Author: Editor Desk

ಸಾಮಾಜಿಕ ಬದ್ಧತೆ ಎಲ್ಲರ ಕರ್ತವ್ಯ : ಜಯಪ್ರಕಾಶ್ ಹೆಗ್ಡೆ ಕುಂದಾಪುರ: ಸಾಮಾಜಿಕ ಬದ್ಧತೆಯನ್ನಿಟ್ಟುಕೊಂಡು ಪ್ರತಿಯೊಬ್ಬರು ಕಾರ್ಯನಿರ್ವಹಿಸಿದಾಗ ದೇಶ ಸುಭಿಕ್ಷವಾಗುತ್ತದೆ. ಸಾಮಾಜಿಕ ಸುರಕ್ಷತೆ ಭದ್ರಗೊಂಡು ಪರಿಸರದಲ್ಲಿ ಹೊಸ ಪರಿವರ್ತನೆ ಸಾಧ್ಯವಾಗುತ್ತದೆ ಆದುದರಿಂದ ನಮ್ಮ ಕರ್ತವ್ಯ ಬದ್ಧತೆಯ ಬಗ್ಗೆ ಜಾಗೃತಿ ಅಗತ್ಯ. ಈ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರೋಟರಿ ಕ್ಲಬ್‌ಗಳು ಕಾರ್ಯನಿರ್ವಹಿಸ ಬೇಕಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ಕುಂದಾಪುರದ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ರೋಟರಿ ಕ್ಲಬ್ ಕುಂದಾಪುರ ಇದರ 2015-16ನೇ ಸಾಲಿನ ಪದಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ನೂತನ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಹಾಗೂ ಪದಾಧಿಕಾರಿಗಳಿಗೆ ರೋಟರಿ ವಲಯ-1ರ ಸಹಾಯಕ ಗವರ್ನರ್ ಸತೀಶ್ ಎನ್. ಶೇರೆಗಾರ್ ಅವರು ಪದಗ್ರಹಣ ನೆರವೇರಿಸಿ ರೋಟರಿಯ ಕಾರ್ಯಯೋಜನೆ ಮತ್ತು ಸಾಮಾಜಿಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ವಲಯ ಲೆಪ್ಟಿನೆಂಟ್ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಅವರು ಕ್ಲಬ್‌ನ ಮುಖವಾಣಿ ಅಕಾರ್ಡ್‌ನ್ನು ಬಿಡುಗಡೆಗೊಳಿಸಿದರು. ಸಂಪಾದಕ…

Read More

ಕುಂದಾಪುರ: ಇಲ್ಲಿನ ಕೋಟೇಶ್ವರದ ಬಸ್ ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಬಸ್ಸಿಗೆ ಕಾಯುತ್ತಿದ್ದ ವೇಳೆ ಯುವಕರ ತಂಡವೊಂದು ಚೀಟಿಯಲ್ಲಿ ಮೊಬೈಲ್ ಸಂಖ್ಯೆ ಬರೆದುಕೊಟ್ಟು ಸಾರ್ವಜನಿಕರ ಕೈಯಲ್ಲಿ ಸಿಕ್ಕಿ ಬಿದ್ದು, ಪೋಸ್ಕೋ ಕಾಯ್ದೆಯಡಿಯಲ್ಲಿ ಬಂಧನಕ್ಕೊಳಗಾದ ಘಟನೆ ನಡೆದಿದೆ. ಬಂಧಿತ ಆರೋಪಿಗಳನ್ನು ಗುಲ್ವಾಡಿಯ ನಿವಾಸಿಗಳಾದ ಸುಹೈಲ್ ಹಾಗೂ ಸಫಾನ್ ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ಶಫಿ ಎಂಬಾತ ಪರಾರಿಯಾಗಿದ್ದಾನೆ ಘಟನೆಯ ವಿವರ: ಕಳೆದ ಕೆಲವು ದಿನಗಳಿಂದ ಈ ಯುವಕರು ಕೋಟೇಶ್ವರ ಬಸ್ ನಿಲ್ದಾಣದಲ್ಲಿ ಯುವತಿಯೊಬ್ಬಳ ಹಿಂದೆ ಬಿದ್ದಿದ್ದರು. ಆದರೆ ಯುವತಿ ಈ ವಿಚಾರವನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದನ್ನೇ ದುರುಪಯೋಗಪಡಿಸಿಕೊಂಡ ಯುವಕರು ಮಧ್ಯಾಹ್ನದ ಸುಮಾರಿಗೆ ಕಾಲೇಜಿನಿಂದ ಹಿಂತಿರುಗಿದ ವಿದ್ಯಾರ್ಥಿನಿ ತನ್ನ ಊರಿಗೆ ಹೋಗುವ ಬಸ್ಸಿಗಾಗಿ ಕಾಯುತ್ತಿದ್ದಾಗ ಚೀಟಿಯೊಂದರಲ್ಲಿ ಯುವಕನೊಬ್ಬನ ಮೊಬೈಲ್ ಸಂಖ್ಯೆ ಬರೆದು ನೀಡಿದ್ದಾರೆ. ಆಕೆ ಅದನ್ನು ತೆಗೆದುಕೊಳ್ಳಲು ನಿರಾಕರಿಸಿದಾಗ ಮತ್ತೆ ಪೀಡಿಸಿದ್ದಾರೆ. ಇದನ್ನು ಗಮನಿಸಿದ ಪ್ರಯಾಣಿಕರೊಬ್ಬರು ಸ್ಥಳೀಯ ಯುವಕರ ಗಮನಕ್ಕೆ ತಂದಿದ್ದಾರೆ. ತಕ್ಷಣ ಜಾಗೃತರಾದ ಸ್ಥಳೀಯರು ಯುವಕರನ್ನು ಹಿಡಿಯಲು ಪ್ರಯತ್ನಿಸಿದ್ದಾರೆ ಈ ಸಂದರ್ಭ ಇಬ್ಬರು…

