Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಮುಳ್ಳಿಕಟ್ಟೆ: ಹೊಸಾಡು ಗ್ರಾಮ, ಕಾರಿಕೊಡ್ಲು, ಬಪ್ರಿಕೊಡ್ಲು ದಿ.ಸದಿಯ ದೇವಾಡಿಗ ಪತ್ನಿ ವೆಂಕಮ್ಮ ದೇವಾಡಿಗ (92) ಅನಾರೋಗ್ಯದಿಂದ ಸೋಮವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ನಾಲ್ಕು ಗಂಡು, ನಾಲ್ಕು ಹೆಣ್ಣು ಮಕ್ಕಳ ಅಗಲಿದ್ದಾರೆ. ಹೊಸಾಡು ಗ್ರಾಪಂ ಸದಸ್ಯ ಸೀತಾರಾಮ ಶೆಟ್ಟಿ ಸಹಿತಿ ಊರಿನ ಪ್ರಮುಖರು ಮೃತರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಸದಿಯಮ್ಮ ದೇವಾಡಿಗ ಊರಿನಲ್ಲಿ ಜನಾನುರಾಗಿಯಾಗಿದ್ದು, ಪ್ರಗತಿಪರ ಕೃಷಿಕರಾಗಿದ್ದರು. ಪ್ರಸೂತಿ ಪರಿಣಿತರಾಗಿದ್ದು, ಸಾಮಜಿಕ, ಧಾರ್ಮಿಕ ಕ್ಷೇತ್ರದಲ್ಲೂ ಗುರಿಸಿಕೊಂಡಿದ್ದರು.

Read More

ಕೊಲ್ಲೂರು: ಮನುಷ್ಯನು ಜೀವನದಲ್ಲಿ ಯಾರ ಬಗ್ಗೆಯೂ ಕೀಳು ಭಾವನೆ ಬೆಳೆಸಿಕೊಳ್ಳಬಾರದು. ಎಲ್ಲರೂ ತನ್ನಂತೆಯೇ ಎಂದು ನೋಡುತ್ತಾ, ಮನುಷ್ಯನನ್ನು ಮನುಷ್ಯನಂತೆಯೇ ನೋಡಬೇಕು. ಜೀವನದಲ್ಲಿ ಪರೋಪಕಾರಿ ಮನೋಭಾವನೆ ಬೆಳೆಸಿಕೊಂಡು ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಜಡ್ಕಲ್ ಸೈಂಟ್ ಜಾರ್ಜ್ ಚರ್ಚಿನ ಧರ್ಮಗುರು ರೆ.ಫಾ. ಮ್ಯಾಥ್ಯೂ ಹೇಳಿದರು. ಅವರು ಜಡ್ಕಲ್‌ನ ಸೈಂಟ್ ಜಾರ್ಜ್ ಚರ್ಚಿನ ಸಭಾಂಗಣದಲ್ಲಿ ರೋಟರಿ ಕ್ಲಬ್ ಗಂಗೊಳ್ಳಿ, ಜಿಲ್ಲಾ ಅಂಧತ್ವ ನಿವಾರಣಾ ಕೇಂದ್ರ ಉಡುಪಿ, ಕೆಎಂಸಿ ಆಸ್ಪತ್ರೆ ಮಣಿಪಾಲ, ಕೆಎಸ್‌ಎಂಸಿಎ ಜಡ್ಕಲ್ ಮತ್ತು ಕೆಸಿವೈಎಂ ಜಡ್ಕಲ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಉಚಿತ ನೇತ್ರ ತಪಾಸಣೆ ಹಾಗೂ ನೇತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕೆಎಸ್‌ಎಂಸಿಎ ಜಿಲ್ಲಾಧ್ಯಕ್ಷ ಪಿ.ಎಲ್.ಜೋಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಪ್ರದೀಪ ಡಿ.ಕೆ., ರೋಟರಿ ಗಂಗೊಳ್ಳಿ ಕಾರ್ಯದರ್ಶಿ ಎಂ.ಜಿ.ರಾಘವೇಂದ್ರ ಭಂಡಾರ್‌ಕಾರ್ ಹಾಗೂ ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯೆ ಡಾ.ಸುಧಾ ಮೆನನ್ ಉಪಸ್ಥಿತರಿದ್ದರು. ಕೆಎಸ್‌ಎಂಸಿಎ ಜಡ್ಕಲ್‌ನ ದೇವದಾಸ ವಂದಿಸಿದರು. ಸುಮಾರು ೨೦೦ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಶಿಬಿರದ ಪ್ರಯೋಜನ…

Read More

ಕುಂದಾಪುರ: ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ವೈಖರಿಯಿಂದ ಜನರು ಬೇಸತ್ತಿದ್ದಾರೆ. ಜನರ ಸಂಕಷ್ಟಗಳಿಗೆ ಸ್ವಂದಿಸುವ ಬದಲಿಗೆ, ತಮ್ಮದೇ ದರ್ಬಾರಿನಲ್ಲಿ ಮುಳುಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಿ.ಎಸ್‌. ಯಡಿಯೂರಪ್ಪ ಆರೋಪಿಸಿದರು. ಅವರು ಬೈಂದೂರು ಬಿಜೆಪಿ ಕ್ಷೇತ್ರ ಸಮಿತಿಯ ಆಶ್ರಯದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ನೇರಳಕಟ್ಟೆ – ಶೆಟ್ರಕಟ್ಟೆಯಲ್ಲಿ ಹಾಗೂ ಕುಂದಾಪುರ ಬಿಜೆಪಿ ಕ್ಷೇತ್ರ ಸಮಿತಿಯ ಆಶ್ರಯದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಟೇಶ್ವರದಲ್ಲಿ ನಡೆದ ಎರಡನೇ ಹಂತದ ರೈತಚೈತನ್ಯ ಯಾತ್ರೆಯನ್ನು ಉದ್ಘಾಟಿಸಿ ಮಾತಾನಾಡಿದರು. ರಾಜ್ಯದ ರೈತರ ಸಮಸ್ಯೆಗಳಿಗೆ ಸ್ಪಂದಿಸದ ಸಿದ್ದರಾಮಯ್ಯನವರ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ. ರೈತರ ನೋವಿಗೆ ಸ್ಪಂದಿಸಲು ಬಿಜೆಪಿ ಅಧಿಕಾರಕ್ಕೆ ಬಂದರೇ ಮಾತ್ರ ಸಾಧ್ಯ. ರಾಜ್ಯ ಸರಕಾರವನ್ನು ಕಿತ್ತೆಸೆದು ಮತ್ತೆ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತಂದು ರಾಜ್ಯವನ್ನು ಸುವರ್ಣ ಯುಗವನ್ನಾಗಿಸುವಲ್ಲಿ ಪ್ರಯತ್ನಗಳು ಸಾಗುತ್ತಿದೆ. ಅದು ಪೂರ್ಣಗೊಳ್ಳುವ ತನಕ ತಾನು ವಿರಮಿಸುವುದಿಲ್ಲ ಎಂದವರು ನುಡಿದರು. ರಾಜ್ಯದ 123 ತಾಲೂಕುಗಳಲ್ಲಿ ಬರಗಾಲ ಇರುವುದನ್ನು ಒಪ್ಪಿಕೊಂಡಿರುವ ಸರಕಾರ, ರೈತರ ಸಾಲದ ಬಡ್ಡಿಯನ್ನು…

