ಬೈಂದೂರು: ಸಮೀಪದ ಕಾಲ್ತೋಡು ಗ್ರಾಮದ ಹಳೇಕಾಲ್ತೋಡುವಿನ 108 ವರ್ಷದ ಹಿರಿಯಜ್ಜಿ ನಾಗಮ್ಮ ಶೆಡ್ತಿ ಎಂಬುವವರು ಶಿರೂರು ಹೊಸ್ಮನೆ ತಮ್ಮ ಸ್ವಗೃಹದಲ್ಲಿ ನಿಧನರಾದರು. ಕೃಷಿಕುಟುಂಬಕ್ಕೆ ಸೇರಿದ ಇವರು ತಮ್ಮ ಜೀವನದ ಕೊನೆಯ ಕಾಲದವರೆಗೂ ಆರೋಗ್ಯವಂತರಾಗಿದ್ದರು. ಕೆಲವಾರು ವರ್ಷಗಳ ಹಿಂದೆ ಊರಿನ ನಾಟಿ ಪ್ರಸೂತಿ ವೈದ್ಯೆಯಾಗಿದ್ದ ನಾಗಮ್ಮ ಶೆಡ್ತಿಯವರು ಈ ಪರಿಸರದವರ ಪ್ರೀತಿಗೆ ಪಾತ್ರರಾಗಿದ್ದರು. ಮೃತರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Author: ಸುನಿಲ್ ಹೆಚ್. ಜಿ. ಬೈಂದೂರು
ಬೈಂದೂರು: ನದಿಗೆ ಸ್ನಾನ ಮಾಡಲು ಇಳಿದ ವ್ಯಕ್ತಿಯೋರ್ವರು ನೀರಿನ ಸುಳಿಗೆ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ ಘಟನೆ ಶಿರೂರಿನ ಸಂಕದಗುಂಡಿ ಎಂಬಲ್ಲಿ ನಡೆದಿದೆ. ಗಿರೀಶ್(23) ಮೃತ ದುರ್ದೈವಿ. ಘಟನೆಯ ವಿವರ: ತುಮಕೂರಿನಿಂದ ಶುಕ್ರವಾರ ರಾತ್ರಿ ಪ್ರವಾಸಕ್ಕೆಂದು ಹೊರಟಿದ್ದ ಅಲ್ಲಿನ ಟೊಯೊಟಾ ಸಪ್ಲಯರ್ಸ್ ಕಂಪೆನಿಯ 12 ಉದ್ಯೋಗಿಗಳು ಸಿಗಂದೂರು, ಜೋಗ ಹಾಗೂ ಮುರ್ಡೇಶ್ವರಕ್ಕೆ ತೆರಳಿ ಅಲ್ಲಿಂದ ಕೊಲ್ಲೂರಿಗೆ ತೆರಳುತ್ತಿರುವಾಗ ಮಾರ್ಗಮಧ್ಯೆ ಸಂಜೆ ೪:೩೦ರ ವೇಳೆಗೆ ಶಿರೂರಿನ ಸಮೀಪದ ಹೊಳೆಯನ್ನು ನೋಡಿ ತಮ್ಮ ಟೆಂಪೋ ಟ್ರಾವೆಲ್ಲರನ್ನು ನಿಲ್ಲಿಸಿ ಹೊಳೆಗಿಳಿದಿದ್ದಾರೆ. ಹೊಳೆಯಲ್ಲಿ ಸ್ನೇಹಿತರೊಂದಿಗೆ ಸ್ನಾನ ಮಾಡುತ್ತಿರುವಾಗ ಎಲ್ಲರಿಗಂತ ಸ್ವಲ್ಪ ಮುಂದೆ ಹೋಗಿದ್ದ ಗಿರೀಶ್ ಒಮ್ಮೆಲೆ ಹೆಚ್ಚಾದ ನೀರಿನ ರಭಸಕ್ಕೆ ನದಿಯಲ್ಲಿಯೇ ಕೊಚ್ಚಿಕೊಂಡು