Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಬೈಂದೂರು: ಮನುಷ್ಯ ತನ್ನ ಬದುಕನ್ನು ಸಮೃದ್ಧಗೊಳಿಸಿಕೊಳ್ಳಲು ಕಲೆ, ಸಾಹಿತ್ಯದಂತಹ ಹಲವು ಮಾಧ್ಯಮವನ್ನು ಕಂಡುಕೊಂಡಿದ್ದಾನೆ. ದಿನನಿತ್ಯದ ಕಾಯಕದ ನಡುವೆ ಒಂದಿಷ್ಟು ಹೊತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯವೂ ಆಗಿದೆ ಎಂದು ಹಿರಿಯ ಪತ್ರಕರ್ತ ಎಸ್. ಜನಾರ್ಧನ ಮರವಂತೆ ಹೇಳಿದರು. ಅವರು ಬೈಂದೂರು ರಥೋತ್ಸವದ ಅಂಗವಾಗಿ ಸುರಭಿ ರಿ. ಬೈಂದೂರು ಇಲ್ಲಿನ ಶಾರದಾ ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ನಾಲ್ಕು ದಿನಗಳ ’ಸುರಭಿ ಕಲಾಸಿರಿ’ಯ ಕೊನೆಯ ದಿನ ಸಭಾ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣಕಾರರಾಗಿ ಮಾತನಾಡಿದರು. ದಿನವೂ ಅನ್ನ ಊಟಮಾಡುವವನಿಗೆ ಅದು ಹೆಚ್ಚು ರುಚಿಸುವುದಿಲ್ಲ. ಅದಕ್ಕಾಗಿ ಒಂದಿಷ್ಟು ವ್ಯಂಜನಗಳನ್ನು ಸೇರಿಸಿಕೊಂಡು ಊಟಮಾಡುತ್ತಾನೆ. ಬದುಕು ಕೂಡ ಒಂದು ದೃಷ್ಠಿಯಲ್ಲಿ ಅನ್ನದಂತೆ. ಇಲ್ಲಿ ದುಡಿಯುವುದು, ಗಳಿಸುವುದು ಎಲ್ಲಾ ಇದ್ದದ್ದೇ. ಆದರೆ ಬದುಕಿನಲ್ಲಿ ಕಲೆ ಎಂಬ ವ್ಯಂಜನ ಸೇರಿಕೊಂಡಾಗ ಅದು ಮತ್ತಷ್ಟು ಸುಂದರಗೊಳ್ಳುತ್ತದೆ ಎಂದ ಅವರು ಬೈಂದೂರಿನ ಎಲ್ಲಾ ಸಂಘಟನೆಗಳೂ ಕಲೆಯನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸುವ ಕೆಲಸವನ್ನು ಮಾಡುತ್ತಾ ಬಂದಿವೆ ಎಂದು ಶ್ಲಾಘಿಸಿದರು. ಯಡ್ತರೆ ಗ್ರಾ.ಪಂ ಅಧ್ಯಕ್ಷ…

Read More

ಬೈಂದೂರು: ಬೈಂದೂರು ಠಾಣಾ ವ್ಯಾಪ್ತಿಯ ನಾಯಕನಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನವೊಂದು ಬೈಕ್ ಸವಾರನ ಮೇಲೆ ಹರಿದು ಹೋದ ಪರಿಣಾಮ ಬೈಕ್ ಸವಾರನ ಅರ್ಧದೇಹ ಛಿದ್ರಗೊಂಡು ಮೃತಪಟ್ಟ ವಿದ್ರಾವಕ ಘಟನೆ ವರದಿಯಾಗಿದೆ. ಮೃತಪಟ್ಟವರನ್ನು ಹೇರಂಜಾಲು ಗಾಣಿಗರ ಬೆಟ್ಟು ಮುತ್ತ ಗಾಣಿಗರ ಮಗ ವೀರೇಂದ್ರ ಗಾಣಿಗ ( 28 ) ಎಂದು ಗುರುತಿಸಲಾಗಿದೆ. ವೀರೇಂದ್ರ ರಾತ್ರಿ ವೇಳೆಯಲ್ಲಿ ಬೈಂದೂರು ಕಡೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಛಿದ್ರಗೊಂಡ ದೇಹ ಕೆಲವು ಹೊತ್ತು ರಸ್ತೆಯಲ್ಲಿಯೇ ಬಿದ್ದಿತ್ತು. ಮೃತಪಟ್ಟವರು ಯಾರೆಂದು ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿತ್ತು. ಸ್ಥಳಕ್ಕಾಗಮಿಸಿದರ ಬೈಂದೂರು ಪೊಲೀಸರು ಮಹಜರು ನಡೆಸಿ ಮೃತರ ಮೊಬೈಲ್ ಮೂಲಕ ಸಂಬಂಧಿಗಳಿಗೆ ಕರೆಮಾಡಿ ಗುರುತು ಪತ್ತೆ ಹಚ್ಚಿದ್ದರು. ನಾಲ್ಕು ದಿನಗಳ ಹಿಂದೆ ಮುಂಬೈನಿಂದ ಊರಿಗೆ ಆಗಮಿಸಿದ್ದ ವಿರೇಂದ್ರ ಒಂದು ದಿನದಲ್ಲಿ ಮತ್ತೆ ಮುಂಬೈಗೆ ಹಿಂತಿರುಗುವವರಿದ್ದರು. ಅಷ್ಟರಲ್ಲೇ ಈ ದುರ್ಘಟನೆ ನಡೆದಿದೆ.

Read More

ಗಂಗೊಳ್ಳಿ/ಶಾರ್ಜಾ : ಶಾರ್ಜಾದ ದೆಹಲಿ ಖಾಸಗಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಬಾಂಡ್ಯಾ ಪ್ರೇರಣಾ ಪೈ 2014-15ನೇ ಸಾಲಿನ 21ನೇ ಶೈಕ್ಷಣಿಕ ಮಹತ್ಸಾದನೆಯ ಬಿರುದು ಪಡೆದುಕೊಂಡಿದ್ದಾರೆ. ಶಾರ್ಜಾ ನಗರದ ಶಾರ್ಜಾ ವಿಶ್ವವಿದ್ಯಾನಿಲಯದ ಸಿಟಿ ಹಾಲ್‌ನಲ್ಲಿ ಇತ್ತೀಚಿಗೆ ಜರಗಿದ ಸಮಾರಂಭದಲ್ಲಿ ಶಾರ್ಜಾದ ಯುವರಾಜ ಜನಾಬ್ ಶೇಖ್ ಸುಲ್ತಾನ್ ಬಿನ್ ಮೊಹಮ್ಮದ್ ಬಿನ್ ಸುಲ್ತಾನ್ ಅಲ್ ಕಾಸಿಮಿ ಇವರು ಪ್ರೇರಣಾ ಪೈ ಇವರಿಗೆ ಬಿರುದು ಪ್ರದಾನ ಮಾಡಿದರು. ಪ್ರೇರಣಾ ಮೂಲತ: ಗಂಗೊಳ್ಳಿಯವರಾದ ಮಣಿಪಾಲದ ನಿವಾಸಿ ಬಾಂಡ್ಯ ಸಂಜೀವ ಪೈ ಹಾಗೂ ಶಾರದಾ ಎಸ್.ಪೈ ಅವರ ಮೊಮ್ಮಗಳಾಗಿದ್ದು, ಬಾಂಡ್ಯ ಹರೀಶ್ ಪೈ ಮತ್ತು ರಾಗಿಣಿ ಹರೀಶ್ ಪೈ ಅವರ ಪುತ್ರಿಯಾಗಿದ್ದಾಳೆ. ಪ್ರತಿಷ್ಠಿತ ಶೈಕ್ಷಣಿಕ ಶ್ರೇಷ್ಠತೆಗಾಗಿ 2012-13ನೇ ಆವೃತ್ತಿ 15ರ ‘ಶೇಕ್ ಹಮ್ದಾನ್ ಬಿನ್ ರಾಶಿದ್ ಅಲ್ ಮಕ್ತೂಮ್ ಬಿರುದನ್ನು ಪಡೆದುಕೊಂಡಿರುವ ಪ್ರೇರಣಾ ತನ್ನ ಸಂಪೂರ್ಣ ಶೈಕ್ಷಣಿಕ ಪಯಣದಲ್ಲಿ ತನ್ನ ನೆಚ್ಚಿನ ವಿಷಯಗಳಾದ ವಿಜ್ಞಾನ ಮತ್ತು ಗಣಿತದಲ್ಲಿ ಸರ್ವಶ್ರೇಷ್ಠ ವಿದ್ಯಾರ್ಥಿನಿಯಾಗಿದ್ದಾರೆ. ತಾನು ಕೈಗೆತ್ತಿಕೊಂಡಿರುವ ಕಾಯಕವನ್ನು ಅತ್ಯುತ್ತಮ ರೀತಿಯಲ್ಲಿ…