Read More

ಬೈಂದೂರು: ಸಾಂಸ್ಕೃತಿಕ ಕ್ಷೇತ್ರಕ್ಕೆ ಧ್ವನಿ ಬೆಳಕಿನವರ ಕೊಡುಗೆ ನಿರಂತರವಾಗಿದ್ದು ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುವಲ್ಲಿ ಅವರ ಸಹಕಾರ ಯಾರೂ ಮರೆಯುವಂತಿಲ್ಲ. ಕಲಾವಿದರಾಗಲಿ ಜನನಾಯಕರಾಗಲಿ ವೇದಿಕೆಯಿಂದ ಜನರಿಗೆ ತಲುಪುವುದಿದ್ದರೆ ಅದು ಸೌಂಡ್ ಲೈಟ್‌ನವರ ಸಹಕಾರದಿಂದ. ಮಳೆ ಚಳಿ ಲೆಕ್ಕಿಸದ ಅವರ ಪ್ರಾಮಾಣಿಕ ಪ್ರಯತ್ನದಿಂದ ಹಲವು ಕ್ಷೇತ್ರದಲ್ಲಿ ಇಂದು ಅದ್ಭುತ ಸಾಧನೆಯಾಗಿದೆ. ಹಳ್ಳಿ ಪಟ್ಟಣಗಳಲ್ಲಿನ ಉತ್ಸವಗಳಿಗೆ ವೈಭವದ ಮೆರಗು ಸೃಷ್ಠಿಯಾಗಿದ್ದಲ್ಲದೆ ಪ್ರತಿ ಕಾರ್ಯಕ್ರಮದ ಯಶಸ್ಸು ಕೂಡಾ ಇವರನ್ನೇ ಅವಲಂಬಿರಿಸಿರುತ್ತದೆ ಎಂದು ಅಂತರ್ರಾಷ್ಟ್ರೀಯ ಜಾದೂಗಾರ ಸಾಹಿತಿ ಓಂಗಣೇಶ್ ಹೇಳಿದರು. ಅವರು ಉಪ್ಪುಂದ ಮಾತೃ ಶ್ರೀ ಸಭಾ ಭವನದಲ್ಲಿ ಜರಗಿದ ಬೈಂದೂರು ವಲಯ ಧ್ವನಿ-ಬೆಳಕು ಸಂಯೋಜಕರ ಸಂಘಟನೆಯ ಚತುರ್ಥ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಲೋಕದ ಧ್ವನಿ ಬೆಳಕಿನ ಸಂಯೋಜನೆ ಭಗವಂತನ ಕೆಲಸ. ಅಂತೆಯೆ ನಾವು ಆ ದೇವರಿಗೆ ಪ್ರಿಯರಾಗುವಂತೆ ದುಡಿಯೋಣಾ. ಕೀಳರಿಮೆ ಬಿಟ್ಟು ನಮ್ಮ ವೃತ್ತಿಯನ್ನು ನಾವು ಗೌರವಿಸಿಕೊಳ್ಳುವುದರ ಮೂಲಕ ಸಮಾಜದಲ್ಲಿ ಎದ್ದು ನಿಲ್ಲೋಣಾ. ಆಧುನಿಕತೆಯ ಭರದಲ್ಲಿ ಮಾನವೀಯತೆ ಮರೆಯದೆ ಪರಸ್ಪರ ಸಾಮರಸ್ಯದಿಂದ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸೋಣಾ…