Read More

ಕುಂದಾಪುರ: ತಾಲೂಕಿನ ಶಿರೂರಿನ ಮೂಲದ ವೈದ್ಯ, ನಾರಾಯಣ ನೇತ್ರಾಲಯದ ಉಪಾಧ್ಯಕ್ಷ ಡಾ.ರೋಹಿತ್ ಶೆಟ್ಟಿ ‘ಕಣ್ಣೀರು ಮತ್ತು ಕೆರಟೊಕೊನಸ್’ ಎಂಬ ವಿಷಯದಲ್ಲಿ ಭಾರತದಲ್ಲೇ ಪ್ರಥಮ ಬಾರಿ ಪಿ.ಎಚ್.ಡಿ.ಪದವಿ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ರೋಹಿತ್ ಶೆಟ್ಟಿ ನೆದರ್ಲ್ಯಾಂಡ್ಸ್ ಮಾಸ್ಟ್ರಿಚ್ ವಿಶ್ವವಿದ್ಯಾನಿಲಯದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಪಿ.ಎಚ್.ಡಿ. ಪದವಿ ಪಡೆದ ಮೊಟ್ಟಮೊದಲ ಭಾರತೀಯ ವೈದ್ಯ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಮನುಕುಲದ ಉನ್ನತಿಗೆ ಶ್ರಮಿಸಬೇಕೆನ್ನುವ ಅವರ ಆಂತರ್ಯದ ತುಡಿತವು ಅವರನ್ನು ಕಣ್ಣೀರಿನ ಕುರಿತಾದ ಈ ಅಪರೂಪದ ಸಂಶೋಧನೆಯನ್ನು ಕೈಗೊಳ್ಳುವಲ್ಲಿ ಪ್ರೇರಣೆಯನ್ನು ನೀಡಿತ್ತು. ಡಾ.ರೋಹಿತ್ ಅವರ ಸಂಶೋಧನೆಯು ಕೆರಟೊಕೊನಸ್ ಎಂದು ಕರೆಯಲ್ಪಡುವ ಕಣ್ಣಿಗೆ ಸಂಬಂಧಿಸಿದ ರೋಗವನ್ನು ಪತ್ತೆಹಚ್ಚಲು ಮತ್ತು ಕ್ರಮೇಣ ಅಭಿವೃದ್ಧಿ ಹೊಂದುವ ಗುಣವನ್ನು ಹೊಂದಿರುವ ಈ ರೋಗವನ್ನು ತಡೆಯಲು ಸಹಾಯ ಮಾಡುತ್ತದೆ. [quote bgcolor=”#ffffff” arrow=”yes”]ನಾರಾಯಣ ನೇತ್ರಾಲಯದ ಉಪಾಧ್ಯಕ್ಷ ಹಾಗೂ ಖ್ಯಾತ ನೇತ್ರಶಾಸ್ತ್ರಜ್ಞರಾಗಿರುವ ಡಾ.ರೋಹಿತ್ ಶೆಟ್ಟಿ ಬೆಂಗಳೂರಿನ ಕೆಂಪೇಗೌಡ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ತಮ್ಮ ವೈದ್ಯಕೀಯ ಶಿಕ್ಷಣವನ್ನು ಪೂರೈಸಿ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣವನ್ನು (DBN) ಬೆಂಗಳೂರಿನ…

Read More

ಕುಂದಾಪುರ: ಇತ್ತಿಚಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಉಡುಪಿ ಜಿಲ್ಲೆ ಇವರ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು ಹಿರಿಯಡ್ಕ ಇಲ್ಲಿ ನಡೆದ ಜಿಲ್ಲಾ ಮಟ್ಟ ವಾಲಿಬಾಲ್ ಪಂದ್ಯಾಟದಲ್ಲಿ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ಕೋಡಿ ಪ್ರಥಮ ಸ್ಥಾನ ಗಳಿಸಿದೆ. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಹಾಜಿ ಮಾಸ್ಟರ್ ಮೆಹಮೂದ್, ನಿರ್ದೇಶಕರಾದ ಪ್ರೊ.ಚಂದ್ರಶೇಖರ ದೋಮ ಹಾಗೂ ಮುಖ್ಯೋಪಾಧ್ಯಾಯರಾದ ಶ್ರೀ ರವೀಂದ್ರ ಹಾಗೂ ದೈಹಿಕ ಶಿಕ್ಷಕರಾದ ಜೆಫ್ ಸನ್ನಿ ಡಿಸೋಜ ಶುಭ ಹಾರೈಸಿದರು.

