Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ‘ಈ ಊರ್ ಚಂದ, ಈ ಊರ ಜನು ಚಂದ, ಈ ಊರ ಭಾಷೆ ಚಂದ, ನಾನಿಲ್ಲೇ ಇದ್ದುಬಿಡಲೆ ಅಂತ ಅನಿಸುತ್ತಿದೆ’ ಹಿಂಗೆ ಕುಂದಾಪುರದವರೇ ನಾಚುವಂತೆ ಕುಂದಾಪ್ರ ಕನ್ನಡದಲ್ಲಿ ಮನಬಿಚ್ಚಿ ಮಾತಾಡ್ತಾ ಹಳ್ಳಿಯ ಬದುಕಿನೊಂದಿಗೆ ಬೆರೆತುಹೋಗಿದ್ದಾರೆ ಸ್ಪೇನ್ ದೇಶದಿಂದ ಬಂದ ಯುವತಿ ತೆರೆಸಾ. ದಕ್ಷಿಣ ಭಾರತ ಪ್ರವಾಸಕ್ಕೆಂದು ಮುಂಬೈಗೆ ಬಂದಿದ್ದ ತೆರೆಸಾ ಅವರು ಲಾಕ್‌ಡೌನ್ ಕಾರಣದಿಂದ ಸ್ಪೇಯ್ನ್ ದೇಶಕ್ಕೆ ಹಿಂದಿರುಗಲಾರದೇ ತನ್ನ ಅಣ್ಣ ಕಾರ್ಲೂಸ್ ಅವರ ಆಪ್ತ ಗೆಳೆಯ ಬೈಂದೂರು ತಾಲೂಕಿನ ಹೇರಂಜಾಲಿನ ಕೃಷ್ಣ ಪೂಜಾರಿ ಅವರೊಂದಿಗೆ ನಾಲ್ಕು ತಿಂಗಳ ಹಿಂದೆ ಬೈಂದೂರು ತಾಲೂಕಿನ ಹೆರಂಜಾಲಿಗೆ ಬಂದು, ಅವರು ಆ ಮನೆಯ ಮಗಳಾಗಿ ಹೋಗಿದ್ದಾರೆ. ಕೃಷ್ಣ ಪೂಜಾರಿ ಅವರ ತಂದೆ-ತಾಯಿ, ಸಹೋದರ-ಸಹೋದರಿಯರೊಂದಿಗೆ ಮನೆ ಮಂದಿಯಂತೆ  ಹಳ್ಳಿ ಸೊಗಡಿನೊಂದಿಗೆ ಬೆರೆತುಹೋಗಿದ್ದಾರೆ.  ಕುಂದಾಪ್ರ ಡಾಟ್ ಕಾಂ ವರದಿ. ತೆರೆಸಾ ಅವರು ಈಗ ಮನೆಮಂದಿಯ ಜತೆ ಕೃಷಿ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಗೊಬ್ಬರ ಹೊತ್ತು ಗದ್ದೆಗೆ, ತೋಟಕ್ಕೆ ಹಾಕುತ್ತಾರೆ. ಕೃಷ್ಣ ಪೂಜಾರರ ತಾಯಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಡಾ. ಕರುಣಾಕರ ಎ. ಕೋಟೆಗಾರ್ ನೇಮಕಗೊಂಡಿದ್ದಾರೆ. ಕರ್ನಾಟಕದ ರಾಜ್ಯಪಾಲರು ಮುಂದಿನ ಮೂರು ವರ್ಷದ ಅವಧಿಗೆ ಅವರನ್ನು ನಾಮನಿರ್ದೇಶನ ಮಾಡಿದ್ದಾರೆ. ಡಾ. ಕರುಣಾಕರ ಕೋಟೆಗಾರ್ ಅವರು ಎಂಐಟಿ ಮಣಿಪಾಲದಲ್ಲಿ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿದ್ದು, ಕಳೆದು 22 ವರ್ಷಗಳಿಂದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಎಸ್ಸಿ, ಎಂಸಿಎ ಪದವಿ ಪೂರ್ಣಗೊಳಿಸಿದ್ದ ಕರುಣಾಕರ್ ಅವರು 2009ರಲ್ಲಿ ಪಿಎಚ್‌ಡಿ ಪದವಿ, 2011 ಐರ್ರ‍್ಯಾಂಡ್‌ನಲ್ಲಿ ಪೋಸ್ಟ್ ಡಾಕ್ಟೋರಲ್ ಫೆಲೋಶಿಪ್ ಪಡೆದಿದ್ದಾರೆ. ಅಲ್ಲದೇ ಇವರು ಪುಲ್‌ಬ್ರೈಟ್ ಯುಎಸ್‌ಎ ಹಾಗೂ ಡಿಎಎಡಿ ಜರ್ಮನಿ ಸಂಸ್ಥೆಗಳ ಸ್ಕಾಲರ್ ಕೂಡ ಆಗಿದ್ದಾರೆ. 2012ರಲ್ಲಿ ಬೆಸ್ಟ್ ಟೀಚರ್ ಅವಾರ್ಡ್, 2013ರಲ್ಲಿ ಇಂಟಲೆಕ್ಚುವಲ್ ವೆಂಚರ‍್ಸ್‌ನಿಂದ ಇನ್ವೆಂಕ್ಷನ್ ಅವಾರ್ಡ್, 2014ರಲ್ಲಿ ಬೆಸ್ಟ್ ಪೇಪರ್ ಅವಾರ್ಡ್ ಪಡೆದಿದ್ದಾರೆ. ಈವರೆಗೆ 50ಕ್ಕೂ ಹೆಚ್ಚು ಭಾರಿ ಅಂತರಾಷ್ಟ್ರೀಯ ಜರ್ನಲ್‌ಗಳಲ್ಲಿ ರಿಸರ್ಚ್ ಪೇಪರ್ ಪ್ರಕಟಿಸಿದ್ದಾರೆ. ಹತ್ತಾರು ವಿಷಯದ ಬಗ್ಗೆ ದೇಶ-ವಿದೇಶಗಳಲ್ಲಿ ವಿಷಯ ಮಂಡನೆ ಮಾಡಿದ್ದಾರೆ. ಇತ್ತಿಚಿಗೆ ಇವರ ಸಂಶೋಧನಾ ಕೆಲಸವೊಂದು…

