Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಕುಂದಾಪುರ: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಕುಂದಾಪುರದ ಪ್ರಥಮ ವಿಶ್ವಯೋಗ ದಿನಾಚರಣೆ ಸಮಿತಿ ಆಶ್ರಯದಲ್ಲಿ ಜೂನ್ ೨೧ ರಂದು ಕುಂದಾಪುರದ ಸರಕಾರಿ ಪ.ಪೂ. ಕಾಲೇಜಿನಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಿಗ್ಗೆ ೬.೪೫ಕ್ಕೆ ಸುಮಾರು ೫೦೦ ರಷ್ಟು ಮಂದಿ ಯೋಗಾಭ್ಯಾಸದಲ್ಲಿ ಪಾಲ್ಗೊಂಡರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಸಾಮೂಹಿಕ ಪ್ರಾರ್ಥನೆಯೊಂದಿಗೆ, ಸೂರ್ಯ ನಮಸ್ಕಾರ, ಯೋಗಾಸನ, ಪ್ರಾಣಯಾಮವನ್ನು ಮಾಡಲಾಯಿತು. ಕುಂದಾಪುರದ ಕಾರ್ತಿಕ್ ಸ್ಕ್ಯಾನಿಂಗ್ ಸೆಂಟರ್‌ನ ಮಾಲಕ ಡಾ|| ಬಿ.ವಿ. ಉಡುಪ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಯಮಿ ಕೆ.ಕೆ. ಕಾಂಚನ್ ಕಾರ್ಯಕ್ರಮ ನಿರ್ವಹಿಸಿ, ಯೋಗ ಬಂಧು ರಘವೀರ ನಗರ್‌ಕರ್ ಯೋಗದ ಮಹತ್ವ ತಿಳಿಸಿ ವಂದಿಸಿದರು. ಯೋಗ ಶಿಕ್ಷಕರಾದ ಅಣ್ಣಪ್ಪ ಕೋಟೇಶ್ವರ ಅವರು ಸರಳವಾಗಿ ಯೋಗಾಭ್ಯಾಸವನ್ನು ಮಾಡಿಸಿದರು. ಯೋಗ ಶಿಕ್ಷಕಿ ಶಶಿಕಲಾ ಅವರು ಪ್ರಾರ್ಥನೆ, ಧ್ಯಾನ ಸಂಕಲ್ಪ ಮತ್ತು ಶಾಂತಿಮಂತ್ರವನ್ನು ಕಲಿಸಿದರು. ಹಾಲ್‌ನಲ್ಲಿ ಸಂಖ್ಯೆ ಹೆಚ್ಚುತ್ತಾ ಹೋದ ಹಿನ್ನಲೆಯಲ್ಲಿ ೬೦ ಮಂದಿಗೆ ಕುಂದಾಪುರದ ಬಿ.ಆರ್.ರಾಯರ ಹಿಂದೂ…