ಹೋಗಿದ್ದಾರೆ. ಗಿರೀಶ್ಗೆ ಈಜಲು ತಿಳಿದಿದ್ದರೂ ಕೂಡ ನೀರಿನ ಸುಳಿಗೆ ಸಿಕ್ಕಿದ್ದರಂದ ಅವರನ್ನು ರಕ್ಷಿಸಿಕೊಳ್ಳಲಾಗಲಿಲ್ಲ. ಇವರ ಜೊತೆಗಿದ್ದ ಸ್ನೇಹಿತರಿಗೂ ಈಜು ಬಾರದ ಕಾರಣ ಅಲ್ಲಿಂದ ಸ್ಥಳೀಯರಿಗೆ ಸ್ನೇಹಿತನನ್ನು ರಕ್ಷಿಸುವಂತೆ ಗೊಗರೆದಿದ್ದಾರೆ. ಆದರೆ ಸ್ಥಳಿಯರು ಅಲ್ಲಿಗೆ ಬರುವ ವೇಳೆಗಾಗಲೇ ವ್ಯಕ್ತಿಯು ಮೃತಪಟ್ಟಿದ್ದರು. ಮೃತ ಗಿರೀಶ್ ಹೊನ್ನಳಿಯವರಾಗಿದ್ದು ಕಳೆದ…
ಕುಂದಾಪುರ: ಇಲ್ಲಿನ ಮೀನು ಮಾರ್ಕೇಟ್ ರಸ್ತೆಯ ಫ್ರೆಂಡ್ಸ್ ಸರ್ಕಲ್ ರಿ. ಇವರ ಆಶ್ರಯದಲ್ಲಿ ಒಂದು ವಾರಗಳ ಕಾಲ ನಡೆದ ಉಚಿತ ಯೋಗ ತರಬೇತಿ ಶಿಬಿರಯನ್ನು ನರಸಿಂಹ ಎಸ್. ಹೆಗ್ಡೆ ಮನೆಯ 2ನೇ ಮಹಡಿ ಆವರಣದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಶ್ರೀ ಶ್ರೀ ರವಿಶಂಕರ ಗುರೂಜಿಯವರ ನವಚೇತನ ಶಿಬಿರದ ದಿನೇಶ ಮರಕಾಲ ತರಬೇತುದಾರರಾಗಿದ್ದರು.. 54 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಕುಂದಾಪುರ: ಶುಕ್ರವಾರ ಮಧ್ಯಾಹ್ನದಿಂದ ಕುಂದಾಪುರ ತಾಲೂಕಿನಲ್ಲಿ ಬಿ.ಎಸ್.ಎನ್.ಎಲ್ ಇಂಟರ್ನೆಟ್ ಸಮಸ್ಯೆ ತಲೆದೋರಿತ್ತು. ಬೆಂಗಳೂರಿನ ಸರ್ವರ್ ಸಮಸ್ಯೆ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಮಳೆಗಾಲ ಆರಂಭಗೊಂಡಾಗಲಿಂದ ಬಿ.ಎಸ್.ಎನ್.ಎಲ್ ಇಂಟರ್ ನೆಟ್ ಆಗಾಗ ಕೈಕೊಡುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಆದರೆ ಸಂಪರ್ಕ ಸಾಧನೆಗೆ ಅತಿ ಅಗತ್ಯವಾದ ಇಂಟರ್ನೆಟ್ ಸಂಪರ್ಕದ ಕೊರತೆಯಿಂದ ಗ್ರಾಹಕರಿಗೆ ಭಾರೀ ತೊಂದರೆ ಅನುಭವಿಸುವಂತಾಗಿದೆ.