Read More

ಕುಂದಾಪ್ರ ಡಾಟ್ ಕಾಂ ವರದಿ. ಬೈಂದೂರು: ನೆಮ್ಮದಿಯಿಂದ ವಾಸಿಸಲು ಸುಸಜ್ಜಿತ ಸೂರು ನಿರ್ಮಿಸಿಕೊಳ್ಳಬೇಕೆಂಬ ಹಂಬಲವೊಂದು ಆ ಕುಟುಂಬಕ್ಕೆ ಗಗನಕುಸುಮವಾಗಿದ್ದ ಹೊತ್ತಿನಲ್ಲಿ, ತಾಲೂಕಿನ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮಾನವೀಯ ನೆರವು ಅವರ ಕನಸನ್ನು ನನಸಾಗಿಸಿದೆ. ಉಪ್ಪುಂದದ ಬಾಯಂಹಿತ್ಲುವಿನಲ್ಲಿ ಕೇವಲ ಒಂದೆರಡು ತಿಂಗಳುಗಳಲ್ಲಿ ಸುಂದರ ಮನೆಯೊಂದು ಸಿದ್ಧಗೊಂಡಿದೆ. ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಯಂಹಿತ್ಲು ನಿವಾಸಿ ಬೇಬಿ ಸುಬ್ಬಯ್ಯ ದೇವಾಡಿಗ ಎಂಬುವವರ ಕುಟುಂಬ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟಿನ ಈ ಮಹತ್ವಾಕಾಂಕ್ಷಿ ಯೋಜನೆಯ ಫಲಾನುಭವಿಗಳು. 2 ತಿಂಗಳಿನಲ್ಲಿ ಗೃಹ ನಿರ್ಮಾಣ ಪೂರ್ಣ: ಬೇಬಿ ದೇವಾಡಿಗ ಅವರ ಕುಟುಂಬ ಸುಮಾರು 30 ವರ್ಷಗಳಿಂದ ಚಿಕ್ಕ ಗುಡಿಸಿಲಿನಲ್ಲಿ ವಾಸಿಸುತ್ತಿದ್ದರು. ಇತ್ತಿಚಿನ ವರ್ಷಗಳಲ್ಲಿ ಅದು ತೀರ ದುಸ್ಥಿತಿಗೆ ತಲುಪಿದ್ದರಿಂದ ಹೊಸ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಅವರಿಗೆ ಆರ್ಥಿಕ ಅಡಚಣೆ ಎದುರಾಗಿತ್ತು. ಆರಂಭದಲ್ಲಿ ಮನೆಯ ತಳಪಾಯ ನಿರ್ಮಾಣಕ್ಕೆ ಅವರು ಕೂಡಿಸಿಟ್ಟಿದ್ದ ಒಂದಿಷ್ಟು ಹಣದೊಂದಿಗೆ ವಂಡ್ಸೆಯ ರಮೇಶ್ ದೇವಾಡಿಗ ಹಾಗೂ ಒಂದಿಷ್ಟು ದಾನಿಗಳು ನೆರವಾಗಿದ್ದರು. ಮನೆಯ…

