ಬೈಂದೂರು: ಆಲ್ಲಿನ ಕಾಲೋನಿ ಜನರಿಗೆ ಕುಡಿಯಲು ನೀರಿಲ್ಲ, ವಾಸಿಸಲು ಸ್ವಂತದ್ದು ಎಂದು ಹೇಳಿಕೊಳ್ಳುವ ಮನೆಯೂ ಇಲ್ಲ. ದಶಕವೇ ಕಳೆದರೂ ಈ ನೂರಾರು ಕುಟುಂಬಗಳಿಗಿನ್ನೂ ಮೂಲಭೂತ ಸೌಕರ್ಯ ಹಾಗೂ ಹಕ್ಕುಪತ್ರವೆನ್ನವುದು ಕನಸಾಗಿಯೇ ಉಳಿದಿದೆ. ತಮಗೆ ಸಿಗಬೇಕಾದ ಸೌಕರ್ಯವನ್ನಾದರೂ ದೊರಕಿಸಿಕೊಡಿ ಎಂದು ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊದಿನಪುರ ಹಣಬರಮಕ್ಕಿ ಕಾಲೋನಿಯ ಜನರು ಜನಪ್ರತಿನಿಧಿಗಳಲ್ಲಿ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೂ ಈವರೆಗೂ ಅವರ ನೋವಿಗೆ ನೆರವಾದವರು ಮಾತ್ರ ಯಾರೂ ಇಲ್ಲ. ಹಕ್ಕಪತ್ರವಿಲ್ಲ, ಸರಕಾರಿ ಸವಲತ್ತೂ ದೊರೆಯೊಲ್ಲ ಹಣಬರಮಕ್ಕಿ ಕಾಲೋನಿಯ ಜನ ಸುಮಾರು 12-13 ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದರೂ ಈವರೆಗೂ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ದೊರೆತಿಲ್ಲ. ಹಕ್ಕುಪತ್ರವಿಲ್ಲದೇ ಇಲ್ಲಿನ ನಿವಾಸಿಗಳಿಗೆ ಯಾವ ಸರಕಾರಿ ಸೌಲಭ್ಯಗಳೂ ದೊರಕುತ್ತಿಲ್ಲ. ರೆಷನ್ ಕಾರ್ಡು, ವೋಟರ್ ಐಡಿ ಯಾವುದೂ ಇಲ್ಲದೇ ಪಾಡು ಹೇಳತೀರದು. ಕುಡಿಯುವ ನೀರಿನ ಸಮಸ್ಯೆ ಕಾಲೋನಿಯಲ್ಲಿ ಕುಡಿಯವ ನೀರಿನದ್ದೇ ದೊಡ್ಡ ಸಮಸ್ಯೆ. ಮಳೆಗಾಲದಲ್ಲಾದರೂ ದೂರದ ಸರಕಾರಿ ಬಾವಿಯನ್ನು ಇಲ್ಲಿನ ಜನ ಅವಲಂಬಿಸಿದ್ದಾರೆ. ಬೇಸಿಗೆ ಬಂತೆಂದರೆ ಆ ಬಾವಿಯಲ್ಲಿಯೂ ನೀರಿನ ಕೊರತೆ…
Author: Editor Desk
ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿನೂತನ ರೀತಿಯಲ್ಲಿ ಆಚರಿಸಲಾಯಿತು. ಅರೇ, ಈ ಕಾರ್ಯಕ್ರಮದಲ್ಲೇನಿದೆ ವಿಶೇಷ ಎಂದು ಮೂಗು ಮುರಿಯಬೇಡಿ. ಕಾರ್ಯಕ್ರಮ ಆಯೋಜಿಸಿದ್ದು ಕನ್ನಡವನ್ನು ತನ್ನ ಉಸಿರಾಗಿಟ್ಟಕೊಂಡು ಕನ್ನಡ ಕಟ್ಟುವ ಕೆಲಸವನ್ನು ಅರ್ಥಪೂರ್ಣವಾಗಿ ಮಾಡುತ್ತಾ, ಎಲೆಯ ಮರೆಯ ಕಾಯಿಯಂತೆ ಏಕಾಂಗಿಯಾಗಿ ತನ್ನನ್ನು ತೊಡಗಿಸಿಕೊಂಡಿರುವ ಹೆಬ್ರಿಯ ಕೆ. ಗಂಗಾಧರ ರಾವ್ ಎನ್ನುವವರು. ರಾವ್ ಸರಕಾರಿ ಕಾಲೇಜೊಂದರ ಪ್ರಥಮ ದರ್ಜೆ ಸಹಾಯಕ ನೌಕರನಾಗಿ ನಿವೃತ್ತರಾದವರು. ನಿವೃತ್ತಿಯ ಬಳಿಕ ಕನ್ನಡ ರಾಜ್ಯೋತ್ಸವವನ್ನು ತಿಂಗಳು ಪೂರ್ತಿ ಅರ್ಥಪೂರ್ಣವಾಗಿ ಆಚರಿಸುವ ಅವರು ಎಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಸುಮಾರು 35 ವರ್ಷಗಳಕಾಲ ಸರ್ಕಾರಿ ಸೇವೆ ಮಾಡಿ ವಯೋನಿವೃತ್ತ ಬಳಿಕ ರಾವ್ ಕೈಗೊಂಡ ಯೋಜನೆ ಸ್ವಲ್ಪ ಭಿನ್ನವಾದುದು. ಶಾಲಾ-ಕಾಲೇಜುಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಸಾಮಾನ್ಯವಾಗಿ ಗುರುತಿಸಿ ಸನ್ಮಾನಿಸುವುದು ನೋಡುತ್ತೆವೆ. ಆದರೆ ಇದಕ್ಕೆ ಕಾರಣೀಕರ್ತರಾದ ಶಿಕ್ಷಕ-ಶಿಕ್ಷಕಿಯರನ್ನು ಗುರುತಿಸುವವರಿಲ್ಲ. ಇದನ್ನು ಗಮನಿಸಿದ ರಾವ್ ಅವರಿಗೆ ಒಂದು ಯೋಜನೆ ಸಿದ್ದಪಡಿಸಿದ್ದರು. ಜಿಲ್ಲೆಯಲ್ಲಿರುವ ಎಲ್ಲಾ ಪ್ರೌಢಶಾಲೆ ಮತ್ತು ಕಾಲೇಜುಗಳ ಶೇಕಡಾವಾರು ಫಲಿತಾಂಶದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ…
ಕುಂದಾಪುರ: ಭಾರತ ಸರಕಾರದ ಕೇಂದ್ರೀಯ ರಸ್ತೆ ನಿದಿ ಯೋಜನೆಯಿಂದ 2013-14ನೇ ಸಾಲಿನಲ್ಲಿ ಸಿದ್ದಾಪುರ ಹಳ್ಳಿಹೊಳೆ- ಜಡ್ಕಲ್ ರಸ್ತೆ ಅಭಿವೃದ್ಧಿಗೆ ಬರೋಬ್ಬರಿ 2 ಕೋಟಿ ರೂ. ಮಂಜೂರಾಗಿದ್ದು, ಒಟ್ಟು 7.20 ಕಿ. ಮೀ. ರಸ್ತೆ ಡಾಮರೀಕರಣ ಕಾಮಗಾರಿ ಅನುಷ್ಠಾನಗೊಂಡಿದೆ. ಆದರೆ ಈ ರಸ್ತೆಮಾರ್ಗದ ನಡುವಿನ 60 ಮೀ. ವ್ಯಾಪ್ತಿಯಲ್ಲಿ ಗುತ್ತಿಗೆದಾರರು ಡಾಮರೀಕರಣ ಕಾಮಗಾರಿ ನಡೆಸದೇ ಹಾಗೆಯೇ ಬಿಟ್ಟಿದ್ದರಿಂದ ಸಂಚಾರ ದುಸ್ತರಗೊಂಡಿದ್ದಲ್ಲದೇ ಸಾರ್ವಜನಿಕರಲ್ಲಿ ಸುರಕ್ಷತೆಯ ಭೀತಿಯನ್ನು ಹುಟ್ಟುಹಾಕಿದೆ. ಸಿದ್ದಾಪುರ ಹಳ್ಳಿಹೊಳೆಯಿಂದ ಜಡ್ಕಲ್ನ ಸೆಳಕೋಡು ತನಕ ಫೇವರ್ ಫಿನಿಶಿಂಗ್ ಮಾದರಿಯಲ್ಲಿ ಕಾಮಗಾರಿ ನಡೆದಿದ್ದು, ಸೆಳಕೋಡುವಿನಿಂದ ಸ್ವಲ್ಪ ಮುಂದೆ ಇಳಿಜಾರು ಮತ್ತು ತಿರುವಿನಿಂದ ಕೂಡಿದ 60 ಮೀ. ರಸ್ತೆಗೆ ಡಾಮರು ಹಾಕಲಾಗಿಲ್ಲ. ಹೊಂಡಗುಂಡಿಗಳಿಂದ ಕೂಡಿದ್ದು, ಸಂಪೂರ್ಣವಾಗಿ ಹದಗೆಟ್ಟ ಇಲ್ಲಿನ ರಸ್ತೆಗೆ ಡಾಮರು ಹಾಕದೇ ಹೀಗೇಕೆ ಬಿಟ್ಟಿದ್ದೀರಿ ಎಂಬ ಸಾರ್ವಜನಿಕರ ಪ್ರಶ್ನೆಗೆ ಗುತ್ತಿಗೆದಾರರು ಸ್ಪಷ್ಟ ಉತ್ತರ ನೀಡದೇ ಕೇವಲ ಕುಂಟುನೆಪ ಹೇಳುತ್ತಾರೆ. ಕಾಮಗಾರಿ ಅನುಷ್ಠಾನ ಮತ್ತು ಉಸ್ತುವಾರಿ ರಾಷ್ಟ್ರೀಯ ಹೆದ್ದಾರಿ ಇಲಾಖಾ ಅಭಿಯಂತರರು ಕಾಮಗಾರಿ ಪರಿಶೀಲನೆಗಾಗಿ ಸ್ಥಳಕ್ಕೇ ಬಂದಿಲ್ಲ…
