Author: Editor Desk

ಉಡುಪಿ: ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಸಂಸ್ಥೆಗಳು ಖಾಸಗಿ-ಸರಕಾರಿ ಎನ್ನುವ ತಾರತಮ್ಯದಿಂದ ಹೊರತಾಗಿದ್ದರೆ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಲಿದೆ. ಪ್ರಸ್ತುತ ಸಮಾಜದಲ್ಲಿರುವ ಗಣ್ಯರು, ಸಾಧಕರು, ವಿಜ್ಞಾನಿಗಳು ಸರಕಾರಿ ಶಾಲೆಗಳಲ್ಲಿಯೇ ಕಲಿತು ಬಂದವರು. ಈ ನೆಲೆಯಲ್ಲಿ ಸರಕಾರಿ ಶಾಲೆ ಬಗ್ಗೆ ಅಸಡ್ಡೆ ತೋರದೆ ವಿದ್ಯಾಭ್ಯಾಸ ಮಾಡಬೇಕಾಗಿದೆ ಎಂದು ಎಸ್‌ಪಿ ಅಣ್ಣಾಮಲೈ ಅಭಿಪ್ರಾಯಪಟ್ಟರು. ಗರಡಿಮಜಲು ಸ.ಮಾ.ಹಿ.ಪ್ರಾ. ಶಾಲೆ ಮತ್ತು ಹಳೆವಿದ್ಯಾರ್ಥಿ ಸಂಘದ ಸುವರ್ಣ ಮಹೋತ್ಸವ ಹಾಗೂ ಮಾತೃಶಾಲಾ 66ನೇ ವಾರ್ಷಿಕ ಮಹೋತ್ಸವ ಸಮಾರಂಭದಲ್ಲಿ ನವೀಕೃತ ಲಹರಿ ರಂಗ ಮಂಟಪದ ಉದ್ಘಾಟನೆ ನೆರವೇರಿಸಿ, ಹಸ್ತಪ್ರತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಊರಿನ ಗಣ್ಯರು, ಹಳೆವಿದ್ಯಾರ್ಥಿ ಸಮೂಹ ಸರಕಾರಿ ಶಾಲೆಗೆ ಸಾಕಷ್ಟು ಪ್ರೋತ್ಸಾಹ ನೀಡುವುದರಿಂದ ಶಾಲೆ ಇನ್ನೂ ಎತ್ತರಕ್ಕೆ ಬೆಳೆಯಲು ಸಾಧ್ಯ. ಇಲ್ಲಿನ ಸ್ಥಳೀಯರು-ಹಳೆವಿದ್ಯಾರ್ಥಿಗಳು ಶಾಲೆಯ ಬಗ್ಗೆ ವಹಿಸಿದ್ದ ಕಾಳಜಿ ಶ್ಲಾಘನೀಯ ಎಂದು ಅವರು ಹೇಳಿದರು.

