ಗುಜ್ಜಾಡಿ ಶಾಲೆಯಲ್ಲಿ ಪೋಷಕರ ಸಭೆ

Call us

Call us

Call us

ಗಂಗೊಳ್ಳಿ: ಶಾಲೆಯ ಅಭಿವೃದ್ಧಿಗಾಗಿ ಪಂಚಾಯತ್ ವತಿಯಿಂದ ದೊರೆಯುವ ಸೌಲಭ್ಯವನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಶಾಲೆಯ ಅಭಿವೃದ್ಧಿಯಲ್ಲಿ ಪೋಷಕರು ಕೈಜೋಡಿಸಬೇಕು. ಪೋಷಕರು ಶಾಲೆಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸಬೇಕು ಜೊತೆಗೆ ಶಾಲೆಯ ಕುಂದು ಕೊರತೆಗಳ ಬಗ್ಗೆ ಶಾಲಾಭಿವೃದ್ಧಿ ಸಮಿತಿಯ ಗಮನಕ್ಕೆ ತರಬೇಕು ಎಂದು ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ ಮೇಸ್ತ ಹೇಳಿದರು.

Call us

Click Here

ಅವರು ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಪೋಷಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ರಾಮನಾಥ ಚಿತ್ತಾಲ್, ಗುಜ್ಜಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಕಾವ್ಯ ಶೇರುಗಾರ್, ವೇದಾವತಿ, ಆರತಿ ಶುಭ ಹಾರೈಸಿದರು. ಇದೇ ಸಂದರ್ಭ ಸರಕಾರದ ಅಧಿನಿಯಮದಂತೆ ಶಾಲೆಯ ಎಸ್‌ಡಿಎಂಸಿಗೆ ಪೋಷಕರು ೧೮ ಸದಸ್ಯರನ್ನು ನಾಮಕರಣ ಮಾಡಿ ಆಯ್ಕೆ ಮಾಡಲಾಯಿತು ಹಾಗೂ ತಾಯಂದಿರ ಸಮಿತಿಯನ್ನು ರಚಿಸಲಾಯಿತು. ಎಸ್‌ಡಿಎಂಸಿ ಉಪಾಧ್ಯಕ್ಷೆ ಇಂದಿರಾ, ಸಮಿತಿಯ ಸದಸ್ಯರಾದ ಮುತ್ತು, ಗಾಯತ್ರಿ, ಮೋಹನ ನಾಯ್ಕ್, ಜ್ಯೋತಿ, ಸರಿತಾ, ಸರಸ್ವತಿ, ಶೇಖರ ಪೂಜಾರಿ, ಕರಿಯ ಪೂಜಾರಿ, ದೇವದಾಸ ಖಾರ್ವಿ, ಗಣೇಶ, ರೂಪಾ, ಗೀತಾ ದೇವಾಡಿಗ, ಶ್ರೀಕಾಂತ ಮೇಸ್ತ, ಮಹೇಶ ಆಚಾರ್, ತಿಮ್ಮಪ್ಪ ಖಾರ್ವಿ, ಅನಿತಾ ಉಪಸ್ಥಿತರಿದ್ದರು.

ಸಹಶಿಕ್ಷಕ ಜಯರಾಮ ಶೆಟ್ಟಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಹನುಮಂತ ಬಿಲ್ಲವ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶೈಕ್ಷಣಿಕ ವರ್ಷದ ನೂತನ ಪ್ರಯೋಗ ಶಾಲಾ ದಿನಚರಿಯನ್ನು ಸಹಶಿಕ್ಷಕಿ ಅಶ್ವಿನಿ ಪರಿಚಯಿಸಿದರು. ಸಹಶಿಕ್ಷಕರಾದ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ಲತಾ ವಂದಿಸಿದರು.

ಎಸ್‌ಡಿಎಂಸಿ ಅಧ್ಯಕ್ಷರಾಗಿ ರಾಮನಾಥ ಚಿತ್ತಾಲ್ ಪುನರಾಯ್ಕೆ

ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2015-16ನೇ ಸಾಲಿಗೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ರಾಮನಾಥ ಚಿತ್ತಾಲ್ ಪುನರಾಯ್ಕೆಯಾಗಿದ್ದಾರೆ.

Click here

Click here

Click here

Click Here

Call us

Call us

ಬುಧವಾರ ಶಾಲೆಯ ಸಭಾಂಗಣದಲ್ಲಿ ಜರಗುದ ಪೋಷಕರ ಸಭೆಯಲ್ಲಿ ಇವರನ್ನು ಪುನರಾಯ್ಕೆ ಮಾಡಲಾಯಿತು. 2014-15ನೇ ಸಾಲಿನಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು ಸ್ಥಳೀಯ ಅನೇಕ ಸಂಘ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇಂದಿರಾ (ಉಪಾಧ್ಯಕ್ಷೆ), ಮುತ್ತು, ಗಾಯತ್ರಿ, ಮೋಹನ ನಾಯ್ಕ್, ಜ್ಯೋತಿ, ಸರಿತಾ, ಸರಸ್ವತಿ, ಶೇಖರ ಪೂಜಾರಿ, ಕರಿಯ ಪೂಜಾರಿ, ದೇವದಾಸ ಖಾರ್ವಿ, ಗಣೇಶ, ರೂಪಾ, ಗೀತಾ ದೇವಾಡಿಗ, ಶ್ರೀಕಾಂತ ಮೇಸ್ತ, ಮಹೇಶ ಆಚಾರ್, ತಿಮ್ಮಪ್ಪ ಖಾರ್ವಿ, ಅನಿತಾ (ಸಮಿತಿ ಸದಸ್ಯರು) ಆಯ್ಕೆಯಾಗಿದ್ದಾರೆ.

Leave a Reply