Author: Editor Desk

ಸುಳ್ಯ: ಹಳೆಗೇಟಿನ ಸಾಂಸ್ಕೃತಿಕ ಕಲಾಕೇಂದ್ರ ರಂಗಮನೆಯಲ್ಲಿ ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಏಪ್ರಿಲ್ 26ರಿಂದ ಯಕ್ಷಗಾನ ನಾಟ್ಯ ತರಬೇತಿ ಆರಂಭಗೊಳ್ಳಲಿದೆ. ಯಕ್ಷಗುರು ಶ್ರೀ ಸಬ್ಬಣಕೋಡಿ ರಾಮಭಟ್‌ ನಾಟ್ಯ ತರಬೇತಿಯನ್ನು ನೀಡಲಿದ್ದಾರೆ. ಉಳಿದಂತೆ ಯಕ್ಷಗಾನದ ವಿವಿಧ ಪ್ರಾಕಾರಗಳ ತರಬೇತಿ ನೀಡಲು ಅತಿಥಿ ಗುರುಗಳಾಗಿ ಮತ್ತು ಮಾರ್ಗದರ್ಶಕರಾಗಿ ಯಕ್ಷಗಾನದ ಪ್ರಸಿದ್ಧ ಹಿರಿಯ ಕಲಾವಿದರಾದ ಶ್ರೀ ಕೋಳ್ಯೂರು ರಾಮಚಂದ್ರ ರಾವ್, ಸೂರಿಕುಮೇರಿ ಗೋವಿಂದ ಭಟ್, ದೇವಕಾನ ಕೃಷ್ಣಭಟ್, ಪೆರುವೋಡಿ ನಾರಾಯಣ ಭಟ್, ಎಂ.ಎಲ್.ಸಾಮಗ, ಬನ್ನಂಜೆ ಸಂಜೀವ ಸುವರ್ಣ, ಕುಂಬಳೆ ಸುಂದರ ರಾವ್, ಡಾ.ಪ್ರಭಾಕರ ಜೋಶಿ, ಕುಮಾರ ಸುಬ್ರಹ್ಮಣ್ಯ, ಮಹಾಬಲ ಕಲ್ಮಡ್ಕ, ತಾರಾನಾಥ ಬಲ್ಯಾಯ ವರ್ಕಾಡಿ ಮುಂತಾದವರು ಸಂದರ್ಭೋಚಿತವಾಗಿ ಭಾಗವಹಿಸಲಿದ್ದಾರೆ. ಹೆಜ್ಜೆಗಾರಿಕೆ, ಮಾತುಗಾರಿಕೆ, ವಸ್ತ್ರವಿನ್ಯಾಸ, ಬಣ್ಣಗಾರಿಕೆ, ಪುರಾಣ ವಾಚನ, ಹಿಮ್ಮೇಳ, ಧ್ವನಿ, ಬೆಳಕು ಇತ್ಯಾದಿಗಳನ್ನು ನಾಟ್ಯದ ಜೊತೆಜೊತೆಗೆ ತರಬೇತಿ ನೀಡುವ ಈ ಕೇಂದ್ರದ ವಿದ್ಯಾರ್ಥಿಗಳಾಗ ಬಯಸುವವರು ಎಪ್ರಿಲ್ 21ರೊಳಗೆ ಹೆಸರು ನೋಂದಾಯಿಸಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗಾಗಿ 9448215946(ಜೀವನ್‌ರಾಂ ಸುಳ್ಯ), 9449831600(ಪ್ರಕಾಶ ಮೂಡಿತ್ತಾಯ), 9448951859 (ಡಾ|ಸುಂದರ ಕೇನಾಜೆ)…

Read More

ಚೆನ್ನೈ : ಕಮಲ ಹಾಸನ್ ಅಭಿನಯದ, ರಮೇಶ್ ಅರವಿಂದ್ ನಿರ್ದೇಶನದ ‘ಉತ್ತಮ್ ವಿಲನ್’ ಚಿತ್ರಕ್ಕೆ ನಿಷೇಧ ಹೇರಬೇಕೆಂಬ ಹಿಂದೂ ಸಂಘಟನೆಗಳ ಹೋರಾಟಕ್ಕೆ ಮುಸ್ಲಿಂ ಸಂಘಟನೆಗಳು ಬೆಂಬಲ ಸೂಚಿಸಿವೆ. ಈ ಚಿತ್ರದ ಹಾಡೊಂದರಲ್ಲಿ ಹಿಂದೂಗಳ ಭಾವನೆಯನ್ನು ನೋಯಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ದೂರಿದೆ. ಧಾರ್ಮಿಕ ಭಾವನೆಗಳನ್ನು ಕೆಣಕುವುದು ಕಮಲ್ ಅವರ ಹಳೆಯ ಚಾಳಿ. ತಮ್ಮ ಹಿಂದಿನ ಚಿತ್ರ ವಿಶ್ವರೂಪಂ’ನಲ್ಲಿ ಮುಸ್ಲಿಮರನ್ನು ಕೀಳಾಗಿ ಚಿತ್ರಿಸಲಾಗಿತ್ತು. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ‘ಇಂಡಿಯನ್ ನ್ಯಾಷನಲ್ ಲೀಗ್'(ಐಎನ್‌ಎಲ್) ಸ್ಥಳೀಯ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸಿದೆ. ಉತ್ತಮ್ ವಿಲನ್ ಚಿತ್ರದಲ್ಲಿ ಬರುವ ಇರನಿಯನ್ ನಾದಗಮ್ ಎಂಬ ಹಾಡು ಭಗವಾನ್ ವಿಷ್ಣುವಿನ ಆರಾಧಕರಿಗೆ ಆಘಾತ ತರುವಂತಿದೆ ಎಂದು ವಿಎಚ್‌ಪಿ ಹೇಳಿತ್ತು. ವಿಷ್ಣು ಮತ್ತು ಪ್ರಹ್ಲಾದನ ನಡುವಿನ ಸಂಭಾಷಣೆಯನ್ನು ಈ ಹಾಡು ಕೆಟ್ಟದಾಗಿ ಚಿತ್ರಿಸಿದೆ ಎಂದು ವಿಎಚ್‌ಪಿ ಆರೋಪಿಸಿತ್ತು.

Read More

ಚೆನ್ನೈ: ತಮಿಳುನಾಡಿನಲ್ಲೊಂದು ‘ತಾಳಿ ಕಿತ್ತೊಗೆಯುವ ಚಳವಳಿ’ ಶರುವಾಗಿದ್ದು ಅದೀಗ ವಿವಾದದ ರೂಪ ಪಡೆದಿದೆ. ಜನತಾ ಪರಿವಾರದಂತೆ ಒಡೆದು ಚೂರಾಗಿರುವ ದ್ರಾವಿಡ ಪಕ್ಷಗಳ ಮೂಲಸ್ಥಾನ ‘ದ್ರಾವಿಡ ಕಳಗಂ’ ಪಕ್ಷ ಈ ಆಂದೋಲನದ ರೂವಾರಿ. ಪ್ರಗತಿಪರರರು ಹಾಗೂ ಸಂಸ್ಕೃತಿ ಪ್ರಿಯರ ಮಧ್ಯೆ ಇದು ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಪರ-ವಿರೋಧದ ಮಧ್ಯೆಯೇ ದ್ರಾವಿಡ ಕಳಗಂ ಆಯೋಜಿಸಿದ್ದ ‘ಮಂಗಳಸೂತ್ರ ಕಿತ್ತೊಗೆಯುವ ಕಾರ‌್ಯಕ್ರಮ’ಕ್ಕೆ ಮದ್ರಾಸ್ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ. ಆದರೆ, ಹೈಕೋರ್ಟ್ ತಡೆ ನೀಡುವಷ್ಟರಲ್ಲೇ 25 ಮಂದಿ ಮಹಿಳೆಯರು ತಾಳಿ ಕಿತ್ತೊಗೆದಿದ್ದಾರೆ. ಕಳೆದ ತಿಂಗಳು ತಮಿಳು ವಾಹಿನಿಯೊಂದು ‘ತಾಳಿ ಒಂದು ವರವೇ? ಶಾಪವೇ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದಕ್ಕೆ ಆರೆಸ್ಸೆಸ್ ಅಂಗಸಂಸ್ಥೆಯಾದ ‘ಹಿಂದೂ ಮುನ್ನಾನಿ’ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಕಾರ‌್ಯಕ್ರಮ ಪ್ರಸಾರ ಸ್ಥಗಿತಗೊಂಡಿತ್ತು. ಇದನ್ನು ಖಂಡಿಸಿ ‘ದ್ರಾವಿಡ ಕಳಗಂ’ ಪಕ್ಷವು ಏ.14ರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಂದು ‘ತಾಳಿ ಕಿತ್ತೊಗೆಯುವ ಹಾಗೂ ಗೋಮಾಂಸ ಸೇವನೆಯ ಕಾರ‌್ಯಕ್ರಮ’ ಹಮ್ಮಿಕೊಂಡಿತ್ತು. ಇದರಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದರೂ, ತಾಳಿ ಕಿತ್ತಿದ್ದು 25 ಮಹಿಳೆಯರು ಮಾತ್ರ.…