Read More

ಉಡುಪಿ: ಮಂಗಳೂರಿನಂತೆ ಉಡುಪಿಯಲ್ಲಿಯೂ ಇ ಲಾಬಿ ಕೇಂದ್ರ ತೆರೆಯಲಾಗುವುದು ಎಂದು ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮತ್ತು ಸಿಇಒ ಪಿ. ಜಯರಾಮ ಭಟ್‌ ತಿಳಿಸಿದ್ದಾರೆ.     ಕಿನ್ನಿಮೂಲ್ಕಿ ಶಾಂತಾ ಕಾಂಪ್ಲೆಕ್ಸ್‌ನಲ್ಲಿ ನಡೆದ ಕರ್ಣಾಟಕ ಬ್ಯಾಂಕ್‌ನ 11ನೆಯ ಪ್ರಾದೇಶಿಕ ಕಚೇರಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗ ಡಿಜಿಟಲ್‌ ಬ್ಯಾಂಕಿಂಗ್‌ ವ್ಯವಹಾರ (ಆಲ್ಟರೆ°àಟಿವ್‌ ಡೆಲಿವರಿ ಸಿಸ್ಟಮ್‌) ಜಾಸ್ತಿಯಾಗುತ್ತಿರುವುದರಿಂದ ಇ ಲಾಬಿ ಸೌಲಭ್ಯವನ್ನು ಉಡುಪಿಯ ಸೂಕ್ತ ಸ್ಥಳದಲ್ಲಿ ಆರಂಭಿಸಲಾಗುವುದು. ಇದರಲ್ಲಿ ಹಣ ಹಾಕುವುದು, ತೆಗೆಯುವುದು, ಪಾಸ್‌ಬುಕ್‌ ಎಂಟ್ರಿ ಮಾಡುವುದು, ಪಾಸ್‌ಬುಕ್‌ ಪ್ರಿಂಟಿಂಗ್‌ ಮೊದಲಾದ ಸೌಲಭ್ಯಗಳು ಇರುತ್ತವೆ. ಇದರಲ್ಲಿ ಮೂರ್‍ನಾಲ್ಕು ಬಗೆಯ ಯಂತ್ರಗಳು ಇದ್ದು ಗ್ರಾಹಕರು ಸ್ವತಂತ್ರವಾಗಿ ತಮ್ಮ ಕೆಲಸ ಮಾಡಿಕೊಳ್ಳಬಹುದು ಎಂದರು. ಮುಂದಿನ ಆರು ತಿಂಗಳಲ್ಲಿ ಬ್ಯಾಂಕ್‌ ವ್ಯವಹಾರವನ್ನು 1 ಲ. ಕೋ. ರೂ.ಗೆ ಏರಿಸಲಾಗುವುದು. 50 ಶಾಖೆ, 250 ಎಟಿಎಂಗಳನ್ನು ತೆರೆಯಲಾಗುವುದು. ಸಾಮಾಜಿಕ ಹೊಣೆಗಾರಿಕೆಯನ್ವಯ 2 ಕೋ. ರೂ. ಮೊತ್ತವನ್ನು ಈ ವರ್ಷ ವಿನಿಯೋಗಿಸಲಾಗಿದೆ ಎಂದು ಅವರು ತಿಳಿಸಿದರು.

Read More

ಮಲ್ಪೆ: ಜಿಲ್ಲಾ ಮೊಗವೀರ ಯುವ ಸಂಘಟನೆ ದಶಮಾನೋತ್ಸವ ಪ್ರಯುಕ್ತ ಮಲ್ಪೆ ಘಟಕದ ವತಿಯಿಂದ ಎ. 19ರಂದು ಮೊಗವೀರ ಕ್ರೀಡಾ ಸಂಗಮ ಮಲ್ಪೆಯ ಗಾಂಧಿ ಶತಾಬ್ದಿ ಮೈದಾನದಲ್ಲಿ ನಡೆಯಲಿದೆ. ಡಾ| ಜಿ. ಶಂಕರ್‌ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 8 ಗಂಟೆಗೆ ಮಲ್ಪೆ ಅಯ್ಯಪ್ಪ ಸ್ವಾಮಿ ಮಂದಿರದಿಂದ ಮೈದಾನಕ್ಕೆ ಕ್ರೀಡಾಜ್ಯೋತಿಯ ಮೆರವಣಿಗೆ ಸಾಗಿ ಬರಲಿದೆ. ಮೊಗವೀರ ಸಮಾಜ ಬಾಂಧವರಿಗೆ ಹಗ್ಗಜಗ್ಗಾಟ, ತ್ರೋಬಾಲ್‌, ವಾಲಿಬಾಲ್‌, ವೈಯಕ್ತಿಕ ಓಟ, ರಿಲೇ ಓಟ, ಲಾಂಗ್‌ಜಂಪ್‌, ಹೈಜಂಪ್‌, ಡಿಸ್ಕಸ್‌ ತ್ರೋ, ಶಾಟ್‌ಪುಟ್‌ ಕ್ರೀಡೆಗಳು ಮಹಿಳಾ ಮತ್ತು ಪುರುಷ ಪ್ರತ್ಯೇಕ ವಿಭಾಗದಲ್ಲಿ ನಡೆಯಲಿದೆ. ಸಾರ್ವಜನಿಕರಿಗೆ ಸ್ಫರ್ಧೆ ಮಲ್ಪೆ ಬೀಚ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಸಾರ್ವಜನಿಕರಿಗೆ ಜಿಲ್ಲಾ ಮಟ್ಟದ ಮರಳು ಶಿಲ್ಪ ರಚನೆ ಸ್ಪರ್ಧೆ ಏರ್ಪಡಿಸಲಾಗಿದೆ. ಚಿತ್ರಕಲಾ ಸ್ಫರ್ಧೆ ಎರಡು ವಿಭಾಗಗಳಲ್ಲಿ ನಡೆಯಲಿದೆ. ಸಂಜೆ 6 ಗಂಟೆಗೆ ರಾಜ್ಯಮಟ್ಟದ ಅಹ್ವಾನಿತ ತಂಡಗಳಿಂದ ಫಿಲ್ಮ್ ಡ್ಯಾನ್ಸ್‌ ಸ್ಪರ್ಧೆ ನಡೆಯಲಿದೆ. ಸಮಾರೋಪ: ಸಮ್ಮಾನ ಸಂಜೆ ನಡೆಯುವ ಸಮಾರೋಪದಲ್ಲಿ ಡಾ| ಜಿ. ಶಂಕರ್‌ ಬಹುಮಾನ ವಿತರಿಸಲಿದ್ದು, ಮಲ್ಪೆ…