Read More

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಕೊಲ್ಲೂರು-ಕೊಡಚಾದ್ರಿಯನ್ನು ಸುಲಭವಾಗಿ ಸಂಪರ್ಕಿಸಬಹುದಾದ ಮಹತ್ವಾಕಾಂಕ್ಷಿಯ ರೋಪ್-ವೇ ಯೋಜನೆಯ ಜಾರಿಗೆ ಸಿದ್ದತೆ ನಡೆಯುತ್ತಿದೆ. ಅದು ಅನುಷ್ಠಾನಗೊಂಡರೆ ಕರಾವಳಿಯ ಮೊದಲ ರೋಪ್-ವೇ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದು, ಬೈಂದೂರು ಹಾಗೂ ಕುಂದಾಪುರ ತಾಲೂಕುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅರ್ಥಿಕ, ಸಾಮಾಜಿಕ ಪ್ರಗತಿ ಸಾಧ್ಯವಾಗಲಿದೆ. ಕೊಲ್ಲೂರು-ಕೊಡಚಾದ್ರಿ ನಂಟು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಯಾತ್ರಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅವರಲ್ಲಿ ಬಹುಪಾಲು ಮಂದಿ ಕೊಡಚಾದ್ರಿ ಸರ್ವಜ್ಞ ಪೀಠಕ್ಕೂ ತೆರಳುವ ಹರಕೆ ಹೊತ್ತು ಬಂದಿರುತ್ತಾರೆ. ದೇವಿ ಮೂಕಾಂಬಿಕೆಯ ದರ್ಶನ ಮಾಡಿದವರು ಕೊಡಚಾದ್ರಿಯ ಸರ್ವಜ್ಞ ಪೀಠ ದರ್ಶನ ಮಾಡುವುದರೊಂದಿಗೆ ಅವರ ಧಾರ್ಮಿಕ ಯಾತ್ರೆ ಸಮಾಪ್ತಿಗೊಳ್ಳುತ್ತದೆ. ಹಾಗಾಗಿ ಕೊಲ್ಲೂರು ಶ್ರೀ ಮೂಕಾಂಬಿಕೆಯನ್ನು ನಂಬಿದ ಭಕ್ತರಿಗೆ ಕೊಡಚಾದ್ರಿ ಬಹುಮುಖ್ಯ ಆರಾಧನಾ ತಾಣವಾಗಿದೆ.  ಕುಂದಾಪ್ರ ಡಾಟ್ ಕಾಂ ವರದಿ. ಪ್ರಸಿದ್ಧ ಟ್ರಕ್ಕಿಂಗ್ ಪಾಯಿಂಟ್: ಕೊಡಚಾದ್ರಿ ಬೆಟ್ಟ ಧಾರ್ಮಿಕ ಐತಿಹ್ಯ ಹೊಂದಿರುವ ಜೊತೆಗೆ ಪ್ರಸಿದ್ಧ ಟ್ರಕ್ಕಿಂಗ್ ಪಾಯಿಂಟ್ ಕೂಡ ಹೌದು. ಇಲ್ಲಿಗೆ ಟ್ರಕ್ಕಿಂಗ್’ಗಾಗಿ ಸಾವಿರಾರು ಮಂದಿ…

