ಜಗನ್ಮಾತೆಯಾದ ಪಾರ್ವತೀದೇವಿಯು ತನ್ನ ಮೈಮಣ್ಣಿನಿಂದ ಗಣಪತಿಯನ್ನು ನಿರ್ಮಿಸಿದಳು. ಪಾರ್ವತೀ ದೇವಿ ಎಂದಿನಂತೆ ಸ್ನಾನಕ್ಕೆ ಹೋಗುವಾಗ ‘‘ಗಣಪತಿ’’ಯನ್ನು ದ್ವಾರದಲ್ಲಿ ಕಾವಲಿರಿಸಿರುತ್ತಾಳೆ. ‘‘ಪರಶಿವ’’ ಎಂದಿನಂತೆ ಒಳಪ್ರವೇಶಕ್ಕೆ ಮುಂದಾಗುತ್ತಾನೆ. ಗಣಪತಿ ಇದನ್ನು ವಿರೋಧಿಸುತ್ತಾನೆ. ಇದರಿಂದ ‘‘ಕ್ರೋಧಿತ’’ನಾದ ಶಿವ ಗಣಪತಿಯ ತಲೆಯನ್ನು ತುಂಡರಿಸುತ್ತಾನೆ. ಇದರಿಂದ ಪಾರ್ವತಿ ದುಃಖೀಸಿ ನೋವಿನಿಂದ ಬಳಲುತ್ತಾಳೆ. ಪತಿಪರಮೇಶ್ವರನಲ್ಲಿ ‘‘ನನ್ನ ಮಗನನ್ನು ಬದುಕಿಸಿ’’ ಎಂದು ಪ್ರಾರ್ಥಿಸುತ್ತಾಳೆ. ಪರಮೇಶ್ವರ ತನ್ನ ಗಣಗಳಿಗೆ ‘‘ಉತ್ತರಕ್ಕೆ’’ ತಲೆ ಹಾಕಿ ಮಲಗಿದವರ ತಲೆಯನ್ನು ತನ್ನಿರಿ ಎಂದು ಆದೇಶ ನೀಡುತ್ತಾನೆ. ಅದರಂತೆ ಗಣಗಳು ಹುಡುಕಿ, ಹುಡುಕಿ ಮುಂದೆ ಹೋಗ್ತಾ ಇರುವಾಗ ಒಂದು ಆನೆ ‘‘ಉತ್ತರಕ್ಕೆ ’’ ತಲೆ ಹಾಕಿ ಮಲಗಿತ್ತು. ಅದರ ತಲೆಯನ್ನು ತುಂಡರಿಸಿ ತಂದು ಶಿವನಿಗೆ ಗಣಗಳು ತಂದೊಪ್ಪಿಸುತ್ತಾರೆ. ಆಗ ಶಿವ ಗಜದ ತಲೆಯನ್ನು ಗಣಪತಿಯ ಕುತ್ತಿಗೆಗೆ ಜೋಡಿಸಿ ‘‘ಆಶೀರ್ವಾದ’’ ಮಾಡಿ ಅನುಗ್ರಹಿಸುತ್ತಾನೆ. ಅಂದಿನಿಂದ ಗಣಪತಿ ‘‘ಗಜಮುಖ’’ನಾಗುತ್ತಾನೆ. ಗಜಮುಖನಿಗೆ ಮೊದಲ ಪೂಜೆ ಆಗಲಿ ಎಂದು ಪರಶಿವ ತಿಳಿಸುತ್ತಾ ಭಕ್ತರ ‘‘ಸಂಕಷ್ಟ’’ಗಳನ್ನು ಗಜಮುಖ ಶೀಘ್ರ ಪರಿಹರಿಸುವಂತಾಗಲಿ ಎಂದು ಹಾರೈಸುತ್ತಾನೆ. ಅಂತೆಯೇ ಎಲ್ಲಾ…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪುರ: ಹೆಣ್ಣು ಮತ್ತು ಗಂಡುವಿನ ನಡುವೆ ಜೈವಿಕ ಭಿನ್ನತೆ ಇದೆ. ಇದರ ಹೊರತಾಗಿ ಇಬ್ಬರು ಸಮಾನರೆ. ಪುರುಷರು ಸಾಂಪ್ರಾದಾಯಿಕ ನಿಯಮ, ಕಟ್ಟಳೆ, ನಂಬಿಕೆಯ ಹೆಸರಿನಲ್ಲಿ ಮಹಿಳೆಯನ್ನು ತಮ್ಮ ಕೈ ಕೆಳಗೆ ಇರುವಂತೆ ಮಾಡಿದರು. ಹೆಣ್ಣು ಗಂಡಿನ ನಡುವೆ ಇರುವ ಅಸಮತೋಲನವನ್ನು ಸರಿಪಡಿಸಬೇಕು. ಸಮಾನತೆ ಮತ್ತು ಸಾಧನೆಯ ನಿಟ್ಟಿನಲ್ಲಿ ಸಮಾಜ ಬೆಳೆಯಬೇಕು. ಅಸಮಾನತೆ ತೊರೆದು, ಸಮಾನತೆಯ ಆಧಾರದ ಮೇಲೆ ಸಮಾಜ ಕಟ್ಟಬೇಕು ಎಂದು ಭಂಡಾರ್ಕಾರ್ಸ್ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥೆ ಡಾ| ಪಾರ್ವತಿ ಜಿ ಐತಾಳ್ ಹೇಳಿದರು. ಅವರು ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ, ಕುಂದಾಪುರ ಇಲ್ಲಿ ನಡೆದ ಮಹಿಳಾ ದೌರ್ಜನ್ಯ ನಿರ್ಮೂಲ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಪ್ರಾಂಶುಪಾಲರಾದ ಪ್ರೋ. ದೋಮ ಚಂದ್ರಶೇಖರ್ ಮಾತನಾಡಿ ಅಸಮಾನತೆ ನಿಸರ್ಗ ಸಹಜ ಸಮಾಜದಲ್ಲಿ ಎಲ್ಲರು ಪರಸ್ವರ ಗೌರವದಿಂದ ಕಾಣುವುದು ಮುಖ್ಯ ಎಂಬುದಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆದ್ಯಕ್ಷರಾದ ಹಾಜಿ ಮಾಸ್ಟರ್ ಮೆಹಮೂದ್ ರವರು…
ಕುಂದಾಪುರ: ವರ್ತಮಾನದ ಬೇಡಿಕೆಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಸಮಾಜ ವಿಜ್ಞಾನದ ಎಲ್ಲಾ ಚಟುವಟಿಕೆಗಳು ಸಮಾಜದಲ್ಲಿ ಉತ್ತಮ ಬದುಕು ರೂಪಿಸಿಕೊಡಲು ಸಾದ್ಯವಾಯಿತು. ಈ ನಿಟ್ಟಿನಲ್ಲಿ ಭೂತಕಾಲದ ಉತ್ತಮ ವಿಚಾರಗಳನ್ನು ವಿದ್ಯಾರ್ಥಿ ದಿಸೆಯಲ್ಲಿ ಎಲ್ಲರೂ ತಿಳಿದು ಕೊಳ್ಳಬೇಕಾಗಿದೆ ಎಂದು ಬೈಂದೂರು ಸರಕಾರಿ ಪ.ಪೂ ಕಾಲೇಜಿನ ಇತಿಹಾಸ ಉಪನ್ಯಾಸಕ ಕೆಂಚನೂರು ಪ್ರದೀಪ ಕುಮಾರ್ ಶೆಟ್ಟಿ ಹೇಳಿದರು. ಅವರು ಹೆಮ್ಮಾಡಿ ಜನತಾ ಪ.ಪೂ ಕಾಲೇಜಿನ ವಿದ್ಯಾರ್ಥಿ ವೇದಿಕೆ ಆಶ್ರಯದಲ್ಲಿ ನಡೆದ ‘ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ರಾಜ್ಯದ ಸ್ಥಿತಿಗತಿ’ಗಳ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು. ಜಾತ್ಯಾತೀತ ಮತ್ತು ಅಹಿಂಸಾ ತತ್ವದ ಆಧಾರದ ಮೇಲೆ ಭದ್ರ ಅಡಿಪಾಯ ಹಾಕಿ ಕೊಟ್ಟಿದ್ದರಿಂದ ಭಾರತ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರವಾಗಿ ಉತ್ತಮ ಮೌಲ್ಯಗಳಿಂದ ಎಲ್ಲಾ ರಾಷ್ಟ್ರಗಳಿಗೂ ಮಾದರಿಯಾಗಿದೆ. ಆದರೆ, ಕೆಲವೊಂದು ರಾಜ್ಯಗಳು ಧರ್ಮಾದರಿತ ರಾಜಕಾರಣದಿಂದ ತಮ್ಮ ಮೌಲ್ಯಗಳನ್ನು ಕಳೆದುಕೊಂಡು ರಾಜ್ಯದ ಸ್ಥಿತಿಗತಿ ಅಧಪತನದತ್ತಾ ಸಾಗುತ್ತಿದೆ ಎಂದು ಕಳವಳ ವ್ಯಕ್ತ ಪಡಿಸಿದರು. ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.…
ಗ೦ಗೊಳ್ಳಿ : ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಬಾಲ್ ಬ್ಯಾಡ್ಮಿಂಟನ್ ಪ೦ದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಅಕ್ಷತಾ, ಪ್ರತಿಭಾ, ಸಹನಾ,ರಕ್ಷಿತಾ,ದಿಶಾ ಭಟ್,ಅನುಷಾ ಮತ್ತು ಮೋನಿಷಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳಾದ ಸಚಿನ್, ಸಮಿತ್, ನಿತೇಶ್, ಕಾರ್ತಿಕ್, ನಾಗೇಂದ್ರ, ಚೇತನ್, ಅಕ್ಷಯ್ ಮತ್ತು ಸುಮನ್.ದೈಹಿಕ ಶಿಕ್ಷಣ ನಿರ್ದೇಶಕರಾದ ನಾಗರಾಜ ಶೆಟ್ಟಿ ಮತ್ತು ಪ್ರಾಂಶುಪಾಲ ಆರ್ ಎನ್ ರೇವಣ್ಕರ್ ಉಪಸ್ಥಿತರಿದ್ದಾರೆ. ಚಿತ್ರ ವರದಿ : ನರೇಂದ್ರ ಎಸ್ ಗಂಗೊಳ್ಳಿ.
ಭಾಷೆಯೊಂದಿಗೆ ಸಂಸ್ಕೃತಿ ಉಳಿಸಿ ರಾಷ್ಟ್ರ ಪ್ರೇಮ ಮೊಳಗಲಿ-ಕೆ.ಆರ್. ಹೆಬ್ಬಾರ್ ಕುಂದಾಪುರ: ದೇಶದಲ್ಲಿ 1800 ಕ್ಕೂ ಹೆಚ್ಚು ಭಾಷೆಗಳಿವೆ. ಕೇವಲ 22 ಭಾಷೆಗಳು ಮಾತ್ರ ಸಂವಿಧಾನದಿಂದ ಮಾನ್ಯತೆ ಪಡೆದಿದೆ. ಅಲ್ಲಲ್ಲಿ ಸ್ವಾರ್ಥ ಭಾವದಿಂದ ಹಿಂದಿ ಭಾಷೆಯ ಬೆಳವಣಿಗೆಯ ಬಗ್ಗೆ ಅಪಸ್ವರದಿಂದ ದೇಶದ ಐಕ್ಯತೆ, ಭಾವಕೈಕ್ಯತೆಯ ಸಹಭಾಳ್ವೆಗೆ ಮಾರಕವಾಗಿದೆ ಎಂದು ನಿವೃತ್ತ ಹಿರಿಯ ಹಿಂದಿ ಶಿಕ್ಷಕ ಕೆ.ಆರ್.ಹೆಬ್ಬಾರ್ ಹೇಳಿದರು. ಅವರು ಹೆಮ್ಮಾಡಿ ಜನತಾ ಪ.ಪೂ.ಕಾಲೇಜಿನಲ್ಲಿ ಭಾರತ ಸರ್ಕಾರದ ಯುವ ಕಾರ್ಯ, ಕ್ರೀಡಾ ಸಚಿವಾಲಯ, ನೆಹರು ಯುವಕೇಂದ್ರ ಉಡುಪಿ, ಜನತಾ ಪ.