Read More

ಉಡುಪಿ: ನೋಂದಾಯಿತ ಮತದಾರರು ಮತದಾರ ಪಟ್ಟಿಯನ್ನು ಬಿಎಲ್‌ಒ ಅಥವಾ ತಾಲೂಕು ಕಚೇರಿ ಮಟ್ಟದಲ್ಲಿ ಈ ಕೆಳಕಂಡ ಅಂಶಗಳ ಬಗ್ಗೆ ಪರಿಶೀಲಿಸಿ ತಿದ್ದುಪಡಿಗಳಿದ್ದರೆ ಬಿಎಲ್‌ಒ(ಮತಗಟ್ಟೆ ಮಟ್ಟದ ಅಧಿಕಾರಿ)  ಅವರಿಗೆ ಸಲ್ಲಿಸಲು ಕೋರಲಾಗಿದೆ. ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರು, ಭಾವಚಿತ್ರ, ಜನ್ಮ ದಿನಾಂಕ ಮತ್ತು ವಿಳಾಸ ಸರಿಯಾಗಿಯೇ ಎಂದು ಪರಿಶೀಲಿಸಬೇಕು. ಒಂದು ವೇಳೆ  ಸರಿ ಇಲ್ಲದೆ ಇದ್ದಲ್ಲಿ ಅದನ್ನು ಸರಿಪಡಿಸಿಕೊಳ್ಳಲು ಪೂರಕ ದಾಖಲೆಗಳೊಂದಿಗೆ ನಮೂನೆ 8ರಲ್ಲಿ ಅರ್ಜಿ ಮತ್ತು ಹೆಸರು ಎರಡು ಕಡೆ ನೋಂದಾಯಿಸಲ್ಪಟ್ಟಲ್ಲಿ ಇಲ್ಲವೆ ಒಂದೇ ಭಾಗದ ಎರಡು ಕಡೆ ನೋಂದಾವಣಿಯಾಗಿದ್ದಲ್ಲಿ ಯಾವುದಾದರೊಂದನ್ನು ರದ್ದುಪಡಿಸಲು ನಮೂನೆ 7ರಲ್ಲಿ ಸಲ್ಲಿಸಬೇಕು. ಪ್ರತಿಯೊಬ್ಬ ಮತದಾರನು/ಳು ಆಧಾರ್‌, ಎಪಿಕ್‌, ಮೊಬೈಲ್‌ ಸಂಖ್ಯೆ ಮತ್ತು ಇ ಮೇಲ್‌ ಐಡಿ ವಿವರಗಳನ್ನು ಆಧಾರ್‌/ಎಪಿಕ್‌ ಕಾರ್ಡಿನ ಪ್ರತಿಗಳೊಂದಿಗೆ ತಮ್ಮ ವ್ಯಾಪ್ತಿಯ ಬಿಎಲ್‌ಒಗೆ ಕೂಡಲೇ ಒದಗಿಸಬೇಕು ಹಾಗೂ ಇಸಿಐ ವೆಬ್‌ಸೈಟ್‌ನ ನ್ಯಾಶನಲ್‌ ವೋಟರ್ ಸರ್ವಿಸ್‌ ಪೋರ್ಟಲ್‌ಗೆ (ಎನ್‌.ವಿ.ಎಸ್‌.ಪಿ) ಅಪ್‌ಲೋಡ್‌ ಮಾಡಬೇಕು. http://nvsp.in/ ಅಥವಾ ಎಸ್‌.ಎಂ.ಎಸ್‌ ಮೂಲಕ ECILINK send to 51969, 199 ಕಳುಹಿಸಬಹುದು.…