Read More

ಕುಂದಾಪುರ: ಕೇಂದ್ರ ಸರಕಾರದ ‘ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ- 2015’ಅಂಗಿಕಾರಗೊಳ್ಳುವುದನ್ನು ವಿರೋಧಿಸಿ ಅಖೀಲ ಭಾರತ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್‌ ಇಂದು (ಎ. 30) ದೇಶಾದ್ಯಂತ ಸಾರಿಗೆ ನೌಕರರ ಮುಷ್ಕರಕ್ಕೆ ಕರೆ ನೀಡಿದ್ದರ ಪರಿಣಾಮ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕುಂದಾಪುರ ತಾಲೂಕಿನಲ್ಲಿಯೂ ಸರಕಾರಿ ಬಸ್ ಸಂಚಾಯ ಸ್ಥಗಿತಗೊಂಡಿದ್ದರೇ, ಖಾಸಗಿ ಬಸ್ಸುಗಳ ಓಡಾಟ ವಿರಳವಾಗಿತ್ತು. ಕುಂದಾಪುರ ತಾಲೂಕಿನ ಕೆಲವು ಭಾಗಗಳಿಗೆ ಸಂಪರ್ಕ ಕಲ್ಪಿಸುವ ಲೋಕಲ್ ಬಸ್ಸುಗಳು ವಿರಳವಾಗಿ ಸಂಚರಿಸುತ್ತಿರುವುದು ಕಂಡುಬಂತು. ಆದರೆ ಕುಂದಾಪುರದಿಂದ ಬೈಂದೂರು, ಭಟ್ಕಳಕ್ಕೆ ಸಂಚರಿಸು ಖಾಸಗಿ ಬಸ್ಸುಗಳು ಕೂಡ ರಸ್ತೆಗಿಳಿಯದ ಪರಿಣಾಮ ಪ್ರಯಾಣಿಕರು ಪರದಾಡುವಂತಾಯಿತು. ಆಟೋರಿಕ್ಷಾ ಚಾಲಕರು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದರಾದರೂ ರಿಕ್ಷಾಗಳ ಸಂಚಾರ ಕಂಡುಬರುತ್ತಿತ್ತು. ಸಂಜೆಯಾಗುತ್ತಿದ್ದಂತೆ ದೂರದ ಮುಂಬೈ, ಬೆಂಗಳೂರಿಗೆ ಸಂಚರಿಸುವ ಖಾಸಗಿ ಬಸ್ಸುಗಳು ತಮ್ಮ ಪ್ರಯಾಣವನ್ನು ಆರಂಭಿಸಿದವು. ಉಡುಪಿಯಲ್ಲಿ ಸಿಐಟಿಯು ಸಂಯೋಜಿತ ಬಸ್‌ ನೌಕರರ ಸಂಘಟನೆಗಳು ಮುಷ್ಕರದಲ್ಲಿ ಭಾಗವಹಿಸುದುದಾಗಿ ತಿಳಿಸಿತ್ತು. ಖಾಸಗಿ ಬಸ್‌ ಮಾಲಕರು ತಾವು ಬಂದ್‌ ಆಚರಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರಾದರೂ, ನೌಕರರು…