ಕುಂದಾಪುರ: ಕೋಣಿ ಪರಿಸರದ ಯುವಕನೋರ್ವ ಕುಂದಾಪುರ -ಬಸ್ರೂರು ರಾಜ್ಯ ಹೆದ್ದಾರಿಯ ಸಟ್ವಾಡಿ ಕ್ರಾಸ್ ಬಳಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದಾಗ ತಕ್ಷಣ ಸ್ಥಳಕ್ಕೆ ಬಂದಿದ್ದ ಇನ್ನೋರ್ವ ಯುವಕ ಪ್ರಾಣದ ಹಂಗು ತೊರೆದು ಹೊಳೆಗೆ ಹಾರಿ ರಕ್ಷಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಸಂತೋಷ್(25) ಎಂದು ಗುರುತಿಸಲಾಗಿದೆ. ರಸ್ತೆಯಲ್ಲಿರುವ ಸಣ್ಣ ಸೇತುವೆಯ ಮೇಲಿನಿಂದ ನದಿಗೆ ಹಾರಿದ ಯುವಕನ್ನು ನೋಡಿದ ಮಡಗಾಂವ್ ಮೂಲದ ಯುವಕ ಸಚಿನ್ ಕೇರ್ಕಾರ್(19) ನದಿಗೆ ಹಾರಿದನು. ಇವರ ಹಿಂದಿನಿಂದ ಬಂದಿದ್ದ ಜಪ್ತಿಯ ಬಾಬಣ್ಣ ಕುಲಾಲ್ ಅವರೂ ಹೊಳೆಗೆ ಹಾರಿ ಯುವಕನ ರಕ್ಷಣೆಗೆ ಮುಂದಾಗಿದ್ದಾರೆ. ಎಲ್ಲವೂ ಕ್ಷಣಾರ್ಧದೊಳಗೆ ನಡೆದಿದ್ದರಿಂದ ಆತ್ಮಹತ್ಯೆಗೆ ಯತ್ನಿಸಿದ ಸಂತೋಷ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ್ದ ಸಂತೋಷ್ ಶಿಲೆಕಲ್ಲು ಗಲ್ಲು ಕೆಲಸ ಮಾಡಿಕೊಂಡಿದ್ದು, ಆತ್ಮಹತ್ಯಗೆ ಕಾರಣ ತಿಳಿದು ಬಂದಿಲ್ಲ.
ಕುಂದಾಪುರ: ನಗರದ ಶೆಣೈ ವೃತ್ತದ ಬಳಿ (ಈ ಹಿಂದೆ ವೃಂದಾವನ ಹೋಟೇಲಿದ್ದ ಜಾಗದಲ್ಲಿ) ನಡೆಯುತ್ತಿರುವ ಕಾಮಗಾರಿಯ ಪ್ರದೇಶದಲ್ಲಿ ಸಂಜೆಯ ವೇಳೆಗೆ ಟಿಪ್ಪರ್ ಚಕ್ರಕ್ಕೆ ಸಿಲುಕಿದ ಎಳೆಯ ಹಸುಳೆಯೊಂದು ಸ್ಥಳದಲ್ಲೇ ಅನುನೀಗಿದ ಘಟನೆ ನಡೆದಿದೆ. ತಾಮಣ್ಣ (ಒಂದೂವರೆ ವರ್ಷ) ಮೃತ ದುರ್ದೈವಿ ಕೂಸು. ಮೂಲತ: ಕೊಪ್ಪಳದ ಉದಯನಗರದವರಾದ ಲಕ್ಷ್ಮೀ ಮಾರುತಿ ದಂಪತಿಗಳ ಕೊನೆಯ ಮಗುವೇ ದುರಂತ ಅಂತ್ಯಕ್ಕೀಡಾದ ತಾಮಣ್ಣ. ಕಟ್ಟಡ ಕಾಮಗಾರಿಯ ಸಂಬಂಧ ಆಗಮಿಸಿದ ಟಿಪ್ಪರ್ವೊಂದು ಪುನಃ ವಾಪಾಸು ಹೊರಟಾಗ ಎದುರಿಗೆ ಹಂಪ್ಸ್ ಇದ್ದ ಕಾರಣ ಚಾಲಕ ಹಿಮ್ಮುಖವಾಗಿ ಚಲಿಸಿದ್ದೆ ವಿದ್ರಾವಕ ಅಂತ್ಯಕೊಂದು ಮುನ್ನುಡಿಯಾಯಿತು. ಅಷ್ಟರ ತನಕ ಅಲ್ಲಿಯೇ ಕೆಲಸಮಾಡುತ್ತಿದ್ದ ತಾಯಿಯ ಬಳಿಯಿದ್ದ ಮಗು ಮುಂದಕ್ಕೆ ಓಡಿ ಬರುವುದಕ್ಕೂ ಟಿಪ್ಪರ್ ಹಿಂದೆ ಚಲಿಸುವದಕ್ಕೂ ತಾಳೆಯಾಗಿ ಟಿಪ್ಪರ್ ನ ಹಿಂದಿನ ಚಕ್ರವೊಂದು ಉರುಳಿದ ಮಗುವಿನ ತಲೆಯ ಮೇಲೆ ಹರಿದು ಬಿಟ್ಟ ರಭಸಕ್ಕೆ ಪುಟ್ಟ ಅಕ್ರಂದನಕ್ಕೂ ಅವಕಾಶವಿಲ್ಲದಂತೆ ನಿರ್ದಯಿ ಸಾವು ನಿಷ್ಪಾಪಿ ಹಸುಳೆಯನ್ನು ಹೊಸಕಿ ಹಾಕಿತ್ತು. ಈ ಬೀಭತ್ಸ ಘಟನೆ ಹೆತ್ತೊಡಲ ಎದುರಿಗೇ ಜರಗಿದ್ದು “ಅಯ್ಯೋ…
ಮುಂಬಯಿ: ಕಲಾಜಗತ್ತು ಮುಂಬಯಿ ಇದರ ನೂತನ ಅಧ್ಯಕ್ಷರಾಗಿ ಲೀಲೇಶ್ ಆರ್. ಶೆಟ್ಟಿ ಆಯ್ಕೆಯಾಗಿದ್ದಾರೆ. ಜೂ. 29ರಂದು ಸಾಂತಾಕ್ರೂಜ್ (ಪೂ.) ಪ್ರಭಾತ್ ಕಾಲನಿಯ ಪೇಜಾವರ ಮಠದಲ್ಲಿ ತೋನ್ಸೆ ವಿಜಯ ಕುಮಾರ್ ಶೆಟ್ಟಿ ನೇತೃತ್ವದ ಕಲಾಜಗತ್ತು ಮುಂಬಯಿ ಇದರ ವಿಶೇಷ ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಉಪಾಧ್ಯಕ್ಷರಾಗಿ ಕೃಷ್ಣರಾಜ್ ಸುವರ್ಣ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ದಯಾಸಾಗರ್ ಚೌಟ, ಜತೆ ಕಾರ್ಯದರ್ಶಿಯಾಗಿ ಶಿವಾನಂದ ಶೆಟ್ಟಿ, ಗೌರವ ಕೋಶಾಧಿಕಾರಿಯಾಗಿ ಜಗದೀಶ್ ರಾವ್, ಜತೆ ಕೋಶಾಧಿಕಾರಿಯಾಗಿ ಚಂದ್ರಾವತಿ ವಸಂತ್ ಅವರನ್ನು ನೇಮಿಸಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸುರೇಂದ್ರ ಕುಮಾರ್ ಹೆಗ್ಡೆ, ಕೃಷ್ಣರಾಜ್ ಶೆಟ್ಟಿ, ಪ್ರಭಾಕರ ಶೆಟ್ಟಿ, ಎನ್. ಪೃಥ್ವಿರಾಜ್ ಮುಂಡ್ಕೂರು, ಕೆ. ಆರ್. ವಿ. ಶೆಟ್ಟಿ, ಅಶು ಪಾಂಗಾಳ, ಜೂಲಿಯೆಟ್ ಪಿರೇರ, ಕುಶಲ್ ಕೆ. ಶೆಟ್ಟಿ, ಲಾರೆನ್ಸ್ ಡಿ’ಸೋಜಾ, ಶೇಖರ್ ಸಸಿಹಿತ್ಲು, ಸುಶೀಲಾ ದೇವಾಡಿಗ, ಜಯಂತಿ ದೇವಾಡಿಗ ಆಯ್ಕೆಯಾದರು. ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಕಲಾಜಗತ್ತು ಮುಂಬಯಿ ಇದರ ಸ್ಥಾಪಕಾಧ್ಯಕ್ಷ ತೋನ್ಸೆ ವಿಜಯಕುಮಾರ್ ಶೆಟ್ಟಿ ಅಭಿನಂದಿಸಿ ಶುಭಹಾರೈಸಿದರು.…
