Author: Editor Desk

ಗ೦ಗೊಳ್ಳಿ : ಡಾ.ಬಿ.ಆರ್ ಅ೦ಬೇಡ್ಕರ್‌ರವರ 124ನೇ ಜನ್ಮದಿನಾಚರಣೆಯೊ೦ದಿಗೆ ಗ೦ಗೊಳ್ಳಿಯ ಡಾ.ಬಿ.ಆರ್ ಅ೦ಬೇಡ್ಕರ್ ಯುವಕ ಮ೦ಡಲದ 25 ನೇ ಹಾಗು ಅಮೃತಾ ಯುವತಿ ಮ೦ಡಲ ಮತ್ತು ಅರ್ಚನಾ ಮಹಿಳಾ ಮ೦ಡಲ ಮೇಲ್ ಗ೦ಗೊಳ್ಳಿ ಇವರ 22ನೇ ವಾರ್ಷಿಕೋತ್ಸವ ವಾರ್ಷಿಕೋತ್ಸವ ಸಮಾರ೦ಭವು ಗ೦ಗೊಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ದಿನಾ೦ಕ ಎಪ್ರಿಲ್ 14 ರ೦ದು ಜರುಗಲಿರುವುದು ಎ೦ದು ಸ೦ಯುಕ್ತ ಸ೦ಘಗಳ ಪ್ರಕಟಣೆ ತಿಳಿಸಿದೆ. ಮನೋರ೦ಜನಾ ಕಾರ‍್ಯಕ್ರಮದ ಅ೦ಗವಾಗಿ ಕುಡ್ಲದ ಧರಿತ್ರಿ ಕಲಾವಿದರಿ೦ದ ಇನ್ಯಾರಿದ್ದಾರೆ?ಎನ್ನುವ ಹಾಸ್ಯಮಯ ನಾಟಕ ಪ್ರದರ್ಶನ ಇರುತ್ತದೆ. ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

Read More

ಆಲೂರು: ಇಲ್ಲಿನ ಸರಸ್ವತಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಪೋಷಕರ ಸಭೆ ಹಾಗೂ ದಾನಿಗಳಿಗೆ ಸಮ್ಮಾನ ಸಮಾರಂಭ ನಿವೃತ್ತ ಮುಖ್ಯಶಿಕ್ಷಕ ಮಹಾಬಲ ಜೋಯಿಸ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು. ಮುಖ್ಯ ಅತಿಥಿ ಜಿಲ್ಲಾ ಪಂಚಾಯತ್ ಸದಸ್ಯೆ ಇಂದಿರಾ ಶೆಟ್ಟಿ ಹರ್ಕೂರು, ತಾಲೂಕು ಪಂಚಾಯತ್ ಸದಸ್ಯ ಎಚ್. ಮಂಜಯ್ಯ ಶೆಟ್ಟಿ, ಪ್ರಾಥಮಿಕ ಅನುದಾನಿತ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ. ವಿ. ಬಾಲಚಂದ್ರ ಶೆಟ್ಟಿ, ಸರಕಾರಿ ಪ್ರಾಥಮಿಕ ಶಾಲಾ ಸಂಘದ ಜಿಲ್ಲಾಧ್ಯಕ್ಷ ಶಶಿಧರ ಶೆಟ್ಟಿ, ಸರಸ್ವತಿ ಶಾಲಾ ಸಂಚಾಲಕ ಹೇಮಂತ್‌ಪಾಲ್ ಶೆಟ್ಟಿ, ಆಡಳಿತ ಮಂಡಳಿ ಸದಸ್ಯ ಎನ್. ಚಂದ್ರಶೇಖರ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯೆ ಸಾಕು ಆಚಾರಿ ಮೊದಲಾದವರು ಉಪಸ್ಥಿತರಿದ್ದರು. ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಉದಾರ ನೆರವನ್ನು ನೀಡಿದ ದಾನಿಗಳಾದ ಗುತ್ತಿಗೆದಾರ ಅಶೋಕ್‌ಕುಮಾರ್ ಶೆಟ್ಟಿ ಹರ್ಕೂರು, ಉಡುಪಿ ವೆಟರ್ನರಿ ಸರ್ಜನ್ ಡಾ. ಸಂದೀಪ್‌ಕುಮಾರ್ ಶೆಟ್ಟಿ, ಉದ್ಯಮಿಗಳಾದ ಚಂದ್ರಶೇಖರ ಶೆಟ್ಟಿ ಕಟ್ಟಿನಮಕ್ಕಿ, ಸತೀಶ್‌ಕುಮಾರ್ ಹೆಗ್ಡೆ ಹಳ್ಳಿ ಆಲೂರು, ಗುರುಪ್ರಸಾದ್ ಹಳ್ಳಿ ಆಲೂರು, ಸಂಜೀವ ಶೆಟ್ಟಿ…

