ಸಡಗರ, ಸಂಭ್ರಮದ ಕ್ರಿಸ್‌ಮಸ್ ಮತ್ತೆ ಬಂದಿದೆ. ಶುಭಾಶಯ ವಿನಿಮಯ, ಉಡುಗೊರೆ, ಸಂಗೀತ, ಚರ್ಚ್ ಗಳಲ್ಲಿ ಉತ್ಸವ, ವಿಶೇಷ ಭೋಜನ, ತಿಂಡಿ-ತಿನಿಸುಗಳಿಂದ ಮನೆಗಳನ್ನು ಉತ್ಸವವಾಗಿಸುವ; ಗೋದಲಿ-ಕ್ರಿಸ್‌ಮಸ್ ಟ್ರೀ ಮೊದಲಾದವುಗಳನ್ನು ದೀಪದಿಂದ ಅಲಂಕರಿಸಿ, ಕ್ರಿಸ್ಮಸ್ ತಾತ ‘ಸಾಂತಾ ಕ್ಲಾಸ್’ರನ್ನು ಬರಮಾಡುವ, ‘ಕ್ರಿಸ್ಮಸ್ ಟೈಡ್’ನ್ನು ಸಂಭ್ರಮ-ಪ್ರಾರ್ಥನೆಗಳಿಂದ ತುಂಬಿತುಳುಕಿಸುವ ವಾರ್ಷಿಕ ಪರ್ವ ಇದು. ಕ್ರಿಸ್‌ಮಸ್ ಇತಿಹಾಸ ವಿಶ್ವಾದ್ಯಂತ ಈ ದಿನವನ್ನು ಕ್ರೈಸ್ತ ಧರ್ಮದಲ್ಲಿ ದೇವಪುತ್ರ ಎಂದು ನಂಬಲಾಗಿರುವ ಏಸುವಿನ ಜನ್ಮದಿನವಾಗಿ ಆಚರಿಸ ಲಾಗುತ್ತಿದೆ. ಆದರೆ, ಮೂಲತಃ ಏಸುಕ್ರಿಸ್ತ ಹುಟ್ಟಿದ ನಿಖರ ದಿನಾಂಕದ ಬಗ್ಗೆ ವಿವಿಧ ವಾದಗಳಿವೆ. ಆದಾಗ್ಯೂ, ಹಳೆ ಕಾಲದ ಕ್ರಿಸ್ತನ ಅನುಯಾಯಿಗಳು ಪಾಲಿಸುತ್ತಿದ್ದ ಪ್ರಾಚೀನ ರೋಮನ್ ಕ್ಯಾಲೆಂಡರ್‌ನ ಪ್ರಕಾರ ಉತ್ತರಾಯಣ ಸಂಕ್ರ ಮಣದ 9 ತಿಂಗಳ ಬಳಿಕ(ಅಂದರೆ, ಕ್ರಿಸ್ತನ ಪುನರುಜ್ಜೀವನ ವಾಗಿರುವುದೆಂದು ನಂಬಲಾಗಿರುವ ಮಾರ್ಚ್ 25ರ ಒಂಬತ್ತು ತಿಂಗಳ ಬಳಿಕ) ಅಥವಾ ಪ್ರಾಚೀನ ಚಳಿಗಾಲದಲ್ಲಿನ ಒಂದು ಹಬ್ಬದ ಸಮಯದಲ್ಲಿ ಬೆತ್ಲಹೆಮ್ ನಲ್ಲಿನ ಹಟ್ಟಿಯೊಂದರಲ್ಲಿ ಕನ್ಯಾ ಮೇರಿಯು ಏಸುಕ್ರಿಸ್ತುವಿಗೆ ಜನ್ಮ ನೀಡಿದಳು. ಕ್ರಿಸ್‌ಮಸ್ ಆಚರಣೆ: ಕ್ರಿಸ್‌ಮಸ್ ದಿನಾಚರಣೆ…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ನ.27: ತಾಲೂಕಿನ ಯಡ್ತರೆ ಸಮೀಪದ ರಾಹುತನಕಟ್ಟೆ ಹಾಗೂ ನಾಕಟ್ಟೆ ಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ನಡೆದ ನಾಲ್ಕು ಪ್ರತ್ಯೇಕ ಅಪಘಾತದಲ್ಲಿ ನಾಲ್ಕು ದನಗಳು ಸಾವನ್ನಪ್ಪಿದ್ದು, ಎರಡು ದನಗಳು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿರುವ ಘಟನೆ ನಡೆದಿದೆ. ರಾಹುತನಕಟ್ಟೆ ಬಳಿ ಶನಿವಾರ ರಾತ್ರಿ ವೇಳೆಗೆ ಎರಡು ಪ್ರತ್ಯೇಕ ಅಪಘಾತಗಳು ನಡೆದು ಎರಡು ದನಗಳು ಮೃತಪಟ್ಟು ಎರಡು