ಕಲಾಜಗತ್ತು ಮುಂಬಯಿ ನೂತನ ಅಧ್ಯಕ್ಷರಾಗಿ ಲೀಲೇಶ್‌ ಶೆಟ್ಟಿ ಆಯ್ಕೆ

Call us

Call us

Call us

Call us

ಮುಂಬಯಿ: ಕಲಾಜಗತ್ತು ಮುಂಬಯಿ ಇದರ ನೂತನ ಅಧ್ಯಕ್ಷರಾಗಿ ಲೀಲೇಶ್‌ ಆರ್‌. ಶೆಟ್ಟಿ ಆಯ್ಕೆಯಾಗಿದ್ದಾರೆ. ಜೂ. 29ರಂದು ಸಾಂತಾಕ್ರೂಜ್‌ (ಪೂ.) ಪ್ರಭಾತ್‌ ಕಾಲನಿಯ ಪೇಜಾವರ ಮಠದಲ್ಲಿ ತೋನ್ಸೆ ವಿಜಯ ಕುಮಾರ್‌ ಶೆಟ್ಟಿ ನೇತೃತ್ವದ ಕಲಾಜಗತ್ತು ಮುಂಬಯಿ ಇದರ ವಿಶೇಷ ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

Call us

Click Here

ಉಪಾಧ್ಯಕ್ಷರಾಗಿ ಕೃಷ್ಣರಾಜ್‌ ಸುವರ್ಣ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ದಯಾಸಾಗರ್‌ ಚೌಟ, ಜತೆ ಕಾರ್ಯದರ್ಶಿಯಾಗಿ ಶಿವಾನಂದ ಶೆಟ್ಟಿ, ಗೌರವ ಕೋಶಾಧಿಕಾರಿಯಾಗಿ ಜಗದೀಶ್‌ ರಾವ್‌, ಜತೆ ಕೋಶಾಧಿಕಾರಿಯಾಗಿ ಚಂದ್ರಾವತಿ ವಸಂತ್‌ ಅವರನ್ನು ನೇಮಿಸಲಾಯಿತು.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸುರೇಂದ್ರ ಕುಮಾರ್‌ ಹೆಗ್ಡೆ, ಕೃಷ್ಣರಾಜ್‌ ಶೆಟ್ಟಿ, ಪ್ರಭಾಕರ ಶೆಟ್ಟಿ, ಎನ್‌. ಪೃಥ್ವಿರಾಜ್‌ ಮುಂಡ್ಕೂರು, ಕೆ. ಆರ್‌. ವಿ. ಶೆಟ್ಟಿ, ಅಶು ಪಾಂಗಾಳ, ಜೂಲಿಯೆಟ್‌ ಪಿರೇರ, ಕುಶಲ್‌ ಕೆ. ಶೆಟ್ಟಿ, ಲಾರೆನ್ಸ್‌ ಡಿ’ಸೋಜಾ, ಶೇಖರ್‌ ಸಸಿಹಿತ್ಲು, ಸುಶೀಲಾ ದೇವಾಡಿಗ, ಜಯಂತಿ ದೇವಾಡಿಗ ಆಯ್ಕೆಯಾದರು. ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಕಲಾಜಗತ್ತು ಮುಂಬಯಿ ಇದರ ಸ್ಥಾಪಕಾಧ್ಯಕ್ಷ ತೋನ್ಸೆ ವಿಜಯಕುಮಾರ್‌ ಶೆಟ್ಟಿ ಅಭಿನಂದಿಸಿ ಶುಭಹಾರೈಸಿದರು.