Read More

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಮಳೆಗಾಲವೆಂದರೆ ಅಲ್ಲಿನ ಜನರಿಗೆ ನರಕಯಾತನೆ. ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿ. ಆ ಊರಿನ ಮಕ್ಕಳೆಲ್ಲಾ ದಿನವೂ ತೀರಾ ಅಪಾಯಕಾರಿಯಾದ ಕಾಲುಸಂಕವನ್ನು ದಾಟಿಯೇ ಶಾಲೆಗೆ ಬರಬೇಕು. ಶಾಲೆಗೆ ಬಂದವರಾದರೂ ಸುರಕ್ಷಿತರು ಎಂದುಕೊಂಡರೆ ತಪ್ಪಾದಿತು. ಅಲ್ಲಿ ಶಿಥಿಲಗೊಂಡ ಮೇಲ್ಛಾವಣಿಯ ಕೆಳಗೆ ಒಂದೇ ತರಗತಿಯಲ್ಲಿ ಕುಳಿತು ಕಲಿಯಬೇಕು. ಇದು ಚಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೈಕಂಬಳ್ಳಿ(ನೈಕಂಬ್ಳಿ) ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ಮಕ್ಕಳೂ ಹಾಗೂ ಊರವರಿಗೆ ಬಂದೊದಗಿರುವ ದುಸ್ಥಿತಿ. ನೈಕಂಬ್ಳಿ ಸುತ್ತೆಲ್ಲಾ ಕಾಲುಸಂಕ ನೈಕಂಬ್ಳಿಯ ಬಹುಪಾಲು ಜನತೆ ಒಂದಾದರೂ ಕಾಲುಸಂಕವನ್ನು ದಾಟಿ ನಡೆದು ತಮ್ಮ ದಿನನಿತ್ಯದ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ. ಸುತ್ತಲಿನ ಕೋಳೂರು, ಮಲ್ಲೋಡ್, ಹಾಡಿಮನೆ, ಆಸೂರು ಹಾಗೂ ನೈಕಂಬಳ್ಳಿ ಹಳೆಯಮ್ಮ ದೇವಸ್ಥಾನದ ಬಳಿ ಇರುವ ಕಾಲುಸಂಕಗಳಲ್ಲಿ ಜನರು ದಿನವೂ ತಿರುಗಾಡುವುದು ಮಾಮೂಲಿಯಾಗಿದೆ. ಇಲ್ಲಿ ಒಟ್ಟು ಸುಮಾರು 96 ಮನೆಗಳಿದ್ದು 700ಕ್ಕೂ ಅಧಿಕ ಜನಸಂಖ್ಯೆ ಇದೆ. ಜನಪ್ರತಿನಿಧಿಗಳಗೆ ಬೇಡಿಕೆ ಇಟ್ಟು ಸುಸ್ತಾಗಿರುವ…

Read More

ಕುಂದಾಪುರ: ‘ಸೂಕ್ಷ್ಮ ಸಂದರ್ಭಗಳಲ್ಲಿ ಭಾವುಕತೆಗೆ ಒತ್ತು ನೀಡದೆ ಜನರು ತಾಳ್ಮೆ ವಹಿಸ ಬೇಕು. ತತ್‌ಕ್ಷಣದ ಪ್ರತಿಕ್ರಿಯೆಯಿಂದ ಕೆಲವೊಮ್ಮೆ ತೊಂದರೆ ಎದುರಾಗುತ್ತದೆ’ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಹೇಳಿದರು. ಕೋಡಿ ಬ್ಯಾರೀಸ್ ಕಾಲೇಜು ಸಭಾಂಗಣದಲ್ಲಿ ಸಂಜೆ ಕುಂದಾಪುರ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ‘ಕೋಡಿ ಅತ್ಯಂತ ಮನಮೋಹಕ ಪ್ರದೇಶ. ಇಲ್ಲಿಗೆ ಜನರು ಶಾಂತಿ ಬಯಸಿ ಬರುತ್ತಾರೆ. ಕೋಡಿ ಜನರು ಕೂಡ ಶಾಂತಿ ಪ್ರಿಯರು. ಕೆಲವೊಮ್ಮೆ ಎದುರಾಗುವ ಸಮಸ್ಯೆಗಳನ್ನು ಊರಿನ ಜನರು ಬಗೆಹರಿ ಸಿಕೊಳ್ಳುವಷ್ಟು ಸಾಮರ್ಥ್ಯ ಪ್ರದರ್ಶಿ ಸಬೇಕು’ ಎಂದು ಅವರು ಹೇಳಿದರು. ವ್ಯಾಟ್ಸ್‌ಅಪ್, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸುವ ವಿಷಯಗಳ ಕುರಿತು ವಿಚಾರ ವಿಮರ್ಶೆ ನಡೆಸಬೇಕು. ಇತ್ತೀಚೆಗಿನ ದಿನಗಳಲ್ಲಿ ಈ ಸಾಮಾಜಿಕ ಜಾಲತಾಣವನ್ನು ದುರುಪ ಯೋಗಪಡಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಇದರ ಬಗ್ಗೆ ಇಲಾಖೆ ತೀವ್ರ ನಿಗಾ ವಹಿಸುತ್ತಿದೆ ಎಂದರು. ಕೋಟೇಶ್ವರ ಗ್ರಾ.ಪಂ. ಅಧ್ಯಕ್ಷೆ ಜಾನಕಿ ಬಿಲ್ಲವ ಮಾತನಾಡಿ, 6 ತಿಂಗಳ ಹಿಂದೆ ಕೋಡಿಯಲ್ಲಿ…

Read More

ಕುಂದಾಪುರ: ಸಂಘಟನೆಗಳು ಪ್ರೇರಣಾಶಕ್ತಿಯಾಗಬೇಕೇ ವಿನಹ: ಪ್ರಚೋದನಕಾರಿ ಶಕ್ತಿಯಾಗಬಾರದು. ನಿಸ್ವಾರ್ಥ ಸೇವೆ ಮೂಲಕ ಸಂಘಟನೆಗಳನ್ನು ಬೆಳೆಸಬೇಕು. ಗ್ರಾಮದ ಸಮಸ್ಯೆಗಳಿಗೆ ದಾರಿ ತೋರಿಸಿ ಎಲ್ಲರನ್ನೂ ಒಂದುಗೂಡಿಸುವ ಕೆಲಸ ಮಾಡಬೇಕು. ಗಂಗೊಳ್ಳಿಯಲ್ಲಿ ಎಲ್ಲಾ ಸಮಾಜದ ಜನರನ್ನು ಒಟ್ಟಿಗೆ ಕೊಂಡೊಯ್ದು ಸೌಹಾರ್ದ ವಾತಾವರಣ ನಿರ್ಮಿಸುವ ಕೆಲಸ ನಡೆಸಬೇಕು ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಅವರು ಗಂಗೊಳ್ಳಿಯ ಎಸ್.ವಿ. ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಗಂಗೊಳ್ಳಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದರು. ವಲಯದ ಎಲ್ಲಾ ವರ್ಗದ ಸಮಾಜಬಾಂಧವರನ್ನು ಒಗ್ಗೂಡಿಸಿ ಅವರು ಬೌದ್ಧಿಕ, ಸಾಂಸ್ಕೃತಿಕ, ಧಾರ್ಮಿಕ, ಆರ್ಥಿಕ, ಸಾಮಾಜಿಕ ಹಾಗೂ ಸರ್ವತೋಮುಖ ಅಭಿವೃದ್ಧಿಯಾಗುವಂತೆ ಮಾಡುವ ಗುರಿಯನ್ನಿಟ್ಟುಕೊಂಡು ಸಮುದಾಯಕ್ಕೆ ನೆರಳು ನೀಡುವ ಉದ್ದೇಶದಿಂದ ರಚನೆಗೊಂಡಿರುವ ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿಯು ಗಂಗೊಳ್ಳಿಯ ಜನರ ಬಾಳಿಗೆ ಬೆಳಕಾಗಲಿದೆ ಎಂದು ಅವರು ಹೇಳಿದರು. ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ, ಜಿಪಂ…