ದನಗಳಿಗೆ ಗಾಯಗಳಾಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬೈಕ್ ಹಾಗೂ ಕಾರಿಗೆ ದನಗಳು ಅಡ್ಡಬಂದು ಅಪಘಾತ ನಡೆದಿತ್ತು. ದನಗಳಿಗೆ ಸಣ್ಣಪುಟ್ಟ ಗಾಯಗೊಂದಿಗೆ ಪಾರಾಗಿದ್ದವು. ಬೈಕ್ ಹಾಗೂ ಕಾರಿಗೂ ಹಾನಿಯಾಗಿತ್ತು. ಆ ಬಳಿಕ ಮುರ್ಡೇಶ್ವರಕ್ಕೆ ತೆರಳುತ್ತಿದ್ದ ಟೆಂಪೋ ಟ್ರಾವೆಲರ್‌ಗೆ ಎರಡು ದನಗಳು ಅಡ್ಡ ಬಂದು ಡಿಕ್ಕಿ ಹೊಡೆದಿದ್ದು, ಎರಡೂ ದನಗಳೂ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಟಿಟಿ ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿತ್ತು. ನಾಕಟ್ಟೆ ಅಂಬಿಕಾ ಉಪಹಾರ ಹೋಟೆಲ್ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಂದೂರು ಹಾಗೂ ಯಡ್ತರೆ ಕಡೆಗೆ ತೆರಳುವ ಎರಡೂ ಮಾರ್ಗದಲ್ಲಿ ಬೇರೆ ಬೇರೆ ವಾಹನಕ್ಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಗಳ ಅಧ್ಯಕ್ಷ ವಕ್ವಾಡಿ ಪ್ರವೀಣ ಕುಮಾರ್ ಶೆಟ್ಟಿ ಅವರಿಗೆ ಪ್ರಸಕ್ತ ಸಾಲಿಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ. ದುಬೈ ಹಾಗೂ ಫುಜೈರಾ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ನಡೆಸುತ್ತಿರುವ ಪ್ರವೀಣ್ ಕುಮಾರ್ ಶೆಟ್ಟಿ ಅವರು ಇತ್ತಿಚಿಗೆ ಹುಟ್ಟೂರಿನಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ್ದರು. ಹೊರನಾಡ ಕನ್ನಡಿಗರು, ಕನ್ನಡಿಗ ಸಂಸ್ಥೆಗಳ ಹಾಗೂ ಊರಿನ ಹತ್ತಾರು ಸಂಘ ಸಂಸ್ಥೆಗಳಿಗೆ ಪ್ರವೀಣ ಕುಮಾರ್ ಶೆಟ್ಟಿ ಅವರು ನೆರವು ನೀಡುತ್ತಲೇ ಬಂದಿದ್ದಾರೆ. ಕೋವಿಡ್ ಮೊದಲ ಅಲೆಯ ಸಂದರ್ಭ ಕನ್ನಡಿಗರಿಗೆ ಪ್ರವೀಣ್ ಶೆಟ್ಟಿ ಅವರು ಸ್ವಂತ ಖರ್ಚಿನಲ್ಲಿ ಚಾರ್ಟರ್ಡ್ ವಿಮಾನದ ಮೂಲಕ ತಾಯ್ನಾಡಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದರು. ಮಾತ್ರವಲ್ಲ ತನ್ನ ಹೋಟೆಲ್ ಮುಚ್ಚಿದ್ದರೂ ಕೂಡ ಎಲ್ಲಾ ಸಿಬ್ಬಂದಿಗಳಿಗೆ ರಜೆ ಸಹಿತ ವೇತನ ನೀಡಿ ಪ್ರವೀಣ್ ಶೆಟ್ಟಿ ಮಾನವೀಯತೆ ಮೆರೆದಿದ್ದರು. ಎರಡನೇ ಅಲೆಯ ವೇಳೆ ಪುಡ್ ಕಿಟ್’ಗಳನ್ನು ವಿತರಿಸಿದ್ದರು. ಜುಲೈ 6, 1967 ರಂದು ಜನಿಸಿದ ಪ್ರವೀಣ ಶೆಟ್ಟಿ ಅವರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬಡಗುತಿಟ್ಟು ಯಕ್ಷರಂಗದ ಅಪ್ರತಿಮ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ಯ ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ. ಇಳಿವಯಸಿನಲ್ಲಿಯೂ ದಣಿವು ಅರಿಯದ ಚಿರಯುವಕ. ರಂಗಕ್ಕೆ ಅಡಿ ಇಡುತ್ತಲೆ ಮಿಂಚಿನ ಸಂಚಾರ. 65ರ ಅಭಿಮನ್ಯುನಾಗಿ ವೇಷಕಟ್ಟಿದರೂ 20ರ ಅಭಿಮನ್ಯುವಾಗಿ ಅಭಿಮಾನಿ ವರ್ಗದವರಿಗೆ ಸಿಡಿಲಮರಿಯಾಗಿ ಕಾಣಿಸಿಕೊಳ್ಳುವ ಯಕ್ಷರಂಗದ ಅಗ್ರಣಿಗೆ ಪ್ರಶಸ್ತಿ ಒಲಿದು ಬಂದಿರುವುದು ಅವರ ಅಭಿಮಾನಿಗಳಿಗೆ ಸಂತಸ ಉಂಟುಮಾಡಿದೆ. ಗೋಪಾಲ ಆಚಾರ್ಯ ಅವರು ಮಲೆನಾಡಿನ ತೀರ್ಥಹಳ್ಳಿಯ ಕುರುವಳ್ಳಿಯಲ್ಲಿ ವಾಸುದೇವ ಆಚಾರ್ಯ ಹಾಗೂ ಸುಲೋಚನಾ ದಂಪತಿಗಳ 5 ಮಕ್ಕಳಲ್ಲಿ ಎರಡನೆಯವರು. ತನ್ನ ಮೂಲ ಕಸುಬಾದ ಬಡಗಿ ವೃತ್ತಿಯನ್ನು ಬಿಟ್ಟು ಬಡಗುತಿಟ್ಟಿನ ಯಕ್ಷಗಾನವನ್ನು ಆರಿಸಿಕೊಂಡರು. ಊರು ತೀರ್ಥಹಳ್ಳಿಯಾದರೂ ಯಕ್ಷರಂಗದ ಹಾದಿಯನ್ನು ಆಯ್ಕೆ ಮಾಡಿಕೊಂಡದು ಯಕ್ಷಕಾಶಿ ಎನಿಸಿಕೊಂಡ ಕುಂದಾಪುರವನು. ಬೈಂದೂರಿನ ಸಮೀಪದ ನಾಯಕನಕಟ್ಟೆಯಲ್ಲಿ ವಾಸವಾಗಿರುವ ತೀರ್ಥಹಳ್ಳಿ ಯವರು ಓದಿದ್ದು 3ನೇ ತರಗತಿ ಆದರೂ ಅವರ ವಾಗ್ಭಂಢಾರ ಅಪಾರ. ಯಕ್ಷರಂಗದ ಒಂದೊಂದೇ ಮೆಟ್ಟಿಲೇರಿ ಅದ್ಭುತ ನೃತ್ಯ,ಲಯಬದ್ಧ ಹೆಜ್ಜೆಗಾರಿಕೆ ಸಭ್ಯ ಹಾಗೂ ಸುಸ್ಪಷ್ಟ ಮಾತುಗಾರಿಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: 2021ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದು ವಿವಿಧ ಕ್ಷೇತ್ರಗಳ ಒಟ್ಟು 35 ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಈ ಪೈಕಿ ಕುಂದಾಪುರ ತಾಲೂಕಿನ ಡಾ. ದಿನೇಶ್ ಶೆಟ್ಟಿ ಅವರಿಗೆ ಸಂಕೀರ್ಣ ಕ್ಷೇತ್ರದಲ್ಲಿ, ಕೆ. ತಿಲಕರಾಜ್ ಬಳ್ಕೂರು ಅವರಿಗೆ ರಂಗಭೂಮಿ ಕ್ಷೇತ್ರದಲ್ಲಿ ಸಾಯಿನಾಥ್ ಶೇಟ್ ಅವರಿಗೆ ಸಮಾಜ ಸೇವೆ ಕ್ಷೇತ್ರ, ಶಿವಾನಂದ ತಲ್ಲೂರು ಅವರಿಗೆ ಸಮಾಜ ಸೇವೆ ಕ್ಷೇತ್ರ, ಡಾ. ಪಾರ್ವತಿ ಜಿ. ಐತಾಳ್ ಅವರಿಗೆ ಸಾಹಿತ್ಯ ಕ್ಷೇತ್ರ, ಆರಾಧ್ಯ ಎಸ್. ಶೆಟ್ಟಿ ಅವರಿಗೆ ಕಲಾ ಕ್ಷೇತ್ರದಲ್ಲಿ ಪ್ರಶಸ್ತಿ ದೊರೆತಿದೆ. ಬೈಂದೂರು ತಾಲೂಕಿನ ರಾಮ ಟೈಲರ್ ಅವರಿಗೆ ರಂಗಭೂಮಿ ಕ್ಷೇತ್ರದಲ್ಲಿ, ಬಾಲಕೃಷ್ಣ ಮದ್ದೋಡಿ ಅವರಿಗೆ ಸಾಮಾಜಿಕ ಸೇವಾ ಕ್ಷೇತ್ರ, ಶ್ರೀಧರ ಗಾಣಿಗ ಉಪ್ಪುಂದ ಯಕ್ಷಗಾನ ಕ್ಷೇತ್ರ, ಕುಷ್ಟ ಕೊರಗ ಹೇರೂರು ಕಲಕುಶಲ ಕ್ಷೇತ್ರ, ಎನ್. ರಮಾನಂದ ಪ್ರಭು ಅವರಿಗೆ ಸಮಾಜ ಸೇವೆ ಕ್ಷೇತ್ರದಲ್ಲಿ ಪ್ರಶಸ್ತಿ ದೊರೆತಿದೆ. ವಿವಿಧ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದ ಜಿಲ್ಲೆಯ ಸಾಧಕರು ಹಾಗೂ ಸಂಘಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಅ.29: ಇಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದ ಕನ್ನಡದ ಖ್ಯಾತ ನಟ, ಪವರ್ ಸ್ಟಾರ್ ಪುನಿತ್ ರಾಜಕುಮಾರ್ ಅವರು ಕುಂದಾಪುರಕ್ಕೆ ಹಲವು ಭಾರಿ ಭೇಟಿ ನೀಡಿದ್ದಲ್ಲದೇ, ಕುಂದಾಪುರದ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದರು. 2017ರಲ್ಲಿ ಕುಂದಾಪುರಕ್ಕೆ ಭೇಟಿ ನೀಡಿದ್ದ ವೇಳೆ ಪುನಿತ್ ರಾಜಕುಮಾರ್ ಅವರು ಕುಂದಾಪುರದಲ್ಲಿ ನನಗೆ ಅನೇಕ ಗೆಳೆಯರಿದ್ದಾರೆ. ಇಲ್ಲಿಯ ಜನ ಸಜ್ಜನರು. ಕುಂದಾಪುರ ಚಿಕನ್, ಮೀನು ಫ್ರೈ, ನೀರ್ದೋಸೆ ಸೂಪರ್. ಹಾಗೆನೇ ಇಲ್ಲಿನ ಪರಿಸರ ಕೂಡ ಅದ್ಭುತ… ಎಂದು ಅಭಿಮಾನದಿಂದಲೇ ಉದ್ಗರಿಸಿದ್ದರು. ಅಂದು ಮಾಧ್ಯಮದವರೊಂದಿಗೆ ಮನಬಿಚ್ಚಿ ಮಾತನಾಡಿದ್ದ ಪುನಿತ್, ಕರಾವಳಿಗೂ ನಮ್ಮ ಕುಟುಂಬಕ್ಕೂ ದೊಡ್ಡ ನಂಟಿದೆ. ತಂದೆಯವರು ಕರಾವಳಿ ಜನರ ಪ್ರೀತಿಗೆ ಪಾತ್ರರಾದವರು. ಚಿಕ್ಕವನಿದ್ದಾಗ ಅವರೊಂದಿಗೆ ಈ ಭಾಗದಲ್ಲಿ ಶೂಟಿಂಗ್ ವೇಳೆ ಭಾಗವಹಿಸಿದ್ದೆ. ಒಂದು ಮುತ್ತಿನ ಕಥೆ, ಶ್ರಾವಣ ಬಂತು, ಅನುರಾಗ ಅರಳಿತು, ಅಪೂರ್ವ ಸಂಗಮ ಮೊದಲಾದ ತಂದೆಯವರು ನಟಿಸಿದ ಸಿನಿಮಾಗಳು ಈ ಭಾಗದಲ್ಲಿ ಚಿತ್ರೀಕರಣಗೊಂಡಿದ್ದರಿಂದ ಇಲ್ಲಿನ ಪರಿಚಯ ಚೆನ್ನಾಗಿಯೇ ಇದೆ. ಧರ್ಮಸ್ಥಳ, ಸುಬ್ರಹ್ಮಣ್ಯ,…
ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ಓಂ ನಮೋ ಭಗವತೇ ವಾಸುದೇವಾಯ ಧನ್ವಂತರಯೇ ಅಮೃತ ಕಲಶಹಸ್ತಾಯ… ಹೀಗೆ ಸಂಗೀತದ ಲಯದೊಂದಿಗೆ ಮಂತ್ರೋಚ್ಛರಿಸಿ ಧನ್ವಂತರಿ ಯಾಗ ನಡೆಸಿದ ವಿನೂತನ ಪರಿಕಲ್ಪನೆಗೆ ತಾಲೂಕಿನ ಆಲೂರು ಚಿತ್ರಕೂಟ ಆಯುವೇದ ಚಿಕಿತ್ಸಾಲಯ ಸಾಕ್ಷಿಯಾಗಿದೆ. ಪ್ರಪಂಚದಾದ್ಯಂತ ನಡೆಯುತ್ತಿರುವ ಸಂಗೀತ ಥೆರಪಿಯಿಂದ ಪ್ರೇರಿತರಾಗಿ ವಿಶ್ವದಲ್ಲಿಯೇ ಮೊದಲ ಭಾರಿಗೆಂಬಂತೆ ಮಂತ್ರದ ಜೊತೆಗೆ ಸಂಗೀತ ಸೇರಿಸಿ ಧನ್ವಂತರಿ ಹೋಮ ನಡೆಸುವ ನಿಶ್ಚಯವನ್ನು ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಪ್ರವರ್ತಕ ವೈದ್ಯ ಡಾ. ರಾಜೇಶ್ ಬಾಯರಿ – ಡಾ. ಅನುಲೇಖಾ ಬಾಯರಿ ಅವರು ಕೈಗೊಂಡರು. ಹೋಮದ ಕಿರಣ ಹಾಗೂ ಸಂಗೀತದ ತರಂಗಗಳು ಅನಾರೋಗ್ಯ ಪೀಡಿತರ ಮೇಲೆ ಬೀರಬಹುದಾದ ಪರಿಣಾಮದ ಅಧ್ಯಯನ ಮಾಡುವ ಉದ್ದೇಶದೊಂದಿಗೆ ಶ್ರೀ ಶಂಕರಾಭರಣ ಧರ್ಮ ಸಂಸ್ಕೃತಿ ಪ್ರತಿಷ್ಠಾನಮ್ ಅವರ ಮುಂದಾಳತ್ವದಲ್ಲಿ ‘ವೇದನಾದೌಷದ ತರಂಗಿಣಿ’ ಎನ್ನುವ ಕಾರ್ಯಕ್ರಮದ ಆಯೋಜಿಸಿದರು. ವೇದ ಮಂತ್ರಗಳನ್ನು ಪಠಿಸುವ ಜೊತೆಗೆ ಹಾರ್ಮೋನಿಯಂ ಮೂಲಕವೂ ಕರ್ಣಾಟಕಿ ಸಂಗೀತದ ರೇವತೀ ರಾಗ ಹಾಗೂ ಹಿಂದುಸ್ಥಾನಿ ಸಂಗೀತದ ಭೈರಾಗಿ ಬೈರವ ರಾಗದ ಪನಿಸರಿ ಎಂಬ ನಾಲ್ಕು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನವದೆಹಲಿಯ ಆಲ್ ಇಂಡಿಯಾ ಬ್ಯುಸಿನೆಸ್ ಡೆವೆಲಪ್‌ಮೆಂಟ್ ಅಸೋಸಿಯೇಷನ್ ಕೊಡಮಾಡುವ ’ಕ್ಯಾಟರಿಂಗ್ ಕಂಪೆನಿ ಆಫ್ ದಿ ಇಯರ್ ಆವಾರ್ಡ್’ ಪ್ರಶಸ್ತ ಸಾಲಿನಲ್ಲಿ ಶೆಫ್‌ಟಾಕ್ ಫುಡ್ & ಹಾಸ್ಟಿಟಾಲಿಟಿ ಸರ್ವಿಸಸ್ ಪ್ರೈ. ಲಿ ಸಂಸ್ಥೆಗೆ ದೊರೆತಿದೆ. ಆಹಾರೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಲಾಗಿರುವ ವಿಶೇಷ ಸೇವೆ ಹಾಗೂ ದೇಶದ ಆರ್ಥಿಕತೆ ಮತ್ತು ಸಮಾಜದ ಅಭಿವೃದ್ಧಿಗೆ ನೀಡಲಾಗಿರುವ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯ ಮೂಲಕ ಆಹಾರ ಮತ್ತು ಅತಿಥಿ ಸತ್ಕಾರ ವಿಭಾಗದಲ್ಲಿ ಗುಣಮಟ್ಟ ಹಾಗೂ ವೇಗದ ಪ್ರಗತಿ ಸಾಧಿಸಿ ಛಾಪು ಮೂಡಿಸಿರುವ ಡಾ. ಗೋವಿಂದ ಬಾಬು ಪೂಜಾರಿ ಅವರ ಒಡೆತನದ ಶೆಫ್‌ಟಾಕ್ ಸಂಸ್ಥೆಯ ಕೀರ್ತಿ ಮುಕುಟಕ್ಕೆ ಮತ್ತೊಂದು ಗರಿ ಸೇರಿದಂತಾಗಿದೆ. ಶೆಫ್‌ಟಾಕ್ ಸಂಸ್ಥೆಗೆ ಈವರೆಗೆ ಹಲವು ಪ್ರಶಸ್ತಿಗಳು ಸಂದಿದ್ದು ಅವುಗಳಲ್ಲಿ ಪ್ರಮುಖವಾಗಿ 2016-17ನೇ ಸಾಲಿನಲ್ಲಿ ಆಲ್ ಇಂಡಿಯ ಅಚೀವರ್ಸ್ ಫೌಂಡೇಶನ್‌ನಿಂದ ‘ನಾಯಕತ್ವ ಹಾಗೂ ಕ್ಷಿಪ್ರ ಬೆಳವಣಿಗೆಯ ಕಂಪೆನಿ’ ಪ್ರಶಸ್ತಿ, ಬಿಸಿಸಿಐ ಮುಂಬೈನಿಂದ ಕ್ಷಿಪ್ರ ಬೆಳವಣಿಗೆಯ ಉದ್ಯಮ ವಿಭಾಗದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಪುರಸಭೆ ಸಾಮಾನ್ಯ ಸಭೆ ಮಂಗಳವಾರ ನಡೆಯಿತು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದಾಗಿ ಫ್ಲೈಓವರ್‌ನಲ್ಲಿ ಕುಂದಾಪುರ ನಗರ ಪ್ರವೇಶಕ್ಕೆ ಮುಖ್ಯದ್ವಾರವೇ ಇಲ್ಲದಂತಾಗಿದೆ. ಬಹುಪಾಲು ಸರಕಾರಿ ಕಛೇರಿಗಳು ಇರುವ ಪ್ರದೇಶ ಹಾಗೂ ಕುಂದಾಪುರ ನಗರ ಆರಂಭವಾದ್ದರಿಂದ ಎಲ್‌ಐಸಿ ರಸ್ತೆ ಎದುರು ನಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಹಲವು ಭಾರಿ ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಎನ್‌ಹೆಚ್‌ಆರ್‌ಐ ನಮ್ಮ ಮನವಿಗೆ ಸ್ಪಂದಿಸದಿದ್ದರೇ ಕುಂದಾಪುರದ ನಾಗರಿಕರೇ ಪ್ರವೇಶ ಮಾಡಿಕೊಳ್ಳಬೇಕಾಗುತ್ತದೆ ಎಂದು ಪುರಸಭಾ ಸದಸ್ಯ ಗಿರೀಶ್ ದೇವಾಡಿಗ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇದಕ್ಕೆ ಸಭೆಯಲ್ಲಿದ್ದ ಸದಸ್ಯರು ಮೇಜು ತಟ್ಟಿ ಅನುಮೋದಿಸಿದರು. ಫ್ಲೈಓವರ್ ನೀರು ಸರ್ವಿಸ್ ರಸ್ತೆ ಬೀಳುತ್ತಿದ್ದು ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಅಸಮರ್ಪಕ ಕಾಮಗಾರಿ ಸರ್ವಿಸ್ ರಸ್ತೆಯೇ ಮಾಯವಾಗಿದೆ ಇದನ್ನು ಶೀಘ್ರವಾಗಿ ದುರಸ್ತಿಗೊಳಿಸುವಂತೆ ಸದಸ್ಯ ಚಂದ್ರಶೇಖರ ಖಾರ್ವಿ ಆಗ್ರಹಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯುತ್ ದೀಪ ಅಳವಡಿಸದಿರುವ ಬಗ್ಗೆ ಅಧಿಕಾರಿಗಳ ವಿರುದ್ಧ ಸದಸ್ಯರು ಗರಂ ಆದರು. ಈ ವೇಳೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ, ಆ.17: ಯಶವಂತಪುರ–ಕಾರವಾರ ಮಾರ್ಗದಲ್ಲಿ ವಾರದಲ್ಲಿ ಮೂರು ದಿನ ಸಂಚರಿಸುವ ರೈಲು ಹೊಸ ವಿಸ್ಟಾಡೋಮ್ ಕೋಚ್ನೊಂದಿಗೆ ಸಂಚಾರಕ್ಕೆ ಆರಂಭಿಸಿದ್ದು ಕುಂದಾಪುರ ರೈಲು ನಿಲ್ದಾಣದಲ್ಲಿ ಸೋಮವಾರ ಸಾರ್ವಜನಿಕರು ಸ್ವಾಗತಿಸಿಕೊಂಡರು. ಬೆಂಗಳೂರು ಯಶವಂತಪುರ–ಕಾರವಾರ ಮಾರ್ಗದಲ್ಲಿ ವಾರದಲ್ಲಿ ಮೂರು ದಿನ ಸಂಚರಿಸುವ ಈ ರೈಲು ಮೊದಲು ಮಂಗಳೂರು ಜಂಕ್ಷನ್ವರೆಗೆ ಮಾತ್ರ ಸಂಚರಿಸುತ್ತಿತ್ತು. ಇದೀಗ ಮತ್ತೆ ಕಾರವಾರದ ತನಕ ರೈಲು ಸಂಚಾರ ಪುನಾರಂಭವಾಗಿದೆ. 06211 ಸಂಖ್ಯೆ ರೈಲು ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಯಶವಂತಪುರದಿಂದ ಕಾರವಾರಕ್ಕೆ ಹೊರಡಲಿದ್ದು, 06212 ರೈಲು ಪ್ರತಿ ಮಂಗಳವಾರ, ಗುರುವಾರ ಹಾಗೂ ಶನಿವಾರ ಕಾರವಾರದಿಂದ ಯಶವಂತಪುರಕ್ಕೆ ಹೊರಡಲಿದೆ. ಪ್ರಕೃತಿಯ ರಮಣೀಯತೆ, ಪಶ್ಚಿಮ ಘಟ್ಟಗಳ ಸೊಬಗಿನ ನೋಟವನ್ನು ವಿಸ್ಟಾಡೋಮ್ ಕೋಚ್ನಲ್ಲಿ ಪ್ರಯಾಣಿಕರು ಕಣ್ತುಂಬಿಕೊಳ್ಳಬಹುದು. ನದಿಗಳು, ಬೆಟ್ಟಗುಡ್ಡಗಳು, ಕೃಷಿಭೂಮಿ, ತೊರೆಗಳು ಸಹಿತ ನಯನಮನೋಹರ ದೃಶ್ಯಗಳನ್ನು ಕರಾವಳಿಯಿಂದ ಯಶವಂತಪುರದ ತನಕವೂ ವೀಕ್ಷಿಸಬಹುದಾಗಿದೆ. ಕುಂದಾಪುರಕ್ಕೆ ಆಗಮಿಸಿದ ವಿಸ್ಟಾಡೋಮ್ ಕೋಚನ್ನು ಕೊಂಕಣ ರೈಲ್ವೇ ವಿಭಾಗೀಯ ಅಧಿಕಾರಿ ಬಿ.ಬಿ ನಿಕ್ಕಂ ಬರಮಾಡಿಕೊಂಡು ಪ್ರಯಾಣಿಕರಿಗೆ ಶುಭಹಾರೈಸಿದರು. ಈ…
