ಮಳೆಗಾಲ ಮುಗಿದು ಚಳಿಗಾಲ ಪ್ರಾರಂಭವಾದೊಡನೆ ಕರಾವಳಿಯ ಕಡೆ ಎಲ್ಲೆಂದರಲ್ಲಿ ಮೊಳಗುವುದು ಯಕ್ಷಗಾನದ ಪದ,ತಾಳ,ಹೆಜ್ಜೆ,ಚಂಡೆಯ ಸದ್ದು.ಮಳೆಗಾಲದಲ್ಲಿಯೂ ಒಳಾಂಗಣದಣದಲ್ಲಿ ಇದರ ಛಾಪಿದ್ದರು,ಚಳಿಗಾಲ,ಬೇಸಿಗೆಯ ಕಾಲದ ರಾತ್ರಿಗಳಲ್ಲಿ ಇದರ ಪ್ರದರ್ಶನದ ಮಜವೇ ಬೇರೆ. ಅದು ಹರಕೆ ಬಯಲಾಟವಾಗಿರಬಹುದು, ಇಲ್ಲಾ ಖಾಸಗಿ ಮಾಲಿಕತ್ವದಲ್ಲಿ ನಡೆಯುವ ಪ್ರದರ್ಶನವಾಗಿರಬಹುದು. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರೊರೆಗೂ ಭೇದ-ಭಾವವಿಲ್ಲದೆ ರಾತ್ರಿಪೂರ್ತಿ ಅತ್ಯಾಸಕ್ತಿಯಿಂದ ರಂಗಮಂದಿರದ ಎದರು ಕುಳಿತು ಮನೋರಂಜನೆ ಪಡೆಯುವ ಪ್ರದರ್ಶನ ಈ ಯಕ್ಷಗಾನ. ವೇಷಭೂಷಣ, ಅಭಿನಯ, ಪದ ಹಾಗೂ ಮಾತುಗಾರಿಕೆಯಲ್ಲೇ ಅದ್ಭುತಲೋಕ ಸೃಷ್ಟಿಸುವುದರ ಜೊತೆಗೆ ಕನ್ನಡ ಸಂಸ್ಕ್ರತಿಯನ್ನು ಮಡಿಲಲ್ಲಿಟ್ಟುಕೊಂಡು ಬೆಳೆದು, ಬೆಳೆಸಿದ ಕಲೆ ಕನ್ನಡ ಯಕ್ಷಗಾನ. ಕೇವಲ ಪಂಡಿತರಿಗಷ್ಟೆ ಸೀಮಿತವಾಗಿರದೆ ಜಾತಿ-ಮತಗಳೆನ್ನದೇ, ಎಲ್ಲರನ್ನೂ ಒಳಗೊಂಡ ಕಲೆ ಇದು. ಬಯಲಾಟ, ದಶಾವತಾರ ಆಟ ಎಂದು ಕರೆಯಲ್ಪಡುತ್ತಿದ್ದ ಕನ್ನಡದ ಪ್ರಾಚೀನ ರಂಗಭೂಮಿಗೆ, ಸುಮಾರು ೧೦೦-೧೫೦ ವರ್ಷಗಳ ಹಿಂದೆಯೇ ಬಂದ ಹೆಸರು ’ಯಕ್ಷಗಾನ’. ಇದು ಒಂದು ಮೂಲಗಳ ಅಭಿಪ್ರಾಯ. ಆದರೆ ಸುಮಾರು ಕ್ರಿ.ಶ ೧೫೦೦ ರಷ್ಟರಲ್ಲಿಯೆ ’ಯಕ್ಷಗಾನ’ವೆಂಬ ಪದ ರೂಢಿಗೆ ಬಂದಿದ್ದು “ಯಕ್ಕಲಗಾನ”ವು ಯಕ್ಷಗಾನವಾಗಿದೆ ಎಂದು ಇನ್ನೂ ಕೆಲವು…
Author: Editor Desk
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಪ್ರಕಟಿಸಿದ ನೂತನ ಏಕದಿನ ಕ್ರಿಕೆಟ್ ರ್ಯಾಂಕಿಂಗ್ನಲ್ಲಿ ಭಾರತ ತಂಡ ಎರಡನೇ ಸ್ಥಾನ ಕಾಯ್ದುಕೊಂಡಿದೆ. ವಿಶ್ವಕಪ್ನಲ್ಲಿ ಸೆಮಿಫೈನಲ್ ತಲುಪಿದ ಕಾರಣ ಭಾರತಕ್ಕೆ ಈ ಸ್ಥಾನ ತೃಪ್ತಿಪಟ್ಟುಕೊಳ್ಳಬೇಕಿದೆ. ಒಟ್ಟು 116 ಅಂಕ ಗಳಿಸಿರುವ ಭಾರತ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಕ್ಕಿಂತ 6 ಅಂಕ ಹಿಂದೆ ಬಿದ್ದಿದೆ. ಆಸ್ಟ್ರೇಲಿಯಾ 122 ಅಂಕ ಗಳಿಸಿ ಅಗ್ರ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ (112), ಶ್ರೀಲಂಕಾ (108), ನ್ಯೂಜಿಲೆಂಡ್ (107), ಇಂಗ್ಲೆಂಡ್ (101), ಪಾಕಿಸ್ತಾನ (95) ಉಳಿದ ಸ್ಥಾನ ಪಡೆದಿವೆ. ಭಾರತ ತಂಡದ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಅಗ್ರ 10 ಆಟಗಾರರ ಪೈಕಿ ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ ಭಾರತದ ಪರ ಅಗ್ರ ಸ್ಥಾನದಲ್ಲಿದ್ದು, 4ನೇ ರ್ಯಾಂಕ್ ಗಳಿಸಿದ್ದಾರೆ. ಧವನ್ 6ನೇ ಹಾಗೂ ಧೋನಿ 8ನೇ ಸ್ಥಾನ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ನಾಯಕ ಎಬಿ ಡಿಬಿಲಿಯರ್ಸ್ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.
ದೇಶದ ಅಗ್ರ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹವಾಲ್, ಅಂತಾರಾಷ್ಟ್ರೀಯ ರ್ಯಾಂಕಿಂಗ್ನಲ್ಲಿ ಮತ್ತೆ ನಂಬರ್ ಒನ್ ಸ್ಥಾನಕ್ಕೇರಿದ್ದಾರೆ. ಗುರುವಾರ ಬಿಡುಗಡೆಯಾದ ಇತ್ತೀಚಿನ ಬಿಡಬ್ಲ್ಯೂಎಫ್ ಪಟ್ಟಿಯಲ್ಲಿ ಚೀನಾದ ಲಿ ಕ್ಸುರುಯಿ ಮೂರನೇ ಸ್ಥಾನಕ್ಕೆ ಇಳಿದ ನಂತರ ಸೈನಾ ನಂಬರ್ ಒನ್ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೊದಲು ಭಾರತದಲ್ಲಿ ನಡೆದ ಇಂಡಿಯನ್ ಸೂಪರ್ ಸೀರೀಸ್ ಪ್ರಶಸ್ತಿ ಗೆಲ್ಲುವ ಮೂಲಕ ಸೈನಾ ವಿಶ್ವದಲ್ಲೇ ಅಗ್ರಸ್ಥಾನಕ್ಕೇರಿದ ದೇಶದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಕಳೆದ ವಾರ ಸಿಂಗಾಪುರ್ ಓಪನ್ ಸೀರೀಸ್ನಲ್ಲಿ ಸೈನಾ ಆಡಲಿಲ್ಲವಾದರೂ, ಕ್ಸುರುಯಿ ಪಂದ್ಯಾವಳಿಯಿಂದ ಹೊರಬಿದ್ದ ಬಳಿಕ ಮಹಿಳೆಯರು ಸಿಂಗಲ್ಸ್ ಪಟ್ಟಿಯಲ್ಲಿ ಎರಡು ಸ್ಥಾನ ಕೆಳೆಗಿಳಿದಿದ್ದಾರೆ. ಪುರುಷರ ರ್ಯಾಂಕಿಂಗ್ನಲ್ಲಿ,ಕೆ.ಶ್ರೀನಾಥ್ 4ನೇ ಸ್ಥಾನ ಉಳಿಸಿಕೊಂಡಿದ್ದರೆ, ಪಿ. ಕಶ್ಯಪ್ ಸಿಂಗಾಪುರ್ ಓಪನ್ ಸೀರಿಸ್ ಸೆಮಿಫೈನಲ್ನಲ್ಲಿ 14ನೇ ಸ್ಥಾನಕ್ಕೆ ಏರಿದ್ದಾರೆ.
