Author: Editor Desk

ಕುಂದಾಪುರ: ಶ್ರೀ ಕ್ಷೇ.ಧ.ಗ್ರಾ.ಯೋಜನೆ ಪ್ರವರ್ತಿತ ಚಿತ್ತೂರು ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರ ಕೃಷಿ ಅಧ್ಯಯನ ಪ್ರವಾಸ ಇತ್ತೀಚೆಗೆ ನಡೆಯಿತು. ಮರವಂತೆಯ ರೆಬೆಲ್ಲೋ ಅವರ ಕೃಷಿ ಕ್ಷೇತ್ರದಲ್ಲಿ ನೀರು ಇಂಗಿಸುವ ವಿಧಾನ, ನಾಯ್ಕನಕಟ್ಟೆಯ ಕೃಷಿ ಯಂತ್ರೋಪಕರಣಗಳ ಬಾಡಿಗೆ ಸೇವಾ ಕೇಂದ್ರ, ಹಾಲಂಬೇರು ತಿಮ್ಮಣ್ಣ ಹೆಗ್ಡೆ ಅವರ ಹೈನುಗಾರಿಕೆ, ಸಾವಯವ ಕೃಷಿಯ ಬಗ್ಗೆ ಅಧ್ಯಯನ ಮಾಡಲಾಯಿತು. ಕೃಷಿ ಅಧಿಕಾರಿ ಹನುಮಂತ, ಚಿತ್ತೂರು ವಲಯ ಮೇಲ್ವಿಚಾರಕ  ಪ್ರಭಾಕರ್ ಉಪಸ್ಥಿತರಿದ್ದರು. ಈ ಕೃಷಿ ಅಧ್ಯಯನ ಪ್ರವಾಸದಲ್ಲಿ 35ಮಂದಿ ಕೃಷಿಕರು ಭಾಗವಹಿಸಿದ್ದರು.

Read More

ಕುಂದಾಪುರ: ತಾಳಮದ್ದಲೆಯ ಕೂಟದ ಅರ್ಥದಾರಿಗೆ ಪುರಾಣದ ಸಂಪೂರ್ಣ ಪರಿಚಯ ಬೇಕಾಗುತ್ತದೆ. ಅಂತೆಯೇ ಕಲಾಭಿಮಾನಿಗಳಿಗೆ ತಾಳಮದ್ದಲೆ ಮಾಧ್ಯಮದಿಂದ ಪುರಾಣದ ಹಿನ್ನಲೆಯನ್ನು ಸವಿಸ್ತಾರವಾಗಿ ತಿಳಿಯಲು ಸಹಕಾರಿಯಾಗುತ್ತದೆ ಎಂದು ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಮಾಜಿ ಧರ್ಮದರ್ಶಿ ಗೋಪಾಲಕೃಷ್ಣ ಶೆಟ್ಟಿ ಹೇಳಿದರು. ಕೋಟಿಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರರಾದ ಪ್ರಭಾಕರ ಶೆಟ್ಟಿ ಇತ್ತೀಚೆಗೆ ಕೋಟಿಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಸಂಚಾರಿ ಯಕ್ಷಗಾನ ಮಂಡಳಿಯ 13ನೇ ವರ್ಷದ ತಿರುಗಾಟದ ಉದ್ಘಾಟನೆಯನ್ನು ಮಾಡಿದರು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಾಸ್ತುತಜ್ಞ ಬಸವರಾಜ್ ಶೆಟ್ಟಿಗಾರ್‌ ಮಾತನಾಡುತ್ತ ಕರಾವಳಿ ಕರ್ನಾಟಕದ ಹೆಮ್ಮೆಯ ಜಾನಪದ ಕಲೆ ಯಕ್ಷಗಾನ. ಅದರ ಇನ್ನೊಂದು ಭಾಗವೇ ತಾಳಮದ್ದಲೆ, ಹಾಗಾಗಿ ಕೋಟೇಶ್ವರದಿಂದ ಹೊರಡುವ ಏಕೈಕ ತಾಳಮದ್ದಲೆಯ  ಸಂಯಮ ವಾಗಿರುವುದರಿಂದ ಕಲಾಭಿಮಾನಿಗಳಾದ ನಾವುಗಳು ಸಹಕರಿಸಬೇಕಾದ್ದು ಕರ್ತವ್ಯ ಎಂದು ಹೇಳಿದರು. ಸಂಯಮದ ಭಾಗವತರಾದ ರವಿಕುಮಾರ್ ಸೂರಾಲ್‌ ಅತಿಥಿಗಳನ್ನು ಶಾಲು ಹೊದಿಸಿ ಗೌರವಿಸಿದರು. ಸಂಯಮದ ಸಂಚಾಲಕರಾದ ಎಮ್.ಆರ್. ವಾಸುದೇವ ಸಾಮಗ ಸ್ವಾಗತಿಸಿ ವಂದಿಸಿದರು.

Read More

ಕುಂದಾಪುರ: ನಕ್ಸಲ್ ನಂದಕುಮಾರ್ ಯಾನೆ ರಂಗನಾಥ್ ಯಾನೆ ಸುನಿಲ್ ಅವರನ್ನು ಶುಕ್ರವಾರ ಸಾಕ್ಷಿ ವಿಚಾರಣೆಗಾಗಿ ಕುಂದಾಪುರ ನ್ಯಾಯಾಲಯಕ್ಕೆ ಬಿಗಿಭದ್ರತೆಯಲ್ಲಿ ಹಾಜರುಪಡಿಸಲಾಯಿತು. ಶಿವಮೊಗ್ಗದಲ್ಲಿ ಬಂಧಿಸಲ್ಪಟ್ಟಿದ್ದ ಈತ ಮೂಲತಃ ಚಿಕ್ಕಮಗಳೂರು ತಾಲೂಕಿನ ನಿವಾಸಿಯಾಗಿದ್ದು ಶಂಕರನಾರಾಯಣ ಠಾಣಾ ವ್ಯಾಪ್ತಿಯ ಹಳ್ಳಿಹೊಳೆಯಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪ ಎದುರಿಸುತ್ತಿದ್ದಾನೆ. ಪ್ರಸ್ತುತ ನ್ಯಾಯಾಂಗ ಬಂಧನ ಎದುರಿಸುತ್ತಿದ್ದಾನೆ. ಸಾಕ್ಷಿ ವಿಚಾರಣೆ ಸಂದರ್ಭ ಎಡಿಜಿಪಿ ರಾಘವೇಂದ್ರ ಔರಾದ್‌ಕರ್, ನಿವತ್ತ ಡಿವೈಎಸ್ಪಿ ವಿಶ್ವನಾಥ್ ಪಂಡಿತ್, ಹುಬ್ಬಳ್ಳಿ ಡಿವೈಎಸ್ಪಿ ಯಶೋಧಾ ಒಂಟಗೋಡಿ ಇದ್ದರು.

Read More

ಕುಂದಾಪುರ: ಕೋಟೇಶ್ವರ ಸಮೀಪದ ರಾಜರಾಮ್ ಪಾಲಿಮರ್ಸ್ ನಲ್ಲಿ ಸಾಕಲಾಗುತ್ತಿರುವ ಗೋವು ಒಂದಕ್ಕೆ ಕಿಡಿಗೇಡಿಗಳು ಎಸಿಡ್‌ನ್ನು ಎರಚಿ ಪೈಶಾಚಿಕವಾಗಿ ವರ್ತಿಸಿದ ಘಟನೆ ನಡೆದಿದೆ. ಎಂದಿನಂತೆ ಫ್ಯಾಕ್ಟರಿಯಿಂದ ಮೇವಿಗಾಗಿ ಬಯಲಿಗೆ ದನಗಳು ತೆರಳಿದ್ದ ವೇಳೆ ಈ ಘಟನೆ ನಡೆದಿದ್ದು ಬಯಲಿನಲ್ಲಿ ಮೆಂದು ವಾಪಾಸಾಗಬೇಕಿದ್ದ ಗೋವು ನಾಲ್ಕೈದು ದಿನ ಕಳೆದರೂ ಬಾರದೇ ಇರುವುದು ಮಾಲಕರಲ್ಲಿ ಆತಂಕ ಮೂಡಿತ್ತು. 5 ದಿನಗಳ ಬಳಿಕ ವಾಪಾಸ್ಸಾದ  ಗೋವು ನಿಶಕ್ತಿಯಿಂದ ಬಳಲುತ್ತಿದ್ದು ಮೈಯೆಲ್ಲ ಎಸಿಡ್‌ನಿಂದ ಸುಟ್ಟು ಹೋಗಿರುವ ದೃಶ್ಯ ಹೃದಯ ಕಲಕುವಂತಿತ್ತು. ತಕ್ಷಣವೇ ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಲಾಗಿದ್ದು ಇಂತಹ ಅಮಾನವೀಯ ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಬಂಧಿಸುವಂತೆ ಪೋಲಿಸರಿಗೆ ದೂರು ನೀಡುವ ಬಗ್ಗೆ ಮಾಲಕರು ಆಸಕ್ತಿ ವಹಿಸಿದ್ದಾರೆ.

