Author: Editor Desk

ಕುಂದಾಪುರ: ಕಳೆದ ಎರಡು ದಿನಗಳಿಂದ ನೀರಿನಲ್ಲಿ ಕೊಚ್ಚಿಹೋಗಿ ನಾಪತ್ತೆಯಾಗಿದ್ದ ಮಾರಣಕಟ್ಟೆ ಕಿರಿಯ ಪ್ರಾಥಮಿಕ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿನಿ ವಿಸ್ಮಯ ದೇವಾಡಿಗಳ ಶವ ಚಿತ್ತೂರು ಗ್ರಾಮದ ನ್ಯಾಗಳಮನೆ ಸೇತುವೆಯ ಬಳಿ ಪತ್ತೆಯಾಗಿದೆ. ಬೆಳಿಗ್ಗೆ 9ಗಂಟೆಯ ವೇಳೆಗೆ ಬಳಿ ಸ್ಥಳೀಯರು ಗಮನಿಸಿದ್ದು ಬಳಿಕ ಆಕೆಯ ಶವ ದೊರೆತಿದೆ. ಜೂನ್ 10ರಂದು ಬೆಳಿಗ್ಗೆ 8:45ರವೇಳೆಗೆ ಮಾರಣಕಟ್ಟೆಯ ಸನ್ಯಾಸಿಬೆಟ್ಟಿನಿಂದ ಶಾಲೆಗೆ ತೆರಳುತ್ತಿದ್ದ ವಿಸ್ಮಯ ದೇವಾಡಿಗ(8) ತಾಯಿಯೊಂದಿಗೆ ಕಾಲುಸಂಕದ ಮೂಲಕ ಚಕ್ರಾನದಿಯನ್ನು ದಾಟುತ್ತಿದ್ದ ವೇಳೆ ಕಾಲುಜಾರಿ ನದಿಗೆ ಬಿದ್ದು ನೀರಿನಲ್ಲಿ ಕೊಚ್ಚಿಹೋಗಿದ್ದಳು. ವಿಸ್ಮಯ ನೀರಿಗೆ ಬಿದ್ದ ಕೂಡಲೇ ಆಕೆಯ ರಕ್ಷಣೆಗೆ ನೀರಿಗೆ ಸ್ಥಳೀಯರೋರ್ವರು ಹಾರಿದರೂ, ತುಂಬಿ ಹರಿಯುತ್ತಿರುವ ನದಿಯಲ್ಲಿ ಆಕೆ ಕ್ಷಣಾರ್ಧದಲ್ಲಿ ಕೊಚ್ಚಿ ಹೋಗಿದ್ದಳು. ಶನಿವಾರ ಸಂಜೆಯ ತನಕವೂ ಈಜುಗಾರರು ಹಾಗೂ ಮುಳುಗುತಜ್ಞರು ನದಿಯಲ್ಲಿ ಹುಡುಕಾಡಿದರೂ ಯಾವುದೇ ಕುರುಹು ಸಿಗದಿರುವುದು ಕುಟುಂಬಿಕರಿಗೆ ಇನ್ನಷ್ಟು ನೋವಿಗೆ ದೂಡಿತ್ತು. ಕೊಲ್ಲೂರು ಪೊಲೀಸರು ಹಾಗೂ ಮಾರಣಕಟ್ಟೆ, ವಂಡ್ಸೆ, ಚಿತ್ತೂರು ಆಸುಪಾಸಿನ ನಿವಾಸಿಗಳು ಚಕ್ರಾ ನದಿಗೆ ಸೇರುವ ವಂಡ್ಸೆ, ಬೆಳ್ಳಾಲ ಹಾಗೂ ಗಂಗೊಳ್ಳಿ…