Read More

ಕುಂದಾಪುರ: ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಉಡುಪಿ ಜಿಲ್ಲಾ ಘಟಕ ನೀಡುವ ಪತ್ರಿಕಾ ದಿನದ ಗೌರವಕ್ಕೆ ಹಿರಿಯ ಪತ್ರಕರ್ತ, ಸಂಗೀತ ತಜ್ಞ, ಸಿನಿಮಾ ನಿರ್ದೇಶಕ ನಾದವೈಭವಂ ವಾಸುದೇವ ಭಟ್ ಅವರು ಆಯ್ಕೆಯಾಗಿದ್ದಾರೆ. “ಹಿರಿಯರೆಡೆಗೆ ನಮ್ಮ ನಡಿಗೆ” ಧ್ಯೇಯವಾಕ್ಯದೊಂದಿಗೆ ಕಳೆದ ಏಳುವರ್ಷಗಳಿಂದ ಹಿರಿಯ ಪತ್ರಕರ್ತರ ನಿವಾಸಗಳಲ್ಲಿ ಪತ್ರಿಕಾ ದಿನಾಚರಣೆಯನ್ನು ವೇದಿಕೆ ನಡೆಸುತ್ತಾ ಬಂದಿದ್ದು ಪತ್ರಿಕಾ ದಿನದ ಮುನ್ನಾ ದಿನ ಇಂದ್ರಾಳಿಯ ಪತ್ರಕರ್ತರ ಕಾಲೋನಿಯ “ಈಶವಾಸ್ಯಂ”ನಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಬೆಳಗ್ಗೆ ಕಾರ್ಯಕ್ರಮ ನಡೆಯಲಿದೆ ಎಂದು ವೇದಿಕೆಯ  ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ. ಈ ಹಿಂದೆ ಅಂಬಾತನಯ ಮುದ್ರಾಡಿ, ವಿದ್ವಾನ್ ಬಿ.ಚಂದ್ರಯ್ಯ, ಉಮೇಶ್ ರಾವ್ ಎಕ್ಕಾರ್, ಎಂ.ವಿ.ಕಾಮತ್, ಎ.ಎಸ್.ಎನ್ ಹೆಬ್ಬಾರ್, ರಾಘವ ನಂಬಿಯಾರ್ ಮೊದಲಾದವರ ನಿವಾಸಗಳಲ್ಲಿ ಈ ಹಿಂದೆ ಈ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪತ್ರಕರ್ತರಾಗಿ ವಾಸುದೇವ ಭಟ್ ಉಡುಪಿ ವಾಸುದೇವ ಭಟ್ ಅವರು ತಮ್ಮ ತಂದೆ ಪತ್ರಕರ್ತರಾಗಿದ್ದ ಯು.ಎಸ್ ಭಟ್ ಅವರಿಂದ ಪ್ರಭಾವಿತರಾಗಿ ಅವರನ್ನೇ ಗುರುಗಳೆಂದು ಸ್ವೀಕರಿಸಿ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿದ್ದರು. 1961 ರಲ್ಲಿ…

Read More

ಕುಂದಾಪುರ: ಯು.ಎ.ಇ. ಪದ್ಮಶಾಲಿ ಸಮುದಾಯದ 6ನೇ ವಾರ್ಷಿಕೋತ್ಸವದ ಪ್ರಯುಕ್ತ ದುಬೈನ ಸಿಂಧಿ ಕಮರ್ಶಲ್ ಸೆಂಟರ್‌ನ ಹಾಲ್‌ನಲ್ಲಿ ನಡೆಯಲಿರುವ ಸಾಮೂಹಿಕ ಸತ್ಯನಾರಾಯಣ ಪೂಜೆಯ ಪೌರೋಹಿತ್ಯಕ್ಕಾಗಿ ಜ್ಯೋತಿಷಿ ಹಾಗೂ ವಾಸ್ತುತಜ್ಞ ಬಸವರಾಜ್ ಶೆಟ್ಟಿಗಾರ್ ವಿದೇಶಕ್ಕೆ ತೆರಳಲಿದ್ದಾರೆ. ವಾಸ್ತುಶಾಸ್ತ್ರ, ಜ್ಯೋತಿಷ್ಯ, ಯಕ್ಷಗಾನ, ಸಾಹಿತ್ಯ, ಸಮಾಜ ಸಂಘಟನೆ, ಕೃಷಿ ಕ್ಷೇತ್ರ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಾಗಿ ಶೆಟ್ಟಿಗಾರರಿಗೆ 215ನೇ ಸನ್ಮಾನ ಮಾಡಿ ಗೌರವಿಸಲಾಗುವುದೆಂದು ಯು.ಎ.ಇ. ಪದ್ಮಶಾಲಿ ಕಮ್ಯೂನಿಟಿಯ ಅಧ್ಯಕ್ಷರು ತಿಳಿಸಿದ್ದಾರೆ. ಅಲ್ಲದೇ ವಿದೇಶದಲ್ಲಿ ಸರಳವಾಸ್ತು ಆಧುನಿಕ ಜ್ಯೋತಿಷ್ಯದ ಕುರಿತು ಮಾಹಿತಿ ನೀಡಲಿರುವ ಬಸವರಾಜ್ ಶೆಟ್ಟಿಗಾರ್‌ರವರು ಕೋಟೇಶ್ವರದ ಕಛೇರಿಯಲ್ಲಿ ಹಾಗೂ ಹಂಗಳೂರು ಶನೀಶ್ವರ ದೇವಸ್ಥಾನದಲ್ಲಿ ಜುಲೈ 1ರಿಂದ 15ರ ವರೆಗೆ ಲಭ್ಯವಿರುವುದಿಲ್ಲವೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ಗ೦ಗೊಳ್ಳಿ:  ವಿದ್ಯಾರ್ಥಿ ಜೀವನದಲ್ಲಿ ಸಮಯ ಪಾಲನೆ ಮತ್ತು ಶಿಸ್ತು ಅತೀ ಮುಖ್ಯವಾದುದು. ಕಲಿಕೆಗೆ ಬೇಕಾದ ಏಕಾಗ್ರತೆಯನ್ನು ಸಾಧಿಸಲು ಧ್ಯಾನ ನೆರವಾಗುತ್ತದೆ. ನಿರ೦ತರ ಅಭ್ಯಾಸದಿ೦ದ ಯಶಸ್ಸು ಸಾಧ್ಯ. ಎ೦ದು ಸಿ೦ಡಿಕೇಟ್ ಬ್ಯಾ೦ಕ್  ವಲಯ ಮಾಜಿ  ಪ್ರಬ೦ಧಕ ಪಾ೦ಡುರ೦ಗ ನಾಯಕ್ ಹೇಳಿದರು.      ಅವರು ಇತ್ತೀಚೆಗೆ  ಇ೦ಡಿಯಾ ನೌ ಫೌ೦ಡೇಶನ್ ವತಿಯಿ೦ದ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವ್ಯಕ್ತಿತ್ವ ವಿಕಸನ ಕಾರ‍್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಉಪನ್ಯಾಸ ನೀಡಿದರು.    ಕಾಲೇಜಿನ ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಉಪನ್ಯಾಸಕ ಸುಜಯೀ೦ದ್ರ ಹ೦ದೆ ಪ್ರಾಸ್ತಾವಿಕ ಮಾತುಗಳ ಜೊತೆಗೆ ಕಾರ‍್ಯಕ್ರಮ ನಿರ್ವಹಿಸಿದರು. ಉಪನ್ಯಾಸಕರಾದ ಭಾಸ್ಕರ್ ಶೆಟ್ಟಿ, ರಾಘವೇ೦ದ್ರ ಭಟ್ ಮೊದಲಾದವರು ಉಪಸ್ಥಿತರಿದ್ದರು. ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

Read More

ಕುಂದಾಪುರ: ಡಾ| ಪಾರ್ವತಿ ಜಿ.ಐತಾಳ್ ಅವರ ’ಉಪನಿಷತ್ ಚಿಂತನೆ’ ಎಂಬ ಅನುವಾದಿತ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ 2014ರ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ ಲಭಿಸಿದೆ. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಪಾರ್ವತಿಯವರು ಈವರೆಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ತಮ್ಮ ಕೃತಿ, ಅನುವಾದಿತ ಕೃತಿಗಳ ಮೂಲಕ ಅಪಾರ ಓದುಗ ಬಳಗವನ್ನು ಕಟ್ಟಿಕೊಟ್ಟಿದ್ದಾರೆ.