Read More

ಕುಂದಾಪುರ: ಮನೆಯ ತೋಟಕ್ಕೆ ಬಂದ ಜಾನುವಾರುಗಳನ್ನುಯ ಅಟ್ಟಿಸಲು ಹೋದ ವಿದ್ಯಾರ್ಥಿ ಯೋರ್ವ ಮನೆ ಸಮೀಪದ ಕೆರೆಗೆ ಬಿದ್ದ ಸಾವಿಗೀಡಾದ ವಿದ್ರಾವಕ ಘಟನೆ ಶೆಟ್ರಕಟ್ಟೆ ಸಮೀಪದ ಮಾವಿನಕೆರೆ ಎಂಬಲ್ಲಿ ಜರಗಿದೆ. ಕೆಂಚನೂರು ವಾಸಿಮುತ್ತಯ್ಯ ದೇವಾಡಿಗ ಹಾಗೂ ಲಲಿತಾ ದಂಪತಿಗಳ ಮಗನಾದ ರಜಿತ್(೧೭) ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುನಲ್ಲಿ ಕಲಿಯುತ್ತಿದ್ದು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ತಂದೆ ಬೆಂಗಳೂರಿನಲ್ಲಿ ಹೋಟೇಲ್  ಕಾರ್ಮಿಕನಾಗಿ ದುಡಿಯುತ್ತಿದ್ದು ಈತನಿಗೆ ಓರ್ವ ಸಹೋದರಿಯಿದ್ದಾಳೆ. ಬಡತನವಿದ್ದರೂ ಕಲಿಕೆಯಲ್ಲಿ ಮುಂದಿದ್ದ ರಜಿತ್ ನನ್ನು ಸಾಕಷ್ಟು ಓದಿಸಿಬೇಕೆಂದು ಕೊಂಡಿದ್ದ ಹೆತ್ತವರು  ಅತ್ಯಂತ ಪ್ರೀತಿಯಿಂದ ಯಾವುದಕ್ಕೂ ಕಮ್ಮಿ ಇಲ್ಲದಂತೆ ಸಾಕುತ್ತಿದ್ದರು. ತಂದೆ ಮನೆ ಇರುವ ಕೆಂಚನೂರಿನ ಸಮೀಪದ ಮಾವಿನ ಕೆರೆ ಯಿಂದ ದಿನಾ ಕಾಲೇಜಿಗೆ ಬರುತ್ತಿದ್ದ ರಜಿತ್ ಇಂದು ಭಾನುವಾರ ವಾದ್ದ ಕಾರಣ ಮನೆಯಲ್ಲಿದ್ದ . ಆದರೆ ಕ್ರೂರ ಸಾವು ಜಾನುವಾರುಗಳ ರೂಪದಲ್ಲಿ ಏಂಟ್ರಿ ಕೊಟ್ಟು ಪಕ್ಕದ ಕೆರೆಯ ಬಳಿ ಹೊಂಚಿ ಕೂತಿತ್ತು. ಅಗ್ನಿ ಶಾಮಕ ದಳವೂ ಸ್ಥಳಕ್ಕೆ ಅಗಮಿಸಿ ಸಾಕಷ್ಟು ಹುಡುಕಾಟದ ನಂತರ…

Read More

ಬೈಂದೂರು: ಜಾತಿ-ಆದಾಯ ಪ್ರಮಾಣ ಪತ್ರ ಸೇರಿದಂತೆ ಸರಕಾರದ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವ ಮತ್ತು ವಿಲೇವಾರಿ ಮಾಡುವ ಪ್ರಕ್ರಿಯೆ ತೀರಾ ವಿಳಂಬವಾಗುತ್ತಿರುವುದರಿಂದ ಜನಸಾಮಾನ್ಯರು ದಿನವಿಡಿ ತಹಶೀಲ್ದಾರರ ಕಛೇರಿಯ ಎದುರು ಸರತಿ ಸಾಲಿನಲ್ಲಿ ನಿಂತು ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಪಡಸಾಲೆ ಮುಂದೆ ಪರದಾಟ: ಶಾಲೆಗಳಿಗೆ ವಿದ್ಯಾರ್ಥಿಗಳು ಜಾತಿ ಹಾಗೂ ಆದಾಯ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿರುವುರಿಂದ ಶಾಲೆ ಆರಂಭಗೊಳ್ಳುತ್ತಿರುವಂತೆ ವಿದ್ಯಾರ್ಥಿಗಳ ಪೊಷಕರು ಪ್ರಮಾಣಪತ್ರಕ್ಕಾಗಿ ಕಳೆದ ಕೆಲವು ದಿನಗಳಿಂದ ತಹಶಿಲ್ದಾರರ ಕಛೇರಿಯ ಪಡಸಾಲೆ ಎದುರು ಮುಗಿಬಿಳುತ್ತಿದ್ದಾರೆ. ಆದರೆ ಕಛೇರಿಯಲ್ಲಿ ಅರ್ಜಿ ಸ್ವೀಕರಿಸಲು ಒಂದೇ ಕಂಪ್ಯೂಟರ್ ವ್ಯವಸ್ಥೆ ಇರುವುದರಿಂದ ಜನರು ದಿನವಿಡಿ ಕಾಯುವಂತಾಗಿದೆ. ಅದೂ ಅಲ್ಲದೇ ಇಂಟರ್‌ನೆಟ್ ಹಾಗೂ ಸರ್ವರ್ ಸಮಸ್ಯೆಯಿಂದಾಗಿ ಒಂದು ಅರ್ಜಿ ಪಡೆದು ಸ್ವೀಕೃತಿ ಪತ್ರ ನೀಡಲು 15ರಿಂದ 20ನಿಮಿಷ ತಗಲುತ್ತಿದೆ. ಬೈಂದೂರು ವಿಶೇಷ ತಹಶೀಲ್ದಾರರ ಕಛೇರಿಯಲ್ಲಿ ಜಾತಿ ಆದಾಯ ಪ್ರಮಾಣ ಪತ್ರ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಜನನ ಮರಣ ಪ್ರಮಾಣ ಪತ್ರ ಸೇರಿದಂತೆ ಎಲ್ಲದಕ್ಕೂ ಇರುವ ಒಂದು ಕಂಪ್ಯೂಟರನ್ನು ಮಾತ್ರವೇ ಅವಲಂಬಿಸಿದ್ದಾರೆ.…