Read More

ಕುಂದಾಪ್ರ ಡಾಟ್ ಕಾಂ ವರದಿ . ಕುಂದಾಪುರ: ಹಾಲಿನ ಉತ್ಪನ್ನದ ರೀತಿಯಲ್ಲಿಯೇ, ತೆಂಗಿನ ಮರದ ಈ ಉತ್ಪನ್ನವೊಂದು ಸದ್ಯದಲ್ಲಿಯೇ ಮಾರುಕಟ್ಟೆಗೆ ಬರಲಿದೆ. ನೀರಾ, ಸೇಂದಿ, ಕಳ್ಳು ಎನ್ನುವ ಥರಹೇವಾರಿ ಹೆಸರಲ್ಲಿ ಗುರುತಿಸಿಕೊಂಡ ಪದಾರ್ಥ ಇನ್ನು ಮುಂದೆ ತಂಪು ಪಾನೀಯದ ಹಾಗೆ ದೊರೆಯಲಿದೆ. ಆದರೆ ಕುಡಿದವರಿಗೆ ಅಮಲು ಇರೋದಿಲ್ಲ! ಕಲ್ಪರಸ ಎಂದು ಕರೆಯಲ್ಪಡುವ ತೆಂಗಿನ ಮರದ ಜೇನು ಬಣ್ಣದ ಈ ತಾಜಾ ಸಿಹಿ ಪಾನಿಯ ಎಳನೀರಿಗಿಂತಲೂ ಆರೋಗ್ಯಕ್ಕೆ ಹಿತಕರ. ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಮಾರ್ಗದರ್ಶನದಲ್ಲಿ ಪ್ರಾರಂಭವಾಗಿರುವ ಉಡುಪಿ ಕಲ್ಪರಸ ತೆಂಗು ಮತ್ತು ಸರ್ವ ಸಾಂಭಾರ ಉತ್ಪಾದಕರ ಕಂಪನಿ (ಉಕಾಸ) ಅಬಕಾರಿ ಇಲಾಖೆಯಿಂದ ಕಲ್ಪರಸ ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರಾಟ ಹಾಗೂ ಅದರ ಉಪ ಉತ್ಪನ್ನಗಳ ತಯಾರಿಕೆಗೆ ಪರವಾನಿಗೆ ಪಡೆದಿದೆ. ಕಲ್ಪರಸ ಮಾರಾಟ ಮಾಡುವ ದೊಡ್ಡ ಪ್ರಮಾಣದ ಘಟಕ ಕುಂದಾಪುರ ತಾಲೂಕು ಜಪ್ತಿಯಲ್ಲಿ ಪ್ರಾರಂಭವಾಗಿದ್ದು, ತೆಂಗಿನ ಬೆಳೆಗಾರರಲ್ಲಿ ಆಶಾ ಭಾವನೆ ಮೂಡಿಸಿದೆ. ಕಲ್ಪರಸ ಹಾಗೂ ಅದರ ಉಪ ಉತ್ಪನ್ನ ಸೆಪ್ಟೆಂಬರ್ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ.…