ಪೂ,ಕಾಲೇಜು ಹೆಮ್ಮಾಡಿ ಹಾಗೂ ಹರೆಗೋಡು ಮಹಾ ವಿಷ್ಣು ಯುವಕ ಮಂಡಲ ಇವರ ಜಂಟಿ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಹಿಂದಿ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು. ಇಂಗ್ಲೀಷ್ ಇಲ್ಲದಿದ್ದರೆ ವೈಜ್ಞಾನಿಕ ಬೆಳವಣಿಗೆ ಇಲ್ಲ ಎಂಬ ಮಾತು ಸುಳ್ಳು, ಬೇರೆ ಬೇರೆ ರಾಷ್ಟ್ರಗಳು ತಮ್ಮ ರಾಷ್ಟ್ರ ಭಾಷೆಯಿಂದಲೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳನ್ನು ಮೀರಿ ಸಾಧನೆ ಮಾಡಿದ್ದು ದೃಷ್ಟಾಂತ ಇದೆ. ಭಾಷೆಯ ಉಳಿವಿಗಾಗಿ ಇತ್ತೀಚಿನ ದಿನಗಳಲ್ಲಿ…
ಗಂಗೊಳ್ಳಿ : ಹದಿವಯಸ್ಸಿನ ವಿದ್ಯಾರ್ಥಿಗಳ ಮನಸ್ಸನ್ನು ಪ್ರಚೋದಿಸುವ೦ತಹ ಅನೇಕ ಆಕರ್ಷಣೆಗಳು ಸುತ್ತಲಿನ ಸಮಾಜದಲ್ಲಿ ಇದ್ದೇ ಇರುತ್ತವೆ. ಆದರೆ ಅಂತಹ ಆಕರ್ಷಣೆಗಳ ನಡುವೆ ನಮ್ಮ ಬೆಳವಣಿಗೆಗೆ ಪೂರಕವಾದುದಷ್ಟನ್ನೇ ಆರಿಸಿಕೊಂಡು ಮುನ್ನಡೆಯುವುದರ ಕಡೆಗೆ ಪ್ರತಿಯೊಬ್ಬ ವಿದ್ಯಾರ್ಥಿಯು ಗಮನ ನೀಡಬೇಕು. ಸಮಸ್ಯೆಗಳನ್ನು ದೊಡ್ಡವರೊಡನೆ ಹಂಚಿಕೊಳ್ಳುವ ಮೂಲಕ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದು ಗಂಗೊಳ್ಳಿಯ ಸಹಾಯಕ ಪೋಲಿಸ್ ಉಪನಿರ್ದೇಶಕ ವೆಂಕಟೇಶ್ ಅವರು ಹೇಳಿದರು. ಅವರು ಇತ್ತೀಚೆಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಅಲ್ಲಿನ ರೋಟರಿ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿ ಸುರಕ್ಷತೆ ಮತ್ತು ಕಾನೂನು ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೋಲಿಸ್ ಹೆಡ್ ಕಾನ್ಸ್ಟೇಬಲ್ ನಾಗರಾಜ ಅವರು ಮಾತನಾಡಿ ವಿದ್ಯಾರ್ಥಿಗಳು ಅವರ ಕಲಿಕೆಗೆ ಅಡ್ಡಿಯಾಗಿರುವ ಅನಗತ್ಯ ಮೊಬೈಲ್ ಸಹವಾಸದಿಂದ ದೂರವಿರಬೇಕು. ಮತ್ತು ಅಪರಿಚಿತರೊ೦ದಿಗೆ ವ್ಯವಹರಿಸುವಾಗ ಎಚ್ಚರದಿಂದಿರಬೇಕು ಎ೦ದು ಅಭಿಪ್ರಾಯಪಟ್ಟರು.