Read More

ಕುಂದಾಪುರ: ಚಲಿಸುತ್ತಿದ್ದ ಬಸ್ ನಲ್ಲಿ ಕಿಟಕಿ ಗಾಜನ್ನು ಸರಿಸುವ ನೆಪದಲ್ಲಿ ಕಿಟಕಿ ಪಕ್ಕದ ಸೀಟ್ ನಲ್ಲಿ ಕುಳಿತ್ತಿದ್ದ ಯುವತಿ ಯೋರ್ವಳಿಗೆ ಲೊಚ ಲೊಚನೆ ಮುತ್ತಿಟ್ಟ ಕಂಡಕ್ಟರ್ ಮಹಾಶಯನಿಗೆ ಸಾರ್ವಜನಿಕರು ಒಟ್ಟಾಗಿ ಮುಖ ಮೂತಿ ನೋಡದೆ ಎರ್ರಾ ಬಿರ್ರಿ ಥಳಿಸಿದ ಘಟನೆ ಕೋಟೆಶ್ವರದಲ್ಲಿ ಜರಗಿದೆ. ಕುಂದಾಪುರದಲ್ಲಿ ಕೆಲಸ ಮಾಡುತ್ತಿರುವ ಕುಂಭಾಸಿ ಮೂಲದ ಯುವತಿಯೋರ್ವಳು ಅಸೌಖ್ಯದ ಕಾರಣ ಕೆಲಸ ಬಿಟ್ಟಿದ್ದು ಇಂದು ಕೊನೆಯ ಬಾರಿಗೆ ಕೆಲಸಕ್ಕೆ ಹೋಗಿ ಕುಂದಾಪುರದಿಂದ ಕೊಕ್ಕರ್ಣೆಗೆ ಸಾಗುವ ಶ್ರೀ ಲಕ್ಷ್ಮೀ ಎಕ್ಸ್‌ಪ್ರೆಸ್ ಬಸ್ಸನ್ನು ಏರಿ ಕುಂಭಾಸಿಗೆ ಟಿಕೇಟ್ ಪಡೆದು ಕುಂತಿದ್ದಳು. ಬಸ್ಸು ಕುಂದಾಪುರ ಬಿಡುತ್ತಿದ್ದ ಹಾಗೆ ಆಗಾಗ್ಗೆ ಅವಳೆಡೆ ವಕ್ರ ದೃಷ್ಟಿ ಬೀರುತ್ತಾ ಇತರ ಪ್ರಯಾಣಿಕರಿಗೆ ಟಿಕೇಟ್ ನೀಡುತ್ತಿದ್ದ  ಕೊಕ್ಕರ್ಣೆ ಮೂಲದ ಬಸ್ಸಿನ ಕಂಡಕ್ಟರ್ ಬಾಬು ಎಂಬಾತ ಕೋಟೇಶ್ವರ ಸಮೀಪಿಸುತ್ತಿದ್ದ ಹಾಗೆ ಯುವತಿ ಕುಳಿತೆಡೆ ಧಾವಿಸಿ ಬಸ್ಸಿನ ಕಿಟಕಿಯನ್ನು ಸರಿಸುವ ನೆಪದಲ್ಲಿ ಬಗ್ಗಿದವನೇ ಯುವತಿಯ ಕೆನ್ನೆ ತುಟಿಗಳಿಗೆ ಮುತ್ತಿಟ್ಟಿದ್ದನಂತೆ. ನಡೆದ ಘಟನೆಯಿಂದ ಭೂಮಿಗಿಳಿದು ಹೋದ ಯುವತಿ ಕುಂಭಾಸಿಯಲ್ಲಿ ಅಳುತ್ತಾ ಬಸ್ಸಿನಿಂದ…

Read More

ಕುಂದಾಪುರ: ಕೃಷಿ ಅಭಿವೃದ್ಧಿಗೋಸ್ಕರ ಮಾಡಿಕೊಂಡ ಸಾಲ ಮರುಪಾವತಿ ಹೆಸರಿನಲ್ಲಿ ಲೇವಾದೇವಿದಾರರು ಪೀಡನೆ ನೀಡುತ್ತಿರುವುದಾಗಿ ಅಮಾಸೆಬೈಲು ಗ್ರಾಮದ ತೊಂಬಟ್ಟುವಿನ ಕೃಷಿಕ ಶ್ರೀನಿವಾಸ ಪೂಜಾರಿ ಸಂಜೆ ಅಮಾಸೆಬೈಲು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಾಯಿ, ತಂದೆ ಮತ್ತು ನನ್ನ ಹೆಸರಿನಲ್ಲಿರುವ ಜಮೀನಿನಲ್ಲಿ ಕೃಷಿ ಅಭಿವೃದ್ಧಿ ಮಾಡುವ ಸಲುವಾಗಿ ಮಾಸಿಕ ಬಡ್ಡಿ ಸಹಿತ ಪಾವತಿಯಂತೆ ಸಾಲ ಪಡೆದುಕೊಂಡಿದ್ದೆ. ಈವರೆಗೆ 5.45 ಲಕ್ಷ ರೂ. ಮರುಪಾವತಿ ಮಾಡಿರುತ್ತೇನೆ. ಆದರೆ ಲೇವಾದೇವಿದಾರರು ಬಡ್ಡಿ ರೂಪದಲ್ಲಿ ಇನ್ನೂ 1.80 ಲಕ್ಷ ರೂ. ನೀಡುವಂತೆ ಪೀಡಿಸುತ್ತಿದ್ದಾರೆ. ನನ್ನ ಹತ್ತಿರ ಹಣವಿಲ್ಲದೆ ಬಡಕೃಷಿಕನಾಗಿದ್ದು , ನನಗೆ ಸಾಲ ಕೊಟ್ಟವರು ಜು. 18ರಿಂದ ಈ ತನಕ ಆಗಾಗ್ಗೆ ಮನೆಗೆ ಬಂದು ಕಿರುಕುಳ ನೀಡುತ್ತಿರುವುದಲ್ಲದೆ ದೂರವಾಣಿ ಮೂಲಕವೂ ಪೀಡಿಸುತ್ತಿದ್ದಾರೆ. ಸದ್ರಿ ಲೇವಾದೇವಿದಾರರು ಯಾವುದೇ ಪರವಾನಗಿ ಇಲ್ಲದೆ ವ್ಯವಹಾರ ನಡೆಸುತ್ತಿರುವುದು ತಿಳಿದುಬಂದಿದೆ. ನನ್ನ ಸಾಲಕ್ಕೆ ಬೇಕಾದ ಎಲ್ಲ ದಾಖಲೆಗಳನ್ನು ನೀಡಿದ್ದೇನೆ. ಆದರೂ ಮೀಟರ್ ಬಡ್ಡಿ ರೂಪದಲ್ಲಿ ಹಣ ನೀಡಬೇಕೆಂದು ಪೀಡಿಸುತ್ತಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