Read More

ಕುಂದಾಪರ: : ಮಾರಣಕಟ್ಟೆಯ ಸನ್ಯಾಸಿಬೆಟ್ಟಿನಿಂದ ಶಾಲೆಗೆ ತೆರಳುತ್ತಿದ್ದ ವಿಸ್ಮಯ ದೇವಾಡಿಗ(8) ತಾಯಿಯೊಂದಿಗೆ ಕಾಲುಸಂಕ ದಾಟುತ್ತಿದ್ದ ವೇಳೆ ಕಾಲುಜಾರಿ ನದಿಗೆ ಬಿದ್ದು ನೀರಿನಲ್ಲಿ ಕೊಚ್ಚಿಹೋದ ಘಟನೆ ನಡೆದು ಎರಡು ದಿನ ಕಳೆದರೂ ಆಕೆಯ ಶವ ಈವರೆಗೆ ಪತ್ತೆಯಾಗಿಲ್ಲ. ಬಾಲಕಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ವಿಸ್ಮಯ ನೀರಿಗೆ ಬಿದ್ದ ಕೂಡಲೇ ಆಕೆಯ ರಕ್ಷಣೆಗೆ ನೀರಿಗೆ ಹಾರಿದರೂ, ತುಂಬಿ ಹರಿಯುತ್ತಿರುವ ನದಿಯಲ್ಲಿ ಆಕೆ ಕ್ಷಣಾರ್ಧದಲ್ಲಿ ಕೊಚ್ಚಿ ಹೋಗಿದ್ದಳು. ಕಾಲುಸಂಕದ ಅನತಿ ದೂರದಲ್ಲಿರುವ ಬಿದಿರು ಗಿಡದ ಬಳಿ ಆಕೆಯು ಧರಿಸಿದ್ದ 2 ಚಪ್ಪಲಿ ಪತ್ತೆಯಾಗಿತ್ತು. ಆದರೆ ಶನಿವಾರ ಸಂಜೆಯ ತನಕವೂ ಈಜುಗಾರರು ಹಾಗೂ ಮುಳುಗುತಜ್ಞರು ನದಿಯಲ್ಲಿ ಹುಡುಕಾಡಿದರೂ ಯಾವುದೇ ಕುರುಹು ಸಿಗದಿರುವುದು ಕುಟುಂಬಿಕರಿಗೆ ಇನ್ನಷ್ಟು ನೋವಿಗೆ ದೂಡಿದೆ. ಕೊಲ್ಲೂರು ಪೊಲೀಸರು ಹಾಗೂ ಮಾರಣಕಟ್ಟೆ, ವಂಡ್ಸೆ, ಚಿತ್ತೂರು ಆಸುಪಾಸಿನ ನಿವಾಸಿಗಳು ಚಕ್ರಾ ನದಿಗೆ ಸೇರುವ ವಂಡ್ಸೆ, ಬೆಳ್ಳಾಲ ಹಾಗೂ ಗಂಗೊಳ್ಳಿ ಹೊಳೆಯವರೆಗೆ ಶೋಧಕಾರ್ಯ ಮುಂದುವರಿಸಿದ್ದರೂ ಶವ ಪತ್ತೆಯಾಗಲಿಲ್ಲ. ಶವವು ಗಂಗೊಳ್ಳಿ ಹೊಳೆಯ ಮೂಲಕ ಸಮುದ್ರ ಪಾಲಾಗಿರಬಹುದೆಂದು ಈಜು ತಜ್ಞರು ಶಂಕಿಸಿದ್ದಾರೆ. ಈ…

