ಕಲ್ಪರಸ: ಕುಂದಾಪುರದಲ್ಲಿ ರಾಜ್ಯದ ಎರಡನೇ ನೀರಾ ಘಟಕ

Call us

Call us

Call us

ಕುಂದಾಪ್ರ ಡಾಟ್ ಕಾಂ ವರದಿ .
ಕುಂದಾಪುರ: ಹಾಲಿನ ಉತ್ಪನ್ನದ ರೀತಿಯಲ್ಲಿಯೇ, ತೆಂಗಿನ ಮರದ ಈ ಉತ್ಪನ್ನವೊಂದು ಸದ್ಯದಲ್ಲಿಯೇ ಮಾರುಕಟ್ಟೆಗೆ ಬರಲಿದೆ. ನೀರಾ, ಸೇಂದಿ, ಕಳ್ಳು ಎನ್ನುವ ಥರಹೇವಾರಿ ಹೆಸರಲ್ಲಿ ಗುರುತಿಸಿಕೊಂಡ ಪದಾರ್ಥ ಇನ್ನು ಮುಂದೆ ತಂಪು ಪಾನೀಯದ ಹಾಗೆ ದೊರೆಯಲಿದೆ. ಆದರೆ ಕುಡಿದವರಿಗೆ ಅಮಲು ಇರೋದಿಲ್ಲ! ಕಲ್ಪರಸ ಎಂದು ಕರೆಯಲ್ಪಡುವ ತೆಂಗಿನ ಮರದ ಜೇನು ಬಣ್ಣದ ಈ ತಾಜಾ ಸಿಹಿ ಪಾನಿಯ ಎಳನೀರಿಗಿಂತಲೂ ಆರೋಗ್ಯಕ್ಕೆ ಹಿತಕರ.

Call us

Click Here

ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಮಾರ್ಗದರ್ಶನದಲ್ಲಿ ಪ್ರಾರಂಭವಾಗಿರುವ ಉಡುಪಿ ಕಲ್ಪರಸ ತೆಂಗು ಮತ್ತು ಸರ್ವ ಸಾಂಭಾರ ಉತ್ಪಾದಕರ ಕಂಪನಿ (ಉಕಾಸ) ಅಬಕಾರಿ ಇಲಾಖೆಯಿಂದ ಕಲ್ಪರಸ ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರಾಟ ಹಾಗೂ ಅದರ ಉಪ ಉತ್ಪನ್ನಗಳ ತಯಾರಿಕೆಗೆ ಪರವಾನಿಗೆ ಪಡೆದಿದೆ. ಕಲ್ಪರಸ ಮಾರಾಟ ಮಾಡುವ ದೊಡ್ಡ ಪ್ರಮಾಣದ ಘಟಕ ಕುಂದಾಪುರ ತಾಲೂಕು ಜಪ್ತಿಯಲ್ಲಿ ಪ್ರಾರಂಭವಾಗಿದ್ದು, ತೆಂಗಿನ ಬೆಳೆಗಾರರಲ್ಲಿ ಆಶಾ ಭಾವನೆ ಮೂಡಿಸಿದೆ. ಕಲ್ಪರಸ ಹಾಗೂ ಅದರ ಉಪ ಉತ್ಪನ್ನ ಸೆಪ್ಟೆಂಬರ್ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ.

ಭಾರತೀಯ ಕಿಸಾನ್ ಸಂಘ ಪ್ರಾಯೋಜಿತ ಉಡುಪಿ ಜಿಲ್ಲಾ ವ್ಯಾಪ್ತಿಯ 54 ತೆಂಗು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ಮೊದಲ ಹಂತದಲ್ಲಿ ಅವಕಾಶ ಪಡೆಯಲಿದ್ದು, ಪ್ರತೀ ರೈತ ಸದಸ್ಯರಿಗೆ ಅವರ ತೋಟದ ಆರೋಗ್ಯಯುತ ಮತ್ತು ನಿಗದಿತ ಎತ್ತರದ 8 ತೆಂಗಿನ ಮರಗಳಿಂದ ಮಾತ್ರ ಕಲ್ಪರಸ ಸಂಗ್ರಹಣೆಗೆ ಅವಕಾಶ ಸಿಗಲಿದೆ.