Read More

ಕುಂದಾಪುರ: ಆದಿತ್ಯ ವಿವಿಧೋದ್ದೇಶ ಸಹಕಾರಿ ಸಂಘ ನಿ., ಹಂಗಳೂರು ಇದರ 2014-15ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಕಛೇರಿಯಲ್ಲಿ ಜರುಗಿತು. ಸಂಘದ ಅಧ್ಯಕ್ಷರಾದ ರಾಜೇಂದ್ರ ಹೆಗ್ಡೆ 2014-15ನೇ ಸಾಲಿನ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸುತ್ತಾ ವರದಿ ವರ್ಷದಲ್ಲಿ ರೂಪಾಯಿ 8.50 ಕೋಟಿ ವ್ಯವಹಾರ ಮಾಡಿದ್ದು ನಿವ್ವಳ ಲಾಭದಿಂದ ಸದಸ್ಯರಿಗೆ ಶೇ. 8.50 ಡಿವಿಡೆಂಡ್ ಹಂಚಲಾಗಿದೆ. ಮುಂದಿನ ಸಾಲಿಗೆ ಶೇ. 15.00 ಡಿವಿಡೆಂಡ್ ನೀಡಲಿದ್ದೇವೆ. ಹಾಗೂ ಸಂಘವು 2ನೇ ವರ್ಷದಲ್ಲಿಯೇ ಉತ್ತಮ ’ಎ’ ತರಗತಿಯ ಸಂಸ್ಥೆಯಾಗಿರುವುದಕ್ಕೆ ಸಂಘದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ವ್ಯವಸ್ಥಾಪಕರಾದ ನಾರಾಯಣ ಬಿಲ್ಲವ ಮಾತನಾಡಿ 2014-15ನೇ ಸಾಲಿನ ಲೆಕ್ಕಪರಿಶೋಧನಾ ವರದಿಯನ್ನು ಹಾಗೂ ಆಯ ವ್ಯಯ, ಲಾಭ ನಷ್ಟ, ಆಸ್ತಿ ಜವಾಬ್ದಾರಿ ಮತ್ತು ಮುಂದಿನ ವರ್ಷದ ಅಂದಾಜು ಆಯ ವ್ಯಯವನ್ನು ಸಭೆಯಲ್ಲಿ ಮಂಡಿಸಿ ಮಂಜೂರಾತಿ ಪಡೆದರು. ಸಂಘದ ಉಪಾಧ್ಯಕ್ಷರಾದ ವಿ.ದಿನೇಶ ದೇವಾಡಿಗ, ನಿರ್ದೇಶಕರಾದ ರತ್ನಾಕರ ಕೋಟೆಗಾರ, ಜಯರಾಮ ಶೆಟ್ಟಿ, ಸಂಜೀವ ದೇವಾಡಿಗ, ಕೃಷ್ಣ ದೇವಾಡಿಗ, ಹರೀಶ್ ಬಿಲ್ಲವ, ಉದಯ ಮೆಂಡನ್, ರವೀಂದ್ರ ಹೆಗ್ಡೆ, ಸಂತೋಷ ಕೋಣಿ,…