Read More

ಕುಂದಾಪುರ: ಸಂವಿಧಾನ ವ್ಯವಸ್ಥೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಶಾಸಕಾಂಗ, ಕಾರ್ಯಾಂಗಗಳು ಮಾಡಬೇಕಾಗುತ್ತದೆ. ಆದರೆ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಮ್ಮ ವೃತ್ತಿನಿಷ್ಠೆಯನ್ನು ಮರೆತಂತಿದೆ. ಸಂವಿಧಾನದ ಮೂರು ಅಂಗಗಳು ಸರಿಯಾಗಿ ಕೆಲಸ ಮಾಡಿದಾಗ ದೇಶದ ಅಭಿವೃದ್ಧಿ ಸಾಧ್ಯ ಎಂದು ನಿವೃತ್ತ ಲೋಕಾಯುಕ್ತ ಹಾಗೂ ನ್ಯಾಯಾಧೀಶರಾದ ಸಂತೋಷ ಹೆಗ್ಡೆ ಹೇಳಿದರು. ಅವರು ಅಮಾಸೆಬೈಲು ಸರ್ಕಾರಿ ಪ್ರೌಢ ಶಾಲಾ ಅವರಣದಲ್ಲಿ ಜರುಗಿದ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2010ರಲ್ಲಿ ಬಿಪಿಎಲ್ ಕಾರ್ಡುದಾರರು ಗಣನೀಯವಾಗಿ ಜಾಸ್ತಿಯಾದುದರ ಬಗ್ಗೆ ಸರಕಾರಕ್ಕೆ ವರದಿ ನೀಡಿದ್ದೆ. ಅಕ್ರಮ ಮರಳುಗಾರಿಕೆಯ ಬಗ್ಗೆ ವರದಿಯನ್ನು ನೀಡಿದ್ದೆ. ಗಣಿಗಾರಿಕೆಯ ಕುರಿತು ನೀಡಿದ ವರದಿಯನ್ನೂ ಕೂಡ ಜಾರಿಗೆ ತಂದಿಲ್ಲ. ಒಬ್ಬ ಸುಪ್ರಿಮ್ ಕೋರ್ಟ್ ನ ನಿವೃತ್ತ ನ್ಯಾಯಾಧೀಯ ನೀಡಿದ ವರದಿಯನ್ನು ಪೊಲೀಸ್ ಅಧಿಕಾರಿಗಳು ಪರಿಶೀಲಿಸುವ ಮಟ್ಟಕ್ಕೆ ನಮ್ಮ ವ್ಯವಸ್ಥೆ ಬಂದು ನಿಂತಿದೆ. ಸರಕಾರ ಒಂದೋ ವರದಿಯನ್ನು ಪುರಸ್ಕರಿಸಿ ಇಲ್ಲವೇ ತಿರಸ್ಕರಿಸಿ. ಹಾಗೇ ಇಟ್ಟುಕೊಳ್ಳುವಲ್ಲಿ ಅರ್ಥವಿಲ್ಲ ಎಂದು ಅವರು ಖಾರವಾಗಿ ನುಡಿದರು.