Read More

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಬೈಂದೂರು,ಜೂ.12: ಬೈಂದೂರು, ಯಡ್ತರೆ ಹಾಗೂ ಪಡುವರಿ ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ಬೈಂದೂರನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾಪಕ್ಕೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಗ್ರೀನ್ ಸಿಗ್ನಲ್ ದೊರೆತಿದೆ. ಬೈಂದೂರನ್ನು ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಗೆಜೇರಿಸುವ ನಗರಾಭಿವೃದ್ಧಿ ಸಚಿವಾಲಯದ ಅಧಿಸೂಚನೆ ಡಿ. 31ರ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟವಾಗಿತ್ತು. ಅಂತಿಮವಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಪಟ್ಟಣ ಪಂಚಾಯತಿಗೆ ಅಸ್ತು ಎಂದಿದೆ. ಕುಂದಾಪ್ರ ಡಾಟ್ ಕಾಂ ವರದಿ. ಜನಸಂಖ್ಯೆ, ವಾಣಿಜ್ಯ ಚಟುವಟಿಕೆ ಮಾನದಂಡ: ನೂತನ ಪಟ್ಟಣ ಪಂಚಾಯಿತಿ ಪ್ರದೇಶವು 2011ರ ಜನಗಣತಿಯ ಪ್ರಕಾರ 24,957ಜನಸಂಖ್ಯೆ, 433 ಜನಸಾಂದ್ರತೆ ಮತ್ತು ಶೇ. 55 ಕೃಷಿಯೇತರ ಚಟುವಟಿಕೆಗಳ ಉದ್ಯೋಗ ಹೊಂದಿರುವುದರಿಂದ ಪಟ್ಟಣ ಪಂಚಾಯಿತಿ ಆಗುವ ಅರ್ಹತೆ ಪಡೆದಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು. ಹೊಸ ಪಟ್ಟಣ ಪಂಚಾಯಿತಿಯು 54.24 ಚದರ ಕಿಲೋಮೀಟರು ವ್ಯಾಪ್ತಿ ಹೊಂದಿರುತ್ತದೆ. ಪೂರ್ವಕ್ಕೆ ಪಶ್ಚಿಮ ಘಟ್ಟ ಮತ್ತು…

Read More

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಈ ಭಾರಿ ಲಾಕ್‌ಡೌನ್‌ನಿಂದಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಂದೂಡಲಾಗಿತ್ತು. ಆದರೆ ತನ್ನ ವಿದ್ಯಾರ್ಥಿಗಳ ಕಲಿಕೆಗೆ ತೊಡಕಾಗಬಾರದೆಂಬ ಈ ಶಿಕ್ಷಕನ ಸದಾಶಯ ಮಾತ್ರ ಪೋಸ್ಟ್‌ಪೋನ್ ಆಗಿರಲಿಲ್ಲ. ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದುದಲ್ಲದೇ ಅವರ ಮನೆಗಳಿಗೂ ತೆರಳಿ ಮಾರ್ಗದರ್ಶನ ಮಾಡಿದ್ದ ಹೆಸ್ಕತ್ತೂರು ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಬಾಬು ಶೆಟ್ಟಿ ಅವರ ವೃತ್ತಿಪರತೆಗೆ ಶಿಕ್ಷಣ ಸಚಿವರೇ ಭೇಷ್ ಎಂದಿದ್ದಾರೆ. ಲಾಕ್‌ಡೌನ್‌ನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ: ಹೆಸ್ಕುತ್ತೂರು ಶಾಲೆಯಲ್ಲಿ ಒಟ್ಟು 43 ಮಕ್ಕಳಿದ್ದು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಶಾಲೆ ರಜೆಯಿದ್ದರೂ ಬಾಬು ಶೆಟ್ಟಿಯವರು ಎಸ್‌ಎಸ್‌ಎಲ್‌ಸಿ ವಿದಾರ್ಥಿಗಳ ಸಂಪರ್ಕದಲ್ಲಿದ್ದು, ಮನೆ ಮನೆಗೆ ತೆರಳಿ ಮಾದರಿ ಪ್ರಶ್ನೆ ಪತ್ರಿಕೆ ನೀಡಿ ಪರೀಕ್ಷೆ ಮಾಡುತ್ತಿದ್ದರು. ಪೋಷಕರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ವಿಚಾರಿಸುತ್ತಿದ್ದ ಅವರು ಒಂದೊಂದು ಮಕ್ಕಳ ಮನೆಗೆ ಮೂರ‍್ನಾಲ್ಕು ಬಾರಿ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಪರೀಕ್ಷೆಯ ಸಮಯದಲ್ಲಿ ಪರಿಪಾಠವನ್ನು ಅವರು ಹಲವು ವರ್ಷದಿಂದ ಮುಂದುವರಿಸುತ್ತಿದ್ದು, ಲಾಕ್‌ಡೌನ್ ಅವಧಿಯಾಗಿದ್ದರಿಂದ ಹೆಚ್ಚಿನ ಸಮಯ ಅದಕ್ಕೆ…