Read More

ಕುಂದಾಪುರ: ಕೋಟೇಶ್ವರ ಗ್ರಾಮದ ಐತಾಳಬೆಟ್ಟು ಉದ್ದಿನಕೆರೆ ಪರಿಸರದಲ್ಲಿ ಅನಾದಿಯಿಂದಲೂ ನಡೆದಾಡುವ ಹಾದಿಗೆ ತಡೆಯೊಡ್ಡಲಾಗಿದ್ದು, ಪರಿಶಿಷ್ಟ ಜಾತಿ ಸೇರಿದಂತೆ ನೂರಾರು ನಾಗರಿಕರು ದಿಗ್ಬಂಧನಕ್ಕೊಳಗಾಗಿದ್ದಾರೆ. ಸರಕಾರಿ ಸ್ಥಳ ಸರ್ವೆ ನಂಬ್ರ 162.1ಎ1ಸಿ ವಿಸ್ತೀರ್ಣ 0.02, ಸ.ನಂಬ್ರ 163.1ಸಿ2ಬಿ ವಿಸ್ತೀರ್ಣ 0..05 ಸ.ನಂಬ್ರ 163.1ಸಿ3 ವಿಸ್ತೀರ್ಣ 0.04.೦೪, ಸ.ನಂಬ್ರ 163.1ಸಿ1ಸಿ ವಿಸ್ತೀರ್ಣ 0.05 ಸ.ನಂಬ್ರ 170.1 ವಿಸ್ತೀರ್ಣ 0.06೫ ಎಕ್ರೆಗಳನ್ನು ಅತಿಕ್ರಮಣ ಮಾಡಲಾಗಿರುವುದನ್ನು ತೆರವುಗೊಳಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿದೆ. ಖಾಸಗಿ ವ್ಯಕ್ತಿಯೊಬ್ಬರು ಪರಂಬೋಕು ಸ್ಥಳಕ್ಕೆ ತಡೆಯೊಡ್ಡಿದ್ದರೂ, ಸ್ಥಳೀಯ ಪಂಚಾಯತ್ ಹಾಗೂ ಕಂದಾಯ ಇಲಾಖೆ ಮೌನ ವಹಿಸಿದೇ ಎಂದು ಕೋಟೇಶ್ವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕರಿಯದೇವಾಡಿಗ ಆರೋಪಿಸಿದ್ದಾರೆ. ನಡೆದಾಡುವ ಹಾದಿಗೆ ತಡೆ ಉಂಟು ಮಾಡಿದ ಬಗ್ಗೆ ತಹಶೀಲ್ದಾರ್ ಗ್ರಾಮ ಪಂಚಾಯತ್‌ಗೆ ದೂರು ನೀಡಿದ್ದರೂ ಯಾವುದೇ ಕ್ರಮ ನಡೆದಿಲ್ಲ. ತಡೆಯೊಡ್ಡಿದ ಸ್ಥಳದಿಂದ 3 ಕಿ.ಮೀ. ದೂರದಿಂದ ಜನರು ದೈನಂದಿನ ಅಗತ್ಯಕ್ಕಾಗಿ ಬರುವುದು ತಪ್ಪಿಹೋಗಿದೆ. ಅನಾರೋಗ್ಯ ಪೀಡಿತರನ್ನು ಹೊತ್ತುಕೊಂಡು ಸಾಗಬೇಕಾಗಿದೆ. ನಾಗರಿಕರು ಕಾನೂನು ಕೈಗೆತ್ತಿಕೊಳ್ಳುವ ಮೊದಲು ಆಡಳಿತ ಸೌಹಾರ್ಧ ವಾತಾವರಣ ಮೂಡಿಸಬೇಕು ಎಂದು…

Read More

ಗಂಗೊಳ್ಳಿ: ಗಂಗೊಳ್ಳಿಯಲ್ಲಿ ಮೀನುಗಾರಿಕೆಯ ಅಭಿವೃದ್ಧಿ ಹಾಗೂ ಸಮಸ್ತ ಮೀನುಗಾರರ ಶ್ರೇಯೋಭಿವೃದ್ಧಿಗಾಗಿ ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಸದಸ್ಯರು ಶೃಂಗೇರಿಯಲ್ಲಿ ಶೃಂಗೇರಿಯ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿಯವರನ್ನು ಮತ್ತು ಶ್ರೀ ವಿದುಶೇಖರ ಭಾರತೀ ತೀರ್ಥ ಶ್ರೀಗಳನ್ನು ಭೇಟಿ ಮಾಡಿ ಪಾದಪೂಜೆ ಸಲ್ಲಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಆಶೀರ್ವಚನ ಪಡೆದರು. ಶ್ರೀಗಳ ಭೇಟಿಗೂ ಮುನ್ನ ಮೀನುಗಾರರು ಶೃಂಗೇರಿಯ ಶ್ರೀ ಶಾರದಾ ಮಾತೆಗೆ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಿದರು. ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಎಚ್.ಮಂಜು ಬಿಲ್ಲವ, ಗೌರವಾಧ್ಯಕ್ಷ ಕೋಡಿ ತಿಮ್ಮಪ್ಪ ಖಾರ್ವಿ, ಮಾಜಿ ಅಧ್ಯಕ್ಷ ಡಿ.ಚಂದ್ರ ಖಾರ್ವಿ ಹಾಗೂ ನಾಡದೋಣಿ ಮೀನುಗಾರರು ಶ್ರೀಗಳವರನ್ನು ಭೇಟಿ ಮಾಡಿ ಆಶೀರ್ವಚನ ಪಡೆದರು.