ಆರಕ್ಷಕ ಠಾಣೆಯ ಸಿಬ್ಬ೦ದಿ ಚ೦ದ್ರಶೇಖರ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಆರ್ ಎನ್ ರೇವಣ್ಕರ್ ಅತಿಥಿಗಳನ್ನು ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನಾರಾಯಣ್…
ದೇಶಾಧ್ಯಂತ ಎದ್ದಿರುವ ಪ್ರಬಲ ವಿರೋಧದ ಕಾರಣಕ್ಕಾಗಿ “ಭೂಸ್ವಾದೀನ ತಿದ್ದುಪಡಿ ಮಸೂದೆ” ಯನ್ನು ಹಿಂಪಡೆಯುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಕಟಿಸಿದ್ದಾರೆ. ತಿದ್ದುಪಡಿ ಮಸೂದೆಯನ್ನು ಹೀಗೆ ಹಿಂಪಡೆಯುವ ನಿರ್ಧಾರ ಪ್ರಕಟಿಸುವ ಮೂಲಕ ಸ್ವತಃ ಮೋದಿಯವರು ಈ ಮಸೂದೆಯು “ದೋಷಪೂರಿತ”ವಾಗಿತ್ತು ಎಂದು ಒಪ್ಪಿ ಕೊಂಡಂತಾಗಿದೆ. ಈ “ಭೂ ಸ್ವಾಧೀನ ತಿದ್ದುಪಡಿ ಮಸೂದೆ”ಯು ರೈತ ವಿರೋಧಿ ಅಂಶ ಗಳನ್ನೊಳಗೊಂಡಿವೆ, ಇದನ್ನು ಕೇಂದ್ರ ಸರಕಾರ ಹಿಂಪಡೆಯಬೇಕು ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಸತತವಾಗಿ ಒಂದು ವರ್ಷ ಕಾಲ ದೇಶಾದ್ಯಂತ ರೈತರ ಜೊತೆಗೂಡಿ ನಡೆಸಿದ್ದ ಪ್ರತಿಭಟನೆ ಕೊನೆಗೂ ಫಲ ಪಡೆದುಕೊಂಡಿದೆ. ಪ್ರಪಂಚದ ಅತ್ಯುತ್ಕೃಷ್ಟ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರು ಎಂದೇ ಖ್ಯಾತರಾಗಿರುವ ಮನಮೋಹನ್ ಸಿಂಗ್ ರವರ ಯುಪಿಎ ಸರಕಾರ 2013 ರಲ್ಲಿ ಮಂಡಿಸಿದ್ದ ಭೂ ಸ್ವಾಧೀನ ಮಸೂದೆಯಲ್ಲಿ ಸ್ವಾಧೀನಕ್ಕೊಳಗಾಗುವ ಕೃಷಿ ಭೂಮಿಯ ಒಡೆತನ ಹೊಂದಿರುವ ಶೇಕಡಾ ಎಂಭತ್ತರಷ್ಟು ರೈತರ ಒಪ್ಪಿಗೆ ದೊರೆತರೆ ಮಾತ್ರ ಭೂ ಸ್ವಾಧೀನ ಪ್ರಕ್ರಿಯೆ ಆರಂಭಗೊಳಿಸುವ ಮತ್ತು ಭೂ ಸ್ವಾಧೀನಕ್ಕೊಳಗಾದ ಭೂಮಿಯನ್ನು ಐದು ವರ್ಷಗಳೊಳಗೆ ಉದ್ದೇಶಿತ ಯೋಜನೆಗೆ…