ಮಂಗಳನ ಅಂಗಳಕ್ಕೆ ಮಾನವನನ್ನು ಕಳುಹಿಸುವ ಉದ್ದೇಶ ಹೊಂದಿರುವ ಮಾರ್ಸ್ ಒನ್ ಏಕಮುಖಿ ಯಾನ ಎರಡು ವರ್ಷ ವಿಳಂಬವಾಗಲಿದೆ. ಮೊದಲ ಮಾನವ ಯಾನ 2024ರ ಬದಲಾಗಿ 2026 ರಲ್ಲಿ ಹೊರಟು ಎಲ್ಲವೂ ಲೆಕ್ಕಾಚಾರದಂತೆ ನಡೆದರೆ 2027ರಲ್ಲಿ ಅಂಗಾರಕನ ಅಂಗಳದಲ್ಲಿ ಕಾಲೂರಲಿದೆ. ಮಾನವನ ಉಳಿವಿಗೆ ಅನುಕೂಲಕರ ಪರಿಸ್ಥಿತಿ ಇದೆಯೇ ಎಂಬುದನ್ನು ಪರೀಕ್ಷೆಗೆ ಒಳಪಡಿಸಲು 2018ರಲ್ಲಿ ರೊಬಾಟಿಕ್ ಯಾನವನ್ನು ಯೋಜಿಸಲಾಗಿತ್ತು ಆದರೆ ಹಣಕಾಸಿನ ಮುಗ್ಗಟ್ಟಿನಿಂದಾಗಿ ಇದು ಎರಡು ವರ್ಷ ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಯಾನದ ಎಲ್ಲಾ ಕಾರ್ಯಗಳೂ 2 ವರ್ಷ ಮುಂದಕ್ಕೆ ಹೋಗಿವೆ ಎಂದು ನೆದರ್ಲ್ಯಾಂಡ್ ಮೂಲದ ಎನ್ಜಿಒ ಮಾರ್ಸ್ ಒನ್ ತಿಳಿಸಿದೆ. ಮಂಗಳನೆಡೆಗಿನ ಏಕಮುಖ ಪ್ರಯಾಣಕ್ಕೆ ಭಾರತದ ಮೂವರು ಸೇರಿದಂತೆ ಒಟ್ಟು 100 ಮಂದಿ ಆಯ್ಕೆಯಾಗಿದ್ದು, ಅದರಲ್ಲಿ 24 ಮಂದಿಗೆ ತರಬೇತಿ ನೀಡಲಾಗುವುದು. ಆದರೆ ಕಡೆಯದಾಗಿ ನಾಲ್ಕು ಮಂದಿ ಮಂಗಳನತ್ತ ಪ್ರಯಾಣ ಬೆಳೆಸಲಿದ್ದಾರೆ. ಸೆಂಟ್ರಲ್ ಫ್ಲೋರಿಡಾದಲ್ಲಿ ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಾಡುತ್ತಿರುವ ತರಣ್ಜೀತ್ ಸಿಮಗ್ ಭಾಟಿಯಾ (29), ದುಬೈನಲ್ಲಿ ವಾಸಿಸುತ್ತಿರುವ ರಿತಿಕಾ ಸಿಂಗ್ (29)…
