ಮರವಂತೆ: ಗ್ರಾಮೀಣ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ ಸಂಘಟನೆಯನ್ನು ಬಲಗೊಳಿಸುವ ಮತ್ತು ಮುಂದಿನ ಚುನಾವಣೆಗಳಲ್ಲಿ ಪಕ್ಷದ ಗೆಲುವನ್ನು ಖಾತರಿಗೊಳಿಸುವ ಉದ್ದೇಶಕ್ಕೆ ಅಧಿಕ ಸಂಖ್ಯೆಯ ಗ್ರಾಮ ಪಂಚಾಯತ್ಗಳನ್ನು ಪಕ್ಷದ ಕಾರ್ಯಕರ್ತರು ವಶಕ್ಕೆ ತೆಗೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರ ಗ್ರಾಮ ಪಂಚಾಯತ್ಗಳಿಗೆ ಅನುದಾನವನ್ನು ನೇರ ಬಡುಗಡೆಗೊಳಿಸಲಿದ್ದು, ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನದ ದೃಷ್ಟಿಯಿಂದಲೂ ಅವುಗಳಲ್ಲಿ ಪಕ್ಷ ಕಾರ್ಯಕರ್ತರು ಇರಬೇಕು ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಹೇಳಿದರು. ಮರವಂತೆಗೆ ಭೇಟಿ ನೀಡಿದ ಅವರು ಅಲ್ಲಿನ ಪಕ್ಷ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಗ್ರಾಮೀಣ ಅಭಿವೃದ್ಧಿಯನ್ನು ಕಡೆಗಣಿಸಿದ ರಾಜ್ಯ ಸರಕಾರದ ವಿರುದ್ಧ ಅವರು ಟೀಕಾಪ್ರಹಾರ ನಡೆಸಿದರು. ಗ್ರಾಮ ಪಂಚಾಯತ್ಗಳಿಗೆ ಅನುದಾನ ಕಡಿತ ಮಾಡಲಾಗುತ್ತಿದೆ. ಬೇಕಾಬಿಟ್ಟಿ ಆದೇಶ, ಸುತ್ತೋಲೆ ಹೊರಡಿಸುವ ಮೂಲಕ, ಅಭಿವೃದ್ಧಿ ಅಧಿಕಾರಿಗಳನ್ನು ವಿವೇಚನಾ ರಹಿತವಾಗಿ ವರ್ಗಮಾಡುವ ಮೂಲಕ ಗೊಂದಲ ಸೃಷ್ಟಿಸಲಾಗುತ್ತಿದೆ. ಸರಕಾರ ಜನಮರುಳು ಕಾರ್ಯಕ್ರಮಗಳಾದ ಅನ್ನ ಭಾಗ್ಯ, ಕ್ಷೀರಭಾಗ್ಯದಂತಹ ಯೋಜನೆಗಳಿಗೆ ರಾಜ್ಯದ ಖಜಾನೆ ಸೂರೆಯಾಗುತ್ತಿದೆ. ತೆರಿಗೆ ಸಂಗ್ರಹದಲ್ಲೂ ಕುಸಿತ ಉಂಟಾಗಿದೆ.…
Author: Editor Desk
ಕುಂದಾಪುರ: ಕನ್ನಡ ಚಿತ್ರರಂಗದಲ್ಲಿ ಈಗ ಹೊಸಬರು ಹೆಚ್ಚು ಸದ್ದು ಮಾಡುತ್ತಿದ್ದಾರೆ. ಹೊಸಬರ ಚಿತ್ರಗಳು ಹೊಸ ಭರವಸೆಯನ್ನೂ ಮೂಡಿಸಿದೆ. ಅಂತಹದೇ ಒಂದು ಭರವಸೆಯನ್ನು ಮೂಡಿಸಲು ‘ವಾರಿಯರ್’ ಸಿನೆಮಾದ ಚಿತ್ರತಂಡ ಹೊರಟಿದೆ. ದೈನಂದಿನ ಬದುಕಿನ ಆಗುಹೋಗುಗಳನ್ನಾಧರಿಸಿದ ಚಿತ್ರಕಥೆಯ ಚಿತ್ರೀಕರಣ ಕುಂದಾಪುರ ತಾಲೂಕಿನ ವಿವಿಧೆಡೆ ಕಳೆದ ಮೂರು ದಿನಗಳಿಂದ ಭರದಿಂದ ಸಾಗುತ್ತಿದೆ. ಈಗಾಗಲೇ ಕೆಲವಷ್ಟು ಸಿನೆಮಾಗಳಲ್ಲಿ ದುಡಿದು ಈಗ ತನ್ನದೇ ಕಥೆ, ಚಿತ್ರಗಥೆ ಹಾಗೂ ನಿರ್ದೇಶನದಲ್ಲಿ ಸಿನೆಮಾ ಮಾಡಲು ಹೊರಟಿರುವ ಆರ್ಯ ಅವರಿಗೆ ಆದಿಶಕ್ತಿ ಎಂಟರ್ಪ್ರೈಸಸ್ ನ ಪ್ರಕಾಶ್ ಎಸ್. ಬಂಡವಾಳ ಹೂಡಿ ಸಾಥ್ ನೀಡಿದ್ದರೇ, ವಿನ್ಯಾಸ್ ಮೂರ್ತಿ ಅವರ ಕ್ಯಾಮರಾ ಹಿಡಿದು, ಗಿರೀಶ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಮೂವರು ನಾಯಕಿಯರು ಹಾಗೂ ಇಬ್ಬರು ನಾಯಕರುಗಳು ವಾರಿಯರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಾಯಕಿಯರ ಕಾರಣದಿಂದಾಗಿ ನಡೆಯುವ ಘಟನೆಗಳು ಹಾಗೂ ನಾಯಕರು ಅದನ್ನು ನಿಭಾಯಿಸುವ ರೀತಿಯ ನಡುವೆ ಚಿತ್ರಕಥೆ ಸಾಗುತ್ತದೆ. ಚಿತ್ರದಲ್ಲಿ ನಾಯಕರಾಗಿ ಪ್ರಣವ್ ಹಾಗೂ ಪ್ರಶಾಂತ್ ಮುಖ್ಯಭೂಮಿಕೆಯಲ್ಲಿದ್ದರೇ, ನಾಯಕಿಯರಾಗಿ ಪಾವನ, ವೇದಿಕಾ ಶೆಟ್ಟಿ ಹಾಗೂ ಸೋನು…
ತನ್ನ ಬಳಕೆದಾರರಿಗೆ ವಾಟ್ಸಾಪ್ ನೀಡಿರುವ ಕರೆ ಸೌಲಭ್ಯ ಉಚಿತವೆಂದು ಭಾವಿಸಿದ್ದ ಮಂದಿಗೆ ಭಾರಿ ಬೇಸರದ ಸುದ್ದಿ. ವಾಟ್ಸಾಪ್ ನಲ್ಲಿ ಮಾಡುವ ಕರೆಯ ಮೂಲಕ ನೀವು ಕಡಿಮೆ ಬೆಲೆಯಲ್ಲಿ ಸ್ನೇಹಿತರ ಜೊತೆ ಮಾತನಾಡಬಹುದು ಎನ್ನುವ ಕಲ್ಪನೆ ಸುಳ್ಳು ಎಂಬುದನ್ನು ವರದಿಯೊಂದು ತಿಳಿಸಿದೆ. ಲಂಡನ್ ಮೂಲದ ಆಪ್ ಸಂಶೋಧನ ಸಂಸ್ಥೆ ಆಂಡ್ರಾಯ್ಡ್ ಪಿಟ್ ವಾಟ್ಸಾಪ್ ಕರೆಗೆ ಖರ್ಚಾಗುತ್ತಿರುವ ಡೇಟಾ ಪ್ರಮಾಣವನ್ನು ಅಧ್ಯಯನ ಮಾಡಿದ್ದು, ಸಿಮ್ ಮೂಲಕ ಮಾಡುತ್ತಿರುವ ಮಾಮೂಲಿ ಕರೆಗಿಂತಲೂ, ವಾಟ್ಸಾಪ್ ಕರೆಯಲ್ಲಿ ಹೆಚ್ಚು ಹಣ ಎಂದು ಖರ್ಚಾಗುತ್ತದೆ ಎಂದು ಹೇಳಿದೆ. ಒಂದು ನಿಮಿಷದ ವಾಟ್ಸಾಪ್ ಕರೆಗೆ 1.3 ಎಂಬಿ ಡೇಟಾ ಖರ್ಚಾಗುತ್ತದೆ. ಒಂದು ವೇಳೆ ತಿಂಗಳಿಗೆ 500 ಎಂಬಿ ಡೇಟಾ ಪ್ಲ್ಯಾನ್ ನಿಮ್ಮಲ್ಲಿದ್ದರೆ, ಕೇವಲ 6 ಗಂಟೆಯಲ್ಲಿ 500 ಎಂಬಿ ಡೇಟಾ ಖಾಲಿಯಾಗಲಿದೆ ಎಂದು ಆಂಡ್ರಾಯ್ಡ್ಪಿಟ್ ತನ್ನ ವರದಿಯಲ್ಲಿ ತಿಳಿಸಿದೆ.
