ಭಾರತ ಮೂಲದ ರಾಜರಾಜೇಶ್ವರಿ ನ್ಯೂಯಾರ್ಕ್ ಕ್ರಿಮಿನಲ್ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಇದೇ ಮೊದಲ ಬಾರಿಗೆ ಭಾರತ ಮೂಲದವರೊಬ್ಬರು ನ್ಯೂಯಾರ್ಕ್ನ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. 43 ವರ್ಷದ ರಾಜರಾಜೇಶ್ವರಿ ಅವರು ಚೆನ್ನೈನಲ್ಲಿ ಜನಿಸಿದವರು. 16 ವರ್ಷದವರಿದ್ದಾಗ ಅಮೆರಿಕ ಸೇರಿದ ರಾಜರಾಜೇಶ್ವರಿ, ರಿಚ್ಮಂಡ್ ಕೌಂಟಿಯ ಜಿಲ್ಲಾ ಅಟಾರ್ನಿ ಕಚೇರಿಯಲ್ಲಿ ಸಹಾಯಕ ಜಿಲ್ಲಾ ಅಟಾರ್ನಿಯಾಗಿ ಕಾರ್ಯನಿರ್ವಹಿಸಿದ್ದಾರೆ. ‘ಈ ನೇಮಕದಿಂದ ಹೆಚ್ಚು ಸಂತೋಷವಾಗಿದೆ. ಅನಿವಾಸಿಯೊಬ್ಬರಿಗೆ ಇಂಥ ಗಳಿಗೆಗಳು ಹೆಚ್ಚು ಸ್ಮರಣೀಯ. ಈ ನೇಮಕ ನನ್ನಂಥ ಅನೇಕರಿಗೆ ಪ್ರೇರಣೆ’ ಎಂದು ರಾಜರಾಜೇಶ್ವರಿ ಹೇಳಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ನೃತ್ಯಪಟುವೂ ಆಗಿರುವ ರಾಜರಾಜೇಶ್ವರಿ ಅವರು ಅಮೆರಿಕದಲ್ಲಿ ನಡೆಯುವ ಅನಿವಾಸಿ ಭಾರತೀಯರ ಸಮಾರಂಭಗಳಲ್ಲಿ ನೃತ್ಯ ಪ್ರದರ್ಶನವನ್ನೂ ನೀಡಿದ್ದಾರೆ.
Author: Editor Desk
ಎಚ್1ಬಿ ವೀಸಾ ಹೊಂದಿರುವವರ ಪತಿ/ಪತ್ನಿಗೆ ಉದ್ಯೋಗ ಮಾಡಲು ಮೇ 26ರಿಂದ ಅವಕಾಶ ನೀಡಲಾಗುವುದು ಎಂದು ಅಮೆರಿಕ ಘೋಷಿಸಿದೆ. ಈ ಕ್ರಮದಿಂದಾಗಿ ಅಮೆರಿಕಕ್ಕೆ ಬಂದ ನಂತರ ಕೆಲಸ ಮಾಡಲು ಸಾಧ್ಯವಾಗದೇ ಇರುವ ಪ್ರತಿಭಾನ್ವಿತ, ವೃತ್ತಿಪರ ಭಾರತೀಯರ ಸಂಗಾತಿಗೆ ಅನುಕೂಲವಾಗಲಿದೆ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಈ ಕ್ರಮವನ್ನು ಸ್ವಾಗತಿಸಿದ್ದಾರೆ. ಈಗಿನ ಕಾನೂನಿನಂತೆ, ಎಚ್1ಬಿ ವೀಸಾ ಹೊಂದಿರುವವರ ಪತಿ/ಪತ್ನಿ ಅಮೆರಿಕದಲ್ಲಿ ಉದ್ಯೋಗ ಮಾಡುವಂತಿಲ್ಲ. ಎಚ್1ಬಿ ವೀಸಾ ಹೊಂದಿರುವವರ ಪೈಕಿ ಹೆಚ್ಚಿನವರು ಭಾರತೀಯರು. ಕೆಲಸ ಮಾಡಲು ಅನುಮತಿ ಕೋರಿ ಎಚ್1ಬಿ ವೀಸಾ ಹೊಂದಿರುವವರ ಪತ್ನಿ /ಪತಿ ಸಲ್ಲಿಸುವ ಅರ್ಜಿಯನ್ನು ಅಮೆರಿಕ ಪೌರತ್ವ ಹಾಗೂ ವಲಸೆ ಸೇವೆ (ಯುಎಸ್ಸಿಐಎಸ್) ಮೇ 26ರಿಂದ ಸ್ವೀಕರಿಸಲಿದೆ. ಯುಎಸ್ಸಿಐಎಸ್ ‘ಫಾರ್ಮ್ 1-765’ ಅಂಗೀಕರಿಸಿದರೆ, ಎಚ್4 ಅವಲಂಬಿತ ಪತಿ ಅಥವಾ ಪತ್ನಿಗೆ ಉದ್ಯೋಗ ಅನುಮತಿ ಪತ್ರ ದೊರೆಯಲಿದೆ. ನಂತರ ಆಕೆ/ಆತ ಅಮೆರಿಕದಲ್ಲಿ ಕೆಲಸ ಮಾಡಬಹುದು. ಯುಎಸ್ಸಿಐಎಸ್ ಅಂದಾಜಿನ ಪ್ರಕಾರ ಉದ್ಯೋಗ ಅನುಮತಿ ಪತ್ರ ಕೋರಿ ಈ ವರ್ಷ 179,600 ಮಂದಿ ಅರ್ಜಿ ಸಲ್ಲಿಸಬಹುದು. ಮುಂದಿನ…
ಗಗನಯಾತ್ರಿಯೊಬ್ಬರು ಬಾಹ್ಯಾಕಾಶ ಕೇಂದ್ರದಲ್ಲಿ ಮೊದಲ ಬಾರಿಗೆ ತೆಗೆದ ಸೆಲ್ಫಿಯು ಆರು ಸಾವಿರ ಪೌಂಡ್ಗೆ (5.7 ಲಕ್ಷ ರೂ.) ಹರಾಜಾಗಿದೆ. ನಾಸಾದ ಗಗನಯಾತ್ರಿ ಬುಝ್ ಅಲ್ಡ್ರಿನ್ ಅವರು 1996ರ ನವೆಂಬರ್ನಲ್ಲಿ ಜೆಮಿನಿ 12 ನೌಕೆಯಲ್ಲಿ ಶೂನ್ಯಾಕಾಶ ಯಾನಕ್ಕೆ ತೆರಳಿದ್ದಾಗ ಈ ಸೆಲ್ಫಿ ತೆಗೆದುಕೊಂಡಿದ್ದರು. ಲಂಡನ್ನ ಬ್ಲೂಮ್ಸ್ಬರಿ ಹರಾಜಿನಲ್ಲಿ ನಾಸಾದ ಅಪರೂಪದ 700 ಸಂಗ್ರಹಚಿತ್ರಗಳು ಹರಾಜಾದವು. ಒಟ್ಟು 300 ಜನರು ಬಿಡ್ ಕರೆದು 4,89,440 ಪೌಂಡ್ಗಳಿಗೆ ಇವನ್ನು ಖರೀದಿಸಿದರು. 1946ರಲ್ಲಿ ಬಾಹ್ಯಾಕಾಶ ನೌಕೆಯಿಂದ ತೆಗೆದ ಭೂಮಿಯ ಮೊದಲ ಚಿತ್ರವು 1,736 ಪೌಂಡ್ಗಳಿಗೆ ಬಿಕರಿಯಾಯಿತು. 1969ರಲ್ಲಿ ಚಂದ್ರನ ಮೇಲೆ ನೀಲ್ ಆರ್ಮ್ಸ್ಟ್ರಾಂಗ್ ಅವರು ಹೆಜ್ಜೆ ಇಟ್ಟ ಮೊದಲ ಚಿತ್ರವು 3,472 ಪೌಂಡ್ಗಳಿಗೆ ಹರಾಜಾಯಿತು. ಚಂದ್ರನ ನೆಲದ ಮೇಲೆ ನಿಂತಾಗ ಭೂಮಿಯು
ಖ್ಯಾತ ಪರಿಸರವಾದಿ ಮಾಧವ್ ಗಾಡ್ಗೀಳ್ ಅವರಿಗೆ ಪ್ರತಿಷ್ಠಿತ 2015ನೇ ಸಾಲಿನ ‘ದಿ ಟೇಲರ್ ಅವಾರ್ಡ್’ ಪ್ರಶಸ್ತಿ ಸಂದಿದೆ. ಈ ಪುರಸ್ಕಾರಕ್ಕೆ ಭಾಜನರಾದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆ ಗಾಡ್ಗೀಳ್ ಪಾತ್ರರಾಗಿದ್ದಾರೆ. ಈ ಹಿಂದೆ ತಮಿಳುನಾಡು ಮೂಲದವರಾದ ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಅವರಿಗೆ 1991ರಲ್ಲಿ ಹಾಗೂ ಸಾಗರ ಹಾಗೂ ಭೂ ವಿಜ್ಞಾನಿ ವೀರಭದ್ರನ್ ರಾಮನಾಥನ್ ಅವರಿಗೆ 2009ರಲ್ಲಿ ಈ ಪ್ರಶಸ್ತಿ ದೊರೆತಿದೆ. ಪರಿಸರ ಕ್ಷೇತ್ರದಲ್ಲಿನ ಅಮೋಘ ಸೇವೆಗಾಗಿ ಪುಣೆ ಮೂಲದ ಗಾಡ್ಗೀಳ್ ಅವರಿಗೆ ಈ ಗೌರವ ಲಭಿಸಿದೆ. ಸರಿಸುಮಾರು 1.24 ಕೋಟಿ ರೂ. ನಗದು ಹಾಗೂ ಪದಕವನ್ನೊಳಗೊಂಡ (2 ಲಕ್ಷ ಡಾಲರ್) ಪ್ರಶಸ್ತಿಯನ್ನು ಗಾಡ್ಗೀಳ್ ಅವರು ಅಮೆರಿಕದ ಮಹಿಳಾ ಸಾಧಕಿ, ಒರೆಗಾನ್ ಸ್ಟೇಟ್ ಯೂನಿವರ್ಸಿಟಿಯ ಸಾಗರ ವಿಜ್ಞಾನಿ ಡಾ.ಜೇನ್ ಲುಬ್ಚಿನೋ ಅವರೊಂದಿಗೆ ಹಂಚಿಕೊಳ್ಳಲಿದ್ದಾರೆ. ಲಾಸ್ ಏಂಜಲೀಸ್ನ ಬಿವರ್ಲಿ ಹಿಲ್ಸ್ನಲ್ಲಿ ಏಪ್ರಿಲ್ 23ರಂದು ನಡೆಯುವ ಕಾರ್ಯಕ್ರಮದಲ್ಲಿ ಇವರಿಬ್ಬರಿಗೂ ಜಂಟಿಯಾಗಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಭಾರತದಲ್ಲಿ ಪರಿಸರ ಸಂರಕ್ಷಣೆಯಲ್ಲಿನ ನಾಯಕತ್ವ ಹಾಗೂ ಸುಸ್ಥಿರ ಅಭಿವೃದ್ಧಿ ಕುರಿತ…
ಕುವೈತ್ ನಲ್ಲಿ ನೆಲೆಸಿರುವ ಸಮಸ್ತ ಅನಿವಾಸಿ ಭಾರತೀಯರ ಸಮಾನ ವೇದಿಕೆಯಾಗಿ ಇಂಡಿಯನ್ ಸೋಷಿಯಲ್ ಫೋರಂ, ಮಾ. 13 ರಂದು ಅಧಿಕೃತವಾಗಿ ಲೋಕಾರ್ಪಣೆಗೊಂಡಿತು. ಅಬ್ಬಾಸಿಯಾದ ಇಂಟೆಗ್ರೇಟೆಡ್ ಇಂಡಿಯನ್ ಸ್ಕೂಲ್ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಸಾವಿರಾರು ಜನತೆಯ ಮುಂದೆ ಎಸ್ಡಿಪಿಐ ರಾಷ್ಟ್ರೀಯ ಅಧ್ಯಕ್ಷರಾದ ಎ. ಸಯೀದ್ ಇಂಡಿಯನ್ ಸೋಷಿಯಲ್ ಫೋರಂನ್ನು ಅನಿವಾಸಿ ಭಾರತೀಯರಿಗಾಗಿ ಸಮರ್ಪಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು ಭಾರತದ ಪ್ರಸಕ್ತ ರಾಜಕೀಯ ಸ್ಥಿತಿಗತಿಗಳ ಕಡೆ ಬೆಳಕು ಚೆಲ್ಲಿದರು. ಅಭಿವೃದ್ಧಿಯ ಮಂತ್ರದೊಂದಿಗೆ ಒಳ್ಳೆಯ ದಿನಗಳು ಬರಲಿವೆ ಎಂದು ದೇಶದ ಆಡಳಿತದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ನೇತ್ರತ್ವದ ಸರಕಾರದಿಂದ ಒಳ್ಳೆಯ ದಿನಗಳು ಅಧಾನಿ, ಅಂಬಾನಿ ಯಂತಹ ಉದ್ದಿಮೆದಾರರಿಗೆ ಬಂದಿದೆ ಹೊರತು ಬಡವರಿಗೆ, ಶೋಷಿತ ವರ್ಗಕ್ಕಲ್ಲ ಎಂದು ಅವರು ಹೇಳಿದರು. ದೇಶದ ಜಾತ್ಯಾತೀತತೆ, ಸಂವಿದಾನ ಅಪಾಯದಲ್ಲಿದ್ದು, ಅಲ್ಪಸಂಖ್ಯಾತ ಬ್ರಾಹ್ಮಣರ ಆಹಾರ ಪದ್ದತಿಯನ್ನು ಬಹುಸಂಖ್ಯಾತ ಭಾರತೀಯರ ಮೇಲೆ ಹೇರುವ ಷಡ್ಯಂತ್ರ ನಡೆಯುತ್ತಿದ್ದು, ಜವಾಬ್ದಾರಿಯುತ ವಿರೋಧಪಕ್ಷವಾಗಿ ಕಾರ್ಯನಿರ್ವಹಿಸಬೇಕಿದ್ದ ಕಾಂಗ್ರೆಸ್ ಗಾಢ ಮೌನಕ್ಕೆ ಶರಣಾಗಿದ್ದು, ಕಾಂಗ್ರೆಸ್ ನ ಯುವರಾಜ…
ಕುಂದಾಪುರ: ಪಿಡಿಓಗಳನ್ನು ಮನಬಂದಂತೆ ನಿಂದಿಸುವುದು, ಅವರ ಮೇಲೆ ಹಲ್ಲೆ ನಡೆಸುವುದು ಮುಂತಾದ ಕೆಟ್ಟ ಪ್ರವೃತ್ತಿ ಮತ್ತೆ ಮರುಕಳಿಸುತ್ತಿವೆ. ಕುಂದಾಪುರ ತಾಲೂಕಿನಲ್ಲಿ ಇತ್ತಿಚಿಗಷ್ಟೇ ತಹಸೀಲ್ದಾರರು ಹಾಗೂ ಪಿಡಿಓಗಳ ನಡುವೆ ಮಾತಿನ ಜಟಾಪಟಿ ನಡೆದು, ಪಿಡಿಓಗಳು ತಿರುಗಿಬಿದ್ದ ಘಟನೆ ತಣಿಯುವ ಮೊದಲೇ ಗ್ರಾ.ಪಂ ಅಧ್ಯಕ್ಷರು ಹಾಗೂ ಪಿಡಿಓ ನಡುವಿನ ಸಮರ ತಾರಕಕ್ಕೇರಿದೆ. ಬೈಂದೂರು ಹೋಬಳಿಯ ಕೆರ್ಗಾಲು ಗ್ರಾಮ ಪಂಚಾಯತ್ ಪಿಡಿಓ ಜಯಂತ ಪಟಗಾರ್ ಎನ್ನುವವರ ಮೇಲೆ ಕೆರ್ಗಾಲ್ ಗ್ರಾಮ ಪಂಚಾಯತ್ ಅಧ್ಯಕ್ಷರು ಸಹಿತ ಐವರು ಹಲ್ಲೆ ನಡೆಸಿದ ಪ್ರಕರಣ ಪಿಡಿಓಗಳ ಸುರಕ್ಷತೆಯ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ತಾಲೂಕಿನ ಪಿಡಿಓಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕುಂದಾಪುರ ತಾಲೂಕು ಅಧ್ಯಕ್ಷರಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ. ಮನವಿಗೆ ಪ್ರತಿಕ್ರಿಯಿಸಿರುವ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ, ಸರ್ಕಾರಿ ನೌಕಕರರು ಯಾರಿಗೂ ತಲೆಬಾಗಬೇಕಿಲ್ಲ. ತಾಲೂಕನ 3300 ಸರ್ಕಾರಿ ನೌಕರರಿಗೆ ರಕ್ಷಣೆಗೆ ಸಂಘ ಬದ್ಧವಿದೆ. ಯಾವ ಸರ್ಕಾರಿ ನೌಕರರಿಗೆ…