ಹಾಲು ಉತ್ಪಾದಕರ ಒಕ್ಕೂಟ ಮಾದರಿಯಲ್ಲಿ ಕನಿಷ್ಠ 25 ಸದಸ್ಯರ ಹೊಂದಿರುವ ಗ್ರಾಮಕ್ಕೊಂದು ಸೊಸೈಟಿ ರಚಿಸಿ, ಅಲ್ಲಿಂದಲೇ ಕಲ್ಪರಸ ಸಂಗ್ರಹಣೆಗೆ ಅಗತ್ಯವಿರುವ ಬಾಕ್ಸ್, ಐಸ್, ಪ್ಲಾಸ್ಟಿಕ್ ಕವರ್, ಇತ್ಯಾದಿಗಳನ್ನು ನೀಡಿ, ಪ್ರತಿ ನಿತ್ಯ ಗುಣಮಟ್ಟದ ಕಲ್ಪರಸ ಸಂಗ್ರಹಣೆ ಮಾಡಲಾಗುತ್ತದೆ. ಪ್ರತಿ ಹಂತದಲ್ಲೂ ಶೀತಲೀಕರಣ ವ್ಯವಸ್ಥೆಯಲ್ಲಿಯೇ ಕಲ್ಪರಸ ಸಾಗಾಟ, ಮಾರಾಟ ನಡೆಯುತ್ತದೆ. ಇದು ರಾಜ್ಯದ ಎರಡನೇ ನೀರಾ ಘಟಕವಾಗಿದ್ದು, ಕುಂದಾಪುರ ತಾಲೂಕಿನ ಜಪ್ತಿಯಲ್ಲಿ ಪ್ರಾರಂಭವಾಗಲಿದೆ. ಪ್ರತೀ ಮರದಿಂದ ದಿನವೊಂದಕ್ಕೆ ಸರಾಸರಿ ಕನಿಷ್ಠ 1.5 ಲೀಟರ್ ನಿಂದ ಗರಿಷ್ಠ 2.5 ಲೀಟರ್ ಕಲ್ಪರಸ ಸಿಗಲಿದೆ.

ಸಂಗ್ರಹಣಾ ಬಾಕ್ಸ್, ಇತರ ಸಾಧನ ಸುರಕ್ಷತೆಯ ಬಗ್ಗೆ ರೈತರು ಠೇವಣಿ ನೀಡಬೇಕು. ಏಣಿ ಅಥವಾ ಟಯರ್ ಅಳವಡಿಕೆಯ ವೆಚ್ಚ ರೈತರು ಬರಿಸಬೇಕು. ರೈತರಿಂದ ತೆಗೆಯಲು ಕಷ್ಟಸಾಧ್ಯ ಎಂದಾದರೆ ಕಲ್ಪರಸ ಟ್ಯಾಪರ್ ಕಂಪನಿಯಿಂದಲೇ ಒದಗಿಸುವ ಯೋಜನೆ ತಯಾರಿಯಲ್ಲಿದೆ. ಮೊದಲ ವರ್ಷ ಆರಂಭದಲ್ಲಿ 100 ರೈತರಿಂದ ಪ್ರಾರಂಭಿಸಿ 500 ರೈತರಿಗೆ ಏರಿಕೆ, ಎರಡನೇ ವರ್ಷ 800 ರೈತರಿಂದ 1,500ಕ್ಕೆ ಏರಿಕೆ, ಹಾಗೆಯೇ ಐದು ವರ್ಷಗಳಲ್ಲಿ 5,000 ರೈತರ ತಲುಪುವ ಗುರಿ ಕಂಪನಿ ಹೊಂದಿದೆ. ಮೊದಲ ಐದು ವರ್ಷದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಗೆ ಅವಕಾಶವಿದೆ. ಕಲ್ಪರಸ ಟ್ಯಾಪಿಂಗ್ ಅಗತ್ಯವಿರುವ ಕಲ್ಪರಸ ಟೆಕ್ನೀಶಿಯನ್ ಹೆಸರಿನಲ್ಲಿ ಹಸಿರು ಕಾಲರ್ ಉದ್ಯೋಗ ಸೃಷ್ಟಿಗೆ ಕಂಪನಿ ಯೋಜನೆ ರೂಪಿಸುತ್ತಿದೆ. ಕುಂದಾಪ್ರ ಡಾಟ್ ಕಾಂ ವರದಿ .