Read More

ಶಿರ್ವ: ಮಾಲಿನ್ಯದಂತಹ ವಿಪತ್ತಿನಿಂದ ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರಾಗಿದೆ. ಆ ನಿಟ್ಟಿನಲ್ಲಿ ಬಾಲ್ಯದಿಂದಲೇ ಮಕ್ಕಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಶಿರ್ವ ಸಂತ ಮೇರಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜನ್ ವಿ. ಎನ್. ಹೇಳಿದರು. ಅವರು ಶಿರ್ವ ಸಂತ ಮೇರಿ ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ, ಪಡುಕಳತ್ತೂರು ಶ್ರೀ ಅಯ್ಯಣ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕುತ್ಯಾರು ಗ್ರಾಮ ಪಂಚಾಯತ್ ಇವರ ಸಹಯೋಗದಲ್ಲಿ ಪಡುಕಳತ್ತೂರು ಶಾಲಾ ವಠಾರದ ಹಸಿರು ಅಂಗಳದಲ್ಲಿ ಪರಿಸರ ಸಂರಕ್ಷಣೆಯ ಕುರಿತಾದ ಹಸಿರು ಉತ್ಸವ-2015 ಮಕ್ಕಳ ನಡಿಗೆ ಪ್ರಕೃತಿಯೆಡೆಗೆ ಎಂಬ ಎರಡು ದಿನದ ಬೇಸಿಗೆ ಶಿಬಿರವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕುತ್ಯಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಗುರ್ಮೆ ವಹಿಸಿದ್ದರು. ಅತಿಥಿಗಳಾಗಿ ಕಳತ್ತೂರು ಮರಿಯಾ ನಿವಾಸದ ಮುಖ್ಯಸ್ಥರಾದ ಸಿಸ್ಟರ ರೀಟಾ ಫೆರ್ನಾಂಡಿಸ್, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ದಿವಾಕರ್ ಡಿ. ಶೆಟ್ಟಿ, ಶಾಲಾ ಮುಖ್ಯೋಪಾದ್ಯಾಯಿನಿ ಶಶಿಕಲಾ ಎನ್ ಮತ್ತು…

Read More

ಪುಣೆ: ಪುಣೆ ಬಂಟರ ಸಂಘದ ವತಿಯಿಂದ ವಿಶ್ವ ಬಂಟರ ದಿನಾಚರಣೆ ಹಾಗೂ ಬಿಸುಪರ್ಬ ಆಚರಣೆಯು ಎ. 14ರಂದು ಬಾಣೇರ್‌ನಲ್ಲಿರುವ ಸಂಘದ ನಿರ್ಮಾಣ ಹಂತದ ಭವನದ ಆವರಣದಲ್ಲಿ ಜರಗಿತು. ಬೆಳಗ್ಗೆ ಭವನದ ಎದುರುಗಡೆ ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ಸಿ. ಎ. ಸದಾನಂದ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ವಿಶ್ವ ಬಂಟರ ಧ್ವಜವನ್ನು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆನಂತರ ಬಂಟರ ಗೀತೆಯನ್ನು ಹಾಡಲಾಯಿತು. ಈ ಸಂದರ್ಭ ಸಂಘದ ಗೌರವಾಧ್ಯಕ್ಷ ಜಗನ್ನಾಥ ಬಿ. ಶೆಟ್ಟಿ ಓಣಿಮಜಲು, ಸಂಘದ ಮಾಜಿ ಅಧ್ಯಕ್ಷ ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆ, ಸಂಘದ ಅಧ್ಯಕ್ಷ ಇನ್ನ ಕುರ್ಕಿಲ… ಬೆಟ್ಟು ಸಂತೋಷ್‌ ಶೆಟ್ಟಿ , ಬಂಟ್ಸ್‌ ಅಸೋಸಿಯೇಶನ್‌ ಹವೇಲಿ ಅಧ್ಯಕ್ಷ ಮಿಯ್ನಾರ್‌ ಜಯ ಶೆಟ್ಟಿ, ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ, ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ವಸಂತ್‌ ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ್‌ ಶೆಟ್ಟಿ ಕಳತ್ತೂರು, ಸಂಘದ ಉಪಾಧ್ಯಕ್ಷರಾದ ಸುಧಾಕರ…

Read More

ಕುಂದಾಪುರ: ಕೋಟೇಶ್ವರ ಬೆಳೆಯುತ್ತಿರುವ ಪಟ್ಟಣ. ಸಹಕಾರ ವ್ಯವಸ್ಥೆಯಡಿ ಇಂದಿಗೂ ತುಂಬು ನಂಬಿಕೆ ಜನರ ಲ್ಲಿದೆ. ಜನರ ನಂಬಿಕೆಗೆ ಅನುಸಾರವಾಗಿ ಉತ್ತಮ ಸೇವೆ ನೀಡುವ ಮೂಲಕ ಶಾಖೆ ದೊಡ್ಡಪ್ರಮಾಣದಲ್ಲಿ ಬೆಳೆಯಲಿ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಕೋಟೇಶ್ವರ ಬಸ್‌ತಂಗುದಾಣ ಸಮೀಪದ ನಾಗಪ್ರಭ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿರುವ ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ- ಅಪರೇಟಿವ್ ಸೊಸೆಟಿ ಕೋಟೇಶ್ವರ ಶಾಖೆ ಉದ್ಘಾಟನೆ ಸಮಾರಂಭದಲ್ಲಿ ಭದ್ರತಾ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು. ಗೋವಾ ಉದ್ಯಮಿ, ಗೋವನ್ ಬೌಂಟಿ ಮ್ಯಾನೆಜಿಂಗ್ ಡೆರೆಕ್ಟರ್ ನರಸಿಂಹ ಪೂಜಾರಿ ಉದ್ಘಾಟಿಸಿ ಶುಭಹಾರೆಸಿದರು. ಬೆಂಗಳೂರು ಉದ್ಯಮಿ ಡಾ.ಜಿ.ಪಿ.ಶೆಟ್ಟಿ ಭದ್ರತಾಕೋಶ, ಕುಂದಾಪುರ ತಾಲೂಕು ಪಂಚಾಯಿತಿ ಅಧ್ಯಕ್ಷ ಭಾಸ್ಕರ ಬಿಲ್ಲವ ಗಣಕೀಕರಣ, ಕೋಟೇಶ್ವರ ಉದ್ಯಮಿ ಚಂದ್ರಶೇಖರ ಶೆಟ್ಟಿ ನಗದು ವಿಭಾಗ ಉದ್ಘಾಟಿಸಿದರು. ಉಡುಪಿ ಸಹಕಾರಿ ಸಂಘಗಳ ಉಪನಿಬಂಧಕ ಪ್ರವೀಣ್ ಡಿ.ನಾಯಕ್ ಠೇವಣಿ ಪತ್ರ ವಿತರಿಸಿದರು. ಕರ್ಣಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಬಿ.ಭಾಸ್ಕರ ಕಾಮತ್ ಸಾಲಪತ್ರ ಬಿಡುಗಡೆಗೊಳಿಸಿದರು. ಕೋಟೇಶ್ವರದ ಉದ್ಯಮಿ ಕೆ.ನಿರಂಜನ್ ಕಾಮತ್, ರಥಶಿಲ್ಪಿ…