Read More

ಕುಂದಾಪುರ: ತಾಲೂಕಿನ ಅಮಾಸೆಬೈಲಿನ ಪ್ರೌಢಶಾಲೆಯಲ್ಲಿ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಹಾಗೂ ತಾ.ಪಂ, ಹಿಂ.ವರ್ಗ ಹಾಗೂ ಅಲ್ಪ ಸಂಖ್ಯಾಕರ ಕಲ್ಯಾಣ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕರ್ನಾಟಕ ಬ್ಯಾಂಕ್ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಅಮಾಸೆಬೈಲು ಗ್ರಾಮದಲ್ಲಿ ಅನುಷ್ಠಾನಗೊಳ್ಳಲಿರುವ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಮ ಶುಕ್ರವಾರ ನಡೆಯಿತು. ಹಿಂದುಳಿದ ವರ್ಗಗಳ ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆಯವರು ಗ್ರಾಮದ ಅಭಿವೃದ್ದಿಯಿಂದ ದೇಶದ ಅಭಿವೃದ್ದಿ ಸಾಧ್ಯ ಎನ್ನುವ ಪರಿಕಲ್ಪನೆಗಳು ಇಂದು ಸಾಕಾರಗೊಳ್ಳುತ್ತಿದೆ. ನಮ್ಮಲ್ಲಿ ದೊರಕುವ ಸಂಪನ್ಮೂಲಗಳನ್ನು ಸದ್ಭಳಿಕೆ ಮಾಡಿಕೊಳ್ಳುವ ಬುದ್ದಿವಂತಿಕೆ ನಮಗಿರಬೇಕು. ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಭವಿಷ್ಯದ ಭಾರತದ ಬುನಾದಿಯನ್ನು ಭದ್ರವಾಗಿ ಕಟ್ಟಲು ಸಾಧ್ಯ ಎನ್ನುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದರು. ಕಾರ್ಯಕ್ರ,ದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಅಭಿವೃದ್ದಿ ಕಾರ್ಯಗಳ ಕುರಿತು ಚಿಂತಿಸುವ ಚಿಂತನಾಶೀಲ ವ್ಯಕ್ತಿಗಳು ಇದ್ದಾಗ ಮಾತ್ರ ಈ ಸಮಸ್ಯೆಗಳು ಪರಿಹಾರ ಕಾಣಲು…

Read More

ಮುಂಬೈ: ಕನ್ನಡಿಗರು ಹಾಗೂ ಮರಾಠಿಗರು ಪರಸ್ಪರ ಭಾಂದವ್ಯ ಹಾಗೂ ಸೌಹಾರ್ದತೆಯಿಂದ ಮುಂಬೈಯಿಗರೊಂದಿಗೆ ಬೆರೆತುಹೋಗಿದ್ದಾರೆ. ಪ್ರಾತೀಯ ಭಾವನೆಗಳಿದ್ದರೂ ಏಕತೆಯಿಂದ ಒಂದುಗೂಡಿದ್ದಾರೆ ಎಂದು ಥಾಣೆ ಜಿಲ್ಲೆಯ ಶಾಸಕ ಪ್ರತಾಪ್ ಸರ್ ನಾಯ್ಕ್ ಹೇಳಿದರು. ಇಲ್ಲಿನ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ರಿ. ಇವರು ಮೂರು ದಿನಗಳ ಕಾಲ ಥಾಣೆಯ ಹೋಟೆಲ್ ಧೀರಜನ ದಿ. ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ವೇದಿಕೆಯಲ್ಲಿ ಆಯೋಜಿಸಿದ ಅಖಿಲ ಭಾರತ ಕನ್ನಡ ಪತ್ರಕರ್ತರ ಸಮಾವೇಶ-2015 ಚಾಲನೆ ನೀಡಿ ಅವರು ಮಾತನಾಡಿದರು. ಸಮಾವೇಶದ ಅಧ್ಯಕ್ಷತೆಯನ್ನು ಚಂದ್ರಶೇಖರ ಪಾಲೆತ್ತಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ. ವಿ. ಪೊನ್ನಪ್ಪ, ಉದಯವಾಣಿ ಸುದ್ದಿ ವಿಭಾಗದ ಮುಖ್ಯಸ್ಥ ಮನೋಹರ ಪ್ರಸಾಸ್, ಮುಂಬೈ ಮರಾಠಿ ಪತ್ರಕಾರ್ ಸಂಘ್ ದ ಅಧ್ಯಕ್ಷ ದೇವದಾಸ್ ಎಲ್. ಮಠಾಲೆ, ಮಂತ್ರಾಲಯ ಮತ್ತು ವಿಧಿ ಮಂಡಳ್ ವಾರ್ತಾಹಾರ್ ಸಂಘದ ಅಧ್ಯಕ್ಷ ಚಂದನ್ ಶಿರ್ವಾಳೆ, ಹಿರಿಯ ಸಾಹಿತಿ ಸುನಿತಾ ಶೆಟ್ಟಿ, ನಾವುಂದ ಶುಭದಾ ಶೈಕ್ಷಣಿಕ ಸಂಸ್ಥೆಯ ಕಾರ್ಯಾಧ್ಯಕ್ಷ ಎನ್. ಕೆ.…

