ಕುಂದಾಪುರ: ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ವಕೀಲರ ಸಂಘ (ರಿ.) ಕುಂದಾಪುರ, ಅಭಿಯೋಗ ಇಲಾಖೆ, ತಾಲೂಕು ಆಡಳಿತ ಕುಂದಾಪುರ ಇವರ ಆಶ್ರಯದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ರಾಜಶೇಖರ ವಿ.ಪಾಟೀಲ್ ಬಾಲ ಕಾರ್ಮಿಕ ಪದ್ಧತಿ ಸಮಾಜಕ್ಕೆ ಅಂಟಿಕೊಂಡಿರುವ ಒಂದು ಪಿಡುಗು. ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಈ ಪಿಡುಗಿನ ನಿರ್ಮೂಲನೆ ಸಾಧ್ಯ, ಸರಕಾರ ಗುರುತರವಾದ ಜವಾಬ್ದಾರಿ ಹೊತ್ತು ಬಾಲ ಕಾರ್ಮಿಕ ಪದ್ಧತಿಯನ್ನು ತೊಲಗಿಸುವಲ್ಲಿ ಪ್ರಯತ್ನಶೀಲವಾಗಬೇಕಾಗಿದೆ ಎಂದು ಹೇಳಿದರು. ಕೇವಲ ಕಾನೂನು ಅನುಷ್ಠಾನಗಳಿಂದ ಈ ಪದ್ಧತಿಯನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಮಕ್ಕಳ ತಂದೆ-ತಾಯಿ ಪೋಷಕರಲ್ಲಿ ಅರಿವು ಮೂಡಿಸುವ ಮೂಲಕ ಸಮಾಜದಲ್ಲಿ ಈ ಪಿಡುಗನ್ನು ಹೋಗಲಾಡಿಸಲು ಸಾಧ್ಯ. ಅದರೊಂದಿಗೆ ಸರಕಾರ ಜವಾಬ್ದಾರಿ ಹೊತ್ತು ಬಾಲಕಾರ್ಮಿಕರಾಗಿ ಕಂಡು ಬಂದ ಮಕ್ಕಳಿಗೆ ಪುನರ್‌ಜೀವನವನ್ನು ಕಲ್ಪಿಸುವಲ್ಲಿ ಕ್ರಮತೆಗೆದುಕೊಂಡರೆ ಮಾತ್ರ…
Author: Editor Desk
ಕುಂದಾಪುರ: ನಗರದ ಒಳಚರಂಡಿ ನಿರ್ಮಾಣಕ್ಕಾಗಿ ಅವಶ್ಯವಿರುವ ಕೃಷಿ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದು ಸಮಂಜಸವಲ್ಲ. ಕುಂದಾಪುರ ನಗರಕ್ಕೆ ಹೊಂದಿಕೊಂಡಿರುವ ವಡೇರಹೊಬಳಿ ಗ್ರಾಮದ ಜನನಿಬಿಡ ಪ್ರದೇಶದಲ್ಲಿ ಕೃಷಿ, ತೋಟ ಹಾಗೂ ವಾಸ್ತವ್ಯಕ್ಕೆ ಬಳಸಿಕೊಂಡಿರುವ ಭೂಮಿಯನ್ನು ಏಕಾಏಕಿ ವಶಪಡಿಸಿಕೊಳ್ಳಲು ಮುಂದಾಗಿರುವ ಆಡಳಿತ ಕ್ರಮವನ್ನು ಬಲವಾಗಿ ಖಂಡಿಸುತ್ತೇವೆ ಎಂದು ವಡೇರಹೊಬಳಿ ಗ್ರಾಮದಸ ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿಯ ಸಂಚಾಲಕ ರಾಜೇಶ್ ವಡೇರಹೊಬಳಿ ಹೇಳಿದರು. ಅವರು ಕುಂದಾಪುರ ಪುರಸಭೆಯ ಎದುರು ಹಮ್ಮಿಕೊಂಡ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡುತ್ತಿದ್ದರು. ವಡೇರಹೋಬಳಿ ಗ್ರಾಮದ ಸುಮಾರು 84ಕ್ಕೂ ಅಧಿಕ ಭೂಹಿಡುವಳಿದಾರ ಕೃಷಿಕರಿಗೆ ನೊಟೀಸು ಜಾರಿಮಾಡಲಾಗಿದ್ದು, ಬಲತ್ಕಾರದಿಂದ ಭೂ ಸ್ವಾಧೀನಪಡಿಸಿರುವುದರ ಬಗ್ಗೆ ಆಕ್ಷೇಪಣೆಯನ್ನು ಘೋಷಣೆಯ ಮೂಲಕ ಕೂಗಿದ ಸಂತ್ರಸ್ತರು ಇಂತಹ ಪ್ರದೆಶದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಒಳಚರಂಡಿ ಯೋಜನೆಯ ನಿರ್ಮಾಕ್ಕೆ ಭೂಸ್ವಾಧೀನ ಪಡಿಸುವುದಕ್ಕೆ ಆಕ್ಷೇಪಣೆ ದೂರು ದಾಖಲಿಸಬೇಕು ಎಂದು ಆಗ್ರಹಿಸಿದರು. ಒಳಚರಂಡಿ ನಿರ್ಮಾಣಕಕ್ಕೆ ಬದಲಿ ಪರ್ಯಾಯ ಭೂಮಿಯನ್ನು ಸ್ವಾಧೀನಪಡಿಸಲು ಇಲಾಖೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಲಾಯಿತು. ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಪುರಸಭಾ ಅಧ್ಯಕ್ಷೆ ಕಲಾವತಿ ಸಮಸ್ಯೆಗೆ…
ಕುಂದಾಪುರ: ವಿವಿಧ ಸಂಘ ಸಂಸ್ಥೆಗಳು ಒಟ್ಟಾಗಿ ರಕ್ತದಾನ ಶಿಬಿರಗಳನ್ನು ಆಗಾಗ್ಗೆ ಆಯೋಜಿಸುವುದರಿಂದ ರಕ್ತದ ಕೊರತೆಯನ್ನು ಸುಲಭವಾಗಿ ನೀಗಿಸಬಹುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಹೇಳಿದರು. ಅವರು ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಪೊಲೀಸ್, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಕುಂದಾಪುರ, ಗಂಗೊಳ್ಳಿ ಶ್ರೀ ಜಟ್ಟಿಗೇಶ್ವರ ಯುತ್ ಕ್ಲಬ್, ಕರಾವಳಿ ಸ್ವಯಂಪ್ರೇರಿತ ರಕ್ತದಾನಿಗಳ ಸಂಘ, ಸರ್ವಧರ್ಮ ಸೌಹಾರ್ದ ಸಮ್ಮೀಲನ ವೇದಿಕೆ, ಉಡುಪಿ ಜಿಲ್ಲಾ ರಕ್ತನಿಧಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಫಾಟಿಸಿ ಮಾತನಾಡಿದರು. ವಿವಿಧ ಕಾಲೇಜುಗಳ ಸಹಭಾಗಿತ್ವದೊಂದಿಗೆ ಈ ಶಿಬಿರ ಆಯೋಜನೆಗೊಂಡಿರುವುದು ಶ್ಲಾಘನಾರ್ಹ. ಇಂತಹ ಸಮಾಜ ಸೇವಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ನುಡಿದರು. ಕುಂದಾಪುರದ ವೈದ್ಯಾಧಿಕಾರಿ ಡಾ. ಉದಯಶಂಕರ ಎ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಉದ್ಯಮಿ ಜನಾಬ್ ಎಂ. ಎಂ. ಇಬ್ರಾಹಿಂ, ಸರಕಾರಿ ನೌಕರರ…
ಉಡುಪಿ: ಒಂದು ತಿಂಗಳ ತೋಟಗಾರಿಕೆಯಲ್ಲಿ ಕೌಶಲ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು (ಮೂರು ತರಬೇತಿಗಳು)ಜು. 2ರಿಂದ 31ರ ವರೆಗೆ, ಆ. 1ರಿಂದ 31ರ ವರೆಗೆ ಹಾಗೂ ಸೆ. 1ರಿಂದ 30ರ ವರೆಗೆ ಕೋಲಾರದ ತಮಕದಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ. ಈ ತರಬೇತಿಗೆ ಅರ್ಹ ರೈತ ಮಕ್ಕಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಂಬಂಧಿಧಿಸಿದ ತಾಲೂಕಿನ ತೋಟಗಾರಿಕೆ ಇಲಾಖೆಯಿಂದ ಪಡೆದು ದಾಖಲೆಗಳೊಂದಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯ ವಲಯ), ತೋಟಗಾರಿಕೆ ಉಪನಿರ್ದೇಶಕರ ಕಚೇರಿ, ಬೆಂದೂರು ಕ್ರಾಸ್, ಮಂಗಳೂರು ಇಲ್ಲಿಗೆ ಜೂ. 27ರೊಳಗೆ ಸಲ್ಲಿಸಿ ಸಂರ್ದಶನಕ್ಕೆ ಹಾಜರಾಗಲು ತಿಳಿಸಿದೆ. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 2,000 ರೂ. ಶಿಷ್ಯ ವೇತನ ನೀಡಲಾಗುವುದು. ಅಭ್ಯರ್ಥಿಗಳು ಎಸೆಸೆಲ್ಸಿ ತೇರ್ಗಡೆಯಾಗಿದ್ದು, ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು. ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು. ಹೆಚ್ಚಿನ ಮಾಹಿತಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯ ವಲಯ)/ಹಾರ್ಟಿ ಕ್ಲಿನಿಕ್, ತೋಟಗಾರಿಕೆ ಉಪನಿರ್ದೇಶಕರ ಕಚೇರಿ, ಬೆಂದೂರು ಕ್ರಾಸ್, ಮಂಗಳೂರು ಇಲ್ಲಿ ಸಂಪರ್ಕಿಸಬಹುದು.
ಉಡುಪಿ: ವಿದೇಶದಲ್ಲಿರುವ ಮಹಿಳೆಯೊಬ್ಬರ ಐಸಿಐಸಿಐ ಬ್ಯಾಂಕಿನ ಮಣಿಪಾಲ ಶಾಖೆಯಲ್ಲಿದ್ದ ಖಾತೆಯಿಂದ ಅಂತರ್ಜಾಲ ತಂತ್ರಜ್ಞಾನದ ಮೂಲಕ ದುಷ್ಕರ್ಮಿಗಳು ಹಂತ-ಹಂತವಾಗಿ 40,84,200 ನಗದೀಕರಿಸಿಕೊಂಡು ವಂಚನೆ ನಡೆಸಿದ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಬುದಾಬಿಯ ಯುನೈಟೆಡ್ ಅರಬ್ ಎಮಿರೆಟ್ಸ್‌ನಲ್ಲಿರುವ ಆರತಿ ಪೂಜಾರಿ ದೂರು ನೀಡಿದವರು. ತಾನು ಐಸಿಐಸಿಐ ಬ್ಯಾಂಕಿನ ಮಣಿಪಾಲ ಶಾಖೆಯಲ್ಲಿ ಖಾತೆಯನ್ನು ಹೊಂದಿದ್ದು, 2015ರ ಎ. 3ರಿಂದ 21ರ ವರೆಗೆ ಯಾರೋ ದುಷ್ಕರ್ಮಿಗಳು ಇಂಟರ್‌ನೆಟ್ ಬ್ಯಾಂಕಿಂಗ್ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು 40 ಲ.ರೂ.