Read More

ಕುಂದಾಪುರ: ಕಳೆದ ವಾರ ದುಷ್ಕರ್ಮಿಯಿಂದ ಹತ್ಯೆಗೀಡಾದ ಗೋಪಾಡಿ ಮಹಿಳೆ ಇಂದಿರಾ ಮೊಗವೀರ್ತಿಯವರ ಮನೆಗೆ ಮಂಗಳವಾರ ಅಪರಾಹ್ನ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವನ ಹೇಳಿದರು. ಈ ಸಂದರ್ಭ ಅವರು ಮಾತನಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಪೊಲೀಸರು ಯಾವುದೇ ಮುಲಾಜಿಲ್ಲದೆ ಕ್ರಮ ನಿರ್ವಹಿಸುವಂತೆ ಆದೇಶಿಸಿದ್ದೇವೆ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕಾದರೆ ಸ್ಥಳೀಯರು, ಕುಟುಂಬ ವರ್ಗ ಸಹಕರಿಸಬೇಕು. ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿರುವ ಬಾಲಕ ಅನ್ವಿತ್‌ನ ಶಿಕ್ಷಣದ ಜವಾಬ್ದಾರಿಯನ್ನು ಸರಕಾರ ವಹಿಸಿಕೊಳ್ಳಲಿದೆ. ಅಲ್ಲದೆ ಈ ಹಿಂದೆ ಮೀನುಗಾರಿಕೆ ವೇಳೆ ಸಾವನ್ನಪ್ಪಿರುವ ಕುಟುಂಬದ ಸದಸ್ಯರೊಬ್ಬರಿಗೆ ಸೂಕ್ತ ಪರಿಹಾರ ಒದಗಿಸುವುದಾಗಿ ಅವರು ಭರವಸೆ ನೀಡಿದರು. ಸರಕಾರ ಸಂತ್ರಸ್ತ ಕುಟುಂಬದೊಂದಿಗೆ ಇರುತ್ತದೆ ಎಂದು ಸಾಂತ್ವನ ಹೇಳಿದರು. ಉಪಸ್ಥಿತರಿದ್ದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕುಟುಂಬ ವರ್ಗಕ್ಕೆ ಸಾಂತ್ವನ ತಿಳಿಸಿ ಸ್ಥಳದಲ್ಲೇ ತುರ್ತು ಪರಿಹಾರ ವಿತರಿಸಿದರು. ಡಿವೆಎಸ್‌ಪಿ ಮಂಜುನಾಥ ಶೆಟ್ಟಿ,…

Read More

ಉಡುಪಿ: 35 ವರ್ಷಗಳ ಹಿಂದೆ ಆರಂಭವಾಗಿ ತನ್ನ ಮಂದಗತಿಯಿಂದ ಇತ್ತೀಚಿಗೆ ಭಾರಿ ರಾಜಕೀಯ ಸುದ್ದಿಗೆ ಗ್ರಾಸವಾಗಿದ್ದ ವಾರಾಹಿ ಯೋಜನೆಯಡಿ ಕಾಲುವೆಗೆ ನೀರು ಹರಿಸಲು ಏ.20ರಂದು ಮುಹೂರ್ತ ಫಿಕ್ಸ್ ಆಗಿದೆ. ಅಂದು ಬೆಳಗ್ಗೆ 10ಗಂಟೆಗೆ ಸಿಎಂ ಸಿದ್ಧರಾಮಯ್ಯ ಅವರು ಸಿದ್ಧಾಪುರದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅವರು ಸೋಮವಾರ ಬ್ರಹ್ಮಗಿರಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ವಾರಾಹಿ ಯೋಜನೆಯಡಿ ಕಳೆದ 2 ವರ್ಷದಲ್ಲಿ ಶೇ.60ರಷ್ಟು ಕಾಮಗಾರಿಗಳು ಮುಗಿದ್ದಿದ್ದು, ಇನ್ನುಳಿದ ಕಾಲುವೆ ಕಾಮಗಾರಿಗೆ ಅಗತ್ಯವಿರುವ ಭೂಸ್ವಾಧೀನ (ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಸೇರಿ ) ಪ್ರಕ್ರಿಯೆ ಈ ಮಾಸಾಂತ್ಯದಲ್ಲಿ ಪೂರ್ಣಗೊಳ್ಳಲಿದೆ ಎಂದರು. ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ನೀರಾವರಿ ಸಚಿವ ಎಂ.ಬಿ.ಪಾಟೀಲ್, ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್, ಅರಣ್ಯ ಸಚಿವ ರಮಾನಾಥ ರೈ, ರಾಜ್ಯ ಸಭೆ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ವಿ.ಪ.ಸದಸ್ಯರುಗಳಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ.ಗಣೇಶ್…