Read More

ಕುಂದಾಪುರ: ಕಂಡ್ಲೂರಿನ ಅಲ್‌ಹುದಾ ಚಾರಿಟಬಲ್ ಟ್ರಸ್ಟ್, ಕುಂದಾಪುರ ತಾಲೂಕು ಸದ್ಭಾವನಾ ವೇದಿಕೆ ಮತ್ತು ತ್ರಾಸಿ-ಗಂಗೊಳ್ಳಿ ಲಯನ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ತ್ರಾಸಿಯ ಕ್ಲಾಸಿಕ್ ಆಡಿಟೋರಿಯಂನಲ್ಲಿ ಸೌಹಾರ್ದ ಇಫ್ತಾರ್ ಕೂಟ ನಡೆಯಿತು.  ಪ್ರಧಾನ ಭಾಷಣ ಮಾಡಿದ ನಿವೃತ್ತ ಉಪನ್ಯಾಸಕ, ಲೇಖಕ ಕೆ. ಶಿವಾನಂದ ಕಾರಂತ ಧರ್ಮಗಳ ನಡುವಿನ ತಾಕಲಾಟದಲ್ಲಿ ಮಾನವ ಧರ್ಮ ಮರೆಯಾಗಿದೆ. ಯಾವ ಧರ್ಮವೂ ದ್ವೇಷವನ್ನು, ಹಿಂಸೆಯನ್ನು, ಯುದ್ಧವನ್ನು ಬೋಧಿಸಿಲ್ಲ. ಧರ್ಮದ ಕುರಿತಾಗಿ ಹಲವರಲ್ಲಿ ಇರುವ ಅರೆ ಮತ್ತು ಶೂನ್ಯ ಜ್ಞಾನ ಧರ್ಮಗಳ ನಡುವೆ ತ್ವೇಷ ಉಂಟಾಗಲು ಕಾರಣ. ಎಲ್ಲ ಜನರು ದೇವರಿಗೆ, ಮಾತಾಪಿತೃಗಳಿಗೆ, ಗುರುಗಳಿಗೆ, ಪರಿಸರಕ್ಕೆ ಮತ್ತು ಸಹಜೀವಿಗಳಿಗೆ ಸಲ್ಲಬೇಕಾಗಿರುವುದನ್ನು ಸಲ್ಲಿಸುತ್ತ ಬದುಕಬೇಕು. ಆಯಾ ಧರ್ಮಗಳನ್ನು ಅನುಸರಿಸುತ್ತ ಎಲ್ಲ ಧರ್ಮೀಯರು ಈ ವಿಚಾರದಲ್ಲಿ ಒಂದಾಗಬೇಕು ಎಂದು ಹೇಳಿದರು. ತ್ರಾಸಿ-ಗಂಗೊಳ್ಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಜಾರ್ಜ್ ಡಿ’ಆಲ್ಮೇಡ ದೇವರನ್ನು ಪ್ರೀತಿಸುವವರು ದೇವರ ಮಕ್ಕಳಾದ ಎಲ್ಲ ಮನುಷ್ಯರನ್ನು ಪ್ರೀತಿಸಬೇಕು ಎಂದರು.  ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಹಿರಾ ಮೀಡಿಯದ ಅಧ್ಯಕ್ಷ ಮಹಮದ್ ಇಸಾಕ್ ಪುತ್ತೂರು…

Read More

ಬೈಂದೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಧರ್ಮಾಧಿಕಾರಿ ಡಾ. ವೀರೆಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ  ರಾಜ್ಯದಲ್ಲಿ ಈಗಾಗಲೇ 371 ರುದ್ರಭೂಮಿ ಅಭಿವೃದ್ಧಿಗಾಗಿ 3.75ಕೋಟಿ ಅನುದಾನ ನೀಡಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂದಾಪುರ ತಾಲೂಕು ಯೋಜನಾಧಿಕಾರಿ ಅಮರನಾಥ ಶೆಟ್ಟಿ ಹೇಳಿದ್ದಾರೆ. ಉಪ್ಪುಂದದ ಚಿಮ್ರಿಗುಡ್ಡೆಯ ಚಿತಾಗಾರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಿಂದಿನ ಕಾಲದಲ್ಲಿ ಮನುಷ್ಯ ಸಾವನ್ನಪ್ಪಿದಾಗ ಆ ಊರಿನ ಎಲ್ಲಾ ಗ್ರಾಮಸ್ಥರು ಸಂಘಟಿತರಾಗಿ ಆತನ ಅಂತ್ಯ ಸಂಸ್ಕಾರ ನೆರವೇರಿಸುತ್ತಿದ್ದರು, ಆದರೆ ಈಗ ಬದಲಾದ ಕಾಲಘಟ್ಟದಲ್ಲಿ ಮನುಷ್ಯ ಸಾವನ್ನಪ್ಪಿದ್ದಾಗ ಅವನ ಕುಟುಂಬಕ್ಕೆ ಸಾವಿನ ದುಃಖದೊಂದಿಗೆ ಅಂತ್ಯ ಸಂಸ್ಕಾರದ ಬಗ್ಗೆಯೂ ಚಿಂತಿಸಬೇಕಾಗಿದೆ. ಆ ಹಿನ್ನೆಲೆಯಲ್ಲಿ ಇಂದು ಪರ್ಯಾಯ ವ್ಯವಸ್ಥೆಯಾಗಿ ಚಿತಗಾರಗಳು ಅನಿವಾರ‍್ಯವಾಗಿ ಬಿಟ್ಟಿದೆ, ಯಾವ ಊರಿನಲ್ಲಿ ಚಿತಾಗಾರವಿಲ್ಲವೋ, ಆ ಊರಿಗೆ ಸಂಸ್ಕಾರವಿಲ್ಲ ಎನ್ನುವಂತಾಗಿದೆ ಎಂದರು. ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಿದ ಈ ಚಿತಾಗಾರವು ಉತ್ತಮ ಮೂಲ ಸೌಕರ್ಯ ಹೊಂದಿದ್ದು,  ಇದರ ಪರಿಪಾಲನೆ ಹಾಗೂ ಶುಚಿತ್ವಕ್ಕೆ ಆದ್ಯತೆ ನೀಡಬೇಕಾಗಿದೆ.  ಮುಂದಿನ ದಿನಗಳಲ್ಲಿ ಇದರ ವಿದ್ಯುತ್ತೀಕರಣಕ್ಕೂ…