ಕುಂದಾಪುರ,ಮೇ-13: ವಿದ್ಯಾರ್ಥಿಗಳ ಭವಿಷ್ಯದ ಪ್ರಮುಖ ಫಟ್ಟವಾಗಿರುವ ಎಸ್ಸೆಸ್ಸೆಲ್ಸಿಯ ಫಲಿತಾಂಶವನ್ನು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು ನಿನ್ನೆ ಅಂತರ್ಜಾಲದಲ್ಲಿ ಬಿಡುಗಡೆಗೊಳಿಸಿದ್ದು, ಇಂದು ಎಲ್ಲಾ ಶಾಲೆಗಳಲ್ಲಿ ಅಧಿಕೃತವಾಗಿ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಕಳೆದ ಭಾರಿ ಶೇ.87.68 ಫಲಿತಾಂಶ ಪಡೆದು ತೃತೀಯ ಸ್ಥಾನಕ್ಕೆ ಕುಸಿದಿದ್ದ ಉಡುಪಿ ಜಿಲ್ಲೆ (ಶೇ.93.37), ಈ ಭಾರಿ ಮತ್ತೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಕುಂದಾಪುರ ತಾಲೂಕಿನ ಸರಕಾರಿ ಶಾಲೆಗಳೂ ಸೇರಿದಂತೆ ಎಲ್ಲಾ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದು, ತಾಲೂಕಿನ 22ಶಾಲೆಗಳು ಈ ಭಾರಿ ಶೇ.100ರಷ್ಟು ಫಲಿತಾಂಶವನ್ನು ದಾಖಲಿಸಿದೆ. ಕಂಬದಕೋಣೆ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಶ್ರೇಯಸ್ ಎಸ್. ಶೆಟ್ಟಿ 620 ಅಂಕ ಗಳಿಸಿ ತಾಲೂಕಿಗೆ ಮೊದಲಿಗನಾಗಿದ್ದರೇ, ಕೋಟೇಶ್ವರ ಜ್ಯೂನಿಯರ್ ಕಾಲೇಜಿನ ಪ್ರಥ್ವಿ ಎನ್. 619 ಅಂಕಗಳಿಸಿ ದ್ವಿತೀಯ ಸ್ಥಾನಿಯಾಗಿದ್ದಾನೆ. ಗಂಗೊಳ್ಳಿಯ ಎಸ್.ವಿ. ಇಂಗ್ಲಿಷ್ ಪ್ರೌಢಶಾಲೆಯ ರಾಧಿಕಾ ಪೈ, ಕುಂದಾಪುರ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ಗ್ರೀಷ್ಮಾ ಎಚ್., ಕುಂದಾಪುರ ಹೋಲಿರೋಜರಿ ಪ್ರೌಢಶಾಲೆಯ ಕ್ಷಮಾ 616ಅಂಕ ಗಳಿಸುವ ಮೂಲಕ ತೃತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ.…