Read More

ಕುಂದಾಪುರ: ದಲಿತರಿಗೆ ಮೀಸಲಿಟ್ಟಿರುವ ಇಲ್ಲಿನ ಭಂಡಾರ್‌ಕಾರ್ಸ್‌ ಕಾಲೇಜು ರಸ್ತೆಯ ಲ್ಲಿರುವ ಅಂಬೇಡ್ಕರ್ ಭವನದ ಸೊತ್ತುಗಳಿಗೆ ಹಾನಿ ಉಂಟುಮಾಡಿ ರುವುದು ಬೆಳಕಿಗೆ ಬಂದಿದ್ದು ದಲಿತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಲಕ್ಷಾಂತರ ರೂಪಾ ಯಿ ವೆಚ್ಚದಲ್ಲಿ 2011ರಲ್ಲಿ ನಿರ್ಮಾಣಗೊಂಡು ಲೋಕಾರ್ಪ ಣೆಗೊಂಡಿರುವ ಅಂಬೇಡ್ಕರ್ ಭವನದ ಮುಂಬದಿಯ ಸೆನಿಂಗ್ ಗಾಜು, ಕಿಟಕಿಯ ಗಾಜು, ಅಲ್ಲದೆ ಭವನದೊಳಗಿನ ಶೌಚಾಲಯದ ಪಕ್ಕದ ಬೇಸಿನ್‌ಗಳನ್ನು ಜಖಂಗೊಳಿಸಲಾಗಿದೆ. ಅಂಬೇಡ್ಕರ್‌ಭವನ ವಠಾರ ಮಾಲಿನ್ಯಗೊಳಿಸುವುದು, ಸೊತ್ತು ಹಾನಿಗೊಳಿಸುವುದು ನಡೆಯುತ್ತ ಲಿದ್ದರೂ ಪುರಸಭೆ ಕಣ್ಮುಚ್ಚಿ ಕುಳಿತಿದೆ. ಭವನದ ರಕ್ಷಣೆಗೆ ಸೂಕ್ತ ಏರ್ಪಾಟು ಮಾಡುವಂತೆ ಪುರಸಭೆಗೆ ಮನವಿ ಈ ಹಿಂದೆ ಸಲ್ಲಿಸಲಾಗಿದ್ದರೂ ಸ್ಪಂದನ ದೊರೆತ್ತಿಲ್ಲ. ಕಾವಲುಗಾರರ ನೇಮಕ ಮಾಡುವಂತೆ ಒತ್ತಾಯಿಸಿದ್ದರೂ ಕ್ರಮ ತೆಗೆದುಕೊಂಡಿಲ್ಲ. ಭವನದ ಒಳಪ್ರವೇಶಿಸಿ ಬಹಿರ್ದೆಶೆ ಮಾಡುವುದು, ಸೊತ್ತುಗಳಿಗೆ ಹಾನಿ ಉಂಟು ಪಡಿಸುವುದು ನಡೆಯುತ್ತಿದೆ. ದಲಿತರನ್ನು ಅಪಮಾನಿಸುವ ಇಂತಹ ಹೇಯಕತ್ಯ ತಡೆ ಹಿಡಿಯಬೇಕು. ಇಲ್ಲವಾದಲ್ಲಿ ಸೂಕ್ತ ಹೋರಾಟ ರೂಪಿಸಲಾಗುವುದು ಎಂದು ದಲಿತ ಮುಖಂಡ ಉದಯಕುಮಾರ್ ತಲ್ಲೂರು ತಿಳಿಸಿದ್ದಾರೆ. ಕಟ್ಟಡಕ್ಕೆ ಸುಣ್ಣ ಬಳಿಯದೆ ವರ್ಷವೇ ಸಂದಿದೆ.…