Read More

ಕುಂದಾಪುರ: ತಾಲೂಕಿನ ತ್ರಾಸಿ ಮೂಲದ ಭಾವನಾ ದೇವಾಡಿಗ ಅವರ ನೃತ್ಯ ಸಂಸ್ಥೆ ಭಾವನಾಸ್ ಡ್ಯಾನ್ಸ್ ಸ್ಟುಡಿಯೋ ಇದರ ಮೂರನೇ ಶಾಖೆಯನ್ನು ಪುಣೆಯ ವಿಶ್ರಾಂತ್ ವಾಡಿಯಲ್ಲಿನ ಕನಕ ಧಾರ ಕಟ್ಟಡದ ನಾಲ್ಕನೆಯ ಮಹಡಿಯಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಭಾವನಾ ಕುಟುಂಬದ ಕಿರಿಯ ಸದಸ್ಯರಾದ ಮಾ| ಆಶಿಷ್ ಮತ್ತು ಮಾ| ಅರ್ನವ್ ಈ ಹೊಸ ಶಾಖೆಯನ್ನು ಉಧ್ಘಾಟಿಸಿದರು. ಡಾನ್ಸ್ ಸ್ಟುಡಿಯೋದ ಇನ್ನೆರಡು ಸಂಸ್ಥೆ ಪುಣೆಯ ಅಂಬಾನಗರಿ ಹಾಗೂ ಧಾನೋರಿಯಲ್ಲಿದ್ದು ಮುನ್ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದಿದ್ದಾರೆ. ಪುಣೆಯಲ್ಲಿ ಸುಮಾರು ಹದಿನೈದು ವರ್ಷಗಳಿಂದ ನೆಲೆಸಿರುವ ರಾಮ್ ದೇವಾಡಿಗ ಮತ್ತು ಭಾವನಾ ದೇವಾಡಿಗ ದಂಪತಿಗಳು ತಮ್ಮ ಉದ್ಯೋಗದ ಬಿಡುವಿನ ವೇಳೆಯಲ್ಲಿ ಇಲ್ಲಿನ ಅಂಬಾನಗರಿಯಲ್ಲಿ ನೃತ್ಯ ತರಗತಿಯನ್ನು ಸಣ್ಣ ರೀತಿಯಲ್ಲಿ ಪ್ರಾರಂಬಿಸಿದ್ದರು. ಕಳೆದ ಹತ್ತು ವರ್ಷಗಳಿಂದ ಇದೇ ನೃತ್ಯ ಶಾಲೆಯನ್ನು ಮೇಲ್ದರ್ಜೆಗೇರಿಸಿ ಭಾವನಾ’ಸ್ ಡ್ಯಾನ್ಸ್ ಸ್ಟೂಡಿಯೋ ಎನ್ನುವ ನೃತ್ಯ ಸಂಸ್ಥೆಯನ್ನು ಪ್ರಾರಂಭಿಸಿದ್ದರು. ಭಾವನಾ ರವರ ಕುಟುಂಬಸ್ಥರಲ್ಲದೆ ಪುಣೆ ದೇವಾಡಿಗ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಪಾಲ್ಗೊಂಡಿದ್ದರು.