Read More

ಕುಂದಾಪುರ: ಇಲ್ಲಿನ ವಿ.ಕೆ.ಆರ್.ಆಚಾರ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚಿಗೆ ಜರುಗಿದ 2015-16ನೇ ಸಾಲಿನ ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಸುಕೇಶ್ ಆರ್. ಜಿ. 14ರ ವಯೋಮಾನದ ವಿಭಾಗದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಗಂಗೊಳ್ಳಿಯ ರವೀಂದ್ರ ಹಾಗೂ ಜಯಲಕ್ಷ್ಮೀ ದಂಪತಿಗಳ ಪುತ್ರನಾದ ಸುಕೇಶ್ ಕ್ರೀಡೆಯಲ್ಲಿ ಹಲವು ಭಾರಿ ತಾಲೂಕು ಹಾಗೂ ಜಿಲ್ಲಾ ಮಟ್ಟವನ್ನು ಪ್ರತಿನಿಧಿಸಿ ಕೀರ್ತಿ ತಂದಿರುತ್ತಾರೆ.

Read More

ಕುಂದಾಪುರ: ಎಲ್ಲಾ ವೃತ್ತಿಗಿಂತ ಉಪನ್ಯಾಸಕರ ವೃತ್ತಿ ಶ್ರೇಷ್ಠವಾದದ್ದು, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹೊರತರಲು ಮತ್ತು ಶೈಕ್ಷಣಿಕ ಸಾಧನೆಯೊಂದಿಗೆಮೌಲ್ಯಾಧರಿತ ಶಿಕ್ಷಣಕ್ಕೆ ಉಡುಪಿ ಜಿಲ್ಲೆ ಮಾದರಿಯಾಗಿದೆ. ಉತ್ತಮ ಯಶಸ್ಸಿನ ಹಿಂದೆ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಪಾತ್ರ ಶ್ಲಾಘನೀಯ ಎಂದು ಕೊಲ್ಲೂರು ಶ್ರೀ ಮೂಕಾಂಬಿಕ ದೇವಳದ ಕಾರ್ಯನಿರ್ವಣಾಧಿಕಾರಿ ವಿ.ಪ್ರಸನ್ನ ಹೇಳಿದರು. ಅವರು ಉಡುಪಿ ಜಿಲ್ಲಾ ಪ.ಪೂ ಕಾಲೇಜು ಪ್ರಾಂಶುಪಾಲರ ಸಂಘ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ಪ.ಪೂ ಕಾಲೇಜು ಇವರ ಆಶ್ರಯದಲ್ಲಿ ವಾರ್ಷಿಕ ಮಹಾಸಭೆ, ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉಡುಪಿ ಜಿಲ್ಲಾ ಪ.ಪೂ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷೆ ಶ್ರೀಮತಿ ಇಂದಿರಾ.ಕೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ.ಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಬಿ.ನಾಯಕ್ ಪ್ರಾಂಶುಪಾಲರ ಸಂಘದ ಕಡೆಗೋಲು ಕೈಪಿಡಿಯನ್ನು ಬಿಡುಗಡೆಗೊಳಿಸಿದರು. ನಂತರ ಅವರು ಮಾತನಾಡಿ, ದ್ವಿತೀಯ ಪಿಯುಸಿಯಲ್ಲಿ ಉತ್ತಮ ಪಲಿತಾಂಶ ದಾಖಲಿಸಿ, ಜಿಲ್ಲೆಗೆ ಕೀರ್ತಿ ತಂದ ಪ್ರಾಂಶುಪಾಲರನ್ನು ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ, ನಿವೃತ್ತರಾದ ಪದ್ಯಾಣ…

Read More