ಕುಂದಾಪುರ: ಶಾಂತಿ ಕದಡುವವರು ಯಾರೇ ಆಗಿರಲಿ, ಕಾನೂನಿಗೆ ತಲೆಭಾಗದಿದ್ದರೇ ಲಾಠಿ ಬೀಸುವುದು ಖಚಿತ. ಕರಾವಳಿಯಲ್ಲಿ ಕೋಮು ವೈಷಮ್ಯ ಹಿಂದಿನಿಂದಲೂ ಇದ್ದೇ ಇದೆ. ಆದರೆ ತಮಗೆ ಶಾಂತಿ ಬೇಕೇ-ಬೇಡವೇ ಎಂಬ ಬಗ್ಗೆ ಇಲ್ಲಿನ ಜನರೇ ಯೋಚನೆ ಮಾಡಬೇಕು. ಅನಗತ್ಯವಾಗಿ ಸಂಘರ್ಷಗಳಿಗೆ ಎಡೆಮಾಡಿಕೊಡಬಾರದು. ಇದು ಪಶ್ಚಿಮ ವಲಯ ಐಜಿಪಿ ಅಮೃತ್ಪಾಲ್ ಅವರ ಖಡಕ್ ನುಡಿ. ಕುಂದಾಪುರ ಠಾಣಾ ಪರಿವೀಕ್ಷಣೆಗೆ ಆಗಮಿಸಿದ ಅವರು ಕರಾವಳಿಯಲ್ಲಿ ಕೋಮು ಸಂಘರ್ಷ, ಶಾಂತಿ ಕದಡುವ ಪ್ರಯತ್ನ ಜಾಸ್ತಿಯಾಗುತ್ತಿದೆಯಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಕುಂದಾಪುರದಲ್ಲಿ ಇನ್ನು ಒಂದು ವರ್ಷದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯಾಗಲಿದೆ. ಕೋಮು ಸೂಕ್ಷ್ಮ ಪ್ರದೇಶವಾದ ಕಂಡ್ಲೂರಿನಲ್ಲಿಯೇ ಠಾಣೆ ಆರಂಭಿಸುವುದು ಬಹುತೇಕ ಖಚಿತ ಎಂದವರು ಹೇಳಿದರು. (ಕುಂದಾಪ್ರ ಡಾಟ್ ಕಾಂ ವರದಿ) ಹಳೆ ಕೊಲೆ ಪ್ರಕರಣಗಳನ್ನು ರೀ ಓಪನ್ ಮಾಡಲಾಗುವುದು: ಕುಂದಾಪುರದ ಹೃದಯ ಭಾಗದಲ್ಲಿ ನಡೆದ ಸುಬ್ರಾಯ್ ಹೊನ್ನಾವರ್ ಶೂಟೌಟ್, ಬೆಳ್ವೆ ಉದಯಕುಮಾರ್ ಶೆಟ್ಟಿ, ಕುಸುಮಾ ಕೊಲೆ ಸೇರಿದಂತೆ 2005ರ ನಂತರ ಕುಂದಾಪುರ ತಾಲೂಕಿನಲ್ಲಿ ನಡೆದ ಎಲ್ಲಾ ಪ್ರಕರಣಗಳ ತನಿಕೆಯನ್ನು ಮತ್ತೆ…
ಭರತೇಶ ಅಲಸಂಡೆಮಜಲು * ನಾನು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಹತ್ತಿರದ ಎಳನೀರು ಘಟ್ಟದ ಬಂಗ್ರಬಾಳಿಗೆಯವಳು. ಪಶ್ಚಿಮ ಘಟ್ಟವೇ ನನ್ನ ಮೂಲಸ್ಥಾನ, ಬೆಳೆದದ್ದು ದಕ್ಷಿಣ ಕನ್ನಡದ ಉಪ್ಪಿನಂಗಡಿ ಹತ್ತಿರ, ಸೇರುವುದು ಅರಬ್ಬೀ ಸಮುದ್ರವನ್ನು… ನನ್ನ ಜೊತೆ ಎಳನೀರು ಹೊಳೆ, ಬಂಡಾಜೆ ಹೊಳೆ, ಮೃತ್ಯುಂಜಯ ಹೊಳೆ, ನೇರಿಯಾ ಹೊಳೆ, ಕೆಂಪು ಹೊಳೆ, ಹನಿಯೂರು ