Author: Editor Desk

ಕುಂದಾಪುರ: ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿ ನಂತರ ತನಗೆ ಕೈಕೊಟ್ಟಿದ್ದಾನೆ ಎಂದು ಪೊಲೀಸರು ಉಡುಪಿ ಮೆಸ್ಕಾಂ ಎಲ್.ಟಿ. ರೇಟಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕುಂದಾಪುರ ಮೂಲದ ರಾಕೇಶ್‌ ಎನ್ನುವನನ್ನು ಬಂಧಿಸಿದ್ದಾರೆ. ಕುಮಟಾದ ನಿವಾಸಿಯಾಗಿರುವ ಯುವತಿ ಈ ಬಗ್ಗೆ ಅಮಾಸೆಬೈಲು ಠಾಣೆಯಲ್ಲಿ ನೀಡಿದ್ದರು. ಕುಮಟಾದಲ್ಲಿ ಸರಕಾರಿ ಅಧಿಕಾರಿಯಾಗಿದ್ದ ಕುಂದಾಪುರದ ರಾಕೇಶ್‌ ಅವರ ಪರಿಚಯ ಸ್ನೇಹವಾಗಿ, ಆ ಸ್ನೇಹ ಪ್ರೇಮಕ್ಕೆ ತಿರುಗಿತ್ತು ಹಾಗೂ ಅವರು ಮದುವೆಯಾಗುವ ಬಗ್ಗೆ ಭರವಸೆಯನ್ನು ನೀಡಿ ದೈಹಿಕ ಸಂಪರ್ಕ ಬೆಳಸಿದ್ದ ಆತ ನಂತರ ಕೈಕೊಟ್ಟಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಅನ್ವಯ ಆರೋಪಿಯ ವಿರುದ್ಧ 376 ಮತ್ತು 417 ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಂಧಿಸಿ, ವೈದ್ಯಕೀಯ ತಪಾಸಣೆಯ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಸುಂಧರಾ ಅವರು ಅಮಾಸೆಬೈಲು ಠಾಣೆಯಲ್ಲಿ ದೂರು ನೀಡುತ್ತಿದ್ಧಂತೆ, ಪ್ರಕರಣ ಇನ್ನಷ್ಟು ತಿರುವುವನ್ನು ಪಡೆದುಕೊಂಡಿದ್ದು, ಮದುವೆಯ ಬಗ್ಗೆ ಅವರ ಮನೆಯವರ ನಡುವೆ ಮಾತುಕತೆ ನಡೆದಿತ್ತು. ಈ ಹಿನ್ನಲೆಯಲ್ಲಿ ಆರೋಪಿ ರಾಕೇಶ್‌ ಹಾಗೂ ಯುವತಿಯನ್ನು ಸಂಜೆ…

Read More

ಕುಂದಾಪುರ: ಕೆಸರು, ಹೂಳು ತೆಗೆಯಲೆಂದು ಬಾವಿಗೆ ಇಳಿದು ಮೇಲೆ ಬರಲಾಗದೇ ಒದ್ದಾಡುತ್ತಿದ್ದ ಎಪ್ಪತ್ತರ ವಯಸ್ಸಿನ ಹಿರಿಯ ವ್ಯಕ್ತಿಯನ್ನು ಗ್ರಾಮ ಪಂಚಾಯತ್‌ ಅಧ್ಯಕ್ಷರೇ ಸ್ವತಃ ಬಾವಿಗಿಳಿದು ಸುರಕ್ಷಿತವಾಗಿ ಮೇಲೆತ್ತಿದ ಘಟನೆ ನಾಡಾ ಗ್ರಾಮದ ರಾಮನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಮನಗರ ನಿವಾಸಿ ನಿವೃತ್ತ ಮಿಲಿಟರಿ ಅಧಿಕಾರಿ ಜೂ. 1ರಂದು ಬೆಳಗ್ಗೆ ತನ್ನ ತೋಟದ ಬಾವಿಯ ಕೆಸರು ಹೂಳು ತೆಗೆಯಲೆಂದು ಒಬ್ಬಂಟಿಯಾಗಿ ಬಾವಿಗಿಳಿದಿದ್ದರು. 40 ಅಡಿಗಳಷ್ಟು ಆಳವಿದ್ದ ಬಾವಿಯಿಂದ ಬುಟ್ಟಿಯ ಮೂಲಕ ಮೇಲೆತ್ತಿದ ಹೂಳನ್ನು ವಿಲೇವಾರಿ ಮಾಡಲು ನೆರೆಯವರಾದ ಬಚ್ಚಿ ಮತ್ತು ಮಂಜುನಾಥ ಪೂಜಾರಿ ಅವರು ಬಾವಿಕಟ್ಟೆಯಲ್ಲಿ ನಿಂತಿದ್ದರು. ಕೆಲಸ ಮುಗಿಸಿ ಬಾವಿಯಿಂದ ಮೇಲೆ ಬರಲು ಯತ್ನಿಸಿದ ಅವರು ಸರಾಗವಾಗಿ ಮೇಲೆ ಬರಲಾಗದೆ ಎಡವಿ ಎರಡು ಬಾರಿ ಬಾವಿಗೆ ಬಿದ್ದು, ಭಯ-ಆತಂಕದಿಂದ ಕೂಗಿಕೊಂಡರು. ಅವರು ಅಪಾಯದಲ್ಲಿರುವುದನ್ನು ಗಮನಿಸಿದ ಮಂಜುನಾಥ ಪೂಜಾರಿ ಸಹಾಯಕ್ಕಾಗಿ ಬೇರೆಯವರನ್ನು ಕೂಗಿ ಕರೆದರು. ಓಡಿಬಂದು ಪರಿಸ್ಥಿತಿಯನ್ನು ಅರಿತ ಸ್ಥಳೀಯ ಯುವಕರಾದ ದಯಾನಂದ ಮತ್ತು ಸತ್ಯನಾರಾಯಣ ಅವರು ತತ್‌ಕ್ಷಣ ನಾಡಾ ಗ್ರಾಮ…

Read More

ಕುಂದಾಪುರ: ನಗರದ ಶಾಸ್ತ್ರಿ ಸರ್ಕಲ್‌ ಬಳಿ ಬುಧವಾರ ಮಧ್ಯಾಹ್ನ ಬೈಕ್‌ ಹಾಗೂ ಟಿಪ್ಪರ್‌ ನಡುವೆ ನಡೆದ ಅಪಘಾತದಲ್ಲಿ ಬೈಕ್‌ ಸವಾರ ಕುಂದಾಪುರ ಶೆರೂನ್‌ ಹೋಟೇಲ್‌ನ ಹರ್ಷ ರೆಫ್ರೆಶ್‌ಮೆಂಟ್‌ನ ಮೆನೇಜರ್‌ ನರಸಿಂಹ ಐತಾಳ್‌ (48) ಅವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಬುಧವಾರ ಮಧ್ಯಾಹ್ನ ಮನೆಗೆ ಕಡೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಅವರಿಗೆ ಕೋಟೇಶ್ವರದತ್ತ ಸಾಗುತ್ತಿದ್ದ ಟಿಪ್ಪರ್‌ವೊಂದು ಹಿಂದಿನಿಂದ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಐತಾಳ್‌ರ ಮೇಲೆ ಟಿಪ್ಪರ್‌ ಹರಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಮೂಲತಃ ಬಂಟ್ವಾಳದವರಾಗಿದ್ದ ಇವರು ಕಳೆದ ಇಪ್ಪತ್ತು ವರ್ಷಗಳಿಂದ ಕುಂದಾಪುರದಲ್ಲಿ ನೆಲೆಸಿದ್ದು, ಇದೇ ಹೋಟೇಲ್‌ನಲ್ಲಿ ಕೆಲಸನಿರ್ವಹಿಸುತ್ತಿದ್ದರು. ಪ್ರಸ್ತುತ ಅವರು ಬಾಡಿಗೆ ಮನೆಯಲ್ಲಿದ್ದು ಜೂ.11ರಂದು ಅವರ ಸ್ವಂತ ಮನೆಯ ಗೃಹಪ್ರವೇಶ ನಡೆಯಬೇಕಾಗಿತ್ತು. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Read More

ಕೋಟ: ಮಣೂರು ಪಡುಕರೆಯ ಗೀತಾನಂದ ಫೌಂಡೇಶನ್‌ ವತಿಯಿಂದ ಸುಮಾರು 1,000 ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್‌ ಪುಸ್ತಕ ವಿತರಣೆ, 250 ಮಂದಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, 2014-15ನೇ ಸಾಲಿನಲ್ಲಿ ಎಸೆಸೆಲ್ಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಸೇರಿದಂತೆ ಸುಮಾರು 5 ಲಕ್ಷಕ್ಕೂ ಅಧಿಕ ಮೊತ್ತದ ಪ್ರತಿಭಾ ಪುರಸ್ಕಾರ ಹಾಗೂ ಪಸ್ತಕ ವಿತರಣೆ ಕಾರ್ಯಕ್ರಮ ಜೂ. 3ರಂದು ಪಡುಕರೆ ಗೀತಾನಂದ ಬಯಲು ರಂಗ ಮಂಟಪದಲ್ಲಿ ಜರಗಿತು. ಡಾ| ಜಿ. ಶಂಕರ್‌ ಪ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್‌ ಕಾರ್ಯಕ್ರಮ ಉದ್ಘಾಟಿಸಿ, ಶೈಕ್ಷಣಿಕ ಕಾರ್ಯಕ್ರಮಕ್ಕೆ ನೆರವು ನೀಡಿದಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವಾದ ಪುಣ್ಯ ಲಭಿಸುತ್ತದೆ. ಊರಿನ ಶಿಕ್ಷಣ ಸಂಸ್ಥೆ ಉಳಿವಿಗೆ ಗ್ರಾಮಸ್ಥರ ಹೋರಾಟ ಅಗತ್ಯ. ಪಡುಕರೆಯಲ್ಲಿ ಒಂದೇ ಸೂರಿನಡಿ ಅಂಗನವಾಡಿಯಿಂದ ಪದವಿ ಶಿಕ್ಷಣದವರೆಗೆ ಶಿಕ್ಷಣ ಪಡೆಯಲು ಪ. ಪೂ. ಕಾಲೇಜು ಅಗತ್ಯವಿದೆ. ಈ ನಿಟ್ಟಿನಲ್ಲಿ ಅನೇಕ ವರ್ಷದಿಂದ ಹೋರಾಟ ನಡೆಸುತ್ತಿದ್ದು, ಸರಕಾರ ನಮ್ಮ ಕೋರಿಕೆಗೆ ಪುರಸ್ಕಾರ ನೀಡಿಲ್ಲ. ಮುಂದೆ…

Read More

ಗಂಗೊಳ್ಳಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಶ್ವೇತಾ ಕರ್ಣಿಕ್ ಎಸ್. ರವರು ಎಂ.ಟೆಕ್. (ಡಿಜಿಟಲ್ ಕಮ್ಯೂನಿಕೇಶನ್ ಎಂಡ್ ನೆಟ್‌ವರ್ಕಿಂಗ್)ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಇತ್ತೀಚಿಗೆ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಯಿತು. ಈಕೆ ಗಂಗೊಳ್ಳಿಯ ದಿ. ಎಸ್.ಲಕ್ಷ್ಮೀನಾರಾಯಣ ಕರ್ಣಿಕ್ ಹಾಗೂ ದಿ.ಸೀತಮ್ಮನವರ ಮೊಮ್ಮಗಳಾಗಿದ್ದು, ಬೆಂಗಳೂರಿನ ನಿವಾಸಿ ಉಷಾ ಹಾಗೂ ಸುರೇಶ ಕರ್ಣಿಕ್ ಅವರ ಪುತ್ರಿಯಾಗಿದ್ದಾಳೆ.

Read More

ಬೈಂದೂರು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಲಾವಿದ ನರಸಿಂಹ ಆರ್. ಉಪ್ಪುಂದ ಇಲ್ಲಿನ ಸೋಮೇಶ್ವರ ಕಡಲ ಕಿನಾರೆಯಲ್ಲಿ ರಚಿಸಿದ ಮರಳಿನ ಕಲಾಕೃತಿ ನೋಡುಗರ ಗಮನ ಸೆಳೆಯಿತು.

Read More

ಕುಂದಾಪುರ: ಪ್ರತಿಷ್ಠಿತ ರೋಟರಿ ಕುಂದಾಪುರದ 2015-16ರ ಸಾಲಿನ ಅಧ್ಯಕ್ಷರಾಗಿ ಕೋಣಿಯ ಮಾತಾ ಮಾಂಟೆಸ್ಸೋರಿ ಶಾಲೆಯ ಆಡಳಿತ ನಿರ್ದೇಶಕ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಆಯ್ಕೆಯಾಗಿದ್ದಾರೆ. ಪ್ರಸಕ್ತ ಸಾಲಿನ ಜೀವಾ ವಿಮಾ ನಿಗಮದ ಏಕೈಕ ಎಂಡಿಆರ್‌ಟಿ ಪ್ರತಿನಿಧಿಯಾಗಿರುವ ಇವರು ಜಿಲ್ಲಾ ಪ್ರಗತಿಪರ ಚಿಂತಕರ ವೇದಿಕೆಯ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.      ಅವಿಭಜಿತ ದಕ್ಷಿಣ ಕನ್ನಡದ ಎರಡನೇಯ ರೋಟರಿ ಕ್ಲಬ್ ಆಗಿ 1960ರಲ್ಲಿ ಸ್ಥಾಪನೆಯಾಗಿ, ಹಿಂದಿನ ಅಧ್ಯಕ್ಷರುಗಳು ಹಾಗೂ ನಿಷ್ಠ ಸದಸ್ಯರ ಪರಿಶ್ರಮದಿಂದ ತನ್ನ ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸಿಕೊಂಡು ರೋಟರಿ ಜಿಲ್ಲೆ 3180ರ ಅತೀ ದೊಡ್ಡ ಕ್ಲಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರೋಟರಿ ಕುಂದಾಪುರದ ನೂತನ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಲಿದ್ದಾರೆ.     ಕಾರ್ಯದರ್ಶಿಯಾಗಿ ಸಂತೋಷ್ ಕೋಣಿ, ಖಜಾಂಚಿಯಾಗಿ ಪ್ರದೀಪ್ ವಾಜ್, ರೋಟರಿ ಸಾಕ್ಷರತಾ ಸೇವೆ ಸಂಚಾಲಕರಾಗಿ ಗೋಪಾಲ ಶೆಟ್ಟಿ, ಮೆಂಬರ್‌ಶಿಪ್ ಡೆವೆಲಪ್‌ಮೆಂಟ್ ಸಮಿತಿ ಸಂಚಾಲಕರಾಗಿ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ, ಸಾಮಾಜಿಕ ಸೇವೆಯ ನಿರ್ದೇಶಕರಾಗಿ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಕ್ಲಬ್ ಸರ್ವೀಸ್‌ನ ನಿರ್ದೇಶಕರಾಗಿ ಸಾಲಗದ್ದೆ…

Read More

ಕುಂದಾಪುರ: ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನ ಇಕೋ ಕ್ಲಬ್ ಆಶ್ರಯದಲ್ಲಿ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ವಕ್ವಾಡಿ ಸತ್ಯನಾರಾಯಣ ಶೆಟ್ಟಿ ಇವರ ಪ್ರಾಯೋಜಕತ್ವದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಹಕ್ಲಾಡಿ ಎಸ್.ಕೆ.ಎಸ್ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕ ಡಾ. ಕೆ. ಕಿಶೋರ ಕುಮಾರ್ ಶೆಟ್ಟಿ ಪರಿಸರ ಜಾಗೃತಿ ಬಗ್ಗೆ ಉಪನ್ಯಾಸ ನೀಡಿ,  ಪರಿಸರ ಸಂರಕ್ಷಣೆಗಿಂತ ಮಾಲಿನ್ಯದ ಪ್ರಮಾಣ ದಿನದಿಂದ ದಿನಕ್ಕೆ ನಾಗಲೋಟ ಪಡೆದುಕೊಳ್ಳುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆಯ ಪ್ರಮಾಣಕ್ಕೆ ಸೆಡ್ಡು ಹೊಡೆಯುವಂತೆ ವಾಯು, ಜಲ. ಅಂತರ್ಜಲ ಮತ್ತು ಶಬ್ಬ ಮಾಲಿನ್ಯ ತಾರಕಕ್ಕೇರಿದೆ. ಮರ ಬೆಳೆಸಿ- ಪರಿಸರ ಉಳಿಸಿ, ಮನೆಗೊಂದು ಮರ ಎನ್ನುವ ಘೋಷಣೆ  ಮಾತ್ರ ಸಾಲದು. ನಮ್ಮೊಂದಿಗೆ ಎಲ್ಲರೂ ಬದುಕಬೇಕು ಎಂಬ ಮನೋಭಾವನೆಯಿಂದ ಜೀವ ಪರಿಸರದ ಸಮತೋಲನ ಇದ್ದರೆ ಮುಂದಿನ ಜನಾಂಗ ಉಳಿಯಲು ಸಾದ್ಯ ಎಂದರು. ಕೈಗಾರಿಕಾ ಕ್ರಾಂತಿ ಎಲ್ಲಿಂದ ಆರಂಭ ವಾಯಿತೋ ಅಲ್ಲಿಂದ  ಮನುಷ್ಯ ಆಸೆ, ದುರಾಸೆಗೆ ಒಳಗಾಗಿ ಭ್ರಷ್ಟಾಚಾರದ ಜೊತೆಗೆ ಪರಿಸರದ ವಿನಾಶಕ್ಕೆ ಕಾರಣವಾಗಿದ್ದಾನೆ. ದೇಶಾಭಿವೃದ್ಧಿಯಲ್ಲಿ ವಿದ್ಯಾರ್ಥಿಗಳಲ್ಲಿ ಪರಿಸರದ…

Read More

ಕುಂದಾಪುರ:  ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಆಶ್ರಯದಲ್ಲಿ ನಡೆಯುತ್ತಿರುವ ತಿಂಗಳ ಕಾರ್ಯಕ್ರಮದ ಅಂಗವಾಗಿ ಜೂನ್ 14ರಂದು ಸಂಜೆ 4:30ಕ್ಕೆ ಉಪ್ಪಿನಕುದ್ರುವಿನ ಅಕಾಡೆಮಿ ಸಭಾಂಗಣದಲ್ಲಿ ಯಕ್ಷಗಾನ ಗಾನ ವೈಭವ ನಡೆಯಲಿದೆ. ಈ ಸಂದರ್ಭದಲ್ಲಿ ತಲ್ಲೂರಿನ ಖ್ಯಾತ ವೈದ್ಯ ಡಾ. ಎಂ.ವಿ. ಹೊಳ್ಳ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು ಉಪ್ಪಿನಕುದ್ರು ದಿ. ರಾಮ ಮಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಯು.ಸೂರ್ಯನಾರಾಯಣ ಮಯ್ಯ ಹಾಗೂ ಪಿಯುಸಿ ಕಲಾ ವಿಭಾಗದಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿನಿ ಮಹಾಲಕ್ಷ್ಮೀ ಅವರನ್ನು ಸನ್ಮಾನಿಸಲಾಗುವುದು. ಬಳಿಕ ಹೆಸರಾಂತ ಬಡಗುತ್ತಿಟ್ಟಿನ ಭಾಗವತರಾದ ಹೆರಂಜಾಲು ಗೋಪಾಲ ಗಾಣಿಗ ಮತ್ತು ಪರಮ ನಾಯಕ್ ಅವರ ದ್ವಂದ್ವ ಸ್ವರದಲ್ಲಿ ಯಕ್ಷಗಾನ ಗಾನ ವೈಭವ ನಡೆಯಲಿದೆ ಎಂದು ಗೊಂಬೆಯಾಟ ಅಕಾಡೆಮಿಯ ಅಧ್ಯಕ್ಷ ಭಾಸ್ಕರ ಕೊಗ್ಗ ಕಾಮತ್ ತಿಳಿಸಿದ್ದಾರೆ.