ಗೂ ಅಧಿಕ ಹಣವನ್ನು ನಗದೀಕರಣ ಮತ್ತು ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಕುಂದಾಪುರ: ತನಗೆ ಹಣ ನೀಡಲಿಲ್ಲವೆಂದು ಸಿಟ್ಟುಕೊಂಡ ಅಳಿಯ ವೃದ್ಧ ಅತ್ತೆಯನ್ನೇ ಹೊಡೆದು ಕೊಂದ ಘಟನೆ ತಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಉಪ್ಪಿನಕುದ್ರುವಿನಲ್ಲಿ ನಡೆದಿದೆ. ಉಪ್ಪಿನಕುದ್ರು ರಾಮಮಂದಿರದ ಬಳಿಯ ಅಂಗಡಿಮನೆ ದಿ| ರಾಮಕೃಷ್ಣ ಶೇರೆಗಾರ್ ಅವರ ಪತ್ನಿ ಜಾನಕಿ(80) ಮೃತ ಮಹಿಳೆ. ಆಕೆಯ ಪುತ್ರಿಯ ಗಂಡ ಬೈಂದೂರಿನ ಮಯ್ಯಾಡಿ ನಿವಾಸಿ ಜನಾರ್ದನ ಶೇರೆಗಾರ್ (45) ಕೊಲೆ ಮಾಡಿದ ಆರೋಪಿ. ಜನಾರ್ದನ ಶೇರೆಗಾರ್ ಬೆಂಗಳೂರಿನಲ್ಲಿ ಅಡುಗೆ ಕೆಲಸಕ್ಕೆ ಹೋಗುತ್ತಿದ್ದ. ಮೂರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಪತ್ನಿಯ ಮೃತಪಟ್ಟ ಬಳಿಕ ಪುತ್ರನೊಂದಿಗೆ ಬೆಂಗಳೂರಿನಲ್ಲಿಯೇ ವಾಸವಾಗಿದ್ದ. ಆ ನಂತರ ಆತ ಪತ್ನಿಯ ಮನೆಗೆ ಬಂದಿರಲಿಲ್ಲ. ಒಂದು ವಾರದ ಹಿಂದೆ ಬೆಂಗಳೂರಿನಿಂದ ಮಯ್ಯಾಡಿಗೆ ಬಂದಿದ್ದ ಜನಾರ್ದನ ತನ್ನ ಸೋದರಳಿಯನ ಮದುವೆಯ ಕಾರಣವೊಡ್ಡಿ ಉಪ್ಪಿನಕುದ್ರುವಿನಲ್ಲಿಯೇ ನಿಂತಿದ್ದ ಎನ್ನಲಾಗಿದೆ. ಕಳೆದ ಒಂದು ವಾರದಿಂದ ಅತ್ತೆಯನ್ನು ಅಳಿಯ ಜನಾರ್ದನ ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದ್ದು, ಆದರೆ ಅತ್ತೆ ಹಣ ನೀಡಿರಲಿಲ್ಲ. ಮಂಗಳವಾರ ರಾತ್ರಿ ಹಣಕ್ಕಾಗಿ ಇಬ್ಬರ ನಡುವೆ ಜಗಳ ನಡೆದಿದ್ದು ಜಗಳ ಮುಂದುವರಿದಾಗ ಅತ್ತೆಯ…
ಗ೦ಗೊಳ್ಳಿಯ ಲೈಟ್‌ಹೌಸ್‌ನ ಶ್ರೀ ಜಟ್ಟಿಗೇಶ್ವರ ಯುತ್ ಕ್ಲಬ್‌ನ ರಜತೋತ್ಸವಕ್ಕೆ ಸ೦ಭ್ರಮದ ಚಾಲನೆ ಗ೦ಗೊಳ್ಳಿ: ಅ೦ಕ ಗಳಿಕೆಯ ಆಧಾರದ ಮೇಲೆ ಯಾವುದೇ ಮಕ್ಕಳ ಬುದ್ಧಿವ೦ತಿಕೆ ಅಥವಾ ಸಾಮರ್ಥ್ಯವನ್ನು ಅಳೆಯಬಾರದು. ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವವನ್ನು ಬೆಳೆಸುವಲ್ಲಿ ನಾವು ಪ್ರಯತ್ನಿಸಬೇಕು. ಉತ್ತಮ ವ್ಯಕ್ತಿತ್ವವನ್ನು ಹೊ೦ದುವ ಮಗು ಉತ್ತಮ ಅ೦ಕಗಳನ್ನು ಕೂಡ ಪಡೆಯಬಲ್ಲುದು. ಕಲಿಕೆ ಅನ್ನುವುದು ಉತ್ತಮ ವ್ಯಕ್ತಿತ್ವದ ಒ೦ದು ಭಾಗವೇ ಆಗಿದೆ ಎ೦ದು ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕ, ಬರಹಗಾರ ನರೇ೦ದ್ರ ಎಸ್ ಗ೦ಗೊಳ್ಳಿ ಹೇಳಿದರು. ಅವರು ಇತ್ತೀಚೆಗೆ ಗ೦ಗೊಳ್ಳಿಯ ಶ್ರೀರಾಮಮ೦ದಿರದಲ್ಲಿ ನಡೆದ ಗ೦ಗೊಳ್ಳಿಯ ಲೈಟ್‌ಹೌಸ್‌ನ ಶ್ರೀ ಜಟ್ಟಿಗೇಶ್ವರ ಯುತ್ ಕ್ಲಬ್‌ನ ರಜತೋತ್ಸವಕ್ಕೆ ಸ೦ಭ್ರಮದ ಚಾಲನೆ ಮತ್ತು ತೌಹೀದ್ ಎಜುಕೇಶನಲ್ ಟ್ರಸ್ಟ್(ರಿ) ಇವರ ಸಹಭಾಗಿತ್ವದಲ್ಲಿ ನಡೆದ 12ನೇ ವರುಷದ ಉಚಿತ ಪುಸ್ತಕ ವಿತರಣಾ ಸಮಾರ೦ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮಕ್ಕಳನ್ನು ಪ್ರೀತಿಸಿ ಆದರೆ ಮುದ್ದು ಮಾಡಲು ಹೋಗಬೇಡಿ. ಮುದ್ದು ಮಕ್ಕಳನ್ನು ದುರ್ಬಲಗೊಳಿಸಿದರೆ ಪ್ರೀತಿ ಅವರನ್ನು ರೂಪಿಸುತ್ತದೆ ಎ೦ದು ಅವರು ಹೇಳಿದರು. ಇನ್ನೋರ್ವ ಮುಖ್ಯ…
ಗಂಗೊಳ್ಳಿಯ ಅಂಜುಮಾನ್ ಇಂಗ್ಲೀಷ್ ಮೀಡಿಯಂ ಶಾಲೆಗೆ ಸ್ಮಾರ್ಟ್ ಕ್ಲಾಸ್ ಕೊಡುಗೆ ಗಂಗೊಳ್ಳಿ: ಕಳೆದ 17 ವರ್ಷಗಳಿಂದ ಪಲ್ಸ್ ಪೋಲಿಯೋ ಅಭಿಯಾನವನ್ನ ಕೈಗೊಂಡ ರೋಟರಿ ಕ್ಲಬ್ ಪೋಲಿಯೋ ಮುಕ್ತ ಭರತ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದೆ. ಅದರಂತೆ ಕಳೆದ 5 ವರ್ಷಗಳಿಂದ ಸಾಕ್ಷರತೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದು ದೇಶದ ಕಟ್ಟಕಡೆಯ ಮಗುವೂ ಕೂಡ ಗುಣಮಟ್ಟದ ಶಿಕ್ಷಣ ಪಡೆಯುವಂತಾಗಬೇಕು ಎಂಬ ದಿಶೆಯಲ್ಲಿ ರೋಟರಿ ಕಾರ್ಯನಿರ್ವಹಿಸುತ್ತಿದೆ ಎಂದು ರೋಟರಿ ಕ್ಲಬ್ ಮಿಡ್‌ಟೌನ್ ಅಧ್ಯಕ್ಷ ಅಬ್ದುಲ್ ಬಶೀರ್ ಕೋಟ ಹೇಳಿದರು. ಅವರು ಜೂ.11ರಂದು ರೋಟರಿ ಕ್ಲಬ್ ಮಿಡ್‌ಟೌನ್ ವತಿಯಿಂದ ಗಂಗೊಳ್ಳಿಯ ಅಂಜುಮಾನ್ ಇಂಗ್ಲೀಷ್ ಮೀಡಿಯಂ ಶಾಲೆಗೆ ಕೊಡ ಮಾಡಲ್ಪಟ್ಟ ಇ-ಶಾಲೆ ಸ್ಮಾರ್ಟ್ ಕ್ಲಾಸನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದ ಅರ್ಹವಾದ ಶಾಲೆಯನ್ನು ಗುರುತಿಸಿ ಸ್ಮಾರ್ಟ್ ಕ್ಲಾಸನ್ನು ಕೊಡುಗೆಯಾಗಿ ನೀಡಿದ್ದು ದಿನೇ ದಿನೇ ಬದಲಾಗುತ್ತಿರುವ ಆಧುನಿಕ ಜಗತ್ತಿನಲ್ಲಿ ಗುಣಮಟ್ಟದ ಶಿಕ್ಷಣವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಪಡೆಯುವಂತಾಗಲಿ ಎಂದು ಅವರು ಶುಭ ಹಾರೈಸಿದರು. ಗಂಗೊಳ್ಳಿಯ ಅಂಜುಮಾನ್ ಇಂಗ್ಲೀಷ್ ಮೀಡಿಯಂ ಶಾಲೆಗೆ ಸೆಲ್ಕೋ…
ಕುಂದಾಪುರ: ತಾಲೂಕಿನಲ್ಲಿ ಮಳೆಗಾಲದ ಸಮಯದಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪದ ಸಂತ್ರಸ್ಥರಿಗಾಗಿ ತಾಲೂಕು ಕಚೇರಿಯಲ್ಲಿ ಕಂಟ್ರೋಲ್ ಕೊಠಡಿಯನ್ನು ಪ್ರಾರಂಭಿಸಿ ದಿನದ 24 ಗಂಟೆಗಳ ಕಾಲ ಕಂದಾಯ ಇಲಾಖೆಯ ಹಾಗೂ ಇತರ ಇಲಾಖೆಯ ಸಿಬ್ಬಂದಿಗಳನ್ನು ಬಳಸಿಕೊಸಿಕೊಂಡು ಕಾರ್ಯಾಚರಿಸುವಂತೆ ಮಾಡಲು ತಯಾರಿ ನಡೆಸಿದ್ದು ಪ್ರಾಕೃತಿಕ ವಿಕೋಪ ಸಂಭವಿಸಿದಾಗಿ ಕೂಡಲೇ ಈ ಕಂಟ್ರೋಲ್ ಕೊಠಡಿಗಳಿಗೆ ಮಾಹಿತಿ ನೀಡಬಹುದಾಗಿದೆ. ಜಿಲ್ಲಾಡಳಿತ ಸಂತೃಸ್ತರಿಗೆ 24 ಗಂಟೆಗಳ ಒಳಗೆ ಪರಿಹಾರ ನೀಡಬೇಕು ಎನ್ನುವ ಉದ್ದೇಶವನ್ನು ಹೊಂದಿರುವುದರಿಂದ ನಷ್ಟ ಸಂಭವಿಸಿದ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಪ್ರಾಥಮಿಕ ಅಂದಾಜು ವರದಿಯನ್ನು ನೀಡಬೇಕು ಹಾಗೂ 24 ಗಂಟೆಗಳ ಒಳಗೆ ಇಂಜಿನಿಯರಿಂಗ್ ಇಲಾಖೆಯ ಅಧಿಕಾರಿಗಳು ನಷ್ಟದ ಒಟ್ಟು ಪ್ರಮಾಣದ ಕುರಿತು ಮಾಹಿತಿ ನೀಡಲು ಕ್ರಮ ಕೈಗೊಳ್ಳಬೇಕು. ಯಾವುದೆ ಕಾರಣಕ್ಕೂ ವಿಳಂಭವಾಗಿ ಬಂದ ವರದಿಗಳನ್ನು ಪರಿಗಣಿಸಲಾಗುವುದಿಲ್ಲ ಕುಂದಾಪುರದ ತಹಸೀಲ್ದಾರ್ ಗಾಯತ್ರಿ ನಾಯಕ್ ತಿಳಿಸಿದರು. ಅವರು ಮಳೆಗಾಲದಲ್ಲಿ ಎದುರಾಗುವ ಪ್ರಕೃತಿ ವಿಕೋಪಗಳನ್ನು ಸಮರ್ಥವಾಗಿ ಎದುರಿಸಲು ಅನೂಕೂಲವಾಗುವಂತೆ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಲು ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ…
ಕುಂದಾಪುರ: ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಆಯ್ಕೆಯಾಗಿರುವ ಬೈಂದೂರು ಕ್ಷೇತ್ರ ವ್ಯಾಪ್ತಿಯ ನೂತನ ಗ್ರಾಮ ಪಂಚಾಯಿತಿ ಸದಸ್ಯರಿಗೆ ಜೂ.13 ರಂದು ಶನಿವಾರ ಬೆಳಿಗ್ಗೆ 11 ಗಂಟೆಗೆ ಹೆಮ್ಮಾಡಿಯ ಜಯಶ್ರೀ ಸಭಾಭವನದಲ್ಲಿ ನಡೆಯುವ ಪಕ್ಷದ ಕಾರ್ಯಕ್ರಮದಲ್ಲಿ ಅಭಿನಂದನೆ ಮಾಡಲಾಗುವುದು ಎಂದು ಬೈಂದೂರು ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ಎಂ ಸುಕುಮಾರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ಎಸ್ ಯಡಿಯೂರಪ್ಪ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ್ ಹೆಗ್ಡೆ ಪಾಲ್ಗೊಳ್ಳಲಿದ್ದಾರೆ ಎಂದು ಅವರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
