ಕುಂದಾಪುರದ ಸಮುದಾಯ ಸಾಂಸ್ಕೃತಿಕ ಸಂಘಟನೆಯು ಎಂಟುದಿನಗಳ ಮಕ್ಕಳ ಮೇಳವನ್ನು ಸಂಘಟಿಸಿ ಆ ಮೇಳದ ಮಕ್ಕಳಿಂದಲೇ ನಾಟಕವನ್ನು ಆಡಿಸಿದೆ. ಮೇಳದ ಸಮಾರೋಪದಂದು ನಾಟಕ ಪ್ರದರ್ಶನ ನಡೆಯಿತು. ‘ನಕ್ಕಳಾ ರಾಜಕುಮಾರಿ’ ಸಮಯದ ಮಿತಿಯಲ್ಲಿ ತಯಾರಾದ ನಾಟಕವಾದರೂ ಮಕ್ಕಳ ಉತ್ಸಾಹ, ದೃಶ್ಯ ಜೋಡಣೆ ಮತ್ತು ಮಕ್ಕಳಿಂದ ಸಹಜ ಅಭಿನಯವನ್ನು ಬಳಸಿಕೊಳ್ಳುವಲ್ಲಿ ನಿರ್ದೇಶಕರು ತೋರಿದ ಜಾಣ್ಮೆ ನಾಟಕವನ್ನು ಸುಂದರ ಕಲಾಕೃತಿಯನ್ನಾಗಿಸಿತು. ಆಕಾಶವಾಣಿಯ ಚಿಣ್ಣರ ಚಿಲುಮೆ ಕಾರ್ಯಕ್ರಮಕ್ಕಾಗಿ ಮಕ್ಕಳ ನಾಟಕ ಮಾಡಿಸಲು ಹೊರಟ ರಂಗಕರ್ಮಿ ಎಂ ಅಬ್ದುಲ್ ರಹಮಾನ್ ಪಾಷಾ ಮಕ್ಕಳ ಜೊತೆ ಕೆಲಸಮಾಡುತ್ತಾ, ಮಕ್ಕಳ ಸಹಾಯದಿಂದಲೇ ರಚಿಸಿದ ನಾಟಕವಿದು. ಈ ನಾಟಕಕ್ಕೆ ಹೆಸರಿಟ್ಟದ್ದು ಕೂಡಾ ಮಕ್ಕಳೇ! ನಾಟಕದ ಮುಖ್ಯ ಪಾತ್ರಗಳಾದ ಎಂಕ, ಸೀನ ಮತ್ತು ನೊಣ ಹಳ್ಳಿಯ ಶ್ರಮಿಕ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾರೆ. ರಕ್ತ ಮಾಂಸಗಳ ಜೊತೆ ಹಸಿವು, ಮುಗ್ಧತೆಗಳನ್ನೂ ದೇಹಕ್ಕೆ ಮೆತ್ತಿಕೊಂಡಂತಿರುವ ಈ ಪಾತ್ರಗಳು ಕೆಟ್ಟ ಪ್ರಭುತ್ವದಿಂದ ಬವಣೆಗೊಳಗಾಗಿ ಮನೆಯಿಂದ ಹೊರಹಾಕಲ್ಪಟ್ಟವರು. ನಗದ ರಾಜಕುಮಾರಿಯನ್ನು ಸಂತೋಷ ಪಡಿಸಿ ಅವಳನ್ನು ನಗಿಸಿದವರಿಗೆ ದೊಡ್ಡ ಬಹುಮಾನ ದೊರೆಯುವುದೆಂಬ ಡಂಗುರದ ಘೋಷಣೆಯನ್ನು…
Author: ಸುನಿಲ್ ಹೆಚ್. ಜಿ. ಬೈಂದೂರು
ಮಕ್ಕಳಿಗೆ ಬೇಸಿಗೆ ರಜೆ ಆರಂಭವಾಗುತ್ತಿದ್ದಂತೆಯೇ ಸಮ್ಮರ್ ಕ್ಯಾಂಪು, ಟ್ರೆನಿಂಗು, ಕೋಚಿಂಗ್ ಎಂದು ಮತ್ತೊಂದು ಬಗೆಯಲ್ಲಿ ತರಗತಿಗಳು ಆರಂಭಗೊಂಡುಬಿಡುತ್ತದೆ. ಎಲ್ಲಾ ಒತ್ತಡಗಳಿಂದ ಮುಕ್ತರಾಗಿ ಒಂದೆರಡು ತಿಂಗಳು ಅಜ್ಜಿ ಮನೆಯಲ್ಲೊ ಅಥವಾ ಮತ್ಯಾರೋ ಬಂಧು-ಸ್ನೇಹಿತರೊಂದಿಗೋ ಬಾಲ್ಯದ ಸವಿಯನ್ನು ಸವಿಯೋದಕ್ಕೂ ಬಿಡದೇ ಮತ್ತೆ ಬೋರ್ಡು, ಬ್ರಷ್ಗಳ ಮುಂದೆ ತಂದು ಕೂರಿಸುವ ಕಾರ್ಯಕ್ರಮಗಳಿಗೆ ಬರವಿಲ್ಲ. ಅಂಥಹದರಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ಕೆಲವೊಂದು