ಮುಂಬೈ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ನಲಸೋಪರ-ವಿರಾರ್ ಸ್ಥಳೀಯ ಕಚೇರಿಯ ವತಿಯಿಂದ ಶೈಕ್ಷಣಿಕ ನೆರವು ವಿತರಣೆ ಸಮಾರಂಭ ಜೂ. 28ರಂದು ನಲಸೋಪರ (ಪೂ.) ಆಚೋಲೆ ಗಣಪತಿ ಮಂದಿರದ ಸಭಾಗೃಹದಲ್ಲಿ ಜರಗಿತು. ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಗಣೇಶ್ ವಿ. ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀನಿವಾಸ ನಾಯ್ಡು ಮಾತ ನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರದ್ಧೆ, ಏಕಾಗ್ರತೆಯಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಬಿಲ್ಲವರ ಅಸೋಸಿ ಯೇಶನ್ನ ಸಮಾಜಪರ ಯೋಜನೆಗಳ ಸದುಪಯೋಗವನ್ನು ಸಮಾಜ ಬಾಂಧವರು ಪಡೆದುಕೊಳ್ಳಬೇಕು. ಇಂತಹ ಕಾರ್ಯಕ್ರಮಗಳಿಗೆ ನನ್ನ ಪ್ರೋತ್ಸಾಹ, ಸಹಕಾರ ಸದಾವಿರುತ್ತದೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಂಸ್ಥೆಯ ಋಣ ತೀರಿಸುವ ಕಾರ್ಯದಲ್ಲಿ ಮುಂದಾಗಬೇಕು ಎಂದರು. ಮತ್ತೋರ್ವ ಅತಿಥಿ ಕೇಂದ್ರ ಕಚೇರಿಯ ಜತೆ ಕಾರ್ಯದರ್ಶಿ ಧನಂಜಯ ಕೋಟ್ಯಾನ್ ಮಾತನಾಡಿ, ಅಸೋಸಿಯೇಶನ್ನ ವಿದ್ಯಾ ಉಪಸಮಿತಿಯು ವಿದ್ಯಾಭ್ಯಾಸಕ್ಕಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಸಭೆಯ ಮುಂದಿಟ್ಟರು. ಸಂಸ್ಥೆಯ ಯೋಜನೆಗಳ ಪ್ರಯೋಜನವನ್ನು ಎಲ್ಲರು ಪಡೆದುಕೊಳ್ಳಬೇಕು ಎಂದರು. ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷ ಜಗದೀಶ್…
ಮುಂಬಯಿ: ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಬಂಟ ಕ್ರೀಡಾಪಟು, ಬಂಟರ ಸಂಘದ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕ್ರೀಡಾ ಕಾರ್ಯಾಧ್ಯಕ್ಷೆ ಸುಚರಿತಾ ಶೆಟ್ಟಿ ಕರೇಲಿಯಾ ಅವರು ಅಕ್ಟೋಬರ್ 3ರಿಂದ 7ರ ವರೆಗೆ ಆಸ್ಟ್ರೇಲಿಯಾದಲ್ಲಿ ಜರಗಲಿರುವ ಆಸ್ಟ್ರೇಲಿಯನ್ ಮಾಸ್ಟರ್ ಆ್ಯತ್ಲೆಟಿಕ್ ಮೀಟ್ಸ್ ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಹಲವಾರು ಚಿನ್ನದ ಪದಕಗಳನ್ನು ಪಡೆದಿರುವ ಅವರು ಕಳೆದ ಮೇ 7ರಿಂದ 9ರ ವರೆಗೆ ಮರೀನ್ಡ್ರೈವ್ನ ಮುಂಬಯಿ ವಿ.