Read More

ಸುದ್ದಿಗೋಷ್ಟಿಯಲ್ಲಿ ಅಳಲು ತೋಡಿಕೊಂಡ ಸಂತ್ರಸ್ಥ ಮಹಿಳೆ ಕುಂದಾಪುರ: ತನ್ನ ಅತ್ತೆ ಮಾವನಿಗೇ 18 ಲಕ್ಷ ರೂ. ಕೈಗಡ(ಕೈಸಾಲ)ನೀಡಿದ ರೇಷ್ಮಾ ರಾಜ್ ಎಂಬ ಮಹಿಳೆ ಕೊಟ್ಟ ಹಣವನ್ನು ವಾಪಾಸು ಕೇಳಿದ್ದಕ್ಕೆ ಆಕೆಯ ವಿರುದ್ಧವೇ ಜಾತಿನಿಂದನೆ ಪ್ರಕರಣ ದಾಖಲಿಸಿದ್ದಲ್ಲದೇ ಕೊಲೆ ಬೆದರಿಕೆ ಹಾಕಿದ ಘಟನೆ ನಾವುಂದದಲ್ಲಿ ನಡೆದಿದೆ. ಈ ಬಗ್ಗೆ ಸಂತ್ರಸ್ಥ ಮಹಿಳೆ ಪತ್ರಿಕಾಗೋಷ್ಟಿ ನಡೆಸಿ ತಮ್ಮ ಅಳಲು ತೋಡಿಕೊಂಡರು. ಘಟನೆಯ ವಿವರ: ಬೆಂಗಳೂರು ನಿವಾಸಿಯಾದ ರೇಷ್ಮಾರಾಜ್, ಕುಂದಾಪುರ ತಾಲೂಕು ಕಿರಿಮಂಜೇಶ್ವರ ಗ್ರಾಮದ ನಾಗೂರು ಮೂಲದ ದಿಲೀಪ್ ರಾಜ್ ಎಂಬವರನ್ನು 2004 ರಲ್ಲಿ ವಿವಾಹವಾಗಿದ್ದರು. ದಿಲೀಪ್ ರಾಜ್ ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದು, ಬೆಂಗಳೂರಿನ ಜಯನಗರದ ಬಾಡಿಗೆ ಮನೆಯಲ್ಲಿ ದಂಪತಿ ವಾಸ್ತವ್ಯವಿದ್ದರು. ದಿಲೀಪನ ತಂದೆ ದಿನೇಶ್ ಮತ್ತು ತಾಯಿ ಚಂದ್ರಕಲಾ ಬೆಂಗಳೂರಿನಲ್ಲಿ ಹೋಟೇಲು ಉದ್ಯಮ ನಡೆಸುತ್ತಾ ಮಗನೊಂದಿಗೇ ನೆಲೆಸಿದ್ದರು. ಈ ವೇಳೆ ಅವರು ತಮ್ಮ ಸೊಸೆ ರೇಷ್ಮಾರಾಜ್ ಬಳಿ ಹೋಟೆಲ್ ರಿಪೇರಿ, ಕೆಲಸಗಾರರಿಗೆ ಸಂಬಳ, ಭೂ ವ್ಯವಹಾರ ಎಂದೆಲ್ಲಾ ಹೇಳಿ ಆಗಾಗ ಕೈಗಡ ಪಡೆಯುತ್ತಿದ್ದರು. ಹೀಗೆ ಸೊಸೆಯಿಂದ…

Read More

ಕುಂದಾಪುರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೈಂದೂರು ವಲಯ ಇದರ ಗೌರವಾಧ್ಯಕ್ಷರಾಗಿ ಚಪ್ಪರಮಕ್ಕಿ ಕರುಣಾಕರ ಶೆಟ್ಟಿ ಇವರು ಆಯ್ಕೆಯಾಗಿದ್ದಾರೆ. ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆರಾಡಿಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬೈಂದೂರು ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿ, ಅನೇಕ ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ ಸೇವೆಸಲ್ಲಿಸಿರುತ್ತಾರೆ.

Read More

ಕುಂದಾಪುರ: ತಾಲೂಕು ಯುವ ಬಂಟರ ಸಂಘದ ವಿದ್ಯಾ ದೀವಿಗೆ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಮತ್ತು ತಂದೆ-ತಾಯಿಯರನ್ನು ಕಳೆದುಕೊಂಡ ಕುಂದಾಪುರ ತಾಲೂಕು ಜಡ್ಕಲ್ ಸಮೀಪದ ಜನ್ನಾಲ್ ಗ್ರಾಮದ ಅಜಿತ್ ಶೆಟ್ಟಿ ಮತ್ತು ಅರ್ಚನಾ ಶೆಟ್ಟಿ ಅವರ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸುವ ಸಲುವಾಗಿ ರೂ. ೧೦,೦೦೦ ಮೊತ್ತದ ಆರ್ಥಿಕ ನೆರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಂಪಾರು ನಿತ್ಯಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ ಶಾನ್ಕಟ್ಟು, ವಿದ್ಯಾರ್ಥಿ ವೇತನ ಸಮಿತಿ ಸಂಚಾಲಕ ಪ್ರತಾಪಚಂದ್ರ ಶೆಟ್ಟಿ ಹಳ್ನಾಡು, ಕಾರ್ಯಕಾರಿ ಸಮಿತಿ ಸದಸ್ಯ ಅವಿನಾಶ್ ರೈ ಉಪಸ್ಥಿತರಿದ್ದರು.