ಹಾಯ್ ವಿದ್ಯಾರ್ಥಿಗಳೆ, ಇನ್ನೇನು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯ ಪರೀಕ್ಷೆಯ ಫಲಿತಾ೦ಶ ಬರೋ ಸಮಯ ಆಗಿದೆ. ಬೇಡ ಬೇಡವೆ೦ದರೂ ನಿಮ್ಮ ಎದೆಯಲ್ಲಿ ಹೃದಯ ಬಡಬಡನೆ ಬಡಿದುಕೊಳ್ಳಲಾರ೦ಭಿಸುತ್ತಿದೆ. ಏನಾಗುತ್ತೋ ಎಷ್ಟು ಮಾರ್ಕ್ಸ ಬರುತ್ತೋ ಫಸ್ಟ್ ಕ್ಲಾಸಾ ಡಿಸ್ಟಿ೦ಕ್ಷನ್ನಾ ಸೆಕೆ೦ಡ್ ಕ್ಲಾಸಾ ಜಸ್ಟ ಪಾಸಾ ಅಥವಾ ಫೇಲಾಗಿದ್ದೀನಾ ಹೀಗೆ ಹತ್ತಾರು ಪ್ರಶ್ನೆಗಳು ತಲೆಯೊಳಗೆ ರೊಯ್ಯನೇ ಕೊರೆಯಲಾ೦ಭಿಸಿವೆ. ಫಲಿತಾ೦ಶದ ವೇಳೆ ಹತ್ತಿರ ಬರುತ್ತಿದ್ದ೦ತೆ ಮತ್ತಷ್ಟು ಟೆನ್ಷನ್ ಶುರುವಾಗುತ್ತೆ. ಟೆನ್ಷನ್ ಮಾಡ್ಕೋಬೇಡಿ ಅನ್ನೋದು ಸುಲಭ. ಅದು ನ೦ಗೂ ಗೊತ್ತು. ಆದರೂ ನಿಮಗೆ ತಿಳಿದಿರಬೇಕಾದ ಸ೦ಗತಿಯೆ೦ದರೆ ನಾವುಗಳು ಎಷ್ಟು ಬೇಕೋ ಅಷ್ಟು ಮಾತ್ರ ಪ್ರಾಮುಖ್ಯತೆಯನ್ನು ಈ ಫಲಿತಾ೦ಶಗಳಿಗೆ ನೀಡಬೇಕು. ಯಾಕೆ೦ದರೆ ಅದೊ೦ದೇ ನಮ್ಮ ಜೀವನವನ್ನು ನಿರ್ಧರಿಸುವ೦ತದ್ದಲ್ಲ. ಹಾಗೆ ಒ೦ದು ಎಸ್ಸೆಸೆಲ್ಸಿ ಅಥವಾ ಪಿಯುಸಿ ಫಲಿತಾ೦ಶಗಳು ಮಾತ್ರ ಒಬ್ಬ ವ್ಯಕ್ತಿಯ ಬದುಕಿನ ಯಶಸ್ಸನ್ನು ನಿರ್ಧಾರ ಮಾಡಬಲ್ಲುದಾಗಿದ್ದರೆ ನಮ್ಮ ನಡುವೆ ರಾಜಕುಮಾರನೆ೦ಬ ಅಪ್ರತಿಮ ಕಲಾವಿದ ಸೃಷ್ಟಿಯಾಗಲು ಸಾಧ್ಯವಿರಲಿಲ್ಲ. ಒಬ್ಬ ತೆ೦ಡೂಲ್ಕರ್ ಹುಟ್ಟುತ್ತಲೇ ಇರಲಿಲ್ಲ. ನಿಮಗೆ ಗೊತ್ತಿರಲಿ ರಾಜಕುಮಾರ್ ಕಲಿತದ್ದು…
ಕುಂದಾಪುರ: ಸರಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಪೋಷಕರಿಂದ ಹೆಚ್ಚಿನ ಡೊನೇಷನ್ ವಸೂಲಿ ಮಾಡುವುದು ಅವಿರತವಾಗಿ ನಡೆಯುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಸೀಟುಗಳ ಲಭ್ಯತೆ, ಸಂಗ್ರಹಿಸಬೇಕಾದ ಶುಲ್ಕ, ಪಾಲಿಸಬೇಕಾದ ಮೀಸಲಾತಿ, ನಿಯಮಗಳ ಕುರಿತು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದರೂ ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳು ಎಗ್ಗಿಲ್ಲದೆ ವಸೂಲಿಯಲ್ಲಿ ತೊಡಗುವ ಮೂಲಕ ನಿಯಮಗಳನ್ನು ಉಲ್ಲಂಘಿಸಿ ಆದೇಶಗಳಿಗೆ ಬೆಲೆ ನೀಡದೆ ಸರ್ವಾಧಿಕಾರಿ ದೋರಣೆಯನ್ನು ಅನುಸರಿಸುತ್ತಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ ನ ಕಾರ್ಯದರ್ಶಿ ಶ್ರೀಕಾಂತ ಹೆಮ್ಮಾಡಿ ಆರೋಪಿಸಿದರು. ಅವರು ಖಾಸಗಿ ಕಾಲೇಜುಗಳಲ್ಲಿನ ಡೊನೆಶನ್ ಹಾವಳಿಯನ್ನು ನಿಯಂತ್ರಿಸಲು ‘ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರ’ವನ್ನು ರಚಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೇಡರೇಶನ್ ಕುಂದಾಪುರದ ಮಿನಿ ವಿಧಾನಸೌಧದ ಮುಂದೆ ಹಮ್ಮಿಕೊಂಡ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಡೋನೆಷನ್ ಹಾವಳಿಯನ್ನು ನಿಯಂತ್ರಿಸುವಂತೆ ಕಳೆದ ಕೆಲವು ವರ್ಷಗಳಿಂದ ಎಸ್.ಎಫ್.ಐ ಹೋರಾಟವನ್ನು ಮಾಡುತ್ತಲೇ ಬಂದಿದ್ದೇವೆ. ಆದರೆ ಉಡುಪಿ ಜಿಲ್ಲೆಯಲ್ಲಿ ಇದಕ್ಕೆ ಸೂಕ್ತವಾದ ಸ್ಪಂದನೆ ದೊರೆತಿಲ್ಲ. ಕಳೆದ ಬಾರಿ ತಹಶೀಲ್ದಾರರಿಗೆ ನೀಡಿದ ಮನವಿಗೂ ಈವರೆಗೆ…
ಕುಂದಾಪುರ: ಮಂಗಳೂರಿನಿಂದ ಗೋವಾದ ಮಡಂಗಾವ್ಗೆ ಮೇ 7ರಂದು ತೆರಳುತ್ತಿದ್ದ 70106 ಡೆಮು ರೈಲು ಸಂಜೆ ವೇಳೆಗೆ ಕುಂದಾಪುರ ರೈಲ್ವೇ ಸ್ಟೇಷನ್ ತಲುಪಿದಾಗ ರೈಲಿನ ಚಕ್ರದ ಎಕ್ಸಿಲ್ ಲಾಕ್ ಆಗಿ ರೈಲು ಸ್ಥಗಿತಗೊಂಡಿತು. ರೈಲಿನ ರಿಪೇರಿ ತಂತ್ರಜ್ಞರು ಮಡಂಗಾವ್ನಿಂದ ಬರಬೇಕಾಗಿರುವುದರಿಂದ 70106 ಡೆಮು ರೈಲು ಕುಂದಾಪುರದಲ್ಲಿಯೇ ಬಾಕಿ ಆಗಿದೆ. ಆದುದರಿಂದ ಮೇ 8ರ ಬೆಳಗ್ಗೆ ಮಡಂಗಾವ್ನಿಂದ ಕುಂದಾಪುರ ಮಾರ್ಗವಾಗಿ ಬರಬೇಕಿದ್ದ ಡೆಮು ರೈಲು 70105 ಅನ್ನು ರದ್ದು ಮಾಡಲಾಗಿದೆ. ಅದರ ಬದಲಿಗೆ ಬೆಳಗ್ಗೆ ಎಂದಿನಂತೆ 70106 ಡೆಮು ರೈಲು ಕುಂದಾಪುರದಿಂದ ಮಂಗಳೂರಿಗೆ ಪಯಣಿಸಲಿದೆ ಎಂದು ಕೊಂಕಣ ರೈಲ್ವೇ ತಿಳಿಸಿದೆ.