Read More

ಕುಂದಾಪುರ: ಭಯ ಎಂಬುದು ಜಾತಿ ಧರ್ಮವನ್ನು ಮೀರಿದ್ದು! ಮೊದಲು ಎದುರಾದ ಕಂಟಕಕ್ಕೊಂದು ಅಂತ್ಯ ಸಿಕ್ಕರೆ ಸಾಕು ಎಂದು ಜನಸಾಮಾನ್ಯರು ಬಯಸುತ್ತಾರೆ. ಇಂದು ಮುಂಜಾನೆಯೇ ಕುಂದಾಪುರ ಪೇಟೆಯ ಪ್ಯಾನ್ಸಿ ಅಂಗಡಿಯ ಮುಂಭಾಗದಲ್ಲಿ ಯಾರೋ ಕಿಡಿಗೇಡಿಗಳಿಂದಾಗಿ ಎದುರಾದ ಕಂಟಕವೊಂದು ಅಂಗಡಿಯ ಮಾಲಿಕರನ್ನು ಕ್ಷಣಕಾಲ ವಿಚಲಿತರಾಗುವಂತೆ ಮಾಡಿತ್ತಾದರೂ ಅಲ್ಲಿಗೆ ವಿಜ್ಞಾನದ ಶಿಕ್ಷಕರೊರ್ವದಿಂದ ಪರಿಸ್ಥಿತಿ ತಿಳಿಯಾಯಿತು. ಏನಿದು ಘಟನೆ? ಕುಂದಾಪುರದ ಸಿಟಿ ಜೇಸಿಸ್ ಸ್ಥಾಪಕಾಧ್ಯಕ್ಷ, ಬ್ಯೂಟಿ ಕ್ವೀನ್ ಅಂಗಡಿ ಮಾಲಕ ಹುಸೇನ್ ಹೈಕಾಡಿ ಎಂಬುವರ ಎಂದಿನಂತೆಯೇ ಶಟರ್ ಎಳೆದು ಅದರ ಬಲಭಾಗದಲ್ಲಿ ಬೀಗ ಹಾಕಿ ಮನೆಗೆ ತೆರಳಿದ್ದರು. ಬೆಳಿಗ್ಗೆ ಬಂದು ನೋಡಿದರೆ, ಶಟರಿನ ಎಡಭಾಗದಲ್ಲಿ ಒಂದು ಬೊಂಡವನ್ನಿಟ್ಟು, ಅದರ ಮೇಲೊಂದು ನಿಂಬೆ ಹಣ್ಣು ಇಡಲಾಗಿತ್ತು. ಮೂರೂ ಬದಿಗೆ ಬೊಂಡದ ಸುತ್ತ ಮೂರು ನಿಂಬೆ ಹಣ್ಣು ಇಡಲಾಗಿತ್ತು. ಕುಂಕುಮ ಮತ್ತು ಅರಶಿನಪುಡಿ ಚೆಲ್ಲಲಾಗಿತ್ತು. ಉರಿಸದ ಊದುಬತ್ತಿಯ ಕಟ್ಟನ್ನು ಶೆಟರ್‌ಗೆ ಸಿಕ್ಕಿಸಿಡಲಾಗಿತ್ತು. ಬೆಳಿಗ್ಗೆ ಸ್ಥಳೀಯ ಉಪನ್ಯಾಸಕರೊಬ್ಬರು ನಡೆದು ಬರುತ್ತಿದ್ದಾಗ ಗಮನಿಸಿ ಅಂಗಡಿ ಮಾಲೀಕರಿಗೆ ಸುದ್ಧಿ ಮುಟ್ಟಿಸಿದ್ದಾರೆ. ತಕ್ಷಣ ಅಂಗಡಿಗೆ ಬಂದ…