ಮಾಸ್ಕೊ: ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ ಸಂಪೂರ್ಣ ದೇಹ ಕಸಿಯ ಪ್ರಯೋಗ 2017ರಲ್ಲಿ ನಡೆಯಲಿದೆ. ವ್ಯಕ್ತಿಯೊಬ್ಬನ ತಲೆಯನ್ನು ದಾನಿಯ ದೇಹಕ್ಕೆ ಜೋಡಿಸುತ್ತಿರುವುದೇ ಈ ಪ್ರಯೋಗ. ಸ್ನಾಯುಗಳನ್ನು ಅಕ್ಷರಶಃ ಮುಕ್ಕಿ ಕ್ಷೀಣಗೊಳಿಸಿಬಿಡುವ ವೆರ್ಡಿರಂಗ್ ಹಾಫ್ಮನ್ ರೋಗದಿಂದ ಬಳಲುತ್ತಿರುವ ರಷ್ಯಾದ ವಲೆರಿ ಸ್ಪಿರಿಡೊನೊವ್ ಈ ಕಸಿಗೆ ಪ್ರಯೋಗ ಪಶುವಾಗಿ ತನ್ನನ್ನು ಒಡ್ಡಿಕೊಳ್ಳಲು ಸಿದ್ಧವಾಗಿದ್ದಾರೆ. ಈ ಶಸ್ತ್ರಚಿಕಿತ್ಸೆಯಲ್ಲಿ ರೋಗಿಯ ತಲೆಯನ್ನು ದಾನಿಯ ದೇಹಕ್ಕೆ ಜೋಡಿಸಲಾಗುತ್ತದೆ. ”ಈ ಶಸ್ತ್ರಚಿಕಿತ್ಸೆಯ ಮೂಲಕ ಗುಣವಾಗುವುದೇ ಎಂಬುದನ್ನು ಕಾದು ನೋಡಬೇಕು. ವರ್ಷದಿಂದ ವರ್ಷಕ್ಕೆ ನನ್ನ ದೇಹದ ಪರಿಸ್ಥಿತಿ ಹದಗೆಡುತ್ತಿದೆ. ನನಗೆ ಇದಲ್ಲದೆ ಬೇರೆ ದಾರಿಯಿಲ್ಲ,” ಎನ್ನುತ್ತಾರೆ. ಕಂಪ್ಯೂಟರ್ ವಿಜ್ಞಾನಿಯಾಗಿರುವ 30ರ ಹರೆಯದ ಸ್ಪಿರಿನೊವ್ ಈ ಶಸ್ತ್ರ ಚಿಕಿತ್ಸೆಗೆ ಕೆಲವು ಷರತ್ತುಗಳನ್ನು ಹಾಕಿದ್ದಾರೆ. ”ನನ್ನ ತಲೆಯನ್ನು ಹೆಣ್ಣಿನ ದೇಹಕ್ಕೆ ಹಚ್ಚುವುದು ಬೇಡ. ಶಸ್ತ್ರ ಚಿಕಿತ್ಸೆಯ ಬಳಿಕ ಕಣ್ಣು ಬಿಟ್ಟಾಗ ನಾನು ಗಂಡಾಗಿಯೇ ಇರಬೇಕು,” ಎಂದಿದ್ದಾರೆ ಸಂಪೂರ್ಣ ದೇಹ ಕಸಿಯಲ್ಲಿ ಅನೇಕ ಸವಾಲುಗಳಿವೆ. ಇದೇ ಚೊಚ್ಚಲ ಪ್ರಯತ್ನವಾದ್ದರಿಂದ ದೇಹ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಊಹಿಸಲಾಗದು. ವಿಜ್ಞಾನದ…
ನಾಸಾದ ರಾಕೆಟ್ ಯಂತ್ರ ಅಭಿವೃದ್ಧಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಗೋಳಶಾಸ್ತ್ರಜ್ಞೆ ಅಮಿ ಮೈನ್ಸರ್ ಅವರು ‘316201’ ಎಂದು ಗುರುತಿಸಲಾಗಿದ್ದ ಈ ಕ್ಷುದ್ರಗ್ರಹಕ್ಕೆ ನೊಬೆಲ್ ಶಾಂತಿ ಪುರಸ್ಕೃತೆ ಮಲಾಲಾ ಯೂಸಫ್ ಝಾಯಿ ಅವರ ಹೆಸರನ್ನು ನಾಮಕರಣ ಮಾಡುವ ಮೂಲಕ ಮಕ್ಕಳ ಹಕ್ಕುಗಳ ಹೋರಾಟಗಾರ್ತಿಗೆ ಮತ್ತಷ್ಟು ಗೌರವ ತಂದಿದ್ದಾರೆ. ಮಂಗಳ ಮತ್ತು ಗುರು ಗ್ರಹದ ನಡುವೆ ಇದ್ದ ಈ ಕ್ಷುದ್ರಗ್ರಹವನ್ನು ಅಮಿ ಅವರು ಗುರುತಿಸುವ ಮೂಲಕ ಅದಕ್ಕೆ ಹೆಸರಿಡುವ ಹಕ್ಕನ್ನು ಪಡೆದಿದ್ದರು.
ಹೊಸದಿಲ್ಲಿ: ದೇಶದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ರಾಷ್ಟ್ರೀಯ ರೋಮಿಂಗ್ ಸೇವಾ ಶುಲ್ಕವನ್ನು ಮೇ 1ರಿಂದ ಕಡಿತಗೊಳಿಸಲಿದೆ. ಅದೇ ದಿನದಿಂದ ಅನ್ವಯವಾಗುವಂತೆ ಗ್ರಾಹಕರಿಗೆ ವಿಶೇಷ ರೋಮಿಂಗ್ ಶುಲ್ಕ ಯೋಜನೆಗಳನ್ನು ನೀಡುವಂತೆ ಮೊಬೈಲ್ ಸೇವಾ ಕಂಪನಿಗಳಿಗೆ ಟ್ರಾಯ್ ಸೂಚಿಸಿದೆ. ಸದ್ಯದ ದರ * ಹೊರ ಹೋಗುವ ವಾಯ್ಸ್ಕಾಲ್ ಮೇಲಿನ ರೋಮಿಂಗ್ ಶುಲ್ಕ ನಿಮಿಷಕ್ಕೆ 1 ರೂ. *ಒಳ ಕರೆಗಳ ಶುಲ್ಕ ನಿಮಿಷಕ್ಕೆ 75 ಪೈಸೆ. ಪರಿಷ್ಕೃತ ದರ * ಹೊರಹೋಗುವ ಸ್ಥಳೀಯ ವಾಯ್ಸ್ ಕಾಲ್ ಮೇಲಿನ ರೋಮಿಂಗ್ ದರ ನಿಮಿಷಕ್ಕೆ 80 ಪೈಸೆ. * ಒಳಬರುವ ಸ್ಥಳೀಯ ಕರೆಗಳ ಮೇಲಿನ ರೋಮಿಂಗ್ ದರ ನಿಮಿಷಕ್ಕೆ 45 ಪೈಸೆ. * ಹೊರಹೋಗುವ ಸ್ಥಳೀಯ ಎಸ್ಎಂಎಸ್ ಮೇಲಿನ ರಾಷ್ಟ್ರೀಯ ರೋಮಿಂಗ್ ದರ 25 ಪೈಸೆ. * ದೂರದ ಹೊರ ಕರೆಗಳ ರಾಷ್ಟ್ರೀಯ ರೋಮಿಂಗ್ ಶುಲ್ಕವನ್ನು 1.50 ರೂ.ಗಳಿಂದ 1.15 ರೂ.ಗಳಿಗೆ ಕಡಿತ. * ಎಸ್ಎಂಎಸ್ ದರವನ್ನು ಪ್ರತಿ ಎಸ್ಎಂಎಸ್ಗೆ 1.50 ರೂ.ಗಳಿಂದ ಕೇವಲ 38 ಪೈಸೆಗಳಿಗೆ ಇಳಿಕೆ.