ವಿ.ಯ ಮೈದಾನದಲ್ಲಿ ನಡೆದ ನ್ಯಾಷನಲ್ ಮರ್ಕಂಟೈಲ್ ಕಾರ್ಪೊರೇಟ್ ಮಾಸ್ಟರ್ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಚಾಂಪಿಯನ್ಶಿಪ್ -2015ರಲ್ಲಿ ಭಾಗವಹಿಸಿರುವುದಲ್ಲದೆ 100 ಮೀ. ಓಟದಲ್ಲಿ ದ್ವಿತೀಯ, ಶಾಟ್ಪುಟ್ನಲ್ಲಿ ಪ್ರಥಮ, ಡಿಸ್ಕಸ್ ತ್ರೋನಲ್ಲಿ ಪ್ರಥಮ, ಜಾವೆಲಿನ್ ತ್ರೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ
ಮುಂಬೈ: ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂಬ ಹಿನ್ನೆಲೆಯಲ್ಲಿ ನಾಗಪುರ್ ಕ್ಕೆ ತೆರಳಲು ನಿರಾಕರಿಸಿದ ಎನ್ ಕೌಂಟರ್ ಸ್ಪೆಶಲಿಸ್ಟ್ ಎಂದೇ ಹೆಸರು ಗಳಿಸಿದ್ದ ಮುಂಬೈ ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಕನ್ನಡಿಗ ದಯಾ ನಾಯಕ್ ಅವರನ್ನು ಮಹಾರಾಷ್ಟ್ರ ಸರ್ಕಾರ ಪೊಲೀಸ್ ಸೇವೆಯಿಂದ ಅಮಾನತು ಮಾಡಿದೆ. ನನ್ನ ಕುಟುಂಬಕ್ಕೆ ಮೊದಲ ಆದ್ಯತೆ ಹಾಗಾಗಿ ನಾನು ನಾಗ್ಪುರಕ್ಕೆ ತೆರಳಲ್ಲ ಎಂದು ದಯಾ ಪ್ರತಿಭಟಿಸಿದ್ದರು. ಹಾಗಾಗಿಯೇ ಗುರುವಾರ ದಯಾ ನಾಯಕ್ ಅವರಿಗೆ ಅಮಾನತು ಮಾಡಿರುವ ಆದೇಶ ಬಂದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ದಯಾ ನಾಯಕ್ ಅವರನ್ನು ಕಳೆದ ವರ್ಷ ನಾಗ್ಪುರಕ್ಕೆ ವರ್ಗಾಯಿಸಲಾಗಿತ್ತು. ಆದರೆ ತನ್ನ ಹಾಗೂ ತನ್ನ ಹೆಂಡತಿ, ಮಕ್ಕಳಿಗೆ ಜೀವ ಬೆದರಿಕೆ ಇದ್ದು, ತಾವು ನಾಗ್ಪುರದಲ್ಲಿ ಕರ್ತವ್ಯ ನಿರ್ವಹಿಸಲಾರೆ ಎಂದು ಮಹಾರಾಷ್ಟ್ರ ಸರ್ಕಾರ ಮತ್ತು ರಾಜ್ಯ ಡಿಜಿಪಿ ಗಮನಕ್ಕೆ ತಂದಿದ್ದರು. ಆದರೆ ಅವರನ್ನು ಯಾವ ಕಾರಣದ ಮೇಲೆ ಅಮಾನತು ಮಾಡಲಾಗಿದೆ ಎಂಬ ಬಗ್ಗೆ ವಿವರ ನೀಡಲು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನಿರಾಕರಿಸಿರುವುದಾಗಿ…