Read More

ಕುಂದಾಪುರ: ಯಲ್ಲಾಪುರದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಸ್ಸಿನ ಚಾಲಕ ಕುಂದಾಪುರದ ನಿವಾಸಿ ಮಹಾಬಲ ಪೂಜಾರಿ ಅವರು ಮೃತಪಟ್ಟಿದ್ದಾರೆ. ಖಾಸಗಿ ಬಸ್ಸು ಮಂಗಳೂರಿನಿಂದ ಮುಂಬೈಗೆ ಸಾಗುತ್ತಿದ್ದು ಹೆದ್ದಾರಿಯಲ್ಲಿ ಬಿದ್ದ ಮರವನ್ನು ತಪ್ಪಿಸಲು ಚಾಲಕ ಬಸ್ಸನ್ನು ತೀರಾ ಎಡಗಡೆಗೆ ತೆಗೆದುಕೊಂಡ ಹಿನ್ನಲೆಯಲ್ಲಿ ಬಸ್ಸು ಟ್ರಕ್‌ಗೆ ಢಿಕ್ಕಿ ಹೊಡೆದಿತ್ತು. ಅಪಘಾತದಿಂದ ಇನ್ನೋರ್ವ ಚಾಲಕ, ಕ್ಲಿನರ್‌ ಉದಯ ಹಾಗೂ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದರು. ಮಹಾಬಲ ಪೂಜಾರಿ ಅವರ ಮೃತ ದೇಹವನ್ನು ಮಂಗಳವಾರ ಕುಂದಾಪುರಕ್ಕೆ ತರಲಾಗಿದ್ದು ಆಗ ಬೃಹತ್‌ ಸಂಖ್ಯೆಯಲ್ಲಿ ಜನರು ನರೆದಿದ್ದರು. ಸಚಿವ ವಿನಯ ಕುಮಾರ್‌ ಸೊರಕೆ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

Read More

ಕುಂದಾಪುರ: ಹಿರಿಯ ಕಾಂಗ್ರೇಸಿಗ, ಪುರಸಭೆಯ ಮಾಜಿ ಸದಸ್ಯ ರತ್ನಾಕರ ಶೇರುಗಾರ್‌ (66) ಅವರು ಗುರುವಾರ ಸಂಜೆ ಚರ್ಚ್‌ ರಸ್ತೆಯಲ್ಲಿ ತಮ್ಮನ ಮನೆಯ ಕಾಂಕ್ರಿಟ್‌ ಛಾವಣಿಯಿಂದ ಬಿದ್ದು ಮೃತಪಟ್ಟಿದ್ದಾರೆ. ಮನೆಯ ಆರ್‌.ಸಿ.ಸಿ ಛಾವಣಿಯಲ್ಲಿ ನೀರು ತುಂಬಿರುವುದನ್ನು ತೆರವುಗೊಳಿಸುತ್ತಿರುವಾಗ ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಮೃತರು ಕುಂದಾಪುರ ವಿ.ಎಸ್‌.ಎಸ್‌. (ನಿ) ಬ್ಯಾಂಕಿನ ಮಾಜಿ ನಿರ್ದೇಶಕರಾಗಿದ್ದು, ಇವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Read More