ಹೊಸದಿಲ್ಲಿ: ಮದುವೆಯಾಗದೆ ಒಟ್ಟಿಗೆ ಬಾಳುವ ಅವಿವಾಹಿತರನ್ನು (ಲಿವ್ಇನ್ ಟುಗೇದರ್) ಕಾನೂನು ಪ್ರಕಾರ ವಿವಾಹಿತರೆಂದು ಪರಿಗಣಿಸಬೇಕು ಮತ್ತು ಸಂಗಾತಿಯ ನಿಧನ ನಂತರ ಮಹಿಳೆಗೆ ಪತಿಯ ಆಸ್ತಿಯ ಹಕ್ಕು ದೊರೆಯುಲಿದೆ ಎಂದು ಪ್ರಕರಣವೊಂದರ ಇತ್ಯರ್ಥ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ದೀರ್ಘಕಾಲದ ಸಹಜೀವನವನ್ನು ಕಾನೂನು ಸಮ್ಮತ ವಿವಾಹವೆಂದು ಪರಿಗಣಿಸಬಹುದಾಗಿದ್ದು, ಆ ಮದುವೆಯನ್ನು ಅಕ್ರಮ ಎಂದು ಪ್ರತಿವಾದಿಗಳು ಸಾಬೀತುಪಡಿಸಬಹುದು ಎಂದು ನ್ಯಾಯಮೂರ್ತಿಗಳಾದ ಎಂ.ಕ್ಯೂ ಇಕ್ಬಾಲ್ ಹಾಗೂ ಅಮಿತ್ವಾ ರಾಯ್ ಅವರನ್ನೊಳಗೊಂಡ ಪೀಠ ಹೇಳಿದೆ. ‘ಪತಿ ಪತ್ನಿಯಂತೆ ಪುರುಷ ಹಾಗೂ ಮಹಿಳೆ ಸಹ ಜೀವನ ನಡೆಸಿದ್ದು ಸಾಬೀತಾದರೆ, ಕಾನೂನಿನ ಪ್ರಕಾರ ಅವರನ್ನು ವಿವಾಹಿತರು ಎಂದು ಪರಿಗಣಿಸಲಾಗುವುದು. ಪತಿ-ಪತ್ನಿಯಂತೆ ಬಹುಕಾಲ ಒಟ್ಟಿಗೆ ಬಾಳಿದವರನ್ನು ವಿವಾಹಿತರೆಂದು ಪರಿಗಣಿಸುವ ಜತೆಗೆ ಮಹಿಳೆಗೆ ಪತಿಯ ಆಸ್ತಿ ಮೇಲೆ ಹಕ್ಕು ಇದೆ ಎಂದು ಪ್ರತಿಪಾದಿಸಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟ ಪಡಿಸಿದೆ. ಈ ನಡುವೆ ಲಿವ್ ಇನ್ ಟುಗೆದರ್ ಸಂಬಂಧ ಸತಿ ಪತಿಗಳನ್ನು ಸಂಬಂಧವನ್ನು ಮೀರಿದ್ದಾಗಿದ್ದು, ಅವರನ್ನು ವಿವಾಹಿತರನ್ನಾಗಿ ಪರಿಗಣಿಸುವುದು ಎಷ್ಟು ಸೂಕ್ತ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಕುಂದಾಪ್ರ ಡಾಟ್ ಕಾಂ ಕಛೇರಿ ವರದಿ ಹೊಸದಿಲ್ಲಿ: ಕಳೆದ 56 ದಿನಗಳ ಕಣ್ಮರೆಯಾಗಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುರುವಾರ ದಿಲ್ಲಿಗೆ ವಾಪಸಾಗಿದ್ದಾರೆ. ನಿಗೂಡವಾಗಿ ರಜೆಯಲ್ಲಿ ತೆರಳಿದ್ದ ಕಾಂಗ್ರೆಸ್ ರಾಜಕುವರ ಇಂದು ಬ್ಯಾಂಕಾಕ್ನಿಂದ ಥಾಯ್ ಏರ್ವೇಸ್ ಮೂಲಕ ಬೆಳಗ್ಗೆ 