ಕೋಟ: ಸಮಾಜದಲ್ಲಿ ಪೊಲೀಸರ ಬಗ್ಗೆ ನಕಾರಾತ್ಮಕ ಚಿಂತನೆ ಬೆಳೆಯುತ್ತಿದ್ದು, ಪೊಲೀಸರೆಂದರೆ ಲಂಚಕೋರರೆಂಬ ಭಾವನೆ ನಾಗರೀಕರಲ್ಲಿದೆ. ಆದರೆ ನಿಜ ಜೀವನದಲ್ಲಿ ದಿನದ 24 ಗಂಟೆ ನಾಗರಿಕರ ಕಷ್ಟ ನಷ್ಟಗಳಿಗೆ ಸ್ಪಂದಿಸುವವರು ಪೊಲೀಸರು. ಆದ್ದರಿಂದ ಆರಕ್ಷಕರ ಕುರಿತು ನಕಾರಾತ್ಮಕ ಭಾವನೆ ಬೇಡ ಎಂದು ಉಡುಪಿ ಜಿಲ್ಲಾ ಪೊಲೀಸ್ಅಧೀಕ್ಷಕ ಕೆ.ಅಣ್ಣಾಮಲೆ„ ಹೇಳಿದರು. ಅವರು ಕೋಟ ಕಾರ್ತಟ್ಟು, ಚಿತ್ರಪಾಡಿಯಲ್ಲಿ ಜರಗಿದ ಇಲ್ಲಿನ ಅಘೋರೇಶ್ವರ ಕಲಾರಂಗದ ವಾರ್ಷಿಕೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಯುವ ಸಂಘಟನೆಗಳು ಸಮಾಜದ ಮೌಡ್ಯಗಳನ್ನು ತಡೆಯುವಲ್ಲಿ ಪೊಲೀಸರೊಂದಿಗೆ ಕೈಜೋಡಿಸಿದರೆ ಸಮಾಜ ಅಭಿವೃದ್ಧಿ ಸಾಧ್ಯ ಎಂದರು. ಸಮಾರಂಭದಲ್ಲಿ ಜಾನಪದ, ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೆ„ದ ಸಾಧಕರು ಮತ್ತು ಖ್ಯಾತ ಈಜು ತರಬೇತುದಾರರನ್ನು ಸಮ್ಮಾನಿಸಲಾಯಿತು ಹಾಗೂ ಆರೋಗ್ಯ ಸಮಸ್ಯೆ ಇರುವವರಿಗೆ ವೈದ್ಯಕೀಯ ನೆರವು ನೀಡಲಾಯಿತು. ಉದ್ಯಮಿ ಕೆ. ಪರಮೇಶ್ವರ ನಾಯರಿ ಅವರು ಓರ್ವ ಬಡ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಸಹಕಾರ ನೀಡಿದರು. ಸಮಾರಂಭದಲ್ಲಿ ರೋಟರಿ ಮಾಜಿ ಸಹಾಯಕ ಗವರ್ನರ್ ರೊ. ಅಭಿನಂದನ ಶೆಟ್ಟಿ, ಗೀತಾನಂದ ಫೌಂಡೇಶನ್ನ ಪ್ರವರ್ತಕ ಆನಂದ ಸಿ.…
ಶಾಂಘೈ: ಈ ಹೋಟೆಲ್ನಲ್ಲಿ ಕಣ್ಣಿಗೆ ಬೇಕಾದ್ದನ್ನು ಹೊಟ್ಟೆ ಬಿರಿಯುವಂತೆ ತಿನ್ನಲು ಕಾಸು ಕೊಡಬೇಕಿಲ್ಲ. ಆದರೆ ಒಂದೇ ಕಂಡಿಷನ್, ನೀವು ಸುರಸುಂದರರಾಗಿರಬೇಕು! ಚೀನಾದ ಜೆಂಗ್ಜುಹು ಪ್ರಾಂತದಲ್ಲಿನ ಒಂದು ನಗರದಲ್ಲಿರುವ ಕೊರಿಯಾ ಶೈಲಿಯ ಈ ಹೋಟೆಲ್ ಕೊಟ್ಟಿರುವ ಆಫರ್ ಹೆಸರು ‘ಫ್ರೀ ಮೀಲ್ ಫಾರ್ ಗುಡ್ ಲುಕಿಂಗ್’ (ಸುಂದರವಾಗಿರುವವರಿಗೆ ಉಚಿತ ಊಟ). ಪುಗ್ಸಟ್ಟೆ ಊಟ ಉಣ್ಣಲು ದಿನವೂ ಸುಮಾರು ಐವತ್ತು ಜನರು ಗೇಟ್ನಲ್ಲಿ ಕ್ಯೂ ನಿಲ್ಲುತ್ತಾರೆ ಎಂದು ಹೋಟೆಲ್ ಹೇಳಿಕೊಂಡಿದೆ. ಗ್ರಾಹಕರು