ಮರವಂತೆ: ಭಗವದ್ಗೀತೆಯಲ್ಲಿ ಸನಾತನ ಧರ್ಮದ ಸಾರಸರ್ವಸ್ವ ಅಡಗಿದೆ. ಭಗವದ್ಗೀತೆ ಎಂಬ ಹೆಸರೇ ಸೂಚಿಸುವಂತೆ ಅದು ಭಗವಂತನಿಂದಲೇ ಪ್ರಣೀತವಾದುದು. ಅನ್ಯ ಧರ್ಮಗಳಂತೆ ಅದು ದೇವರ ಪ್ರತಿನಿಧಿಗಳು ಸಂಗ್ರಹಿಸಿ ಬೋಧಿಸಿದ ಧರ್ಮವಲ್ಲ. ಇದನ್ನು ಅರಿಯದವರು ಹಿಂದು ಧರ್ಮದ ವಿರುದ್ಧ ಮಾತನಾಡುತ್ತಿದ್ದಾರೆ. ಧರ್ಮದ್ವೇಷ ಒಳ್ಳೆಯದಲ್ಲ’ ಎಂದು ಬಾರ್ಕೂರು ಮಹಾಸಂಸ್ಥಾನದ ವಿದ್ಯಾ ವಾಚಸ್ಪತಿ ವಿಶ್ವಸಂತೋಷ ಭಾರತೀ ಸ್ವಾಮೀಜಿ ಹೇಳಿದರು. ಮರವಂತೆಯ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಪುನ:ಪ್ರತಿಷ್ಠೆ ಬ್ರಹ್ಮಕುಂಭಾಭಿಷೇಕ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಧರ್ಮಸಭೆಯಲ್ಲಿ ಅವರು ಅನುಗ್ರಹ ಭಾಷಣ ಮಾಡಿದರು. ’ಭಗವದ್ಗೀತೆ ವರ್ಣ ಮತ್ತು ಜಾತಿ ಪದ್ಧತಿಯನ್ನು ಸಾರುತ್ತದೆ ಎಂದು ಆಕ್ಷೇಪಿಸುತ್ತಾರೆ. ಅದರಲ್ಲಿ ಹೇಳಿರುವುದು ಮನುಷ್ಯರನ್ನು ಅವರವರ ಗುಣಕರ್ಮಕ್ಕೆ ಅನುಗುಣವಾಗಿ ವಿಭಾಗಿಸಲಾಗಿದೆ ಎಂದು. ಕರ್ಮಾಧರಿತ ವಿಭಾಗ ಇಂದಿನ ಸಮಾಜದಲ್ಲೂ ಇದೆ. ಸನಾತನ ಧರ್ಮದಲ್ಲಿ ದೇವಾಲಯಗಳಿಗೆ, ಆರಾಧನೆಗೆ ವಿಶೇಷ ಮಹತ್ವ ಇದೆ. ಇವೆರಡೂ ಸಮುದಾಯವನ್ನು ಒಂದುಗೂಡಿಸುವ ಅವಕಾಶಗಳು. ಅವುಗಳಿಂದ ನಾವು ದೂರ ಸರಿಯಬಾರದು’ ಎಂದು ಅವರು ನುಡಿದರು. ಆಶೀರ್ವಚನಗೈದ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಜಿ.…

Read More

ಕುಂದಾಪುರ: ತಾಲೂಕಿನ ಬಸ್ರೂರು ಗ್ರಾಮದ ಹಟ್ಟಿಕುದ್ರು ಎಂಬಲ್ಲಿ ಮರಳುಗಾರಿಕೆಗೆ ನಿಷೇಧಿವಿದ್ದರೂ ಕೂಡ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಸ.ನಂ.1 ಮತ್ತು 239ನೇ ಸ್ಥಳದ 400 ಎಕರೆ ಪ್ರದೇಶದಲ್ಲಿ ಪ್ರಾಕೃತಿಕ ಸಂಪತ್ತಿನ ಲೂಟಿ ನಡೆಯುತ್ತಿರುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಸ್ಥಳೀಯರು ಮನವಿ ಮಾಡಿದರೂ ಕೂಡ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಇಲಾಖೆ ದಿವ್ಯ ಮೌನವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬಸ್ರೂರು ಗ್ರಾಮದ ಆನಗಳ್ಳಿ ರಸ್ತೆಯ ರೈಲ್ವೇ ಸೇತುವೆ 10ಮೀ. ಕೆಳಭಾಗದಲ್ಲಿ ಹಟ್ಟಿಕುದ್ರು ಭಾಗದ 10 ಎಕರೆ ಜಾಗವನ್ನೊಳಗೊಂಡಿರುವ ಜಾನುವಾರುಗಳ ಮೇವಿಗಾಗಿ ಖಾರೀದಿಸಿದ ಹಾಗೂ ಕೃಷಿ ಚಟುವಟಿಕೆ ನಡೆಯುವ ಸ್ಥಳಭಾಗದಲ್ಲಿ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಮತ್ತು ಹಿರಿಯ ಭೂವಿಜ್ಞಾನ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸ್ಥಳೀಯ ಗ್ರಾಮಸ್ಥರು ಮಾಹಿತಿ, ಮನವಿ ನೀಡಿದ್ದರೂ ಜಿಲ್ಲಾಡಳಿತ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಸ್ರೂರು ಮತ್ತು ಹಟ್ಟಿಕುದ್ರು ನಡುವೆ ಇರುವ ಕುದ್ರು(ದ್ವೀಪ)ನಲ್ಲಿ ಈ ಹಿಂದೆ…

Read More