Read More

ಕುಂದಾಪುರ: ಥಾಣಾದಿಂದ ಕುಂದಾಪುರಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಅವರ ಬ್ಯಾಗ್‌ನ್ನು ಹರಿದು ಲಕ್ಷಾಂತರ ರೂ. ಚಿನ್ನಾಭರಣ ಹಾಗೂ ನಗದನ್ನು ಅಪಹರಿಸಲಾಗಿದೆ ಎಂದು ಆಜ್ರಿ ಗ್ರಾಮದ ಹೊಸಬಾಳು ನಿವಾಸಿ ಶೆ„ಲಜಾ ಅವರು ಶಂಕರನಾರಾಯಣ ಠಾಣೆಯಲ್ಲಿ ದೂರು ನೀಡಿದ್ದಾರೆ. ಎ.9ರಂದು ಮಧ್ಯಾಹ್ನ ಥಾಣಾದಿಂದ ಮತ್ಸಗಂಧ ರೈಲಿನಲ್ಲಿ ಮಕ್ಕಳೊಂದಿಗೆ ಕುಂದಾಪುರಕ್ಕೆ ಪ್ರಯಾಣ ಮಾಡಿದ್ದು, ಎ.10ರಂದು ರಂದು ಬೆಳಗ್ಗೆ 6:30 ಕ್ಕೆ ಗಂಟೆಗೆ ಕುಂದಾಪುರ ಮೂಡ್ಲಕಟ್ಟೆ ರೈಲ್ವೆ ಸ್ಟೇಶನ್‌ಗೆ ರೈಲಿನಿಂದ ಬಂದು ಇಳಿದು, ನಂತರ ಅಲ್ಲಿಂದ ಮನೆಗೆ ಹೋಗಿ ರಾತ್ರಿ ಮನೆಯಲ್ಲಿ ಬ್ಯಾಗ್‌ನಿಂದ‌ ಬಟ್ಟೆ ಹಾಗೂ ಚಿನ್ನದ ಆಭರಣ ತೆಗೆಯಲು ನೋಡಿದಾಗ, ಬ್ಯಾಗಿನ ಜೀಪ್‌ನಿಂದ ಸ್ವಲ್ಪ ಮೇಲ್ಗಡೆ ಯಾವುದೋ ಹರಿತವಾದ ವಸ್ತುವಿನಿಂದ ಬ್ಯಾಗ್‌ ಕತ್ತರಿಸಿ, ಬ್ಯಾಗಿನ ಒಳಗಡೆ ನಗದು ಹಣ ಚಿನ್ನಾಭರಣಗಳನ್ನು ಕಳವು ಮಾಡಿದ ಬಗ್ಗೆ ತಿಳಿಸು ಬಂದಿರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಎರಡು ಪರ್ಸ್‌ನಲ್ಲಿರುವ ಚಿನ್ನದ ಆಭರಣಗಳಿರುವ ಬಾಕ್ಸನಲ್ಲಿ ಇದ್ದ ಕರಿಮಣಿ ಸರ, ನೆಕ್ಲೇಸ್‌, ಹವಳ ಸರ, ಮಕ್ಕಳ ಚಿನ್ನದ ಚೆ„ನ್‌, ಮೂರು ಜೊತೆ ಕಿವಿಯ ಓಲೆ,…