Read More

ಕುಂದಾಪುರ: ಗ್ರಾಮ ಸರಕಾರವನ್ನು ಆಯ್ಕೆ ಮಾಡಲು ರಾಜ್ಯದಲ್ಲಿ ನಡೆದ ಎರಡು ಹಂತತದ ಚುನಾವಣೆಯ ಫಲಿತಾಂಶ ಇಂದು( ಜೂ.5) ಹೊರಬಿದ್ದಿದ್ದು, ಕುಂದಾಪುರ ತಾಲೂಕಿನ 62 ಗ್ರಾಮ ಪಂಚಾಯತಿಗಳ ಪೈಕಿ 58 ಪಂಚಾಯತಿಗಳ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಯಿತು. ಕಂದಾಯ ಉಪವಿಭಾಗದ ಸಹಾಯಕ ಆಯುಕ್ತೆ ಚಾರುಲತಾ ಸೋಮಲ್ ಹಾಗೂ ತಹಶೀಲ್ದಾರ್ ಗಾಯತ್ರಿ ನಾಯಕ್ ಮಾರ್ಗದರ್ಶನದಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬೆಳಿಗ್ಗೆ 8 ಗಂಟೆಗೆ ಬೀಗು ಬಂದೋವಸ್ತಿನಲ್ಲಿ ಆರಂಭಗೊಂಡ ಮತ ಎಣಿಕೆ ರಾತ್ರಿ 8 ಗಂಟೆಯ ತನಕ ಸಾಗಿತ್ತು. ತಾಲೂಕಿನ 58 ಪಂಚಾಯತಿಗಳ 283 ಕ್ಷೇತ್ರಗಳಲ್ಲಿ ಚಲಾವಣೆಯಾದ 1,75,015 ಮತಗಳನ್ನು 125 ಟೇಬಲುಗಳಲ್ಲಿ 552 ಸಿಬ್ಬಂದಿಗಳ ಮೂಲಕ ಏಣಿಕೆ ಮಾಡಲಾಗಿತ್ತು. ಮತ ಎಣಿಕೆ ಕೇಂದ್ರ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ಕುಂದಾಪುರದ ಡಿವೈಎಸ್ಪಿ ಎಂ. ಮಂಜುನಾಥ ಶೆಟ್ಟಿ ಹಾಗೂ ವೃತ್ತ ನಿರೀಕ್ಷಕ ಪಿ. ಎಂ. ದಿವಾಕರ ಅವರ ನೇತೃತ್ವದಲ್ಲಿ ಆಯೋಜಿಸಲಾಗ ಬಂದೋವಸ್ತಿನಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಗೃಹರಕ್ಷಕ ದಳದ ಭಾಗವಹಿಸಿದ್ದರು. ತಾಲೂಕಿನಲ್ಲಿ…

Read More