ಸಂಘ ಸಂಸ್ಥೆಗಳು ಮಕ್ಕಳನ್ನು ಮಕ್ಕಳನ್ನಾಗಿ ನೋಡಿ, ಅವರು ಆಡುತ್ತಾ, ಓಡುತ್ತಾ, ಕುಣಿದು ಕುಪ್ಪಳಿಸುತ್ತಾ ಕಲಿಯುವಂತೆ ಮಾಡಿ ಬಾಲ್ಯವನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡುವಲ್ಲಿ ಶ್ರಮಿಸಿ ಯಶಸ್ಸನ್ನೂ ಕಾಣುತ್ತದೆ. ಇಲ್ಯಾರು ಮೇಷ್ಟ್ರುಗಳಾಗೊದಕ್ಕೆ ಬಯಸೊಲ್ಲ ಬದಲಿಗೆ ಮಕ್ಕಳದೇ ಪ್ರಪಂಚದಲ್ಲಿ, ಮಕ್ಕಳೊಂದಿಗೆ ಮಕ್ಕಳಾಗಿ ಒಂದಿಷ್ಟು ಕಲಿಸಿ, ಕಲಿತು ನಿಜಾರ್ಥದಲ್ಲಿ ಶಿಬಿರವನ್ನು ಸಾರ್ಥಕ್ಯಗೊಳಿಸುವ ನಿಸ್ವಾರ್ಥ ಪ್ರಯತ್ನ ಮಾಡಿತ್ತಾರೆ. ಹೌದು. ಕುಂದಾಪುರದ ‘ಸಮುದಾಯ’ ಸಾಂಸ್ಕೃತಿಕ ಸಂಘಟನೆಯು ಕೆಲವು ವರ್ಷಗಳಿಂದ ಆಯೋಜಿಸುತ್ತಾ ಬಂದಿರುವ ‘ರಂಗ ರಂಗು’ ಬೇಸಿಗೆ ಶಿಬಿರ ಈ ಭಾರಿಯೂ ಹಲವು ವಿಶೇಷತೆಗಳಿಂದ ಕೂಡಿತ್ತು. ವಡೇರಹೋಬಳಿ ಸ.ಹಿ.ಪ್ರಾ ಶಾಲೆಯಲ್ಲಿ ಕುಂದಾಪುರ ಜೆಸಿಐ ಸಿಟಿಯ…
ಕುಂದಾಪುರ: ಪರಸ್ಪರ ಗಾಢವಾಗಿ ಪ್ರೀತಿಸುತ್ತಿದ್ದ ಪರಿಶಿಷ್ಟ ಜಾತಿಯ ಯುವಕ ಮತ್ತು ಪರಿಶಿಷ್ಟ ಪಂಗಡ (ಕೊರಗ) ಯುವತಿಗೆ ಭಾನುವಾರ ತಾಲೂಕು ಕೊರಗ ಶ್ರೇಯೋಭಿವದ್ಧಿ ಸಂಘದ ನೇತತ್ವದಲ್ಲಿ ಭಾನುವಾರ ಕುಂಭಾಸಿ ಕೊರಗ ಕಾಲೋನಿಯ ಅಂಬೇಡ್ಕರ ಭವನದಲ್ಲಿ ಮದುವೆ ನೆರವೇರಿಸಲಾಯಿತು. ಪರಿಶಿಷ್ಟ ಜಾತಿಗೆ ಸೇರಿರುವ ಹೆಮ್ಮಾಡಿಯ ನಿವಾಸಿ ಅಚ್ಯುತ(27) ಹಾಗೂ ನಾಗೂರಿನ ಕೊರಗ ಯುವತಿ ಪುಷ್ಪಾ(21) ಸತಿಪತಿಗಳಾದರು. ಪುಷ್ಪಾ ಕುಂದಾಪುರ ಖಾಸಗಿ ಆಸ್ಪತ್ರೆಯೊಂದರಲ್ಲಿ ಉದ್ಯೋಗಿ ಯಾಗಿದ್ದು ಅಚ್ಯುತ ಗಾರೆವತ್ತಿ ಮಾಡಿಕೊಂಡಿದ್ದ. 4 ವರ್ಷದ ಹಿಂದೆ ಪರಸ್ಪರ ಭೇಟಿಯಾದ ಇವರು ಪ್ರೀತಿಸಲು ಆರಂಭಿಸಿದ್ದರು. ಮದುವೆಗೆ ಮನೆಯವರ ವಿರೋಧವಿತ್ತು. ಕೊರಗ ಸಂಘಟನೆಗಳ ಗಮನಕ್ಕೆ ವಿಷಯ ತಲುಪಿದ್ದು ಸಂಘಟನೆಯವರು ಪ್ರೇಮಿ ಗಳನ್ನು ಭೇಟಿ ಮಾಡಿ ಧೈರ್ಯ ತುಂಬಿ ಮದುವೆ ಮಾಡಿಸುವ ಭರವಸೆ ನೀಡಿದರು. ಅದರಂತೆ ಅಂಬೇಡ್ಕರ್ ಭವನದಲ್ಲಿ ಸರಳ ವಿವಾಹ ನೆರವೇರಿಸಲಾಯಿತು. ಸಂಪ್ರದಾಯಿಕವಾಗಿ ನಡೆದ ಈ ಸರಳ ವಿವಾಹದಲ್ಲಿ ವರ 101 ರೂಪಾಯಿಯನ್ನು ವಧುದಕ್ಷಿಣೆಯಾಗಿ ನೀಡಿದರು. ವಧುವರರನ್ನು ಡೋಲುವಾದನದ ಮೂಲಕ ಮದುವೆ ಮಂಟಪಕ್ಕೆ ಕರೆತರಲಾಯಿತು. ಮಾಂಗಲ್ಯ ಧಾರಣೆ ಬಳಿಕ ಶುಭ…
