Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ವಾಸುದೇವ ಭಟ್ ಅವರಿಗೆ ಪತ್ರಿಕೋದ್ಯಮ ದಿನದ ಗೌರವ
    ವಿಶೇಷ ವರದಿ

    ವಾಸುದೇವ ಭಟ್ ಅವರಿಗೆ ಪತ್ರಿಕೋದ್ಯಮ ದಿನದ ಗೌರವ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪುರ: ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಉಡುಪಿ ಜಿಲ್ಲಾ ಘಟಕ ನೀಡುವ ಪತ್ರಿಕಾ ದಿನದ ಗೌರವಕ್ಕೆ ಹಿರಿಯ ಪತ್ರಕರ್ತ, ಸಂಗೀತ ತಜ್ಞ, ಸಿನಿಮಾ ನಿರ್ದೇಶಕ ನಾದವೈಭವಂ ವಾಸುದೇವ ಭಟ್ ಅವರು ಆಯ್ಕೆಯಾಗಿದ್ದಾರೆ.

    Click Here

    Call us

    Click Here

    “ಹಿರಿಯರೆಡೆಗೆ ನಮ್ಮ ನಡಿಗೆ” ಧ್ಯೇಯವಾಕ್ಯದೊಂದಿಗೆ ಕಳೆದ ಏಳುವರ್ಷಗಳಿಂದ ಹಿರಿಯ ಪತ್ರಕರ್ತರ ನಿವಾಸಗಳಲ್ಲಿ ಪತ್ರಿಕಾ ದಿನಾಚರಣೆಯನ್ನು ವೇದಿಕೆ ನಡೆಸುತ್ತಾ ಬಂದಿದ್ದು ಪತ್ರಿಕಾ ದಿನದ ಮುನ್ನಾ ದಿನ ಇಂದ್ರಾಳಿಯ ಪತ್ರಕರ್ತರ ಕಾಲೋನಿಯ “ಈಶವಾಸ್ಯಂ”ನಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಬೆಳಗ್ಗೆ ಕಾರ್ಯಕ್ರಮ ನಡೆಯಲಿದೆ ಎಂದು ವೇದಿಕೆಯ  ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ.

    ಈ ಹಿಂದೆ ಅಂಬಾತನಯ ಮುದ್ರಾಡಿ, ವಿದ್ವಾನ್ ಬಿ.ಚಂದ್ರಯ್ಯ, ಉಮೇಶ್ ರಾವ್ ಎಕ್ಕಾರ್, ಎಂ.ವಿ.ಕಾಮತ್, ಎ.ಎಸ್.ಎನ್ ಹೆಬ್ಬಾರ್, ರಾಘವ ನಂಬಿಯಾರ್ ಮೊದಲಾದವರ ನಿವಾಸಗಳಲ್ಲಿ ಈ ಹಿಂದೆ ಈ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

    ಪತ್ರಕರ್ತರಾಗಿ ವಾಸುದೇವ ಭಟ್

    ಉಡುಪಿ ವಾಸುದೇವ ಭಟ್ ಅವರು ತಮ್ಮ ತಂದೆ ಪತ್ರಕರ್ತರಾಗಿದ್ದ ಯು.ಎಸ್ ಭಟ್ ಅವರಿಂದ ಪ್ರಭಾವಿತರಾಗಿ ಅವರನ್ನೇ ಗುರುಗಳೆಂದು ಸ್ವೀಕರಿಸಿ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿದ್ದರು. 1961 ರಲ್ಲಿ ತಂದೆಯ ನಿಧನಾನಂತರ ಅವರು ಉಡುಪಿ, ಕುಂದಾಪುರ, ಕಾರ್ಕಳ ತಾಲೂಕುಗಳ ವರದಿಗಾರರಾಗಿ ಸಂಯುಕ್ತ ಕರ್ನಾಟಕ ಮತ್ತು ಮದ್ರಾಸ್ ಮೇಲ್ ಪತ್ರಿಕೆಗಳನ್ನು ಪ್ರತಿನಿಧಿಸಿದರು. ಪ್ರಕಾಶ, ರಾಷ್ಟ್ರಬಂಧು, ಸುಪ್ರಭಾತ ವಾರಪತ್ರಿಕೆಗಳಲ್ಲಿಯೂ ಅವರ ಬರಹಗಳು ಪ್ರಕಟವಾಗುತ್ತಿದ್ದವು. ಎನ್. ಆರ್ ಉಭಯ ಅವರ ಜನರಾಜ್, ಕೆ.ಶ್ಯಾಮರಾಯರ ಪ್ರಜಾಪ್ರಭುತ್ವ ಪತ್ರಿಕೆಗಳ ವರದಿಗಾರರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು. ನವಭಾರತದ ಕೊನೆಯ ಎರಡು ವರ್ಷಗಳ ಕಾಲ ಅವರು ಶುಕ್ರವಾರದ ಸಿನಿಮಾ ಪುಟ ನಿರ್ವಹಣೆ ಮತ್ತು ಸಂಪಾದಕೀಯ ಬರಹಗಳನ್ನು ಬರೆಯುತ್ತಿದ್ದರು. ಪ್ರಧಾನಿ ಇಂದಿರಾ ಗಾಂಧಿ, ಮುಖ್ಯಮಂತ್ರಿ ನಿಜಲಿಂಗಪ್ಪ, ಮೈಸೂರು ಮಹಾರಾಜರಂತಹ ಮಹತ್ವದ ವ್ಯಕ್ತಿಗಳ ಸಾಂದರ್ಭಿಕ ಸಂದರ್ಶನ ಮಾಡಿ ಪ್ರಕಟಿಸಿದ್ದರು. “ಅಂಬಲಪಾಡಿ ದೇವಾಲಯದಲ್ಲಿ ದೇವಿ ದರ್ಶನ” ಸುದ್ದಿ ಆ ಕಾಲದಲ್ಲಿ ರಾಜ್ಯದ ಗಮನ ಸೆಳೆದಿತ್ತು.