Read More

ದುಬೈ:  ಶ್ರೀ ಶನೈಶ್ಚರ ಸೇವಾ ಸಮಿತಿ ದುಬೈ ವತಿಯಿಂದ  ಶುಕ್ರವಾರ ಅಪರಾಹ್ನ 3.00 ಗಂಟೆಯಿಂದ ದುಬಾಯಿ ಶೇಖ್ ಜಾಯಿದ್ ರಸ್ತೆಯ ಬಳಿ ಗಲ್ಫ್ ನ್ಯೂಸ್ ಹಿಂಬಾಗದಲ್ಲಿ ಅಲ್ ಸಫಾದಲ್ಲಿರುವ ಜೆ. ಎಸ್. ಎಸ್. ಪ್ರವೈಟ್ ಸ್ಕೂಲ್ ಸಭಾಂಗಣದಲ್ಲಿ ಶ್ರೀ ಶನೈಶ್ಚರ ಪೂಜೆ ವಿಜೃಂಬಣೆಯಿಂದ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಬಂಧುಗಳು ಪಾಲ್ಗೊಂಡು ಪುನೀತರಾದರು. ಶ್ರೀ ವಿಠಲ್ ಶೆಟ್ಟಿಯವರ ಸ್ವಾಗತದೊಂದಿಗೆ ಪೂಜಾ ಕಾರ್ಯ ಪ್ರಾರಂಭವಾಯಿತು. ಮುಂಬೈನಿಂದ ಆಗಮಿಸಿದ ಪುರೋಹಿತರಾದ ಶ್ರೀ ಎಂ. ಜೆ. ಪ್ರವೀಣ್ ಭಟ್ ಪೂಜಾ ವಿದಿವಿಧಾನಗಳನ್ನು ಕಳಸ ಪ್ರತಿಷ್ಠಾಪನೆ, ಸಂಕಲ್ಪದೊಂದಿಗೆ ಪೂಜಾ ಕೈಂಕರ್ಯವನ್ನು ನಡೆಸಿಕೊಟ್ಟರು. ವಿವಿಧ ಸಂಘ ಸಂಸ್ಥೆಯ ಭಜನಾ ತಂಡದವರಿಂದ ಸುಶ್ರಾವ್ಯ ಭಜನೆ ಕಾರ್ಯಕ್ರಮ ನಡೆಯಿತು.

Read More

ಕರ್ನಾಟಕ ರಾಜ್ಯದ ಯಕ್ಷಗಾನ ರಸಿಕರಿಗೆಲ್ಲಾ ಚಿರಪರಿಚಿತರಾಗಿರುವ, ಕಂದಾವರ ರಘುರಾಮ ಶೆಟ್ಟಿಯವರು, ಒಬ್ಬ ಖ್ಯಾತ ಶಿಕ್ಷಕ, ಯಕ್ಷಗಾನ ಪ್ರಸಂಗ ಕರ್ತ, ಅರ್ಥಧಾರಿ, ಹವ್ಯಾಸಿ ನಾಟಕ ಕಲಾವಿದ, ಹವ್ಯಾಸಿ ಕಲಾವಿದ. ಶ್ರೀ. ರಘುರಾಮ ಶೆಟ್ಟಿಯವರು ಯಕ್ಷಗಾನ ವಲಯದಲ್ಲಿ ಕಂದಾವರದವರು ಎ೦ಬ ಹೆಸರಿನಿಂದ ಪ್ರಸಿದ್ಧರು. ಬಾಲ್ಯ , ಶಿಕ್ಷಣ ಕಂದಾವರ ರಘುರಾಮ ಶೆಟ್ಟಿಯವರು ಕುಂದಾಪುರ ತಾಲ್ಲೂಕಿನ ಬಳ್ಕೂರು ಗ್ರಾಮದ ಕಂದಾವರದಲ್ಲಿ 1936ರಲ್ಲಿ ಜನಿಸಿದರು. ಅವರ ತಂದೆ, ಕರ್ಕಿ ಸದಿಯಣ್ಣ ಶೆಟ್ಟಿಯವರು. ತಾಯಿ ಕಂದಾವರ ಪುಟ್ಟಮ್ಮನವರು. ಈಗ ಶ್ರೀಯುತರು, ತಮ್ಮ ಪತ್ನಿ, ಮಕ್ಕಳು ಮೊಮ್ಮಕ್ಕಳ ಸಂಗದಲ್ಲಿ ನೂಜಾಡಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ತಮ್ಮ ಆರಂಭದ ಬದುಕಿನಲ್ಲಿ ಕಂಡ್ಲೂರು ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ-ಶಿಕ್ಷಕರಾಗಿ, ಮುಖ್ಯೋಪಾಧ್ಯರಾಗಿ, ಸುಮಾರು 35 ವರ್ಷಗಳ ಕಾಲ ಸೇವೆ ಮಾಡಿರುವ ಕಂದಾವರ ರಘುರಾಮ ಶೆಟ್ಟಿಯವರು, `ಮಾದರೀ ಶಿಕ್ಷಕ` ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎಳೆ ಪ್ರಾಯದಿಂದಲೂ ಸಾಹಿತ್ಯ, ಸಂಗೀತ, ಯಕ್ಷಗಾನಗಳ ಬಗೆಗೆ, ವಿಶೇಷ ಒಲವು ಆಸಕ್ತಿಗಳನ್ನು ತಳೆದ ಕಂದಾವರ ರಘುರಾಮ ಶೆಟ್ಟಿಯವರು ವಿದ್ಯಾರ್ಥಿದೆಶೆಯಲ್ಲೇ “ಮಕ್ಕಳ ಯಕ್ಷಗಾನಕ್ಕೆ…