Read More

ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ,ಜೂ.2: ವಿವಿಧ ರಾಜ್ಯ ಹಾಗೂ ದೇಶಗಳಿಂದ ಬಂದು ಸರಕಾರಿ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ್ದವರ ಕೋವಿಡ್-19 ಪರೀಕ್ಷಾ ವರದಿಗಳು ಈಗ ಬರಲಾರಭಿಸಿದೆ. ಅವುಗಳಲ್ಲಿ ಪಾಸಿಟಿವ್ ಪ್ರಕರಣಗಳು ಏರಿಕೆಯಾಗುತ್ತಿರುವಂತೆ ಜಿಲ್ಲೆಯ ಜನರಲ್ಲಿ ಆತಂಕವೂ ಹೆಚ್ಚುತ್ತಿದೆ. ಕಳೆದೆರಡು ದಿನಗಳಿಂದ ಹೆಚ್ಚಿನ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದ್ದು, ಇಂದೂ ಕೂಡ ಗರಿಷ್ಠ ಪ್ರಮಾಣದ ಪಾಸಿಟಿವ್ ಪ್ರಕರಣ ವರದಿಯಾಗುವ ಸೂಚನೆ ದೊರೆತಿದೆ. ಇಲ್ಲಿಯ ತನಕ ಉಡುಪಿ ಜಿಲ್ಲೆಯ ಸುಮಾರು 27 ಕಡೆಗಳಲ್ಲಿ ಸೀಲ್ ಡೌನ್, ಕಂಟೈನ್‌ಮೆಂಟ್ ಝೋನ್ ಮಾಡಲಾಗಿದೆ. ಈ ಪೈಕಿ ಮಂಗಳವಾರ ಬೈಂದೂರು ಹಾಗೂ ಕುಂದಾಪುರ ತಾಲೂಕು 15ಕ್ಕೂ ಹೆಚ್ಚು ಪ್ರದೇಶಗಳನ್ನು ಸೀಲ್‌ಡೌನ್, ಕಂಟೈನ್‌ಮೆಂಟ್ ಝೋನ್ ಮಾಡಲಾಗುತ್ತಿದೆ. ಹೋಮ್ ಕ್ವಾರಂಟೈನ್ ಕಂಟಕ, 6,616 ವರದಿ ಬಾಕಿ: ಉಡುಪಿ ಜಿಲ್ಲೆಯಲ್ಲಿ ಸರಕಾರಿ ಕ್ವಾರಂಟೈನ್ ಮುಗಿಸಿ ಹೋಂ ಕ್ವಾರಂಟೈನಿನಲ್ಲಿ ಇರುವವರಿಗೆ ಪಾಸಿಟಿವ್ ಬರುವ ಪ್ರಕರಣ ಒಂದೆಡೆ ಹೆಚ್ಚುತ್ತಿದ್ದರೇ, ಜಿಲ್ಲೆಯ ಪೊಲೀಸರು ಹಾಗೂ ಇತರರಲ್ಲಿಯೂ ಪಾಸಿಟಿವ್ ಕಾಣಿಸಿಕೊಳ್ಳುತ್ತಿರುವುದರಿಂದ ಸಮುದಾಯಕ್ಕೂ ಹರಡುತ್ತಿರುವ ಭೀತಿ…