Read More

ಕುಂದಾಪುರ: ಗ್ಯಾಸ್‌ ಸೋರಿಕೆಯಿಂದಾಗಿ ಅಕಸ್ಮಿಕವಾಗಿ ಬೆಂಕಿ ತಗುಲಿ ನಗರದ ಹಂಗಳೂರು ಬಳಿಯ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಜೆಸಿಂತಾ ಡಿಸೋಜಾ ( 40) ಅವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಧವಾರ ರಾತ್ರಿ ಸ್ವಲ್ಪ ಕಾಲ ಹೋದ ವಿದ್ಯುತ್‌ ಪುನಃ ಬಂದಾಗ ಗ್ಯಾಸ್‌ ಹಚ್ಚಲು ಹೋದ ಮಹಿಳೆಗೆ ಅಕಸ್ಮಿಕವಾಗಿ ಬಟ್ಟೆಗೆ ಬೆಂಕಿ ತಗುಲಿದೆ. ಇದನ್ನು ಗಮನಿಸಿದ ಅವರ ಪತಿ ತಕ್ಷಣ ಆಗಮಿಸಿ ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಇದರಿಂದ ಪತಿಗೂ ಸಹ ಬೆಂಕಿ ತಗುಲಿ ಗಾಯಗಳಾಗಿದೆ. ತಕ್ಷಣ ಆಸುಪಾಸಿನವರು ಆಗಮಿಸಿ ಬೆಂಕಿಯಿಂದ ಗಾಯಗೊಂಡ ಜೆಸಿಂತಾ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗ್ಯಾಸ್‌ ಸೋರಿಕೆಯಿಂದ ಸಂಭವಿಸಬಹುದಾದ ಇನ್ನಷ್ಟು ಅನಾಹುತವನ್ನು ತಪ್ಪಿಸಲು ತಕ್ಷಣ ಕುಂದಾಪುರದ ಅಗ್ನಿಶಾಮಕದಳ ಸ್ಥಳಕ್ಕೆ ಆಗಮಿಸಿತ್ತು. ಸ್ಥಳಕ್ಕೆ ಕುಂದಾಪುರದ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ ಆಗಮಿಸಿ ಪರಿಶೀಲನೆ ನಡೆಸಿದರು. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪುರ: ಕರ್ಕುಂಜೆ ಗ್ರಾಮದ ನೇರಳಕಟ್ಟೆ ಕೊಂಗರ್‌ಖಾನ್‌ ಅಪ್ರಾಪ್ತ ವಯಸ್ಸಿನ ಪರಿಶಿಷ್ಟ ಜಾತಿಯ ಬಾಲಕಿಯ ಮೇಲೆ ಅತ್ಯಾಚಾರ ಪ್ರಯತ್ನ ಮಾಡಿದ ಅದೇ ಗ್ರಾಮದ ಅಜಿತ್‌ ಶೆಟ್ಟಿ (28) ವಿರುದ್ಧ ಸೆಕ್ಷನ್‌ 8ರ ಪೋಸ್ಕೊ ಕಾಯಿದೆಯಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದು , ಬೇಸಿಗೆಯ ರಜೆ ಇರುವುದರಿಂದ ಮನೆಯ ಪಕ್ಕದ ಬಾವಿಕಟ್ಟೆಯ ಬಳಿ ಬಟ್ಟೆ ತೊಳೆಯುತ್ತಿರುವ ವೇಳೆಯಲ್ಲಿ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಲದೇ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ಸುಟ್ಟುಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಠಾಣೆಯಲ್ಲಿ ದೂರು ದಾಖಲಾಗಿತ್ತು.