ಸಭೆಯಲ್ಲಿ ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆ ವಿಚಾರ-ವಿನಿಮಯ ನಡೆಯಿತು. ಕಳೆದ ನವೆಂಬರ್‌ನಲ್ಲಿ ನಡೆದ ವಿಜಯಕುಮಾರ್‌ ಶೆಟ್ಟಿ ಅವರ 60ನೇ ಜನ್ಮದಿನಾಚರಣೆಯ ಸಂಭ್ರಮದಲ್ಲಿ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌ಗಾಗಿ ಜರಗಿದ ರಂಗೋತ್ಸವ ಕಾರ್ಯಕ್ರಮದ ಯಶಸ್ಸಿನ ಹಿನ್ನೆಲೆಯಲ್ಲಿ ಮತ್ತೂಮ್ಮೆ ಅದೇ ರಂಗೋತ್ಸವ ಉಡುಪಿಯ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ರಾಜಕೀಯ ನೇತಾರ, ಸಮಾಜ ಸೇವಕ ಗುರ್ಮೆ ಸುರೇಶ್‌ ಶೆಟ್ಟಿ ಬಳ್ಳಾರಿ ನೇತೃತ್ವದಲ್ಲಿ ಅಕ್ಟೋಬರ್‌ 11ರಂದು ನಡೆಯಲಿದೆ. ನವೆಂಬರ್‌ನಲ್ಲಿ ಸಂಸ್ಥೆಯ 36ನೇ ವಾರ್ಷಿಕೋತ್ಸವ ಕುರ್ಲಾ (ಪೂ.) ಬಂಟರ ಭವನದಲ್ಲಿ ಜರಗಲಿದ್ದು, ಈ ಸಂದರ್ಭದಲ್ಲಿ ವಿಜಯ ಕುಮಾರ್‌ ಶೆಟ್ಟಿ ನಿರ್ದೇಶನದ ಎರಡು ನೂತನ ನಾಟಕಗಳು ತಂಡದ ಪ್ರಬುದ್ಧ ಕಲಾವಿದರಿಂದ ಪ್ರದರ್ಶನಗೊಳ್ಳಲಿದೆ. ಕಳೆದ ಕೆಲವು ವರ್ಷಗಳ ಹಿಂದೆ ಪರೇಲ್‌ ಕಾಮಾYರ್‌ ಮೈದಾನದಲ್ಲಿ ಕಲಾಜಗತ್ತು ಮುಂಬಯಿ ಬ್ಯಾನರ್‌ನಡಿ ಬೊಂಬಾಯಿಡ್‌ ತುಳುವೆರ್‌ ಎಂಬ ಹೊಸ ಕಲ್ಪನೆಯ ಅಭೂತಪೂರ್ವ ಕಾರ್ಯಕ್ರಮ ಆಯೋಜಿಸಿದ್ದು, ಈ ಕಾರ್ಯಕ್ರಮದ ಯಶಸ್ಸಿನ ಕೀರ್ತಿಯ ಹಿನ್ನೆಲೆಯಲ್ಲಿ ಮತ್ತೂಮ್ಮೆ ಮುಂಬರುವ ಡಿಸೆಂಬರ್‌ನಲ್ಲಿ ನಗರದ ಡೊಂಬಿವಲಿಯ ಸಾವಿತ್ರಿಬಾಯಿ ಫುಲೆ ಸಭಾಗೃಹ ಮತ್ತು ಮೈದಾನದಲ್ಲಿ ತೋನ್ಸೆ ವಿಜಯ ಕುಮಾರ್‌ ಶೆಟ್ಟಿ ಅವರ ಹೊಸ ಪರಿಕಲ್ಪನೆಯ “ಹೊರನಾಡ ತುಳುವೆರೆ ವಿಶ್ವಸಮ್ಮೇಳನ’ ಎಂಬ ಜಾಗತಿಕ ಮಟ್ಟದ ತುಳು ಸಮ್ಮೇಳನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರು ದಿನಗಳ ಕಾಲ ವೈವಿಧ್ಯಮಯವಾಗಿ ಜರಗಲಿದೆ. ಈ ಕಾರ್ಯಕ್ರಮದ ಮೊದಲ ಹಂತದ ಒಂದು ದಿನದ ಕಾರ್ಯಕ್ರಮ ಕಲ್ಯಾಣ್‌ ಸಮೀಪದ ಮುರ್ಬಾಡ್‌ನ‌ ಅಮ್ಮ ಚಾವಡಿ ವಠಾರದಲ್ಲಿ ಜರಗಲಿದ್ದು, ಉಳಿದ ಐದು ದಿನಗಳ ಕಾರ್ಯಕ್ರಮಗಳು ಡೊಂಬಿವಲಿಯಲ್ಲಿ ಜರಗಲಿವೆ ಎಂದು ಕಲಾಜಗತ್ತು ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದರು.

ವೇದಿಕೆಯಲ್ಲಿ ಸುರೇಂದ್ರ ಕುಮಾರ್‌ ಹೆಗ್ಡೆ, ದಯಾಸಾಗರ್‌ ಚೌಟ, ಕೃಷ್ಣರಾಜ್‌ ಶೆಟ್ಟಿ, ಚಂದ್ರಾವತಿ ವಸಂತ್‌ ಉಪಸ್ಥಿತರಿದ್ದು, ಮಾತನಾಡಿ ಸಲಹೆ-ಸೂಚನೆಗಳನ್ನು ನೀಡಿ ಸಹಕರಿಸಿದರು. ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಅಭಿಮಾನಿಗಳು ಸೇರಿದಂತೆ ಸಿಎ ಸುಧೀರ್‌ ಎಲ್‌. ಶೆಟ್ಟಿ, ಕಲಾಸೌರಭದ ರೂವಾರಿ ಪದ್ಮನಾಭ ಸಸಿಹಿತ್ಲು, ಕವಿ ಲಕ್ಷ್ಮೀನಾರಾಯಣ ರೈ ಹರೇಕಳ, ಸಂಘಟಕ ಪ್ರಭಾಕರ ಬೆಳುವಾಯಿ ಉಪಸ್ಥಿತರಿದ್ದರು.

Click here

Click here

Click here

Click Here

Call us

Call us

Leave a Reply

Your email address will not be published. Required fields are marked *

five × three =