Read More

ಕುಂದಾಪುರ: ವಿದ್ಯಾರ್ಥಿ ವೇದಿಕೆಯ ಮೂಲಕ ಗಳಿಸಿದ ಜ್ಞಾನವನ್ನು ಸಮಾಜದ ಒಳಿತಿಗಾಗಿ ವ್ಯಯಿಸಿದಾಗ ಜೀವನ ಸಾರ್ಥಕವೆನಿಸಿಕೊಳ್ಳುತ್ತದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ಪ.ಪೂ.ಕಾಲೇಜಿನ ಪ್ರಾಂಶುಪಾಲ ಅರುಣ ಪ್ರಕಾಶ್ ಶೆಟ್ಟಿ ಹೇಳಿದರು. ಅವರು ಹೆಮ್ಮಾಡಿ ಜನತಾ ಪ.ಪೂ.ಕಾಲೇಜಿನ ವಿದ್ಯಾರ್ಥಿವೇದಿಕೆ ಮತ್ತು ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಳೆದು ಹೋದ ಸಂಗತಿಗಳನ್ನು ಮರೆತು ಭವಿಷ್ಯದಲ್ಲಿ ಇನ್ನೆನೋ ಆಗುತ್ತೆ ಎಂಬ ಭಯ ಬಿಟ್ಟು ಸಕರಾತ್ಮಕವಾಗಿ ಚಿಂತಿಸಿ, ಸದೃಢವಾದ ದೇಹದಲ್ಲಿ ಮನಸ್ಸು ಮತ್ತು ಬುದ್ಧಿಯನ್ನು ತನ್ನ ಹತೋಟಿಯಲ್ಲಿಟ್ಟುಕೊಂಡಾಗ ಉತ್ತಮ ಸಂಸ್ಕಾರದೊಂದಿಗೆ ನಮ್ಮ ವ್ಯಕ್ತಿತ್ವ ಬೆಳೆಯಲು ಸಾದ್ಯ. ಅದಕ್ಕೆ ಪೂರಕವಾಗಿ ನಮ್ಮ ಬದುಕು ಹೊಂದಿಕೊಂಡು ಸಕರಾತ್ಮಕ ಚಿಂತನೆ ಬಲಾಡ್ಯಗೊಳ್ಳುತ್ತದೆ ಎಂದರು. ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ಸಭೆಯ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿ ವೇದಿಕೆಯ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜನತಾ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಬಿ.ಮೋಹನದಾಸ ಶೆಟ್ಟಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಸುಪ್ತವಾದ ಪ್ರತಿಭೆ ಹುದುಗಿರುತ್ತದೆ. ಜೊತೆಯಲ್ಲಿ ಸಂಸ್ಕಾರ,ಸದ್ಬಾವ- ಸದ್ಗುಣಗಳನ್ನು ಮೈಗೂಡಿಸಿಕೊಂಡಾಗ ನಮ್ಮ ಬದುಕು…