    Click here

    Click here

    Click here

    Click Here

    Call us

    Call us

    ” ಆ ಕಾಲದಲ್ಲಿ ಪತ್ರಿಕೆಗಳು ಮತ್ತು ಪತ್ರಕರ್ತರ ಸಂಖ್ಯೆ ವಿರಳವಾಗಿತ್ತು. ಪತ್ರಕರ್ತರಿಗೆ ಈಗಿನ ಕಾಲಕ್ಕಿಂತ ಹೆಚ್ಚಿನ ಗೌರವ ಸಿಗುತ್ತಿತ್ತು. ಸಿನಿಮಾ ಟಿಕೇಟ್ ತೆಗೆದು ಕೊಳ್ಳುವಾಗ, ರೇಶನ್ ಅಂಗಡಿಗಳ ಕ್ಯೂನಲ್ಲಿ ಜನ ತಾವಾಗಿ ಮುಂದೆ ಕಳುಹಿಸಿ ಗೌರವಿಸುತ್ತಿದ್ದರು” ಎಂದು ಅವರು ಅಂದಿನ ದಿನಗಳನ್ನು ವಾಸುದೇವ ಭಟ್ ನೆನಪಿಸಿಕೊಳ್ಳುತ್ತಾರೆ”.

    Share. Facebook Twitter Pinterest LinkedIn Tumblr Telegram Email
    ಸುನಿಲ್ ಹೆಚ್. ಜಿ. ಬೈಂದೂರು
    • Website
    • Facebook
    • X (Twitter)
    • LinkedIn

    ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

    Related Posts

    ಸೈಕಲ್‌ನಲ್ಲಿ 3,300 ಕಿಮೀ ಕ್ರಮಿಸಿ ಲಡಾಕ್ ಯಾತ್ರೆ ಪೂರೈಸಿದ ಹಳ್ಳಿಹೊಳೆಯ ಯುವಕ ದಿನೇಶ್‌ ಬೋವಿ

    30/09/2025

    ಶಿಥಿಲ ಮನೆಯಲ್ಲಿಯೇ 12 ಮಂದಿ ವಾಸ. ಇದು ಅಸಹಾಯಕ ಕುಟುಂಬದ ಕಣ್ಣೀರ ಕಥೆ

    03/08/2024

    ಹುಲ್ಕಡಿಕೆ ಜನರ ಬದುಕಿಗಿಲ್ಲ ಭರವಸೆ! ಅಪಾಯಕಾರಿ ಹೊಳೆದಾಟಿ ಶಿಕ್ಷಣ ಪಡೆಯುತ್ತಿರುವ ವಿಶೇಷ ಚೇತನ ಮಕ್ಕಳು

    02/07/2024
    Leave A Reply Cancel Reply

    14 + 17 =

    Call us

    Click Here

    Call us

    Call us

    Call us
    Highest Viewed Recently
    • ಡಾ. ಬಿ. ಬಿ. ಹೆಗ್ಡೆ ಕಾಲೇಜು: ಜೀವನ ಮೌಲ್ಯ ಉಪನ್ಯಾಸ ಮಾಲಿಕೆ
    • ಜೆಸಿಐ ಹಾಲಾಡಿ ವಾರಾಹಿ ವತಿಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ
    • ಕೊರವಡಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಶ್ರೀ‌ಕ್ಷೇತ್ರ ಧ.ಗ್ರಾ.ಯೋ. ಅನುದಾನ, ಮಂಜೂರಾತಿ ಪತ್ರ ಹಸ್ತಾಂತರ
    • ಆಳ್ವಾಸ್‌ನ ‘ಲಿಪಿ’ ಮುದ್ರಣಾಲಯ ಲೋಕಾರ್ಪಣೆ
    • ಮಕ್ಕಳ ಸಾಹಿತ್ಯ ಉತ್ಸವದ ಆಶುಲೇಖನ ಸ್ಪರ್ಧೆಯಲ್ಲಿ ಸಮೃದ್ಧಿ ವಿ. ಪೂಜಾರಿ ದ್ವಿತೀಯ ಸ್ಥಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.