Click here

Click here

Click here

Click Here

Call us

Call us

ಆರೋಗ್ಯ ಪೂರ್ಣ ತೆಂಗಿನ ಮರ ಆಯ್ಕೆ ಮಾಡಿದ ನಂತರ ಬಂದ ಹಿಂಗಾರಕ್ಕೆ ಒಂದೊಂದು ಇಂಚು ಅಂತರಲ್ಲಿ ಕಟ್ಟು ಹಾಕಿ ಹಿಂಗಾರದ ತುದಿ ಕತ್ತಿಯಿಂದ ಸವರಲಾಗುತ್ತದೆ. 8 ದಿನ ಹೀಗೆ ಮಾಡಿ, ನಂತರ ಕೆಳಗೆ ಐಸ್ ಇರುವ ಬಾಕ್ಸ್ ಇಟ್ಟು ಹಿಂಗಾರದ ನೀರು ಪ್ಲಾಸ್ಟಿಕ್ ಕೊಟ್ಟಿಯಲ್ಲಿ ಶೇಖರಣೆವಾಗುವಂತೆ ಕಟ್ಟಿ, ಸಂಗ್ರಹವಾದ ನೀರು ದಿನದಲ್ಲಿ ಎರಡು ಬಾರಿ ಸಂಗ್ರಹಿಸಿ ಬಾಟಲಿಯಲ್ಲಿ ಸಂಗ್ರಹಸಿ ಮಾರುಕಟ್ಟಿಗೆ ಬಿಡುಗಡೆ ಮಾಡಲಾಗುತ್ತದೆ/ಕುಂದಾಪ್ರ ಡಾಟ್ ಕಾಂ ವರದಿ /

ಪ್ರತಿ ಮರ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಹತ್ತಿಳಿದು, ಏಣಿ ಅಥವಾ ಟಯರ್ ಬಳಕೆಯಿಂದ ಪ್ರತೀ ಮರ ಏರಲು ಬೆಳಗ್ಗೆ 15 ನಿಮಿಷ ಹಾಗೂ ಸಂಜೆ 10 ನಿಮಿಷ ತಗಲುತ್ತದೆ. ವರ್ಷದ 365ದಿನವೂ ಕಲ್ಪರಸ ತೆಗೆಯಲು ಅವಕಾಶವಿದೆ. ಉತ್ತಮವಾಗಿ ನೀರಾವರಿಯಿರುವ, ಆರೋಗ್ಯಯುತ ತೆಂಗಿನ ಮರದಿಂದ ವಾರ್ಷಿಕ ಕನಿಷ್ಠ 500 ಲೀಟರ್ ಕಲ್ಪರಸ ನಿರೀಕ್ಷಿಸಬಹುದು. 700ರಿಂದ 800 ಲೀಟರ್ ವರೆಗೂ ಮರಗಳ ಗುಣಮಟ್ಟದ ಮೇಲೆ ಕಲ್ಪರಸ ತೆಗೆಯಲು ಸಾಧ್ಯ. ರೈತರೇ ಸ್ವತಃ ಕಲ್ಪರಸ ತೆಗೆದು ಕೊಡುವುದಾದಲ್ಲಿ ತರಬೇತಿ ಸೋಸೈಟಿಯೇ ನೀಡುತ್ತದೆ. – ಸತ್ಯನಾರಾಯಣ ಉಡುಪ, ಪ್ರಧಾನ ಕಾರ‍್ಯದರ್ಶಿ, ಭಾರತೀಯ ಕಿಸಾನ್ ಸಂಘ, ಉಡುಪಿ

ಇದನ್ನೂ ಓದಿ:
► ಉಡುಪಿ ಜಿಲ್ಲೆ ಕೋವಿಡ್ ಅಪ್ಡೇಟ್: ಸೋಮವಾರ 14 ಪಾಸಿಟಿವ್, ಒಟ್ಟು 969 ಮಂದಿ ಬಿಡುಗಡೆ – https://kundapraa.com/?p=38884 .
► ಬೈಂದೂರು ಪೊಲೀಸ್ ಠಾಣೆ, ಶಿರೂರು ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಕೊರೋನಾ ಸೊಂಕು ದೃಢ- https://kundapraa.com/?p=38863 .

Leave a Reply