ಕುಂದಾಪುರ: ಖಾರ್ವಿಕೇರಿಯ ಶ್ರೀ ಮಹಾಕಾಳಿ ದೇವಸ್ಥಾನದ ಗಣೇಶೋತ್ಸವ ಸಮಿತಿಯ ವತಿಯಿಂದ ನಡೆಯುತ್ತಿರುವ 25ನೇ ವರ್ಷದ ಶ್ರೀ ಗಣೇಶೋತ್ಸವಕ್ಕೆ ಅರ್ಪಿಸಲು ಸಿದ್ಧವಾಗಿರುವ ರಜತ ಸಿಂಹಾಸನವನ್ನು ವೈಭವದ ಮೆರವಣಿಗೆಯ ಮೂಲಕ ಮಂಗಳವಾರ ಸಂಜೆ ಕುಂದಾಪುರದ ಖಾರ್ವಿಕೇರಿಗೆ ತರಲಾಯಿತು. ಕೋಟೇಶ್ವರದಿಂದ ಕುಂದಾಪುರದ ತನಕ ನಡೆದ ವಾಹನಗಳ ಮೆರವಣಿಗೆಯ ಮೂಲಕ ಈ ರಜತ ಸಿಂಹಾಸನವನ್ನು ತರಲಾಯಿತು. ಈ ಸಂದರ್ಭದಲ್ಲಿ ಈ ಸಾಲಿನ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಂದೀಪ್ ಖಾರ್ವಿ, ಉಪಾಧ್ಯಕ್ಷ ಸಂದೀಪ್ ಖಾರ್ವಿ ಎಸ್.ಎಸ್. ಕಾರ್ಯದರ್ಶಿ ಅರುಣ್ ಖಾರ್ವಿ ಹಾಗೂ ಸಮಿತಿಯ ಪದಾಧಿಕಾರಿಗಳು, ಸಾರ್ವಜನಿಕರು, ಗ್ರಾಮಸ್ಥರು ಹಾಜರಿದ್ದರು.
ಕುಂದಾಪುರ: ಇಲ್ಲಿನ ಖಾರ್ವಿಕೇರಿಯ ಶ್ರೀ ಮಹಾಕಾಳಿ ದೇವಸ್ಥಾನ ಗಣೇಶೋತ್ಸವ ಸಮಿತಿ ವತಿಯಿಂದ ಗಣೇಶೋತ್ಸವ ರಜತ ಮಹೋತ್ಸವ ಸೆ.17ರಿಂದ ಸೆ.21ರ ತನಕ ವಿಜೃಂಭಣೆಯಿಂದ ನಡೆಯಲಿದೆ. ಕಾರ್ಯಕ್ರಮಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಆಗಮಿಸಲಿದ್ದು, ಸಾಮೂಹಿಕ ಸಹಸ್ರ ನಾಳಿಕೇರ ಗಣಯಾಗ, ಅದ್ದೂರಿಯ ಪುರಮೆರವಣಿಗೆ, ಜಲಸ್ಥಂಭನದ ವಿಶಿಷ್ಟತೆಗಳು, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸೆ.17ರಂದು ರಜತೋತ್ಸವ ಕಾರ್ಯಕ್ರಮ ಆರಂಭವಾಗಲಿದೆ. ಬೆಳಿಗ್ಗೆ 10:30ಕ್ಕೆ ಉದ್ಘಾಟನೆ ನಡೆಯಲಿದೆ. ನಂತರ ವಿವಿಧ ಸ್ಪರ್ಧೆಗಳು ನಡೆಯಲಿದೆ. ರಾತ್ರಿ ಗೋಳಿಗರಡಿ ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯೊಂದಿಗೆ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ. ಸೆ.18ರಂದು ಭಜನಾ ಕಾರ್ಯಕ್ರಮ, ರಾತ್ರಿ 9ರಿಂದ ಗಾನ ನೃತ್ಯ ವೈಭವ ನಡೆಯಲಿದೆ. ಸೆ.19ರಂದು ಸಂಜೆ 5ಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರು ಆಗಮಿಸಲಿದ್ದು, ಸುಮಾರು 1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಶ್ರೀ ಮಂಜುನಾಥ ಸಭಾಭವನವನ್ನು ಉದ್ಘಾಟಿಸಿ, ಆಶೀರ್ವಚನ ನೀಡುವರು. ಸೆ.20ರಂದು ಕುಣಿತ ಭಜನಾ ಕಾರ್ಯಕ್ರಮ, ರಾತ್ರಿ 8ಕ್ಕೆ ರಜತೋತ್ಸವ ಕಾರ್ಯಕ್ರಮದ ಸಮಾರೋಪ ನಡೆಯಲಿದ್ದು, ಸಮ್ಮಾನ…
ಬೈಂದೂರು: ಬೈಂದೂರು ಹಾಗೂ ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೊಂಬೆ-ಶಿರೂರು ಭಾಗದ ಜನರಿಗೆ ಮಂಗಗಳ ಉಪಟಳ ಬಾರಿ ಹೆಚ್ಚಾಗಿದ್ದು, ಗುಂಪು ಗುಂಪಾಗಿ ತೆಂಗಿನ ಮರಗಳ ತೋಟಕ್ಕೆ ಲಗ್ಗೆ ಇಟ್ಟು ಎಗ್ಗಿಲ್ಲದೇ ಎಳನೀರು ಕುಡಿದು ಎಸೆಯುತಿರುವುದು ರೈತಜನರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಭಾಗದಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳಿದ್ದು, ಅವರು ತೋಟಗಳಿಲ್ಲಿ ಬೆಳೆದ ಸಿಯಾಳವನ್ನು ಸಾಲು ಸಾಲಾಗಿ ಲಗ್ಗೆ ಇಟ್ಟು ತಿಂದು ಎಲ್ಲೆಂದರಲ್ಲಿ ಎಸೆಯುತ್ತಿರುವುದಲ್ಲದೇ, ಓಡಿಸಲು ಹೊದರೆ ಮನುಷ್ಯರಿಗೆ ಹೆದರಿಸುತ್ತಿವೆ. ದೊಂಬೆಯ ಕಾವೇರಿ ಎಂಬುವವರ ಮನೆಯ ತೋಟವೊಂದರಲ್ಲಿಯೇ 2 ತಿಂಗಳಿನಲ್ಲಿ ಸುಮಾರು 1,000ಕ್ಕೂ ಹೆಚ್ಚು ಎಳನೀರನ್ನು ಮಂಗಗಳು ಕುಡಿದು ಎಸೆದಿವೆ. ಮರದ ಕೆಳಗೆ ನಿಂತು ಓಡಿಸಲು ಹೋದರೆ ಮನೆಯವರನ್ನು ಗದರಿಸುವುದಲ್ಲದೇ ಹಲ್ಲೆಗೂ ಮುಂದಾಗುತ್ತವೆ. ಹೀಗಾಗಿ ಮಂಗಗಳು ತೆಂಗಿನ ಮರಗಳಿಗೆ ಲಗ್ಗೆ ಇಟ್ಟಾಗ ಮನೆಯಿಂದ ಹೊರಬಂದು ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಮನೆಯವರು ಹೆದರುತ್ತಿದ್ದಾರೆ. 2 ತಿಂಗಳಿನಿಂದಲೂ ಇಲ್ಲಿನ ಮನೆಗಳಿಗಳಲ್ಲಿ ಇದು ನಿರಂತರವಾಗಿ ಸಾಗಿದೆ. ಈಗ ತೆಂಗು ಬೆಳೆ ನಾಶಪಡಿಸುತ್ತಿರುವ ಮಂಗಗಳು ಗದ್ದೆಗಳಲ್ಲಿ ಪೈರು ಬೆಳೆದು ನಿಲ್ಲುತ್ತಿದ್ದಂತೆ…