ಊಟವನ್ನು ಆರ್ಡರ್ ಮಾಡುವ ಮುನ್ನ ಸೌಂದರ್ಯ ತಜ್ಞರು, ಪ್ಲಾಸ್ಟಿಕ್ ಸರ್ಜರಿ ತಜ್ಞರಿರುವ ತಂಡದ ಎದುರು ಹಾಜರಾಗುತ್ತಾರೆ. ನಂತರ ಮಷಿನ್ವೊಂದು ಗ್ರಾಹಕರ ಫೋಟೊವನ್ನು ಸೆರೆ ಹಿಡಿಯುತ್ತದೆ. ತೀರ್ಪುಗಾರರು ಸ್ಪರ್ಧಿಗಳ ಮುಖ, ಕಣ್ಣು, ಮೂಗು, ಗದ್ದ ಹಾಗೂ ಹಣೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಯಾರು ನಿಜಕ್ಕೂ ಸುಂದರರು ಎಂದು ಷರಾ ಬರೆಯುತ್ತಾರೆ. ಈ ಸುಂದರಿ, ಸುಂದರಾಂಗರು ತಾವು ತಿನ್ನುವ ಆಹಾರಕ್ಕೆ ಹಣ ಕೊಡಬೇಕಿಲ್ಲ ಎಂದು ಚೀನಾದ ಪತ್ರಿಕೆಗಳು ವರದಿ ಮಾಡಿವೆ. ”ಹೋಟೆಲ್ನ ಮಾಲಿಕರು ಇಂಗ್ಲಿಷ್ ಮಾತನಾಡುವ…
ಫೇಸ್ಬುಕ್ನಿಂದ ಪರಿಚಯ, ಗೆಳತನ, ಮದುವೆ ಆಗುವ ವಿಷಯ ಹೊಸದಲ್ಲ. ಅದರ ಮುಂದುವರಿದ ಭಾಗವಾಗಿ ಅಮೆರಿಕದಲ್ಲಿ ವಿಚ್ಛೇದನಕ್ಕೂ ಸಾಮಾಜಿಕ ಜಾಲತಾಣ ವೇದಿಕೆಯಾಗಿದೆ. ಫೇಸ್ಬುಕ್ ಮೂಲಕವೇ ಗಂಡನಿಗೆ ವಿಚ್ಛೇದನ ನೋಟಿಸ್ ಕಳುಹಿಸಲು ಬ್ರೂಕ್ಲಿನ್ನ ನರ್ಸ್ ಎಲ್ಲನೊರ ಬೈಡೂಗೆ ಮ್ಯಾನ್ಹಟನ್ ನ್ಯಾಯಾಲಯ ಅನುಮತಿ ನೀಡಿದೆ. ‘ಪತಿಯನ್ನು ಸಂಪರ್ಕಿಸಲು ನಡೆಸಿದ ಹಲವು ಪ್ರಯತ್ನ ವಿಫಲವಾದ ಬಳಿಕ ಸಾಮಾಜಿಕ ಜಾಲತಾಣ ಫೇಸ್ಬುಕ್ನ ಖಾಸಗಿ ಸಂದೇಶದ ಮೂಲಕ ವಿಚ್ಛೇದನ ಪತ್ರ ಕಳುಹಿಸಲು ಬೈಡೊಗೆ ಮ್ಯಾನ್ಹಟನ್ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮ್ಯಾಥ್ಯೂ ಕೂಪರ್ ಅನುಮತಿ ನೀಡಿದ್ದಾರೆ,’ ಎಂದು ಟೈಮ್ ನಿಯತಕಾಲಿಕ ವರದಿ ಮಾಡಿದೆ. ಆದರೆ, ನ್ಯಾಯಾಲಯದ ಈ ಆದೇಶ ಇತರರಿಗೂ ನಿದರ್ಶನವಾಗುವುದೇ ಎಂಬುದು ಸ್ಷಪ್ಟವಾಗಿಲ್ಲ. ಜತೆಗೆ, ಫೇಸ್ಬುಕ್ ಮೂಲಕ ನೋಟಿಸ್ ಕಳುಹಿಸಲು ಅಮೆರಿಕದ ನ್ಯಾಯಾಲಯ ಅನುಮತಿ ನೀಡಿರುವುದು ಇದೇ ಮೊದಲಲ್ಲ. ‘ಆಪಾದಕರ ಪರ ವಕೀಲರು ಪ್ರತಿವಾದಿಗೆ ವಾರಕ್ಕೆ ಒಂದರಂತೆ ಸತತ ಮೂರು ವಾರ ಅಥವಾ ಪ್ರತಿವಾದಿ ಪತ್ರ ತಲುಪಿದೆ ಎಂದು ತಿಳಿಸುವವರೆಗೂ ಈ ಸಂವಹನ ಮುಂದುವರಿಸಬೇಕು. ಅದಲ್ಲದೇ, ಪ್ರಾಥಮಿಕ ಸಂವಹನದ ನಂತರ ಫೇಸ್ಬುಕ್…