ಬೈಂದೂರು: ಇಂದು ಮಕ್ಕಳಿಗೆ ಅವಕಾಶಗಳು ವಿಪುಲವಾಗಿ ದೊರೆಯುತ್ತಿದ್ದು ಅದನ್ನು ಸದ್ಭಳಕೆ ಮಾಡಿಕೊಂಡಲ್ಲಿ ಭವಿಷ್ಯದಲ್ಲಿ ಯಶಸ್ಸನ್ನು ಕಾಣಬಹುದಾಗಿದೆ ಎಂದು ಬೈಂದೂರು ಜೀವ ವಿಮಾ ಅಧಿಕಾರಿ ಸೋಮನಾಥನ್ ಆರ್ ಹೇಳಿದರು. ಅವರು ಬೈಂದೂರು ರಥೋತ್ಸವದ ಅಂಗವಾಗಿ ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಕಲಾ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಿರುವ ‘ಸುರಭಿ ಕಲಾಸಿರಿ’ ಸಾಂಸ್ಕೃತಿಕ ವೈಭವದಲ್ಲಿ ಜರುಗಿದ ರಂಗೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮಕ್ಕಳು ಎಲ್ಲಾ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಇಂತಹ ಮಕ್ಕಳಿಗೆ ವೇದಿಕೆಯಾಗುವಲ್ಲಿ, ಕಲೆ, ಸಂಸ್ಕೃತಿ, ಸಾಹಿತ್ತಿಕವಾದ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಮುಂಚೂಣಿಯಲ್ಲಿರುವ ಸುರಭಿ ಬೈಂದೂರಿನ ಸಾಂಸ್ಕೃತಿಕ ರಾಯಭಾರಿಯಾಗಿದೆ ಎಂದವರು ಪ್ರಶಂಸಿಸಿದರು. ಬೈಂದೂರು ಗ್ರಾ.ಪಂ ಅಧ್ಯಕ್ಷ ಜನಾರ್ಧನ ಯು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುರಭಿ ನಿರ್ದೇಶಕ ಸುಧಾಕರ ಪಿ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸುರಭಿಯ ಅಧ್ಯಕ್ಷ ಶಿವರಾಮ ಕೊಠಾರಿ ಸ್ವಾಗತಿಸಿ, ಕಾರ್ಯದರ್ಶಿ ಲಕ್ಷ್ಮಣ ಕೊರಗ ವಂದಿಸಿದರು. ಸುರಭಿಯ ನಿರ್ದೇಶಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು.…
ಕೊಲ್ಲೂರು: ಶಂಕರಾಚಾರ್ಯರ ತಪೋಭೂಮಿಯಾದ ಕೊಡಚಾದ್ರಿಯಲ್ಲಿ ಎ. 23ರಂದು ವಿಶೇಷ ಪೂಜೆಯೊಡನೆ ಶಂಕರ ಜಯಂತಿ ನಡೆಯಿತು. ಕೊಡಚಾದ್ರಿ ಪರಿಸರ ಸಂರಕ್ಷಣಾ ಸಮಿತಿ ಗೌರವಾಧ್ಯಕ್ಷ ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗಿತು. ಈ ಸಂದರ್ಭ ಮಾತನಾಡಿದ ಕೇಮಾರು ಸ್ವಾಮೀಜಿ, ಶಂಕರಾಚಾರ್ಯರ ತಪೋಭೂಮಿಯಾದ ಕೊಡಚಾದ್ರಿಯ ಸರ್ವಜ್ಞ ಪೀಠ ಬಹಳ ಮಹತ್ವದ್ದಾಗಿದೆ. ಶ್ರೀದೇವಿಯನ್ನು ಸಾಕ್ಷಾತ್ಕಾರಗೊಳಿಸಿದ ಶ್ರೇಷ್ಠ ಋಷಿ ಮುನಿಗಳಲ್ಲಿ ಶಂಕರಾಚಾರ್ಯರು ಓರ್ವರಾಗಿದ್ದು, ಅವರ ಭಗವತ್ ಭಕ್ತಿ, ಧಾರ್ಮಿಕ ಶ್ರದ್ದೆ ಪ್ರತಿಯೋರ್ವರಿಗೂ ದಾರಿದೀಪ. ಇಂತಹ ಶ್ರೇಷ್ಠ ಪರಂಪರೆಯ ವ್ಯಕ್ತಿತ್ವ ಹೊಂದಿರುವ ಶಂಕರಾಚಾರ್ಯರನ್ನು ವರುಷಕ್ಕೊಮ್ಮೆ ಶಂಕರ ಜಯಂತಿಯಂದು ನೆನಪಿಸಿ ಸದ್ಭಕ್ತಿಯಿಂದ ಧ್ಯಾನಿಸಿ ಪೂಜಿಸಿದಲ್ಲಿ ಪ್ರತಿಯೋರ್ವರಿಗೂ ಶ್ರೇಯಸ್ಸಾಗುವುದು ಎಂದರು. ಕೊಡಚಾದ್ರಿ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಕೆ.ಕೆ. ಸಾಬೂ, ಖಜಾಂಚಿ ನಾಗೇಂದ್ರ ಜೋಗಿ, ಅಲ್ಲಿನ ದೇವಸ್ಥಾನದ ಅಧ್ಯಕ್ಷ ಶಿವರಾಮ ಶೆಟ್ಟಿ, ಹರೀಶ್ ತೋಳಾರ್, ವಿನೋದ್ ಹೆಬ್ಟಾರ್ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭ ಚಿತ್ರಮೂಲದ ಅಗಸ್ತ್ಯ ಗುಹೆಗೆ ತೆರಳಿ ಅಲ್ಲಿನ ಪರ್ವತೇಶ್ವರೀ ಗಂಭೀರನಾಥ ಇನ್ನಿತರ ದೇವಾಲಯಗಳಲ್ಲಿ ಪ್ರಾರ್ಥನೆ ಹಾಗೂ…
ಬೈಂದೂರು: ವರ್ಷಪೂರ್ತಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಸುರಭಿ ಸಂಸ್ಥೆ ಬೈಂದೂರಿನ ಜನರನ್ನು ಸಾಂಸ್ಕೃತಿಕ ವೈಭವದಲ್ಲಿ ಮಿಂದೇಳುವಂತೆ ಮಾಡಿದೆ ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಸುರಭಿ ರಿ. ಬೈಂದೂರು ಇಲ್ಲಿನ ಶಾರದಾ ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಿರುವ ನಾಲ್ಕು ದಿನಗಳ ಸುರಭಿ ಕಲಾಸಿರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಭಾಗದ ವಿದ್ಯಾರ್ಥಿಗಳನ್ನೂ ಸಹ ಸಾಂಸ್ಕೃತಿಕವಾಗಿ ಅಣಿಗೊಳಿಸುತ್ತಿರುವ ಹಿರಿಮೆ ಈ ಸಂಸ್ಥೆಯದ್ದು ಎಂದು ಅವರು ನುಡಿದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಕುಂದಾಪುರ ತಾ. ಪಂ. ಸದಸ್ಯ ರಾಜು ಪೂಜಾರಿ ಮಾತನಾಡಿ ರಥೋತ್ಸವದಿಂದ ಮಾತ್ರ ಬೈಂದೂರಿನ ಜಾತ್ರೆ ಪೂರ್ಣಗೊಂಡಂತಾಗುವುದಿಲ್ಲ. ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ಜಾತ್ರೆ ವಿಶಿಷ್ಟವಾಗಿ ಮೂಡಿಬರುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜನಸಾಮಾನ್ಯರು ಪಾಲ್ಗೊಂಡು ಊರಿನ ಅಭಿವೃದ್ಧಿಯ ಬಗೆಗೆ ಚಿಂತಿಸುವಂತಾಗಬೇಕಿದೆ ಎಂದರು. ಬೈಂದೂರು ಶ್ರಿ ಸೇನೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಚನ್ನಕೇಶವ ಉಪಧ್ಯಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೌಖ್ಯ ಶಿಕ್ಷಣ ಸಂಸ್ಥೆಯ ರಿಯಾಜ್ ಅಹಮ್ಮದ್ ಅತಿಥಿಯಾಗಿ…
ಕುಂದಾಪುರ: ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ 5ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಶುಕ್ರವಾರ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ಜರುಗಿತು. ಬಿಲ್ಲವ ಸಮಾಜದ ನಾಗರಾಜ- ಶ್ರೀಲತಾ, ಮಯೂರ- ರೇಖಾ, ಗಣೇಶ- ಅಕ್ಷತಾ, ದಿನೇಶ್- ಆಶ್ವಿನಿ, ಗಿರೀಶ- ಲಕ್ಷ್ಮೀ ಜೋಡಿ ಹಸೆಮಣೆಗೇರಿದರು. ವರ-ವಧುವಿಗೆ ಬೇಕಾದ ದೋತಿ, ಶಾಲು, ಪೇಟಾ, ಹೂವಿನಮಾಲೆ, ಧಾರೆಸೀರೆ, ರವಿಕೆ ಕಣ, ಬಾಸಿಂಗ, ಮಂಗಳಸೂತ್ರ ಉಚಿತವಾಗಿ ನೀಡಲಾಯಿತು. ವಧು ವರರ ಕಡೆಯವರಿಗೆ ಸುಗ್ರಾಸ ಭೋಜನ ವ್ಯವಸ್ಥೆ ನಡೆಸಲಾಯಿತು. ಐವರು ಜೋಡಿಗಳ ಪೈಕಿ ಗಿರೀಶ ಮತ್ತು ಲಕ್ಷ್ಮೀ ಜೋಡಿ ಗಮನ ಸೆಳೆಯಿತು. ವಿಕಲಾಚೇತನೆ ಲಕ್ಷ್ಮೀಯವರ ಕೈಹಿಡಿಯುವ ಮೂಲಕ ಗಿರೀಶ್ ಗಮನ ಸೆಳೆದರು. ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್.ಟಿ.ಪೂಜಾರಿ, ನಾರಾಯಣಗುರು ಯುವಕ ಮಂಡಲ ಅಧ್ಯಕ್ಷ ಡುಂಡಿರಾಜ್ ಹಟ್ಟಿಕುದ್ರು, ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಲಲಿತಾ ಸುವರ್ಣ ಉಪಸ್ಥಿತರಿದ್ದರು. ಮುಂಬೈ ಉದ್ಯಮಿ ಭೋಜರಾಜ, ಪುರುಷೋತ್ತಮ ಮುಂಬೈ, ಶಾರದಾ ಕರ್ಕೇರಾ, ಬಾಬುಶಿವ ಪೂಜಾರಿ, ಕುಂದಾಪುರ…