Read More

ಬೈಂದೂರು: ಕಲ್ಲೆದೆಯನ್ನೂ ಕರಗಿಸುವ, ದ್ವೇಷವನ್ನು ದಹಿಸುವ ಶಕ್ತಿ ಇರುವುದು ಕಲೆಗೆ ಮಾತ್ರ. ಕಲಾಕಾರರು ಆನಂದದ ಲಹರಿಯನ್ನು ಹರಿಸಿ, ಪ್ರೀತಿಯನ್ನು ಬಿತ್ತುವ ಶಾಂತಿದೂತರು ಎಂದು ಬೈಂದೂರು ರತ್ತೂಬಾಯಿ ಹೈಸ್ಕೂಲ್ ನ ಮುಖ್ಯೋಪಧ್ಯಾಯ ಜಿ. ಎಸ್. ಭಟ್ ಹೇಳಿದರು. ಅವರು ಬೈಂದೂರು ರಥೋತ್ಸವದ ಅಂಗವಾಗಿ ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಕಲಾ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಿರುವ ‘ಸುರಭಿ ಕಲಾಸಿರಿ’ ಸಾಂಸ್ಕೃತಿಕ ವೈಭವದಲ್ಲಿ ಮೂರನೇ ದಿನ ಜರುಗಿದ ಯಕ್ಷೋತ್ಸವದ ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು. ಎಲ್ಲಿ ಕಲೆ, ಸಾಹಿತ್ಯ, ಸಂಗೀತಕ್ಕೆ ಪ್ರೋತ್ಸಾಹ ಸಿಗುವುದಿಲ್ಲವೋ ಅಲ್ಲಿ ಅದರ ಉಳಿವು ಸಾಧ್ಯವಿಲ್ಲ. ಬೈಂದೂರಿನ ಸುರಭಿ ಸಂಸ್ಥೆಯು ಸತತವಾಗಿ ಕಲೆಯನ್ನು ಅರಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನಾರ್ಹ ಎಂದವರು ನುಡಿದರು. ಅತಿಥಿಯಾಗಿದ್ದ ಜಿ.ಪಂ. ಸದಸ್ಯೆ ಸುಪ್ರಿತಾ ದೀಪಕ್ ಶೆಟ್ಟಿ ಮಾತನಾಡಿ ಬೈಂದೂರಿನ ಸಾಂಸ್ಕೃತಿಕ ಲೋಕಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿರುವ ಸುರಭಿಯನ್ನು ಬೈಂದೂರಿನಿಂದ ಬೇರ್ಪಡಿಸಿ ನೋಡಲಾಗದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯ ಅರಣ್ಯ…

Read More

ಕುಂದಾಪುರ: ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಸುಧಾಕರ ವಕ್ವಾಡಿ ಅಧಿಕಾರ ವಹಿಸಿಕೊಂಡಿದ್ದಾರೆ. ಪ್ರಾಂಶುಪಾಲ ಸಿ.ಸೀತಾರಾಮ ಮಧ್ಯಸ್ಥ ಅವರಿಂದ ತೆರವಾದ ಸ್ಥಾನಕ್ಕೆ ನಿಯುಕ್ತರಾದ ಅವರು ಹೆಮ್ಮಾಡಿ ಶ್ರೀ.ವಿ.ವಿ.ವಿ. ಮಂಡಳಿಯ ಅಧ್ಯಕ್ಷ, ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಅವರಿಂದ ನೇಮಕಗೊಂಡಿದ್ದಾರೆ. ಸುಧಾಕರ ವಕ್ವಾಡಿ ಅವರು ಹೆಮ್ಮಾಡಿ ಕಾಲೇಜಿನ ಸ್ಥಾಪಕ ಉಪನ್ಯಾಸಕರಾಗಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ೧೯ ವರ್ಷಗಳ ಸೇವಾ ಅನುಭವ ಪಡೆದಿದ್ದಾರೆ. ರಂಗ ನಿರ್ದೇಶಕ, ನಟನಾಗಿ ರಾಷ್ಟ್ರಮಟ್ಟದವರೆಗೂ ಕನ್ನಡ ಸೇರಿದಂತೆ ಹಿಂದಿ, ಆಂಗ್ಲ ಭಾಷೆಯ ನಾಟಕ ಸ್ವರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.೧೯೯೬ ರಲ್ಲಿ ತೆರೆಕಂಡ ಕುಂದಾಪುರದ ದಲಿತ ಕವಿ ಕೆ.ಕೆ.ಕಾಳಾವರ‍್ಕರ್ ಅವರ ತುಳು ಚಲನಚಿತ್ರ ‘ಕಾಲ’ ದಲ್ಲಿ ಕಲಾತ್ಮಕ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿದ್ದ ಅವರು ಪತಂಜಲಿ ಹಾಗೂ ಜ್ಞಾನ ವಿಕಾಸ ಕೇಂದ್ರದಲ್ಲಿ ಸಿದ್ಧ ಯೋಗ ಸಾಧಕರಾಗಿರುತ್ತಾರೆ.