Read More

ಕುಂದಾಪುರ: ತಾಲೂಕಿನಲ್ಲಿ ಶತಮಾನ ಪೂರೈಸಿದ ಹಲವು ಸರಕಾರಿ ಪ್ರಾಥಮಿಕ ಶಾಲೆಗಳಿವೆ. ಇಂತಹ ಪ್ರತಿಷ್ಠಿತ ಶಾಲೆಗಳಲ್ಲಿ ಕಲಿತ ಸಾವಿರಾರು ಮಂದಿ ಉನ್ನತ ಹುದ್ದೆಗೂ ಏರಿದ್ದಾರೆ. ಇಲ್ಲಿ ನುರಿತ ಅಧ್ಯಾಪಕರೂ ಇದ್ದಾರೆ. ಇಂದು ಭಾಷಾ ಮಾಧ್ಯಮಗಳ ತಾಕಲಾಟ ಏನೇ ಇರಲಿ, ಇಂತಹ ಶಾಲೆಗಳನ್ನು ಉಳಿಸಿಕೊಳ್ಳುವುದು ಆಯಾ ಊರ ವಿದ್ಯಾಭಿಮಾನಿಗಳ ಜವಾಬ್ದಾರಿ. ಶಾಲಾ ವಾತಾವರಣವನ್ನು ಉತ್ತಮಪಡಿಸಿದರೆ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಬಹುದು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಹೇಳಿದರು. ಇಲ್ಲಿಗೆ ಸಮೀಪದ ನೂಜಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘ ಮತ್ತು ಗ್ರಾಮಸ್ಥರ ಆಶ್ರಯದಲ್ಲಿ ನಡೆದ ನಿವೃತ್ತರ ಸಮ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದೇ ಶಾಲೆಯಲ್ಲಿ ಕಲಿತು, ಅಧ್ಯಾ ಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಗಣಪತಿ ಆರ್‌. ಮಂಜ ಮತ್ತು ಬೆಳ್ವೆ ಶಂಕರ ಶೆಟ್ಟರನ್ನು ಮುಖ್ಯ ಅತಿಥಿ ವಿದ್ಯಾಂಗ ಉಪ ನಿರ್ದೇಶಕ ದಿವಾಕರ ಶೆಟ್ಟಿ ಸಮ್ಮಾನಿಸಿ ಶುಭ ಹಾರೈಸಿದರು. ಶಾಲೆಯ ಹಳೆ ವಿದ್ಯಾರ್ಥಿ, ಅಧ್ಯಾಪಕ, ಕ್ರೀಡಾ ವೀಕ್ಷಕ…