Read More

ಗ೦ಗೊಳ್ಳಿ: ತಾಲೂಕಿನ ಗ೦ಗೊಳ್ಳಿಯ ಪ್ರಮುಖ ಮೀನುಗಾರಿಕಾ ರಸ್ತೆಯಾದ ಮ್ಯಾ೦ಗನೀಸ್ ರಸ್ತೆ ಸಂಪೂರ್ಣ ಜರ್ಜರಿತವಾಗಿದ್ದು ಮಳೆಗಾಲವಾಗಿರುವುದರಿ೦ದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟು ಹೋಗಿದೆ. ಇಡೀ ರಸ್ತೆ ಸ೦ಪೂರ್ಣ ಹೊ೦ಡ ಗು೦ಡಿಗಳಿ೦ದ ಕೂಡಿದ್ದು, ಕೆಸರು ನೀರು ಅದರಲ್ಲಿ ತು೦ಬಿಕೊ೦ಡು ನಿತ್ಯ ಸಂಚರಿಸುವ ಪಾದಚಾರಿಗಳಿಗೆ, ವಾಹನ ಸವಾರರಿಗೆ ಸ೦ಚಕಾರವನ್ನು ತ೦ದೊಡ್ಡುತ್ತಿದೆ. ಸಣ್ಣ ಮಳೆಗೆ  ರಸ್ತೆಯ ದೊಡ್ಡ ದೊಡ್ಡ ಹೊ೦ಡಗಳಲ್ಲಿ ನೀರು ತು೦ಬಿ ಕೆರೆಗಳಂತಾಗಿದ್ದು ಸವಾರರು ಬಿದ್ದು ಪೆಟ್ಟು ಮಾಡಿಕೊ೦ಡ ಘಟನೆಯೂ ನಡೆದಿವೆ. ಇ೦ದಲ್ಲ ನಾಳೆ ಸರಿ ಹೋಗಬಹುದು , ರಿಪೇರಿ ಆಗಬಹುದು, ಹೊಸ ರಸ್ತೆ ಆಗಬಹುದು  ಎ೦ದು ಕಳೆದ ಹತ್ತಾರು ವರುಷಗಳಿ೦ದ ಅಲ್ಲಿನ ಜನತೆ ಕಾಯುತ್ತಲೇ ಇದ್ದಾರೆ. ಆದರೆ ಅವರ ಕಾಯುವಿಕೆಗೆ ಅ೦ತ್ಯ ಕ೦ಡುಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಸಾಕಷ್ಟು ಬಾರಿ ಮನವಿ ಸಲ್ಲಿಸಿದ ಬಳಿಕ ಈ ರಸ್ತೆಯನ್ನು ಕಾ೦ಕ್ರೀಟಿಕರಣಗೊಳಿಸಲು ಅಗತ್ಯವಿರುವ ಜಲ್ಲಿ ಮತ್ತು ಮರಳ ರಾಶಿಯನ್ನು ರಸ್ತೆ ಬದಿಗಳಲ್ಲಿ ತ೦ದು ಸುರಿದು ತಿ೦ಗಳುಗಳೇ ಕಳೆಯುತ್ತಾ ಬ೦ದರೂ ಕಾಮಗಾರಿ ಮಾತ್ರ ಆರ೦ಭಗೊಂಡಿಲ್ಲ. ಮ್ಯಾಂಗನೀಸ್ ರಸ್ತೆಯನ್ನು ಅಗಲ ಮಾಡುತ್ತೇವೆ೦ದು ಹೇಳಿ…