Read More

ಕುಂದಾಪುರ: ನಗರದ ಹೊಸ ಬಸ್‌ನಿಲ್ದಾಣ ಬಳಿಯ ಫೆರಿರಸ್ತೆ ಪಕ್ಕದಲ್ಲಿದ್ದ ಎಸ್‌ಟಿಡಿ ಬೂತ್ ಹಾಗೂ ಅಂಗಡಿ ಕಟ್ಟಡವನ್ನು ಪುರಸಭೆ ಏಕಾಎಕಿ ನೆಲಸಮಗೊಳಿಸಿರುವುದುದನ್ನು ಸಾರ್ವಜನಿಕರು ಖಂಡಿಸಿದ್ದಾರೆ. ಸರಕಾರಿ ಅರ್ಜಿಗಳ ಮಾರಾಟ, ಅರ್ಜಿ ಬರೆದುಕೊಡುವ ಕಾಯಕ ನಡೆಯುತ್ತಿದ್ದ ಅಂಗಡಿಯನ್ನು ಬೆಳಗ್ಗಿನ ಜಾವ ನೆಲಸಮಗೊಳಿಸಿದ್ದು ಎಂದಿನಂತೆ ಅಂಗಡಿಗೆ ಬಂದ ಮಾಲೀಕರು ಅಂಗಡಿ ಮಾಯವಾಗಿರುವುದು ಕಂಡು ಹೌಹಾರಿದ್ದಲ್ಲದೆ ಕಣ್ಣೀರುಗರೆದರು. ಮಾಲೀಕನ ಅವಸ್ಥೆ ಕಂಡು ಆಕ್ರೋಶಿತರಾದ ನಾಗರಿಕರು ಪುರಸಭೆ ಕ್ರಮವನ್ನು ಖಂಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅಂಗಡಿ ಮಾಲೀಕ ನಾಗೇಶ್ ಕಾಮತ್, ಮೊದಲು ಪುರಸಭೆ ಅಂಗಡಿ ದೊಡ್ಡದಾಗಿದೆ ಎಂದು ತಿಳಿಸಿದ್ದ ಮೇರೆಗೆ ಚಿಕ್ಕದಾಗಿ ರೂಪಿಸಲು ಕೆಲಸ ಶುರುಹಚ್ಚಿಕೊಂಡಿದ್ದೆ. ಅಂಗಡಿಯಲ್ಲಿ ಸರಕಾರಿ ಅರ್ಜಿಗಳ ಮಾರಾಟ, ಅದರೊಂದಿಗೆ ಉಚಿತವಾಗಿ ಗ್ರಾಮೀಣ ಜನರಿಗೆ ಅರ್ಜಿ ಬರೆದುಕೊಡುವ ಕೆಲಸ ಮಾಡಿಕೊಂಡು ಬಂದಿದ್ದೇನೆ. ಅಂಗಡಿಯ ಪರವಾನಗಿ ಹೊಂದಿರುವುದಲ್ಲದೆ ವಿದ್ಯುತ್ ಸಂಪರ್ಕವೂ ಇದೆ. ಪುರಸಭೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಅಂಗಡಿ ನೆಲಸಮಗೊಳಿಸುವ ಮೂಲಕ ಹೊಟ್ಟೆಯ ಮೇಲೆ ಹೊಡೆದಿದೆ. ಪುರಸಭೆ ಕ್ರಮ ಅತ್ಯಂತ ನೋವು ನೀಡಿದೆ. ಇದರ ವಿರುದ್ಧ ಕಾನೂನು ಸಮರ ನಡೆಸುವೆ ಎಂದು…

Read More