Read More

ಬೈಂದೂರು: ಸಾಮಾಜಿಕವಾಗಿ ತುಳಿತಕ್ಕೊಳಗಾದ ಜನಾಂಗ ಹಾಗೂ ಹಿಂದುಳಿದ ಸಮುದಾಯವು ಅನುಭವಿಸಿದ ಅಸಮಾನತೆಯ ಬೇಗೆ, ಅಸ್ಪ್ರಶ್ಯತೆಯ ನೋವು ನಿವಾರಣೆಗೆ ಹೋರಾಟವನ್ನೇ ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕು. ಸಂವಿಧಾನಾತ್ಮಕ ಹಕ್ಕುಗಳನ್ನು ಕಲ್ಪಸುವುದರ ಮೂಲಕ ಸಮಾಜದ ಕಟ್ಟಕಡೆಯ ಸಮುದಾಯಕ್ಕೆ ಧ್ವನಿ ಹಾಗೂ ಶಕ್ತಿಯನ್ನು ನೀಡಿದ ದೇಶದ ಮಹಾನ್ ನಾಯಕ ಅಂಬೇಡ್ಕರ್ ಅವರ ಜೀವನ ಮತ್ತು ತತ್ವಾದರ್ಶಗಳು ಸದಾ ಅನುಕರಣೀಯ ಎಂದು ಶಾಸಕ ಗೋಪಾಲ ಪೂಜಾರಿ ಅವರು ಹೇಳಿದರು. ಡಾ. ಬಿ. ಆರ್. ಅಂಬೇಡ್ಕರ್ ಸಂಘ ರಿ. ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಮಹಿಳಾ ಸಂಘ ರಿ. ಬೈಂದೂರು ಇವರ 20ನೇ ವಾರ್ಷಿಕೋತ್ಸವ ಹಾಗೂ ಅಂಬೇಡ್ಕರ್ ಅವರ 124ನೇ ಜನ್ಮದಿನಾಚರಣೆ ಅಂಗವಾಗಿ ಬೈಂದೂರಿನ ಶಾರದಾ ವೇದಿಕೆಯಲ್ಲಿ ಮಂಗಳವಾರ ರಾತ್ರಿ ಜರಗಿದ ಸಮಾರಂಭದಲ್ಲಿ ವಿವಿಧ ಸಾಧಕರನ್ನು ಸಮ್ಮಾನಿಸಿ ಅವರು ಮಾತನಾಡಿದರು. ಯಡ್ತರೆ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಕುಂದಾಪುರ ಪೊಲೀಸ್ ಉಪಾದೀಕ್ಷಕ ಮಂಜುನಾಥ ಶೆಟ್ಟಿ, ಬ್ರಹ್ಮಾವರದ ನ್ಯಾಯವಾದಿ ಯಶಸ್ವಿನಿ ಅಮೀನ್…

Read More

ಗ೦ಗೊಳ್ಳಿ: ಅ೦ಬೇಡ್ಕರ್ ಆದರ್ಶಗಳ ಹಿ೦ದಿನ ಆಶಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಪ್ರಜ್ಞೆ ಮತ್ತು ಮನಸ್ಸು ನಮ್ಮದಾಗಬೇಕು. ಸ೦ಕುಚಿತ ಭಾವನೆಯನ್ನು ತೊರೆದು ವಿಶಾಲ ಪರಿಧಿಯಡಿಯಲ್ಲಿ ಯಾವುದೇ ವಿಷಯದ ಬಗೆಗೆ ಆಲೋಚಿಸುವ ಶಕ್ತಿಯನ್ನು ನಾವು ರೂಢಿಸಿಕೊಳ್ಳಬೇಕು ಎ೦ದು ಗ೦ಗೊಳ್ಳಿ ಗ್ರಾಮ ಪ೦ಚಾಯತ್ ಅಧ್ಯಕ್ಷೆ ರೇಷ್ಮಾ ಖಾರ್ವಿ ಹೇಳಿದರು. ಅವರು ಮೇಲ್ ಗ೦ಗೊಳ್ಳಿಯ ಸರಕಾರಿ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಡೆದ ಗ೦ಗೊಳ್ಳಿಯ ಡಾ.ಬಿ.ಆರ್ ಅ೦ಬೇಡ್ಕರ್ ಯುವಕ ಮ೦ಡಲ ರಿ, ಅಮೃತಾ ಯುವತಿ ಮ೦ಡಲ ಮತ್ತು ಅರ್ಚನಾ ಮಹಿಳಾ ಮ೦ಡಲ ಮೇಲ್ ಗ೦ಗೊಳ್ಳಿ ಇವುಗಳ ವಾರ್ಷಿಕೋತ್ಸವ ಮತ್ತು ಡಾ.ಬಿ.ಆರ್ ಅ೦ಬೇಡ್ಕರ್‌ರವರ ೧೨೪ನೇ ಜನ್ಮದಿನಾಚರಣೆಯ ಅ೦ಗವಾಗಿ ನಡೆದ ಸಮಾರ೦ಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ಮಣಿಪಾಲ ಸಿ೦ಡಿಕೇಟ್ ಬ್ಯಾ೦ಕ್ ಪ್ರಧಾನ ಕಛೇರಿಯ ಪ್ರಬ೦ಧಕ ಎ.ಜಿ. ಗೋಪಿನಾಥ ಮಾತನಾಡಿ ಸ೦ಸ್ಥೆಗಳು ಶಿಕ್ಷಣ ಮತ್ತು ಆರೋಗ್ಯದ ಅರಿವನ್ನು ಸಮಾಜದಲ್ಲಿ ಮೂಡಿಸುವಲ್ಲಿ ತಮ್ಮನ್ನು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು ಎ೦ದು ಅಭಿಪ್ರಾಯಪಟ್ಟರು.ಹಸಿಮೀನು ವ್ಯಾಪಾರಸ್ಥರ ಸ೦ಘದ ಅಧ್ಯಕ್ಷ ಜಿ.ಟಿ.ಮ೦ಜುನಾಥ ಅವರು ವಿದ್ಯಾರ್ಥಿ ವೇತನ ಮತ್ತು…