ಕುಂದಾಪುರ: ಸತ್ವಭರಿತ ಶಿಕ್ಷಣಕ್ಕೆ ಹೆಸರಾಗಿರುವ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆ 2015-16ನೇ ಸಾಲಿನಲ್ಲಿ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ಸಿಇಟಿ ರೆಗ್ಯುಲರ್ ತರಗತಿ ಆರಂಭಿಸಲಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಪರೀಕ್ಷೆ ಎದುರಿಸುವಲ್ಲಿ ಸಶಕ್ತರಾಗಬೇಕೆಂಬ ನೆಲೆಯಲ್ಲಿ ಸಂಸ್ಥೆ ಉಚಿತ ಶಿಬಿರಕ್ಕೆ ಲಕ್ಷಾಂತರ ರೂ ವ್ಯಯಿಸಿದೆ. ಸಿಇಟಿ ಕೋಚಿಂಗ್ನಲ್ಲಿ ದೇಶದಲ್ಲೇ ಅಗ್ರಗಣ್ಯ ಸ್ಥಾನ ಪಡೆದುಕೊಂಡಿರುವ ಹೆದ್ರಾಬಾದ್ನ ನಾರಾಯಣಿ ಮತ್ತು ಚೆತನ್ಯ ಇನ್ಸ್ಟಿಟ್ಯೂಟ್ನ ನುರಿತ ಉಪನ್ಯಾಸಕರು ಇನ್ನು ಮುಂದಕ್ಕೆ ವಕ್ವಾಡಿ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ರೆಗ್ಯುಲರ್ ತರಗತಿ ತೆಗೆದುಕೊಳ್ಳಲಿದ್ದಾರೆ. ಸಿಇಟಿ, ಜೆಇಇ, ಐಐಟಿಯಂತಹ ಪರೀಕ್ಷೆಗೆ ತಳಮಟ್ಟದಿಂದಲೇ ವಿದ್ಯಾರ್ಥಿಗಳನ್ನು ತಯಾರುಗೊಳಿಸುವಲ್ಲಿ ಆಂಧ್ರದ ಈ ಉಪನ್ಯಾಸಕ ವರ್ಗ ಖ್ಯಾತಿ ವೆತ್ತಿದೆ. ಪ್ರಥಮ ಪಿಯುಸಿಯಿಂದಲೇ ಸಿಇಟಿ ತರಗತಿ ಆರಂಭಗೊಳ್ಳುವುದರಿಂದ ದೊಡ್ಡ ಮಟ್ಟದ ವೃತ್ತಿಪರ ಶಿಕ್ಷಣದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಭಯ ನೀಗಲಿದೆ ಎಂದು ತಂಡದ ಪ್ರಮುಖ ತರಬೇತುದಾರ ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ. ಈ ಬಾರಿ ಸಿಇಟಿ ಕ್ರ್ಯಾಶ್ ಕೋರ್ಸ್ನಲ್ಲಿ ನಿರೀಕ್ಷೆಗೂ ಮೀರಿ 300ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ…