Read More

ಕುಂದಾಪುರ: ತಾಲೂಕಿನ ಮಲೆನಾಡು ಪ್ರಾಂತ್ಯದಲ್ಲಿ ಶನಿವಾರ ಮಧ್ಯಾಹ್ನ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಒಂದುವರೆ ತಾಸಿಗೂ ಮಿಕ್ಕಿ ಸುರಿದ ಭಾರಿ ಮಳೆಗೆ ಜನಜೀವನ ತತ್ತರಿಸಿದೆ. ಅಮಾಸೆಬೆಲು, ಹಾಲಾಡಿ, ಶಂಕರನಾರಾಯಣ, ಬೆಳ್ವೆ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆ ಸುರಿದಿದೆ. ಗಾಳಿಮಳೆಯ ಅಬ್ಬರಕ್ಕೆ ಮರಮಟ್ಟುಗಳು ಧರೆಗುರುಳಿದ್ದು ವಿದ್ಯುತ್, ದೂರವಾಣಿ ಸಂಪರ್ಕ ಕಡಿತಗೊಂಡಿದೆ. ಬಿರುಗಾಳಿ ಅಬ್ಬರ-ಸಂಚಾರ ಮೊಟಕು: ಹಾಲಾಡಿ ಸಮೀಪದ ಮುಂಡಕೋಡು ಸನಿಹದ ಬಾಕುಡಿಹೊಲ ರಕ್ಷಿತಾರಣ್ಯ ವ್ಯಾಪ್ತಿಯ ಪ್ರದೇಶಗಳಲ್ಲಿ ಬಿರುಗಾಳಿ ಅಬ್ಬರದಿಂದ ಬೆಲೆಬಾಳುವ ಮರಗಿಡಗಳು ಅರ್ಧಕ್ಕೆ ಮುರಿದು ಬಿದ್ದಿವೆ. ಹಾಲಾಡಿ-ಮುಂಡಕೋಡು ನಡುವೆ ಭಾರಿ ಗಾತ್ರದ ಮರ ರಸ್ತೆಗೆ ಉರುಳಿದ್ದರಿಂದ ಹಾಲಾಡಿ-ಅಮಾಸೆಬೆಲು ನಡುವೆ ಕೆಲಹೊತ್ತು ಸಂಚಾರ ಮೊಟಕುಗೊಂಡಿತು. ಮುಂಡಕೋಡು, ಬಾಕುಡಿಹೊಲ, ಹೊರ್ಲಿಜೆಡ್ಡು ಪ್ರದೇಶ ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದಲ್ಲಿ ಮರಗಳು ಮುರಿದುಬಿದ್ದಿವೆ. ಅಲ್ಲಿ ಮಳೆ ಇಲ್ಲಿ ಬಿರುಬಿಸಿಲು : ತಾಲೂಕಿನ ಮಲೆನಾಡು ಪ್ರಾಂತ್ಯದಲ್ಲಿ ವ್ಯಾಪಕ ಮಳೆಯಾಗಿದ್ದರೆ ಕರಾವಳಿಯಲ್ಲಿನ ಬಿರುಬಿಸಿಲು ನಾಗರಿಕರನ್ನು ಕಂಗೆಡಿಸುವಂತೆ ಮಾಡಿದೆ.

Read More

ಕುಂದಾಪುರ: ಎರಡು ದಿನಗಳಿಂದ ನಾಪತ್ತೆಯಾಗಿದ್ದ ಗುಜ್ಜಾಡಿ ನಿವಾಸಿ ಚಂದ್ರ ದೇವಾಡಿಗ (39) ಶನಿವಾರ ಬೆಳಗ್ಗೆ 10.30ರ ಸುಮಾರಿಗೆ ಮನೆ ಸಮೀಪದ ಅಕೇಶಿಯಾ ಹಾಡಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆಯ ವಿವರ: ಕೃಷಿ ಕೂಲಿಕಾರರಾಗಿರುವ ಚಂದ್ರ ದೇವಾಡಿಗ ಎಂದಿನಂತೆ ತನ್ನಿಬ್ಬರು ಮಕ್ಕಳಾದ ಕಿರಣ್ ಮತ್ತು ಅರುಣ್ ಅವರೊಂದಿಗೆ ಏ. 23ರಂದು ಗೇರುಬೀಜ ಹೆಕ್ಕಲು ಪಕ್ಕದ ಗೇರು ಹಾಡಿಗೆ ಹೋಗಿದ್ದರು. ಮಧ್ಯಾಹ್ನದ ವೇಳೆ ಮಕ್ಕಳನ್ನು ಮನೆಗೆ ಹೋಗುವಂತೆ ತಿಳಿಸಿ ಕೆಲಸ ಮುಂದುವರಿಸಿದ್ದರು. ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಗಾಬರಿಗೊಳಗಾದ ಪತ್ನಿ, ಮಕ್ಕಳು, ಮನೆಯವರು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಏ.24ರಂದು ಗಂಗೊಳ್ಳಿ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು. ಶನಿವಾರ ಗೇರು ಹಾಡಿ ಸಮೀಪದ ಅಕೇಶಿಯಾ ಪ್ಲಾಂಟೇಶನ್‌ನಲ್ಲಿ ದುರ್ವಾ ಸನೆ ಹಬ್ಬಿದ್ದು ಸ್ಥಳೀಯರು ನೋಡುವಾಗ ಚಂದ್ರ ದೇವಾಡಿಗ ಹೆಣವಾಗಿದ್ದರು. ಬಡಕುಟುಂಬ ಕಂಗಾಲು: ಪತ್ನಿ ಪ್ರೇಮ, ಸಹೋದರಿ ಸರೋಜಾ, ತಾಯಿ ಗಂಗಾ ದೇವಾಡಿಗ, ಮಕ್ಕಳಾದ ಕಿರಣ್ (9ನೇ ತರಗತಿ) ಮತ್ತು ಅರುಣ್…

Read More

ಉಡುಪಿ: ಗೆಳತಿಯನ್ನು ಕೂರಿಸಿಕೊಂಡು ಎಂಐಟಿ ವಿದ್ಯಾರ್ಥಿ ಬೈಕಲ್ಲಿ ಹೋಗುತ್ತಿದ್ದಾಗ ರಸ್ತೆ ವಿಭಾಜಕ ಮತ್ತು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದು, ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ. ಮಣಿಪಾಲ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದುಕೊಂಡು ಎಂಐಟಿಯಲ್ಲಿ ಕಲಿಯುತ್ತಿದ್ದ ಉತ್ತರ ಭಾರತದ ಉದಿತ್ ಜೈಸ್ವಾಲ್ (22) ಮೃತ ವಿದ್ಯಾರ್ಥಿ. ಆತನ ಗೆಳತಿ ವಿದ್ಯಾರ್ಥಿನಿ ನತಾಸ್ ಅಲಿಸಾ ಡಯಾಸ್ (22) ಗಂಭೀರ ಗಾಯಗೊಂಡವಳು. ಭಾನುವಾರ ಆಗಿದ್ದರಿಂದ ತರಗತಿಗೆ ರಜೆಯಾಗಿದ್ದು, ಸಂಜೆ ಹೊತ್ತಿಗೆ ಗೆಳತಿಯನ್ನು ಕೂರಿಸಿಕೊಂಡು ಮಣಿಪಾಲ ಟೈಗರ್ ಸರ್ಕಲ್‌ನಿಂದ ಉಡುಪಿ ಕಡೆಗೆ ಹೊರಟಿದ್ದಾರೆ. ಜಾಲಿರೈಡ್ ಮೂಡಿನಲ್ಲಿ ಅತಿವೇಗದಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಟೈಗರ್ ಸರ್ಕಲ್‌ನ ಸಮೀಪದಲ್ಲಿಯೇ ಡಿವೈಡರ್ ಮತ್ತು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಯುವಕನ ತಲೆ ಒಡೆದು ಹೋಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ಯುವತಿ ಗಾಯಗೊಂಡು ಅರಚುತ್ತಿದ್ದು, ಕೂಡಲೇ ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಯುವಕ ಅಷ್ಟೊತ್ತಿಗೆ ಮೃತಪಟ್ಟಿದ್ದಾನೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More