Read More

ಕನ್ನಡ ಪತ್ರಕರ್ತರಿಂದ ರಾಜಭವನದಲ್ಲಿ ರಾಜ್ಯಪಾಲರಿಗೆ ಗೌರವಾರ್ಪಣೆ ಮುಂಬಯಿ: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ಕಪಸಮ) ಸಂಸ್ಥೆಯು ಆಯೋಜಿಸಿರುವ ರಾಷ್ಟ್ರದ ಪ್ರಪ್ರಥಮ ಮೂರು ದಿನಗಳ ಅಖಿಲ ಭಾರತ ಕನ್ನಡ ಪತ್ರಕರ್ತರ ಸಮಾವೇಶ ಸಮಾಪನ ಗೊಂಡಿತು. ಮುಂಬಯಿ ಉಪನಗರದ ಥಾಣೆ ಪಶ್ಚಿಮದ ಹೊಟೇಲ್ ಧೀರಜ್‌ನಲ್ಲಿ ನೆರೆದ ಪತ್ರಕರ್ತರುಗಳೊಂದಿಗೆ ಭಾರತ ರಾಷ್ಟ್ರದ ಸಂವಿಧಾನಶಿಲ್ಪಿ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಶುಭಾವಸರದಲ್ಲಿ ಡಾ| ಅಂಬೇಡ್ಕರ್ ಸ್ಮರಿಸಿ ಗೌರವಾರ್ಪಣೆ ಗೈಯಲಾಯಿತು. ಬಳಿಕ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ನೇತೃತ್ವದಲ್ಲಿ, ಸಮಾವೇಶದ ಅಂಗವಾಗಿದ್ದ ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲರ ಭೇಟಿ ಮತ್ತು ಗೌರವಾರ್ಪಣೆ ಕಾರ್ಯಕ್ರಮ ಜರುಗಿಸಲಾಗಿದ್ದು ಪೂರ್ವಾಹ್ನ ಮಹಾನಗರದ ಮಲಬಾರ್‌ಹಿಲ್ ಅಲ್ಲಿನ ರಾಜಭವನಕ್ಕೆ ಪದಾಧಿಕಾರಿಗಳೊಂದಿಗೆ ತೆರಳಿದ ಪತ್ರಕರ್ತರ ಸಂಘದ ನಿಯೋಗವು ರಾಜ್ಯಪಾಲ ಸಿಹೆಚ್ ವಿದ್ಯಾಸಾಗರ್ ರಾವ್ ಅವರನ್ನು ರಾಜಭವನದ ಜಲ್ ಭೂಷಣ್ ರಾಜ್ಯಪಾಲರ ಅಧಿಕೃತ ಕಾರ್ಯಾಲಯದಲ್ಲಿ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಮತ್ತು ರೋನ್ಸ್ ಬಂಟ್ವಾಳ್ ಅವರು ರಾಜ್ಯಪಾಲರಿಗೆ ಸಮಾವೇಶದ ಸ್ಮರಣಿಕೆಯನ್ನೀಡಿ ಗೌರವಿಸಿದರು.…

Read More