ಬೈಂದೂರು: ಹಳೆ ದ್ವೇಷದ ಹಿನ್ನಲೆಯಲ್ಲಿ ಅಂಗಡಿಯೊಂದರ ಬಳಿ ನಿಂತಿದ್ದ ಯುವಕನೋರ್ವನ ಮೇಲೆ ಏಕಾಏಕಿ ದಾಳಿ ನಡೆಸಿದ ನಾಲ್ವರ ತಂಡ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ತಗ್ಗರ್ಸೆ ಗ್ರಾಮದಲ್ಲಿ ವರದಿಯಾಗಿದೆ. ತಗ್ಗರ್ಸೆಯ ರವಿಂದ್ರ ಗಾಣಿಗ(31) ಹಾಗೂ ಅವರ ಸಹೋದರ ಕೃಷ್ಣ ಗಾಣಿಗ ಅಂಗಡಿಯ ಬಳಿ ನಿಂತಿದ್ದಾಗ ಬೈಕಿನಲ್ಲಿ ಬಂದ ತಗ್ಗರ್ಸೆಯವರೇ ಆದ ಶಶಿಧರ ಹುದಾರ್, ರಾಜು ಹುದಾರ್ ಎಂಬುವವರು ರವೀಂದ್ರನನ್ನು ತಡೆದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೆನ್ನೆಗೆ ಬಾರಿಸಿದ್ದಲ್ಲದೇ ರಾಡ್ ನಿಂದ ಕಾಲುಗೆ ಹೊಡೆದಿದ್ದಾರೆ. ಆ ಸಮಯದಲ್ಲಿ ತಪ್ಪಿಸಲು ಹೋದ ಕೃಷ್ಣ ಎಂಬುವವರಿಗೂ ಅಲ್ಲಿಗೆ ಬಂದ ನೀಲಕಂಠ ಹುದಾರ್ ಹಾಗೂ ಜಯರಾಜ ಹುದಾರ್ ಎಂಬುವವರು ಕೆನ್ನೆ ಹಾಗೂ ಮೈಕೈಗೆ ಗುದ್ದಿ, ಇಬ್ಬರಿಗೂ ಕೊಲೆ ಬೆದರಿಕೆ ಹಾಕಿದ್ದಾರೆ. ಹಳೆ ವೈಶಷ್ಯವೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಕೆ ನಡೆಸುತ್ತಿದ್ದಾರೆ.
ಕುಂದಾಪುರ: ತಾಲೂಕಿನ ಕೆಂಚನೂರು ಗ್ರಾಮದ ಇಬ್ಬರು ಅಪ್ರಾಪ್ತ ಹೆಣ್ಣ ಮಕ್ಕಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ವರದಿಯಾಗಿದೆ. ಅದೇ ಗ್ರಾಮದ ತಿಮ್ಮ(38) ಎಂಬಾತ ಈ ದುಷ್ಕೃತ್ಯ ಎಸಗಿದ್ದು, ದೂರಿನ ಆಧಾರದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿವರ: ಕೆಂಚನೂರು ಗ್ರಾಮದ ಕಂಬಳಗದ್ದೆ ಎಂಬಲ್ಲಿಯ ಅಕ್ಕಪಕ್ಕದ ಮನೆಯ ನಾಲ್ಕು ಹಾಗೂ ಐದನೇ ತರಗತಿಗೆ ಸೇರಿರುವ ಮಕ್ಕಳಿಬ್ಬರು ಮನೆಯಲ್ಲಿ ಆಟವಾಡುತ್ತಿದ್ದಾಗ, ಕದ್ರಿಗುಡ್ಡೆಯ ತಿಮ್ಮ ಎಂಬಾತ ಅಲ್ಲಿಗೆ ಬಂದು ಮಕ್ಕಳಿಗೆ ಸಿನೆಮಾ ತೋರಿಸುವುದಾಗಿ ಆಮಿಷವೊಡ್ಡಿ ಮನೆಗೆ ಕರೆದೊದಿದ್ದಾನೆ. ಅಲ್ಲಿ ಸಿನೆಮಾ ತೋರಿಸುವ ಬದಲು ತನ್ನ ಮೊಬೈಲ್ ನಲ್ಲಿದ್ದ ಅಶ್ಲೀಲ ಚಿತ್ರಗಳನ್ನು ತೋರಿಸಿ, ಮಕ್ಕಳಿಬ್ಬರಿಗೂ ಹಾಗೆಯೇ ಮಾಡುವಂತೆ ಬಲವಂತ ಮಾಡಿದ್ದಾನೆ. ಈತನ ದುಷ್ಕೃತ್ಯದಿಂದ ಮಕ್ಕಳು ದೈಹಿಕವಾಗಿ ಬಳಲಿದ್ದರು. ಸಂಜೆಯ ವೇಳೆಗೆ ಮನೆಗೆ ಬಂದ ತಾಯಿಯ ಮಕ್ಕಳ ಸ್ಥಿತಿಯನ್ನು ನೋಡಿ ಪ್ರಶ್ನಿಸಿದಾಗ, ಮಕ್ಕಳು ನಡೆದ ವಿಚಾರವನ್ನು ವಿವರಿಸಿದ್ದಾರೆ. ತಕ್ಷಣ ಸ್ಥಳೀಯರ ಮೂಲಕ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಆರೋಪಿ ತಿಮ್ಮನನ್ನು ಬಂಧಿಸಿ ಆತನ ಬಳಿ ಇದ್ದ ಮೊಬೈಲನ್ನು ವಶಪಡಿಸಿಕೊಂಡಿದ್ದಾರೆ.…
ಕುಂದಾಪುರ: ಸಮುದ್ರದ ಆಳದಲ್ಲಿ ಈಜಲು ತರಬೇತಿಗೆ ಬಂದ ಹೈದರಾಬಾದ್ ಮೂಲದ ಎಂಜಿನಿಯರ್ ಯುವತಿಗೆ ತರಬೇತಿ ನೀಡುತ್ತಿರುವಾಗಲೇ ಕಿರುಕುಳ ನೀಡಿದ ಪ್ರಕರಣ ಸಾಮಾಜಿಕ ತಾಣದ ಮೂಲಕ ಬೆಳಕಿಗೆ ಬಂದಿದ್ದು, ಪ್ರಕರಣ ಗಂಭೀರತೆ ಅರಿತ ಜಿಲ್ಲಾ ಪೊಲೀಸ್ ಇಲಾಖೆ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಚಾರ್ಚ್ ಶೀಟ್ ಸಲ್ಲಿಸಿದ ಘಟನೆ ಇತ್ತಿಚಿಗೆ ವರದಿಯಾಗಿದೆ. ಏನಿದು ಪ್ರಕರಣ: ಮುರ್ಡೇಶ್ವರದಲ್ಲಿ ಕಾರ್ಯಾಚರಿಸುತ್ತಿರುವ ಡ್ರಿಮ್ಝ್ ಸ್ಕೂಬಾ ಡ್ರೈವಿಂಗ್ ಸಂಸ್ಥೆಯಲ್ಲಿ ಮೂಲಕ ಆಳ ಸಮುದ್ರದ ಈಜು ತರಬೇತಿಗಾಗಿ ಕುಂದಾಪುರ ತಾಲೂಕಿನ ಶಿರೂರಿಗೆ ತನ್ನ ಸಹೋದ್ಯೋಗಿಗಳೊಂದಿಗೆ 2015ರ ಜನವರಿ 26ರಂದು ಆಗಮಿಸಿದ್ದ ಹೈದರಬಾದ್ ಮೂಲದ, ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಐಟಿ ಎಂಜಿನೀಯರ್ ಆಗಿರುವ ಯುವತಿಗೆ ತರಬೇತಿ ನೀಡಲು, ಡ್ರಿಮ್ಝ್ ಸ್ಕೂಬಾ ಡ್ರೈವಿಂಗ್ ಸಂಸ್ಥೆಯ ನಿರ್ದೇಶಕನಾಗಿರುವ ಉತ್ತರಖಾಂಡ ಮೂಲಕ ಧೀರೇಂದ್ರ ರಾವತ್ ಎಂಬುವವನು ಬಂದಿದ್ದ. ಸಮುದ್ರದ ಮಟ್ಟದಿಂದ 12ಮೀಟರ್ ಕೆಳಗೆ ಡೈವಿಂಗ್ ತರಬೇತಿ ನೀಡುತ್ತಿದ್ದ ವೇಳೆ ಯುವತಿಗೆ ಕಿರುಕುಳ ನೀಡಿದ ಬಗ್ಗೆ ಸ್ವತಃ ಯುವತಿ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅದರಂತೆ ಆರೋಪಿಯ…