Read More

ಕಲಾಕ್ಷೇತ್ರ ಕುಂದಾಪುರ ಆಯೋಜಿಸಿದ ರಾಷ್ಟ್ರೀಯತೆ ಮತ್ತು ಬದ್ಧತೆ ವಿಚಾರ ಸಂಕಿರಣ ಹಾಗೈ ಸಂವಾದ ಕುಂದಾಪುರ: ನಮ್ಮ ದೇಶದ ಸಂವಿಧಾನ ಬರೆಯುವ ಪೂರ್ವವಾಗಿ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದ ಸಮಿತಿ ಸುಧೀರ್ಘ ಚರ್ಚೆಯ ನಂತರ ಸಂವಿಧಾನವನ್ನು ರಚಿಸಿ ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗದ ಕಾರ್ಯವೈಖರಿಯನ್ನು ಉಲ್ಲೇಖಿಸಲಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ  ಮೂರು ಅಂಗಗಳಿಗೂ ತನ್ನದೇ ಆದ ಮಹತ್ವ ಇರುವಂತೆ ಎಲ್ಲಾ ರೀತಿಯ ಚರ್ಚೆಗಳು ನ್ಯಾಯಂಗದ ಮುಂದೆಯೇ ನಡೆಯುತ್ತದೆ. ಹೊಸ ತಿದ್ದುಪಡಿಗಳು ಬಂದಾಗಲೂ ಕೂಡಾ ಅದರ ಬಗ್ಗೆ ಆಕ್ಷೇಪಗಳು ಕಂಡು ಬಂದರೆ ನ್ಯಾಯಾಂಗದ ಮುಂದೆ ಹೋಗಲು ಅವಕಾಶಗಳನ್ನು ನೀಡಿದೆ ಎಂದು ಮಾಜಿ ಸಂಸದ ಹಾಗೂ ಹಿರಿಯ ನ್ಯಾಯವಾದಿ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ಕಲಾಕ್ಷೇತ್ರ -ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ  ಕಲ್ಯಾಣ ಭವನದಲ್ಲಿ ನಡೆದ ರಾಷ್ಟ್ರೀಯತೆ ಮತ್ತು ಬದ್ಧತೆ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮದಲ್ಲಿ  ನ್ಯಾಯಾಂಗದ ಬಗ್ಗೆ ವಿಚಾರ ಮಂಡಿಸಿದರು. ಸಂವಿಧಾನದ ಬುಡವನ್ನು ಅಲುಗಾಡಿಸಲು ಹೋಗಬಾರದು. ನ್ಯಾಯಾಂಗದ ಆಶಯಗಳನ್ನು ಅರ್ಥೈಸಿಕೊಂಡು ಕಾರ್ಯ ನಿರ್ವಹಿಸಬೇಕಾಗುತ್ತದೆ. ನಮ್ಮ…

Read More