ಗಂಗೊಳ್ಳಿ: ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ದೊರೆಯಬೇಕೆನ್ನುವ ದೃಷ್ಟಿಯಿಂದ ರಾಜ್ಯ ಸರಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ಹಾಕಿಕೊಂಡಿರುವುದರಿಂದ ಶಿಕ್ಷಣ ಕ್ಷೇತ್ರ ಕ್ರಾಂತಿಕಾರಕ ಬೆಳವಣಿಗೆ ಕಂಡಿದೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ, ಮಕ್ಕಳಿಗೆ ಮಧ್ಯಾಹ್ನದೂಟದ ವ್ಯವಸ್ಥೆ, ಕಬ್ಬಿಣದ ಅಂಶದ ಮಾತ್ರೆಗಳ ವಿತರಣೆ ಮಾಡಲಾಗುತ್ತಿದ್ದು, ವಾರಕ್ಕೆ ಮೂರು ದಿನ ವಿತರಣೆ ಮಾಡಲಾಗುತ್ತಿದ್ದ ಹಾಲನ್ನು ವಾರಕ್ಕೆ ಐದು ದಿನ ನೀಡಲು ಸರಕಾರ ಚಿಂತನೆ ನಡೆಸಿದೆ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಅವರು ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ಶಿಕ್ಷಕರ ಪ್ರಾಮಾಣಿಕ ಪ್ರಯತ್ನದಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ. ಎಸ್.ವಿ. ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಇಂಟರ್ಲಾಕ್ ಅಳವಡಿಕೆಗೆ ಸುಮಾರು ೩.೫ ಲಕ್ಷ ರೂ. ಮಂಜೂರಾಗಿದ್ದು, ಕಾಲೇಜು ರಸ್ತೆಯನ್ನು ಅಭಿವೃದ್ಧಿ ಪಡಿಸಲು ಮುಂದಿನ ಕ್ರಿಯಾಯೋಜನೆಯಲ್ಲಿ ಅಗತ್ಯ ಅನುದಾನ ಒದಗಿಸುವುದಾಗಿ ಅವರು ಭರವಸೆ ನೀಡಿದರು. ಜಿಎಸ್ವಿಎಸ್ ಅಸೋಸಿಯೇಶನ್ ಕಾರ್ಯದರ್ಶಿ…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪುರ: ಗಂಗೊಳ್ಳಿ ಬಂದರಿನ ಮೂಲಕ ಭಾನುವಾರ ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ್ದ ಫಿಶಿಂಗ್ ಬೋಟೊಂದು ಗಂಗೊಳ್ಳಿ ಸಮೀಪ ಸಮುದ್ರದಲ್ಲಿ ದುರಂತಕ್ಕೀಡಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಗಂಗೊಳ್ಳಿಯ ರಾಘವೇಂದ್ರ ಖಾರ್ವಿ ಮಾಲಕತ್ವದ ಶ್ರೀ ಮಂಜುನಾಥೇಶ್ವರ ಹೆಸರಿನ ಮೀನುಗಾರಿಕೆಯ ಬೋಟು ಇಂದು ಬೆಳಿಗ್ಗೆ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಬಂದರಿನಿಂದ ಕೆಲವೇ ದೂರದಲ್ಲಿ ಸಮುದ್ರದಲ್ಲಿ ತೆರಳುತ್ತಿದ್ದ ಸಂದರ್ಭ ಭಾರಿ ಗಾತ್ರದ ಅಲೆಯೊಂದು ಬೋಟಿಗೆ ಅಪ್ಪಳಿಸಿದ ಪರಿಣಾಮ ಬೋಟು ಮಗುಚಿ ಬಿದ್ದಿತು ಎನ್ನಲಾಗಿದೆ. ಇದೇ ಸಂದರ್ಭ ಸಮೀಪದಲ್ಲಿ ಸಾಗುತ್ತಿದ್ದ ಸುಮಾರು ನಾಲ್ಕೈದು ಬೋಟಿನ ಮೀನುಗಾರರು ಮಗುಚಿ ಬಿದ್ದ ಬೋಟಿನಲ್ಲಿದ್ದ ಪಾಂಡು ಗಂಗೊಳ್ಳಿ, ಪ್ರಭಾಕರ ಗಂಗೊಳ್ಳಿ, ಈಶ್ವರ ಉಪ್ಪುಂದ ಹಾಗೂ ಮಂಜುನಾಥ ಕೊರವಡಿ ಎಂಬುವರನ್ನು ರಕ್ಷಿಸಿದ್ದಾರೆ. ಗಾಯಗೊಂಡ ಮೀನುಗಾರರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದುರಂತದಲ್ಲಿ ಬೋಟು ಸಮುದ್ರದಲ್ಲಿ ಮುಳುಗಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಲೆ ಮತ್ತಿತರ ಸಲಕರಣೆಗಳು ಸಮುದ್ರ ಪಾಲಾಗಿದೆ. ಅಪಘಾತದಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಘಟನೆಯ…
ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ವಾಹನ ನಿಲುಗಡೆ ಪ್ರದೇಶದಲ್ಲಿ ಕೆನರಾ ಬ್ಯಾಂಕ್ ಕೊಡುಗೆಯಾಗಿ ನೀಡಿದ ಮೂರುವರೆ ಲಕ್ಷ ರೂ. ವೆಚ್ಚದ ಹೈ-ಮಾಸ್ಟ್ ವಿದ್ಯುತ್ ದೀಪಸ್ಥಂಭವನ್ನು ಸೋಮವಾರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಲೋಕಾರ್ಪಣೆಗೊಳಿಸಿದರು. ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಛೇರಿಯ ಉಪ ಮಹಾಪ್ರಬಂಧಕ ಜಿ.ವಿ.ಪ್ರಭು, ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಅಧೀಕ್ಷಕ ಕೆ. ರಾಮಕೃಷ್ಣ ಅಡಿಗ, ನೇರಳಕಟ್ಟೆ ಕೆನರಾ ಬ್ಯಾಂಕ್ ಶಾಖೆಯ ಪ್ರಬಂಧಕ ಸತೀಶ್ ಬೀಡು, ಅಧಿಕಾರಿ ಗಿರೀಶ್ ಭಂಡಾರಿ, ಸಿಬ್ಬಂದಿ ಈಶ್ವರ್ ಹಾಗೂ ದೇವಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬೆಳಿಗ್ಗಿನಿಂದ ಜಡಿ ಮಳೆ ಸುರಿಯುತ್ತಿತ್ತು. ಮಳೆ ಸುರಿದು ಗದ್ದೆಯಲ್ಲಿ ನೀರು ತುಂಬಿದಂತೆಲ್ಲ ನೆರೆದಿದ್ದವರ ಉತ್ಸಾಹವೂ ಹೆಚ್ಚಿತ್ತಲಿತ್ತು. ಅಲ್ಲಿ ನಾಯಕನಿರಲಿಲ್ಲ, ಕಾರ್ಯಕರ್ತರೂ ಇರಲಿಲ್ಲ. ಒಂದು ದಿನ ಎಲ್ಲರಲ್ಲೂ ಎಲ್ಲವನ್ನೂ ಮರೆತು, ಕಲೆತು ಸ್ನೇಹವನ್ನು ಗಟ್ಟಿಗೊಳಿಸುವ ತುಡಿತ ಮಾತ್ರ ಕಾಣುತ್ತಿತ್ತು. ಕುಂದಾಪುರ ತಾಲೂಕಿನ ಸಟ್ವಾಡಿ ಬಸ್ ನಿಲ್ದಾಣದ ಬಳಿಯ ಕೆಸರು ಗದ್ದೆಯಲ್ಲಿ ಕುಂದಾಪುರ ಬಿಜೆಪಿ ಯುವಮೋರ್ಚಾದ ವತಿಯಿಂದ ಆಯೋಜಿಸಲಾಗಿದ್ದ ’ಶ್ರಾವಣದ ಕೆಸರಿನಲ್ಲಿ ಕಮಲ ಕೂಟ’ ಎಂಬ ವಿಭಿನ್ನ ಕಾರ್ಯಕ್ರಮ ಕೆಸರಿನಲ್ಲಿ ಸ್ನೇಹ ಕಲೆಯುವಂತೆ ಮಾಡಿತ್ತು. ರಾಜಕೀಯ ಪಕ್ಷದ ಕಾರ್ಯಕ್ರಮವೆಂದಾಗಲೆಲ್ಲಾ ನಾಯಕರು, ಭಾಷಣ, ಸಂಘಟನಾತ್ಮಕ ಚಟುವಟಿಕೆಗಳೇ ಕಣ್ಮುಂದೆ ಬರುವಾಗ ಕಮಲ ಕೂಟವು ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿತ್ತು. ಸದಾ ಪಕ್ಷ, ರಾಜಕಾರಣದಲ್ಲಿ ತೊಡಗಿಕೊಳ್ಳುವವರಿಗೆ ಒಂದಿಷ್ಟು ವಿಶ್ರಾಂತಿ ನೀಡುವ ಸಲುವಾಗಿಯೇ ಆಯೋಜಿಸಲಾಗಿದ್ದ ಕೆಸರು ಗದ್ದೆಯ ಆಟೋಟ ಸ್ವರ್ಧೆಯಲ್ಲಿ ಉಡುಪಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಬಿಜೆಪಿ ಪಕ್ಷದ ಸಾವಿರಾರು ಕಾರ್ಯಕರ್ತರು ಉತ್ಸಾಹದಿಂದಲೇ ಭಾಗವಹಿಸಿದ್ದರು. (ಕುಂದಾಪ್ರ ಡಾಟ್ ಕಾಂ ವರದಿ) ಆಟೋಟ: ಕೆಸರು ಗದ್ದೆಯಲ್ಲಿ ಆಯೋಜಿಸಲಾಗಿದ್ದ ಮಾನವ ಪಿರಮಿಡ್, ಹಗ್ಗಜಗ್ಗಾಟ, ಉಪ್ಪುಮೂಟೆ ಓಟ,…
ನಮ್ಮೂರ ಸಂಗೀತ ಕುವರನಿಗೆ ಎರಡು ಪ್ರಶಸ್ತಿ ಸುನಿಲ್ ಹೆಚ್. ಜಿ. ಬೈಂದೂರು | ಅ.5, 2015 ಹೊಸ ಬಗೆಯ ಸಂಗೀತದ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಯಶಸ್ವಿ ಯುವ ಸಂಗೀತ ನಿರ್ದೇಶಕ, ಕುಂದಾಪುರ ತಾಲೂಕಿನ ಬಸ್ರೂರಿನ ಹುಡುಗ ರವಿ ಬಸ್ರೂರ್ ತೆಕ್ಕೆಯಲ್ಲಿ ಈ ಭಾರಿ ಎರಡು ಸಂಗೀತ ಪ್ರಶಸ್ತಿಗಳು ಸೇರಿಕೊಂಡಿದೆ. ಕಳೆದ ಕೆಲವು ದಶಕಗಳಿಂದ ಚಿತ್ರರಂಗದಲ್ಲಿ ಸಂಗೀತ ಸ್ವರ ಮೂಡಿಸುತ್ತಿದ್ದ ರವಿ ಬಸ್ರೂರ್ ಅವರಿಗೆ ಈ ಭಾರಿ ಅವಳಿ ಪ್ರಶಸ್ತಿ ದೊರೆತಿರುವುದು ಅವರ ಪ್ರತಿಭೆಗೆ ಸಂದ ದೊಡ್ಡ ಗೌರವವರೇ ಸರಿ. ಅವರು ಒಂದೆಡೆ ಜೀ ಕನ್ನಡ ವಾಹಿನಿ ಕೊಡಮಾಡಿದ 2014ನೇ ಸಾಲಿನ ‘ಜೀ ಮ್ಯೂಸಿಕ್ ಅವಾರ್ಡ್’ನ ಉತ್ತಮ ಹಿನ್ನೆಲೆ ಸ೦ಗೀತ ವಿಭಾಗದಲ್ಲಿ ಉಗ್ರಂ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರೆ, ಕನ್ನಡ ಇಂಟರ್ ನ್ಯಾಷನಲ್ ಮ್ಯೂಸಿಕ್ ಅವಾರ್ಡ್ (ಕಿಮಾ) ಕೊಡಮಾಡುವ ಉತ್ತಮ ಹಿನ್ನೆಲೆ ಸಂಗೀತ ವಿಭಾಗದ ಪ್ರಶಸ್ತಿಯನ್ನು ಉಗ್ರಂ ಚಿತ್ರಕ್ಕಾಗಿಯೇ ಪಡೆದುಕೊಂಡಿದ್ದಾರೆ. ಅತ್ಯುತ್ತಮ ಸಂಯೋಜಕ (ಅತ್ಯುತ್ತಮ ಹಾಡು)…
ಕುಂದಾಪುರ: ನಗರದ ಬಿಜೆಪಿ ಯುವಮೋರ್ಚಾದ ವತಿಯಿಂದ ಸಾರ್ವಜನಿಕರು ಹಾಗೂ ಕಾರ್ಯಕರ್ತರಿಗಾಗಿ ಕೆಸರು ಗದ್ದೆಯ ಆಟೋಟ ಸ್ವರ್ಧೆ ‘ಶ್ರಾವಣದ ಕೆಸರಿನಲ್ಲಿ ಕಮಲ ಕೂಟ’ವು ಕುಂದಾಪುರ-ಬಸ್ರೂರು ರಸ್ತೆಯ ಸಟ್ವಾಡಿ ಬಸ್ ನಿಲ್ದಾಣದ ಬಳಿ ಇಂದು(ಅಗಸ್ಟ್.9) ಜರುಗಲಿದೆ. ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಕಮಲ ಕೂಟವನ್ನು ಉದ್ಘಾಟಿಸಲಿದ್ದು, ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ರಘುಪತಿ ಭಟ್, ಉಡುಪಿ ಜಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ. ಉದಯಕುಮಾರ್ ಶೆಟ್ಟಿ, ಉಡುಪಿ ಜಿ.ಪಂ ಉಪಾಧ್ಯಕ್ಷ ಪ್ರಕಾಶ್ ಟಿ. ಮೆಂಡನ್, ಜಿ.ಪಂ. ಸದಸ್ಯ ಬಾಬು ಶೆಟ್ಟಿ, ಬಿಜೆಪಿ ಮೀನುಗಾರಿಕಾ ಪ್ರಕೋಷ್ಠದ ರಾಜ್ಯ ಸಂಚಾಲಕ ಕಿಶೋರ್ ಕುಮಾರ್ ಕುಂದಾಪುರ, ಯುವಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ವಿಕಾಸ್ ಪುತ್ತೂರು, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಂಜಿತ್ ಸಾಲಿಯಾನ್, ಮಹಿಳಾ ಯುವಮೋರ್ಚಾ ಅಧ್ಯಕ್ಷೆ ಶೀಲಾ ಶೆಟ್ಟಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ…
ಉಡುಪಿ: ಅಕ್ರಮವಾಗಿ ಸ್ಕಾರ್ಪಿಯೊ ವಾಹನದಲ್ಲಿ ದನಗಳನ್ನು ತುಂಬಿ ಸಾಗಣೆ ಮಾಡುತ್ತಿದ್ದ ಘಟನೆ ಹುಲಿಕಲ್ ಘಾಟ್ ಬಳಿ ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಸ್ಕಾರ್ಪಿಯೊ ವಾಹನದಲ್ಲಿ ದನಗಳನ್ನು ಸಾಗಿಸುತ್ತಿದ್ದ ವೇಳೆ ಹೊಸನಗರ ತಾಲೂಕಿನ ನಗರದ ಹುಲಿಕಲ್ ಘಾಟ್ ಗೇಟ್ ನಲ್ಲಿ ತಪಾಸಣೆ ನಡೆಸಿದಾಗ ಇಬ್ಬರು ಆರೋಪಿಗಳು ಅಲ್ಲಿದ್ದ ಅಧಿಕಾರಿಗಳನ್ನು ಬೆದರಿಸಿ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ವಾಹನದಲ್ಲಿ ಒಟ್ಟು 8 ದನಗಳಿದ್ದು ಆ ಪೈಕಿ 3ದನಗಳ ಕುತ್ತಿಗೆ ಕಾಲು ಕತ್ತರಿಸಿ ತುಂಬಲಾಗಿತ್ತು. ವಿಪರೀತ ಗಾಯಗೋಂಡಿದ್ದ 5 ದನಗಳನ್ನು ರಕ್ಷಿಸಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗೊಳ್ಳಿ: ನೆಲದ ಮೇಲೆ ಬೆಳೆದ ಹೂಬಳ್ಳಿಗಳು ಗಿಡ ಗಂಟಿಗಳು ಹತ್ತಿರದಲ್ಲಿರುವ ಮನೆ, ಅಂಗಡಿ ಮುಗ್ಗಟ್ಟು ಅಥವಾ ಕಂಬಗಳನ್ನು ಹತ್ತಿ ಬೆಳೆಯುವುದು ಮಳೆಗಾಲದಲ್ಲಿ ಸಾಮಾನ್ಯ. ಆದರೆ ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯ ಶ್ರೀ ಚಕ್ರೇಶ್ವರಿ ದೇವಸ್ಥಾನದ ಸಮೀಪದಲ್ಲಿರುವ ವಿದ್ಯುತ್ ಕಂಬವೊಂದರ ಮೇಲೆ ಬಳ್ಳಿಗಳು ದೊಡ್ಡದಾಗಿ ಬೆಳೆದು ವಿದ್ಯುತ್ ತಂತಿ ಸಮೇತ ಕಂಬವನ್ನು ಆವರಿಸುತ್ತಿದೆ. ಇಷ್ಟಿದ್ದರೂ ಮೆಸ್ಕಾಂ ಇಲಾಖೆ ದಿವ್ಯ ನಿರ್ಲಕ್ಷ್ಯ ತಾಳಿದ್ದು, ಕಂಬವನ್ನು ಸುತ್ತುವರಿದಿರುವ ಬಳ್ಳಿಗಳನ್ನು ಕತ್ತರಿಸುವ ಗೋಜಿಗೆ ಹೋಗಿಲ್ಲ. ಇದು ಮುಂದಿನ ದಿನಗಳಲ್ಲಿ ಅನಾಹುತಗಳಿಗೆ ಎಡೆಮಾಡಿಕೊಡುವ ಸಾಧ್ಯತೆಗಳಿದ್ದು, ಮೆಸ್ಕಾಂ ಅಧಿಕಾರಿಗಳು ಇತ್ತಮ ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಚಿತ್ರ: ಸುರಭಿ ಗಂಗೊಳ್ಳಿ
ಗಂಗೊಳ್ಳಿ: ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಆಚಾರ ವಿಚಾರಗಳನ್ನು ತಿಳಿಸಿದರೆ ಮಕ್ಕಳಲ್ಲಿ ದೇಶಭಕ್ತಿ ಮೂಡಲು ಸಹಾಯಕವಾಗುತ್ತದೆ. ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಪ್ರಾಣತ್ಯಾಗ ಮಾಡಿದ ಅನೇಕ ದೇಶಭಕ್ತರನ್ನು, ಯೋಧರನ್ನು ನಾವು ಸದಾ ಸ್ಮರಿಸಿಕೊಳ್ಳಬೇಕು. ದೇಶದೆಲ್ಲೆಡೆ ಹೆಚ್ಚುತ್ತಿರುವ ಭಯೋತ್ಪಾದನೆ ಮೊದಲಾದ ಅನೇಕ ದೇಶದ್ರೋಹಿ ಚಟುವಟಿಕೆಗಳಲ್ಲಿ ಯುವಕರ ಪಾತ್ರ ಹೆಚ್ಚಾಗಿ ಕಂಡು ಬರುತ್ತಿದ್ದು, ಇಂತಹ ಚಟುವಟಿಕೆಗಳನ್ನು ಹತ್ತಿಕ್ಕಲು ನಾವು ನಮ್ಮ ದೇಶದ ಮೇಲೆ ಪ್ರೀತಿ ಅಭಿಮಾನವನ್ನು ಬೆಳೆಸಿಕೊಂಡು ನಾವೆಲ್ಲರೂ ಭಾರತೀಯರು ಎಂಬ ಭಾವನೆ ರೂಢಿಸಿಕೊಳ್ಳಬೇಕು ಎಂದು ಸಮಾಜಸೇವಕ ಜಿ.