11.15ಕ್ಕೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ರಾಹುಲ್ ಅವರನ್ನು ಆಹ್ವಾನಿಸಲು ಕಾಂಗ್ರೆಸ್ ಅಧ್ಯಕ್ಷೆಯಾಗಿರುವ ತಾಯಿ ಸೋನಿಯಾ ಗಾಂಧಿ, ಹಾಗೂ ಸಹೋದರಿ ಪ್ರಿಯಾಂಕಾ ಬೆಳಗ್ಗೆ 11 ಗಂಟೆಗೆ ಮೊದಲೇ ರಾಹುಲ್ ಗಾಂಧಿಯವರ ತುಘಲಕ್ ರಸ್ತೆಯ ನಿವಾಸಕ್ಕೆ ಆಗಮಿಸಿದ್ದರು. ಫೆ.23ರಂದು ಆರಂಭವಾದ ಬಜೆಟ್ ಅಧಿವೇಶನದ ದಿನವೇ ರಾಹುಲ್ ಗಾಂಧಿಯ ರಜೆ ವಿಷಯವನ್ನು ಕಾಂಗ್ರೆಸ್ ಘೋಷಿಸಿತ್ತು. ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಜತೆಗೆ ಅವರ ರಜೆ ಪಡೆದ ಸಮಯದ ಬಗ್ಗೆ ಕಾಂಗ್ರೆಸ್ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದರು. ಇತ್ತೀಚಿನ ಚುನಾವಣೆಗಳಲ್ಲಿ ಸರಣಿ ಸೋಲು, ಪಕ್ಷದ ಭವಿಷ್ಯದ ಬಗ್ಗೆ ಚಿಂತನೆ ನಡೆಸಲು ಹಾಗೂ ಸದ್ಯದಲ್ಲೇ ನಡೆಯಲಿರುವ ಪಕ್ಷದ ಉನ್ನತ ಮಟ್ಟದ ಸಭೆಗೆ ತಯಾರಿ ನಡೆಸುವ ಸಲುವಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್…
ಹೊಸದಿಲ್ಲಿ : ಪೆಟ್ರೋಲ್ ಲೀಟರ್ಗೆ 80 ಪೈಸೆ ಮತ್ತು ಡೀಸೆಲ್ ರೂ.1.30 ಇಳಿಕೆಯಾಗಿದ್ದು, ಪರಿಷ್ಕೃತ ದರಗಳು ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿವೆ. ಹೊಸ ದರಗಳನ್ವಯ ರಾಜಧಾನಿ ದಿಲ್ಲಿಯಲ್ಲಿ ಲೀಟರ್ ಪೆಟ್ರೋಲ್ ದರ ರೂ.59.20, ಡೀಸೆಲ್ ದರ ರೂ.47.20ಕ್ಕೆ ನಿಗದಿಯಾಗಿದೆ ಎಂದು ದೇಶದ ಬೃಹತ್ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹೇಳಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಕುಸಿದಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ತಿಂಗಳಲ್ಲಿ ಎರಡನೇ ಸಲ ಇಳಿಕೆಯಾದಂತೆ ಆಗಿದೆ. ಏಪ್ರಿಲ್ 2ರಂದು ಪೆಟ್ರೋಲ್ 49 ಪೈಸೆ, ಡೀಸೆಲ್ ರೂ.1.21ರಷ್ಟು ಇಳಿಕೆಯಾಗಿತ್ತು.