Read More

ಕುಂದಾಪುರ: ಕಸ್ತೂರಿ ರಂಗನ್ ವರದಿಯಲ್ಲಿ ಮತ್ತೆ ವಂಡ್ಸೆ ಸೇರ್ಪಡೆಯಾಗಿರುವ ಬಗ್ಗೆ ವಂಡ್ಸೆಯ ಸಾರ್ವಜನಿಕರು ಅಸಮಾಧಾನ ವ್ಯಕ್ತ ಪಡಿಸಿದ್ದು, ಅಕ್ಟೋಬರ್ 13ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಾರ್ವಜನಿಕರು ತಿಳಿಸಿದ್ದಾರೆ.

Read More

ಕುಂದಾಪುರ: ಜಾನಪದ ಕ್ಷೇತ್ರಕ್ಕೆ ಉಪ್ಪಿನಕುದ್ರು ಗೊಂಬೆಯಾಟ ತಂಡ ತನ್ನದೇ ಆದ ಕಾಯಕದಿಂದ ವಿಶಿಷ್ಟ ಸೇವೆ ಸಲ್ಲಿಸುತ್ತಿರುವುದಂತೂ ಸುಳ್ಳಲ್ಲಾ. ಇಲ್ಲಿಯ ಕಲಾ ಪರಂಪರೆ ೩೫೦ ವರ್ಷಗಳ ಸುಧೀರ್ಘ ಇತಿಹಾಸದ ಹಿನ್ನೆಲೆಯಲ್ಲಿ ಇಂದು 6 ನೇ ತಲಾಂತರದಲ್ಲಿ ನಿರಂತರವಾಗಿ ಪ್ರವಹಿಸುತ್ತಿರುವುದು ಒಂದು ಗಿನ್ನಿಸ್ ದಾಖಲೆವೆನ್ನಬಹುದು. ಈ ಎಲ್ಲಾ ಸಾಧನೆ ಸಂವರ್ಧನೆಗೆ ಮೂಲ ಕಾರಣ ಉಪ್ಪಿನಕುದುರಿನ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ತಂಡ. ಸರಕಾರದ ಯಾವುದೇ ಸಹಾಯಧನ ನಿರೀಕ್ಷಿಸದೆ, ಸಾಂಘಿಕ ಪ್ರಯತ್ನದಿಂದ ಅಳಿವಿನಂಚಿನಲ್ಲಿರುವ ವಿಶಿಷ್ಟ ಅಷ್ಟೇ ಅಪರೂಪದ ಗೊಂಬೆಯಾಟ ಕಲೆಯನ್ನು ಪ್ರಪಂಚದಾದ್ಯಂತ15-20 ಕ್ಕೂ ಹೆಚ್ಚು ಬಾರಿ ನಾನಾ ರಾಷ್ಟ್ರಗಳಿಗೆ ಪರಿಚಯಿಸಿದ ಕೀರ್ತಿ ಈ ತಂಡದ್ದು. ಇಂದು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ತಂಡ ತನ್ನ ಸಾಧನೆಯ ಇನ್ನೊಂದು ಮೈಲಿಗಲ್ಲಿಗಾಗಿ ಸಿದ್ಧವಾಗುತ್ತಿರುವುದೊಂದು ವಿಶೇಷ. ರಾಜ್ಯ ಪ್ರಶಸ್ತಿ ವಿಜೇತ ಭಾಸ್ಕರ್ ಕೊಗ್ಗ ಕಾಮತರ ನೇತೃತ್ವದಲ್ಲಿ ಸಅಕ್ಟೋಬರ್ ೮ರಂದು ಹಾಂಗ್ ಕಾಂಗ್ ದೇಶದಲ್ಲಿ ಪ್ರದರ್ಶನ ನೀಡಲು ಸಜ್ಜಾಗಿದೆ. ಒಂದು ವಾರದ ಕಾಲ ಅಲ್ಲಿ ಪ್ರದರ್ಶನ ನೀಡಲಿರುವ ಈ ತಂಡವನ್ನು ಹಾಂಗ್ ಕಾಂಗ್ ಕನ್ನಡ ಸಂಘ…

Read More