ಗಣಪತಿ ಶಿಪಾ ಹೇಳಿದರು. ಅವರು ಇತ್ತೀಚಿಗೆ ಗಂಗೊಳ್ಳಿಯ ವೀರ ಸಾವರ್ಕರ್ ದೇಶಪ್ರೇಮಿಗಳ ಬಳಗದ ಆಶ್ರಯದಲ್ಲಿ ಗಂಗೊಳ್ಳಿಯ ದೊಡ್ಡಹಿತ್ಲು ವಠಾರದಲ್ಲಿ ಜರಗಿದ ಭಾರತ ಮಾತಾ ಪೂಜನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಅರವಿಂದ ಕೋಟೇಶ್ವರ ದಿಕ್ಸೂಚಿ ಭಾಷಣ ಮಾಡಿದರು. ಸ್ಫೂರ್ತಿ ಮಹಿಳಾ ಸಂಘದ ಸದಸ್ಯರು ಭಾರತ ಮಾತೆಗೆ ವಂದಿಸುವ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೀರ ಸಾವರ್ಕರ್ ದೇಶಪ್ರೇಮಿಗಳ ಬಳಗದ ರಂಜಿತ್ ಖಾರ್ವಿ…
ಗಂಗೊಳ್ಳಿ: ಶಾಲೆಯ ಅಭಿವೃದ್ಧಿಗಾಗಿ ಪಂಚಾಯತ್ ವತಿಯಿಂದ ದೊರೆಯುವ ಸೌಲಭ್ಯವನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಶಾಲೆಯ ಅಭಿವೃದ್ಧಿಯಲ್ಲಿ ಪೋಷಕರು ಕೈಜೋಡಿಸಬೇಕು. ಪೋಷಕರು ಶಾಲೆಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸಬೇಕು ಜೊತೆಗೆ ಶಾಲೆಯ ಕುಂದು ಕೊರತೆಗಳ ಬಗ್ಗೆ ಶಾಲಾಭಿವೃದ್ಧಿ ಸಮಿತಿಯ ಗಮನಕ್ಕೆ ತರಬೇಕು ಎಂದು ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ ಮೇಸ್ತ ಹೇಳಿದರು. ಅವರು ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಪೋಷಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ರಾಮನಾಥ ಚಿತ್ತಾಲ್, ಗುಜ್ಜಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಕಾವ್ಯ ಶೇರುಗಾರ್, ವೇದಾವತಿ, ಆರತಿ ಶುಭ ಹಾರೈಸಿದರು. ಇದೇ ಸಂದರ್ಭ ಸರಕಾರದ ಅಧಿನಿಯಮದಂತೆ ಶಾಲೆಯ ಎಸ್ಡಿಎಂಸಿಗೆ ಪೋಷಕರು ೧೮ ಸದಸ್ಯರನ್ನು ನಾಮಕರಣ ಮಾಡಿ ಆಯ್ಕೆ ಮಾಡಲಾಯಿತು ಹಾಗೂ ತಾಯಂದಿರ ಸಮಿತಿಯನ್ನು ರಚಿಸಲಾಯಿತು. ಎಸ್ಡಿಎಂಸಿ ಉಪಾಧ್ಯಕ್ಷೆ ಇಂದಿರಾ, ಸಮಿತಿಯ ಸದಸ್ಯರಾದ ಮುತ್ತು, ಗಾಯತ್ರಿ, ಮೋಹನ ನಾಯ್ಕ್, ಜ್ಯೋತಿ, ಸರಿತಾ, ಸರಸ್ವತಿ, ಶೇಖರ ಪೂಜಾರಿ, ಕರಿಯ ಪೂಜಾರಿ, ದೇವದಾಸ…