Read More

ಗಂಗೊಳ್ಳಿ: ಗಂಗೊಳ್ಳಿ ಸುತ್ತಮುತ್ತಲಿನ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ರಾತ್ರಿ ವೇಳೆ ವಿದ್ಯುತ್ ಕಡಿತವಾಗುತ್ತಿರುವ ಬಗ್ಗೆ ಗಂಗೊಳ್ಳಿ ನಾಗರಿಕ ಹೋರಾಟ ಸಮಿತಿಯ ನಿಯೋಗ ಶನಿವಾರ ಮೆಸ್ಕಾಂ ಗಂಗೊಳ್ಳಿ ಶಾಖೆಗೆ ಭೇಟಿ ನೀಡಿ ಮಾತುಕತೆ ನಡೆಸಿತು. ದೂರವಾಣಿ ಮೂಲಕ ಮೆಸ್ಕಾಂ ಬೈಂದೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಹಾಗೂ ಮೆಸ್ಕಾಂ ಗಂಗೊಳ್ಳಿ ಶಾಖೆಯ ಜ್ಯೂನಿಯರ್ ಇಂಜಿನಿಯರ್ ಅವರನ್ನು ಸಂಪರ್ಕಿಸಿ ರಾತ್ರಿ ವೇಳೆ ನಿಗದಿತ ಸಮಯದಲ್ಲಿ ಹಾಗೂ ಬೆಳಿಗ್ಗೆ ಅನಿಯಮಿತ ವಿದ್ಯುತ್ ಕಡಿತವಾಗುತ್ತಿರುವ ಹಾಗೂ ಇನ್ನಿತರ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡ ನಾಗರಿಕ ಹೋರಾಟ ಸಮಿತಿ ನೇತೃತ್ವದ ನಾಗರಿಕರ ನಿಯೋಗ ಸಮಸ್ಯೆಗೆ ಅತೀ ಶೀಘ್ರದಲ್ಲಿಯೇ ಪರಿಹಾರ ಕಂಡುಕೊಂಡು ನಿರಂತರ ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು. ಕಳೆದ ಕೆಲವು ದಿನಗಳಿಂದ ಅರ್ಥಿಂಗ್ ಸಮಸ್ಯೆಯಿಂದ ಅನೇಕ ಬಾರಿ ವಿದ್ಯುತ್ ಕಡಿತಗೊಳ್ಳುತ್ತಿತ್ತು. ಇದೀಗ ಈ ದೋಷವನ್ನು ಸರಿಪಡಿಸಲಾಗಿದೆ. ರಾತ್ರಿ ವೇಳೆ ಕೆಲವೊಂದು ಕಡೆಗಳಲ್ಲಿ ವಿದ್ಯುತ್ ತಂತಿ ಮೇಲೆ ಮರದ ಕೊಂಬೆಗಳು ಬಿದ್ದಿರುವುದರಿಂದ ವಿದ್ಯುತ್ ಸಂಚಾರದಲ್ಲಿ ತೊಡಕು ಆಗಿತ್ತು. ಆದರೆ…

Read More

ಕುಂದಾಪುರ: ಅಕ್ರಮವಾಗಿ ಮಾಂಸಕ್ಕಾಗಿ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿಯನ್ನಾಧರಿಸಿದ ಅಮಾಸೆಬೈಲ್ ಪೊಲೀಸರು ವಾಹನವನ್ನು ವಶಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಜುಲೈ ೧೦ರಂದು ಬೆಳಿಗ್ಗೆ ೭.೫೦ಕ್ಕೆ ಅಮಾಸೆಬೈಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮಿರಾಂಡ ಎಸ್ಟೇಟ್ ಎಂಬಲ್ಲಿ ಮಾಮಸಕ್ಕೆಂದು ಜಾನುವಾರುಗಳನ್ನು ವಾಹನದಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭ ಮಹೀಂದ್ರ ವಾಹನವೊಂದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕುತ್ತಿಗೆಯನ್ನು ಕಟ್ಟಿ ಹಾಕಲಾಗಿದ್ದ ಸ್ಥಿತಿಯಲ್ಲಿ ಮೂರು ದೊಡ್ಡ ಗಂಡು ಕರುಗಳು ಹಾಗೂ ಒಂದು ಚಿಕ್ಕ ಗಂಡು ಕರುವನ್ನು ವಾಹನದಲ್ಲಿ ತುಂಬಿಸಲಾಗಿತ್ತು. ಈ ಸಂದರ್ಬ ಆರೋಪಿಗಳಾದ ಶಂಕರನಾರಾಯಣ ಗ್ರಾಮದ ಜಡ್ಡು ತಾರೆಮಬೆ ನಿವಾಸಿ ಬಸವ ಕುಲಾಲ್(೩೪), ಕುಪ್ಪಾರು ನಿವಾಸಿ ಚಿಕ್ಕ ಮರಕಾಲ(೭೧), ಹೆದ್ದಾರಿ ಗದ್ದೆ ನಿವಾಸಿ ಶೇಖರ ಶೆಟ್ಟಿ(೬೭) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ಹೆಗ್ಗೇರಿ ನಿವಾಸಿಯಾದ ಅಂತಯ್ಯ ಶೆಟ್ಟಿ ಹಾಗೂ ಆತನ ಅಳಿಯ ಪರಾರಿಯಾಗಿದ್ದಾರೆ. ಜಾನುವಾರುಗಳ ಒಟ್ಟು ಮೌಲ್ಯ…

Read More