ಕುಂದಾಪುರ: ಗೊಂಬೆಯಾಟದ ತವರೂರು ಕುಂದಾಪುರದ ಸಿಂಹಳ ದ್ವೀಪ “ಉಪ್ಪಿನಕುದ್ರು.” ಉಪ್ಪಿನಕುದ್ರು ಅಂದಾಗಲೇ ತಟ್ಟನೆ ಹೊಳೆಯುವುದು, ಮೈ ನವಿರೇಳುವ ವೈವಿಧ್ಯಮಯ ಗೊಂಬೆಗಳು ಅದರಲ್ಲೂ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವ ಇಲ್ಲಿನ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ತಂಡ, ಯಾವುದೇ ಸದ್ದು ಗದ್ದಲವಿಲ್ಲದೆ ಈ ತಂಡ ಕಳೆದ 350 ವರ್ಷಗಳಿಂದಲೂ ತನ್ನ ನಿರಂತರ ಕಾಯಕದಿಂದ ಕರಾವಳಿಯ ಜಾನಪದ ಕ್ಷೇತ್ರವನ್ನು ಶ್ರೀಮಂತವಾಗಿರಿಸುತ್ತಾ ಬಂದಿದ್ದು ಇಂದು 6 ನೇ ತಲಾಂತರದ ರೂವಾರಿಯಾಗಿ ಈ ಕಲಾ ತಂಡವನ್ನು ಪೂಜಿಸಿಕೊಂಡು ಬಂದವರು ಉಪ್ಪಿನಕುದ್ರು ಭಾಸ್ಕರ್ ಕೊಗ್ಗ ಕಾಮತ್. ಕೈಗೆ ದೊರೆತ ಬ್ಯಾಂಕ್ ಉದ್ಯೋಗವನ್ನು ತೊರೆದು ಕಲೆಗಾಗಿ ಪೂರ್ಣ ಬದುಕನ್ನು ಸಮರ್ಪಿಸಿಕೊಂಡು ಬಂದ ವಿರಳ ಜಾನಪದ ಕಲಾವಿದರೆನ್ನಬಹುದು. ವಿದೇಶ ಪ್ರವಾಸದ ಮಾತು ಬಂದಾಗಲೆಲ್ಲಾ ಉಪ್ಪಿನಕುದ್ರು ಗೊಂಬೆಯಾಟ ತಂಡದ ನೆನಪು ಆಗಿಯೇ ಆಗುವುದು ಸಹಜ. ಈ ನಿಟ್ಟಿನಲ್ಲಿ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ತಂಡ ಪ್ರಪಂಚದಾದ್ಯಂತ ತನ್ನ ನಿರಂತರ ವಿದೇಶ ಪ್ರವಾಸಗಳಿಂದ ಅನೇಕ ರಾಷ್ಟ್ರಗಳಲ್ಲಿ ತನ್ನದೇ ಆದ ಅಭಿಮಾನಿ ಬಳಗ ಪಡೆದಿರುವುದಂತೂ…
ಕುಂದಾಪುರ: ಸ್ಯಾಕ್ಸೋಫೋನ್ ವಾದನದಲ್ಲಿ ಅಪ್ರತಿಮ ಪ್ರೌಢಿಮೆ ತೋರಿಸಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ಪ್ರತಿಭಾವಂತ ಸ್ಯಾಕ್ಸೋಪೋನ್ ವಾದಕಿ ಸಾಲಿಗ್ರಾಮದ ಮೇಘನಾ ಅವರಿಗೆ ‘ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ – 2013’ನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ದೆಹಲಿ ದೂರದರ್ಶನ ಕೇಂದ್ರದ ಹೆಚ್ಚುವರಿ ಮಹಾ ನಿರ್ದೇಶಕ ನಾಡೋಜ ಡಾ| ಮಹೇಶ್ ಜೋಶಿ ಪ್ರಶಸ್ತಿ ಪ್ರಧಾನ ಮಾಡಿದರು. ಸುಪ್ರಿಂಕೋರ್ಟನ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಡಾ. ಶಿವರಾಜ್ ವಿ. ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಧಾನ ಪರಿಷತ್ ಸಭಾಪತಿ ಡಿ. ಎಚ್. ಶಂಕರಮೂರ್ತಿ, ಕನ್ನಡಪ್ರಭ ಪತ್ರಿಕೆಯ ಸಂಪಾದಕ ವಿಶ್ವೇಶ್ವರ್ ಭಟ್, ಆರ್ಯಭಟ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ| ಎಚ್.ಎಲ್.ಎನ್. ರಾವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮೇಘನಾ ಸಾಲಿಗ್ರಾಮ ಸ್ಯಾಕ್ಸೋಫೋನ್ ವಾದಕ ಅಲೆವೂರು ಸುಂದರ ಶೇರೇಗಾರ ಅವರ ಶಿಷ್ಯೆಯಾಗಿದ್ದು, ದೇಶ ವಿದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಕುಂದಾಪುರ: ಕುಂದಾಪುರದ ವಿದ್ಯಾರ್ಥಿಗಳಿಗೆ ಪ್ರೀಯನಾಗಿ ಕಳೆದ ಕೆಲವು ದಶಕಗಳಿಂದ ಕುಂದೇಶ್ವರ ಪರಿಸರದಲ್ಲೇ ತಂಗಿದ್ದ ಕುಂದೇಶ್ವರ ರಾಜ ರಿಕ್ಷಾ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ವಡೇರಹೋಬಳಿಯ ಹುಣ್ಸೆಕಟ್ಟೆ ಸೇತುವೆಯ ಬಳಿ ಆಟೋ ರಿಕ್ಷಾ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮಾನಸಿಕವಾಗಿ ಅಸ್ವಸ್ಥನಂತಿದ್ದ ಅರೆ ಮಾತಿನ ಸುಮಾರು 65 ವರ್ಷ ಪ್ರಾಯದ ಸಾಧಾರಣ ಶರೀರ ಹೊಂದಿದ ಕುಂದೇಶ್ವರ ರಾಜ, ಕೆಲವು ವರ್ಷಗಳಿಂದ ಕುಂದಾಪುರ ಪೇಟೆಯಲ್ಲಿಯೇ ವಾಸವಾಗಿದ್ದ. ಕಲ್ಲು ಕೆಲಸದವರೊಂದಿಗೆ ಸುಮಾರು 3೦ ವರ್ಷಗಳ ಹಿಂದೆ ಕುಂದೆಶ್ವರದ ಕೆರೆಗೆ ಸ್ನಾನಕ್ಕೆ ಬಂದಿದ್ದಾಗ ಅಕಸ್ಮಾತ್ ಆಗಿ ಅಲ್ಲಿಯೇ ಉಳಿದುಕೊಂಡು ಬಿಟ್ಟ. ಮರುದಿನ ಕೆರೆಗೆ ಸ್ನಾನಕ್ಕೆ ಬಂದ ಅವರ ಬಂಧುಗಳೊಂದಿಗೆ ಮತ್ತೆ ಹೋಗಲೊಪ್ಪದ ರಾಜ ಇಲ್ಲಿಯೇ ಉಳಿದುಕೊಂಡು ಬಿಟ್ಟಿದ್ದ ಎನ್ನಲಾಗಿದೆ. ಇವನ ಸಜ್ಜನಿಕೆಯ ನಡವಳಿಕೆ, ಕಪಟವಿಲ್ಲದ ಮನಸ್ಸು ಮತ್ತು ತನ್ನಿಂದಾದ ಸಹಾಯ ಮಾಡುವ ಗುಣದಿಂದ ಕುಂದೇಶ್ವರದಲ್ಲಿ ಎಲ್ಲರಿಗೂ ಬೇಕಾದವನಾಗಿಬಿಟ್ಟಿದ್ದ. ಒಮ್ಮೆ ಪರಿಚಿತರಾದರೆ ಸಾಕು ಮತ್ತೆ ಎಲ್ಲಿ ಸಿಕ್ಕರೂ ನಿಂತೂ…