Read More

ಹೊಸದಿಲ್ಲಿ: ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಸೇನಾನಿ ಸುಭಾಷ್‌ಚಂದ್ರ ಬೋಸ್ ಅವರ ಕುಟುಂಬ ಹಾಗೂ ಸಂಬಂಧಿಗಳ ಮೇಲೆ ಸತತ 20 ವರ್ಷಗಳ ಕಾಲ ಕಾಲ ಜವಾಹರಲಾಲ್ ನೆಹರು ಸರಕಾರ ಗೂಢಚಾರಿಕೆ ನಡೆಸಿದ್ದ ಗಢಚಾರ ಇಲಾಖೆ ಕಡತಗಳಲ್ಲಿನ ಮಾಹಿತಿ ಸೊರಿಕೆಯಾಗಿದೆ. ಸುಭಾಷ್ ಕುಟುಂಬದವರು ವಾಸಿಸುತ್ತಿದ್ದ ಕೋಲ್ಕೊತಾದಲ್ಲಿನ ಎರಡು ಮನೆಗಳ ಮೇಲೆ ಗುಪ್ತಚರ ಇಲಾಖೆ ಹಿಂಬಾಲಿಸುತ್ತಿತ್ತು. ಸುಭಾಷ್ ಅವರ ಅಣ್ಣ ಶರತ್ ಚಂದ್ರ ಬೋಸ್ ಮತ್ತು ಅವರ ಮಕ್ಕಳ ಮೇಲೆ ಗುಪ್ತಚರ ಇಲಾಖೆ ಸತತವಾಗಿ ಗೂಢಚಾರಿಕೆ ನಡೆಸಿತ್ತು. ಬೋಸ್ ಪತ್ನಿ ಎಮಿಲಿ ಬೋಸ್ ಅವರು ಅಣ್ಣನ ಮಕ್ಕಳಿಗೆ ಬರೆಯುತ್ತಿದ್ದ ಪತ್ರಗಳನ್ನು ರಹಸ್ಯವಾಗಿ ಓದಲಾಗುತ್ತಿತ್ತು. ಸುಭಾಷ್ ಕುಟುಂಬ ಸದಸ್ಯರ ಮನೆಗೆ ಯಾರು ಬರುತ್ತಾರೆ, ಯಾರನ್ನು ಭೇಟಿಯಾಗುತ್ತಾರೆ ಎನ್ನುವ ಸಂಗತಿಗಳನ್ನು ಅಧಿಕಾರಿಗಳು ಗಮನಿಸುತ್ತಿದ್ದರು ಎಂದು ಕಡತಗಳಲ್ಲಿ ಹೇಳಲಾಗಿದೆ. ಪಶ್ಚಿಮ ಬಂಗಾಳದಲ್ಲಿರುವ ಗುಪ್ತಚರ ಇಲಾಖೆಯ ಶಾಖೆಯವರು ಕೇಂದ್ರ ಕಚೇರಿಗೆ ಕಳುಹಿಸಿದ ಎರಡು ಕಡತಗಳು ಬಹಿರಂಗಗೊಂಡಿದ್ದು, ಬೋಸ್ ಕುಟುಂಬ ಹಾಗೂ ಸಂಬಂಧಿಗಳ ಮೇಲೆ 1948ರಿಂದ 1968ರವರೆಗೆ ಸತತ 20 ವರ್ಷಗಳ ಕಾಲ…