Read More

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಬೈಂದೂರು: ಆ ಊರಲ್ಲಿ ಒಂದೆಡೆ ಉಪ್ಪು ನೀರಿನ ಸಮಸ್ಯೆ, ಜೊತೆಗೆ ಹೆಚ್ಚುತ್ತಿರುವ ಬೇಸಿಗೆಯ ಕಾವು. ಕುಡಿಯುವ ನೀರಿಗಾಗಿ ನಿತ್ಯವೂ ಪರದಾಡುವ ಸ್ಥಿತಿ. ಹೀಗಿರುವಾಗಲೇ ಗ್ರಾಮದ ಜನರ ಸಂಕಟ ಅರಿತು ಸ್ಪಂದಿಸಿದವರು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟೀ, ಉದ್ಯಮಿ ಗೋವಿಂದ ಬಾಬು ಪೂಜಾರಿ. ಬಿಜೂರು ಗ್ರಾಮದ 3 ಹಾಗೂ 4ನೇ ವಾರ್ಡ್ ವ್ಯಾಪ್ತಿಯ ಗರಡಿ, ನಿಸರ್ಗಕೇರಿ, ಕಳಿಸಾಲು ಸೇರಿದಂತೆ ಹಲವು ಭಾಗಗಳಲ್ಲಿ ವರ್ಷಪೂರ್ತಿ ನೀರಿನ ಸಮಸ್ಯೆ ಇದ್ದೇ ಇದೆ. ಗ್ರಾಮ ಪಂಚಾಯತಿಯಿಂದ ನಳ್ಳಿ ನೀರಿನ ವ್ಯವಸ್ಥೆ ಮಾಡಲಾಗಿದ್ದರೂ ಸದ್ಯ ಬಾವಿಯಲ್ಲಿ ನೀರು ಬತ್ತಿ ಹೋಗಿರುವುದರಿಂದ ಅದನ್ನು ನಿಲ್ಲಿಸಲಾಗಿತ್ತು. ಪಂಚಾಯತ್‌ನಿಂದ ಎರಡು ದಿನಗಳಿಗೊಮ್ಮೆ ಟ್ಯಾಂಕರ್ ನೀರು ಇನ್ನಷ್ಟೇ ಪೂರೈಕೆಯಾಗಬೇಕಿತ್ತು. ಈ ನಡುವೆಯೇ ತನ್ನೂರಿನ ಜನರಿಗೆ ಜಲದಾತವಾಗಿ ಬಂದವರು ಗೋವಿಂದ ಬಾಬು ಪೂಜಾರಿ. ಅವರ ಈ ತಕ್ಷಣದ ಸ್ಪಂದನೆಯಿಂದಾಗಿ ಆ ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಿಂದ ತಾತ್ಕಾಲಿಕ ಮುಕ್ತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟಲು ಕೈಗೊಂಡಿರುವ ಕ್ರಮಗಳು ಹಾಗೂ ಅನುಸರಿಸಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಶನಿವಾರ ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ರಾಜ್ಯ ಮುಜರಾಯಿ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು.   ಈ ಸಂದರ್ಭ ಅವರು ಅಧಿಕಾರಿಗಳಿಂದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡರು. ಮಳೆಗಾಲ ಆರಂಭವಾಗುವ ಹಿನ್ನೆಲೆಯಲ್ಲಿ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ವಿನಾಯಿತಿ. ಈಗಾಗಲೇ ಬೆಳೆದಿರುವ ಬೆಳೆಗಳ ಸಾಗಾಟಕ್ಕೂ ಯಾವುದೇ ಅಡ್ಡಿಪಡಿಸದಿರುವುದು, ತಾಲೂಕಿನಲ್ಲಿ ರಾಜ್ಯ ಸರಕಾರದ ಆದೇಶದಂತೆ ಅಗತ್ಯವಿರುವ ಎಪಿಎಲ್ ಕುಟುಂಬಗಳಿಗೂ ಅಕ್ಕಿ ನೀಡುವುದು. ವಲಸೆ ಕಾರ್ಮಿಕರಿಗೆ ಊಟ ವಸತಿ, ಕಟ್ಟಡ ಹಾಗೂ ಇತರೆ ಕಾರ್ಮಿಕರಿಗೆ ಸರಕಾರದಿಂದ ದೊರೆಯಬೇಕಾದ ಸವಲತ್ತುಗಳು ಶೀಘ್ರ ದೊರೆಯುವಂತೆ ಮಾಡುವುದು, ಭದ್ರತೆಗೆ ಒತ್ತು ನೀಡುವುದು ಹಾಗೂ ವಿನಾಯಿತಿ ಇರುವಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸುವುದು ಸೇರಿದಂತೆ ಹಲವು…

Read More