಮಾಜದಲ್ಲಿ ಉತ್ತಮ ಬದುಕು ರೂಪಿಸಿಕೊಡಲು ಸಾದ್ಯವಾಯಿತು. ಈ ನಿಟ್ಟಿನಲ್ಲಿ ಭೂತಕಾಲದ ಉತ್ತಮ ವಿಚಾರಗಳನ್ನು ವಿದ್ಯಾರ್ಥಿ ದಿಸೆಯಲ್ಲಿ ಎಲ್ಲರೂ ತಿಳಿದು ಕೊಳ್ಳಬೇಕಾಗಿದೆ ಎಂದು ಬೈಂದೂರು ಸರಕಾರಿ ಪ.ಪೂ ಕಾಲೇಜಿನ ಇತಿಹಾಸ ಉಪನ್ಯಾಸಕ ಕೆಂಚನೂರು ಪ್ರದೀಪ ಕುಮಾರ್ ಶೆಟ್ಟಿ ಹೇಳಿದರು. ಅವರು ಹೆಮ್ಮಾಡಿ ಜನತಾ ಪ.ಪೂ ಕಾಲೇಜಿನ ವಿದ್ಯಾರ್ಥಿ ವೇದಿಕೆ ಆಶ್ರಯದಲ್ಲಿ ನಡೆದ ‘ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ರಾಜ್ಯದ ಸ್ಥಿತಿಗತಿ’ಗಳ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು. ಜಾತ್ಯಾತೀತ ಮತ್ತು ಅಹಿಂಸಾ ತತ್ವದ ಆಧಾರದ ಮೇಲೆ ಭದ್ರ ಅಡಿಪಾಯ ಹಾಕಿ ಕೊಟ್ಟಿದ್ದರಿಂದ ಭಾರತ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರವಾಗಿ ಉತ್ತಮ ಮೌಲ್ಯಗಳಿಂದ ಎಲ್ಲಾ ರಾಷ್ಟ್ರಗಳಿಗೂ ಮಾದರಿಯಾಗಿದೆ. ಆದರೆ, ಕೆಲವೊಂದು ರಾಜ್ಯಗಳು ಧರ್ಮಾದರಿತ ರಾಜಕಾರಣದಿಂದ ತಮ್ಮ ಮೌಲ್ಯಗಳನ್ನು ಕಳೆದುಕೊಂಡು ರಾಜ್ಯದ ಸ್ಥಿತಿಗತಿ ಅಧಪತನದತ್ತಾ ಸಾಗುತ್ತಿದೆ ಎಂದು ಕಳವಳ ವ್ಯಕ್ತ ಪಡಿಸಿದರು. ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.…
ಗ೦ಗೊಳ್ಳಿ : ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಬಾಲ್ ಬ್ಯಾಡ್ಮಿಂಟನ್ ಪ೦ದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಅಕ್ಷತಾ, ಪ್ರತಿಭಾ, ಸಹನಾ,ರಕ್ಷಿತಾ,ದಿಶಾ ಭಟ್,ಅನುಷಾ ಮತ್ತು ಮೋನಿಷಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳಾದ ಸಚಿನ್, ಸಮಿತ್, ನಿತೇಶ್, ಕಾರ್ತಿಕ್, ನಾಗೇಂದ್ರ, ಚೇತನ್, ಅಕ್ಷಯ್ ಮತ್ತು ಸುಮನ್.ದೈಹಿಕ ಶಿಕ್ಷಣ ನಿರ್ದೇಶಕರಾದ ನಾಗರಾಜ ಶೆಟ್ಟಿ ಮತ್ತು ಪ್ರಾಂಶುಪಾಲ ಆರ್ ಎನ್ ರೇವಣ್‌ಕರ್ ಉಪಸ್ಥಿತರಿದ್ದಾರೆ. ಚಿತ್ರ ವರದಿ : ನರೇಂದ್ರ ಎಸ್ ಗಂಗೊಳ್ಳಿ.
ಭಾಷೆಯೊಂದಿಗೆ ಸಂಸ್ಕೃತಿ ಉಳಿಸಿ ರಾಷ್ಟ್ರ ಪ್ರೇಮ ಮೊಳಗಲಿ-ಕೆ.ಆರ್. ಹೆಬ್ಬಾರ್ ಕುಂದಾಪುರ: ದೇಶದಲ್ಲಿ 1800 ಕ್ಕೂ ಹೆಚ್ಚು ಭಾಷೆಗಳಿವೆ. ಕೇವಲ 22 ಭಾಷೆಗಳು ಮಾತ್ರ ಸಂವಿಧಾನದಿಂದ ಮಾನ್ಯತೆ ಪಡೆದಿದೆ. ಅಲ್ಲಲ್ಲಿ ಸ್ವಾರ್ಥ ಭಾವದಿಂದ ಹಿಂದಿ ಭಾಷೆಯ ಬೆಳವಣಿಗೆಯ ಬಗ್ಗೆ ಅಪಸ್ವರದಿಂದ ದೇಶದ ಐಕ್ಯತೆ, ಭಾವಕೈಕ್ಯತೆಯ ಸಹಭಾಳ್ವೆಗೆ ಮಾರಕವಾಗಿದೆ ಎಂದು ನಿವೃತ್ತ ಹಿರಿಯ ಹಿಂದಿ ಶಿಕ್ಷಕ ಕೆ.ಆರ್.ಹೆಬ್ಬಾರ್ ಹೇಳಿದರು. ಅವರು ಹೆಮ್ಮಾಡಿ ಜನತಾ ಪ.ಪೂ.ಕಾಲೇಜಿನಲ್ಲಿ ಭಾರತ ಸರ್ಕಾರದ ಯುವ ಕಾರ್ಯ, ಕ್ರೀಡಾ ಸಚಿವಾಲಯ, ನೆಹರು ಯುವಕೇಂದ್ರ ಉಡುಪಿ, ಜನತಾ ಪ.ಪೂ,ಕಾಲೇಜು ಹೆಮ್ಮಾಡಿ ಹಾಗೂ ಹರೆಗೋಡು ಮಹಾ ವಿಷ್ಣು ಯುವಕ ಮಂಡಲ ಇವರ ಜಂಟಿ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಹಿಂದಿ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು. ಇಂಗ್ಲೀಷ್ ಇಲ್ಲದಿದ್ದರೆ ವೈಜ್ಞಾನಿಕ ಬೆಳವಣಿಗೆ ಇಲ್ಲ ಎಂಬ ಮಾತು ಸುಳ್ಳು, ಬೇರೆ ಬೇರೆ ರಾಷ್ಟ್ರಗಳು ತಮ್ಮ ರಾಷ್ಟ್ರ ಭಾಷೆಯಿಂದಲೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳನ್ನು ಮೀರಿ ಸಾಧನೆ ಮಾಡಿದ್ದು ದೃಷ್ಟಾಂತ ಇದೆ. ಭಾಷೆಯ ಉಳಿವಿಗಾಗಿ ಇತ್ತೀಚಿನ ದಿನಗಳಲ್ಲಿ…