Read More

ಪುಣೆ: ಫುಡ್‌ ಸ್ಟೇ ಸ್ಟ್ಯಾಂಡರ್ಡ್‌ ಅಥಾರಿಟಿ ಆಫ್‌ ಇಂಡಿಯಾ ಹೊಟೇಲ್‌ಗ‌ಳಿಗೆ ಕೆಲವೊಂದು ಕಾನೂನುಗಳನ್ನು ಹೇರುತ್ತಿದ್ದು,ಇವುಗಳನ್ನು ಅನುಸರಿಸುವುದರಿಂದ ಕಾರ್ಮಿ ಕರಿಗೆ ಅನಾರೋಗ್ಯದಂತಹ ಸಮಸ್ಯೆಗಳು ಎದುರಾಗಲಿವೆ. ಕುಕ್‌ಗಳು ಕೈ ಕವಚ ತೊಟ್ಟು ಕೆಲಸ ಮಾಡುವುದು, ಲಿಕ್ಕರ್‌ ಲೈಸನ್ಸ್‌ ಶೇ. 10ರಷ್ಟು ಏರಿಕೆ ಇದರೊಂದಿಗೆ ಅಬಕಾರಿ ತೆರಿಗೆ, ವ್ಯಾಟ್‌ ಹಾಗೂ ಸೇವಾ ತೆರಿಗೆಯೂ ಹೆಚ್ಚಾಗಿದೆ. ಪಕ್ಕದ ಗೋವಾ ಹಾಗೂ ದಮನ್‌ಗಳಲ್ಲಿ ಮಹಾರಾಷ್ಟ್ರದಿಂದ ಅರ್ಧದಷ್ಟು ದರಗಳಲ್ಲಿ ಮದ್ಯ ದೊರಕುತಿದ್ದು, ಮಹಾರಾಷ್ಟ್ರದಲ್ಲಿ ಮಾತ್ರ ಇಷ್ಟೊಂದು ತೆರಿಗೆ ಹೆಚ್ಚಳ ಯಾಕೆ ಎಂದು ಗೊತ್ತಾಗುತ್ತಿಲ್ಲ. ಇದರಿಂದ ನಕಲಿ ಮದ್ಯ ಸರಬರಾಜಾಗಿ ಜನರ ಆರೋಗ್ಯದ ಮೇಲೆ ಪ್ರಭಾವ ಬೀಳಲಿದೆ. ಅನೇಕ ಕಾನೂನು ಬಾಹಿರ ಹೊಟೇಲ್‌ಗ‌ಳು ಇದರಿಂದಾಗಿ ತಲೆಯೆತ್ತಿದ್ದು, ನಕಲಿ ಮದ್ಯಗಳನ್ನು ಮಾರಾಟ ಮಾಡುತ್ತಿವೆ. ಅನೇಕ ಪರ್ಮಿಟ್‌ ರೂಮ್‌ಗಳು ಇಷ್ಟೊಂದು ತೆರಿಗೆ ತಾಳಲಾಗದೆ ಮುಚ್ಚುವ ಹಂತದಲ್ಲಿವೆ ಎಂದು ಪುಣೆ ರೆಸ್ಟೋರೆಂಟ್‌ ಹೊಟೇಲಿಯರ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಗಣೇಶ್‌ ಶೆಟ್ಟಿ ಅಭಿಪ್ರಾಯಪಟ್ಟರು. ಪುಣೆ ರೆಸ್ಟೋರೆಂಟ್‌ ಹೊಟೇಲಿಯರ್ಸ್‌ ಅಸೋಸಿಯೇಶನ್‌ನ (ಪ್ರಾಹಾ ) ವತಿಯಿಂದ ನಗರದ ಕೊರೊನೆಟ್‌ ಹೊಟೇಲ್‌ ಸಭಾಂಗಣದಲ್ಲಿ ಎ…

Read More

ಮುಂಬಯಿ: ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಸಮಾಜ ಬಾಂಧವರ ಬಹಿರಂಗ ಅಧಿವೇಶನ, ವಿಶ್ವ ಬಂಟರ ಮಾಹಿತಿಕೋಶ, ಮಾಹಿತಿ ಸಂಗ್ರಹಕ್ಕೆ ಚಾಲನೆ, ಸಾಧಕರಿಗೆ ಸಮ್ಮಾನ, ವಿಕಲ ಚೇತನರಿಗೆ ಸಹಾಯಹಸ್ತ, ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಎ. 2 ರಂದು ಅಪರಾಹ್ನ 3 ಗಂಟೆಯಿಂದ ಮಂಗಳೂರು ಬಂಟ್ಸ್‌ ಹಾಸ್ಟೇಲ್‌ ಸಭಾಗೃಹದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮುಂಬಯಿ ಬಂಟರ ಸಂಘದ ಸಾಧಕರುಗಳಾದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರಿಗೆ ಸಮಾಜ ಸೇವೆಗಾಗಿ ಬೋಳ ಪರ್ತಿಮಾರ್‌ ಗುತ್ತು ಅಣ್ಣು ಶೆಟ್ಟಿ ಚಿನ್ನದ ಪದಕ ಹಾಗೂ ಮುಂಬಯಿಯ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರಿಗೆ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಮಾತೃ ಸಂಘದ ವತಿಯಿಂದ ಚಿನ್ನದ ಪದಕವನ್ನಿತ್ತು ಗಣ್ಯರು ಗೌರವಿಸಿದರು. ಅಂತಾರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಜಯರಾಮ ಎ. ಶೆಟ್ಟಿ ಅವರಿಗೆ ಕೊಳ್ಕೆಬೈಲು ಮಹಾಬಲ ಶೆಟ್ಟಿ ಸ್ಮಾರಕ ಚಿನ್ನದ ಪದಕ ಹಾಗೂ ಉಳೂ¤ರು…

Read More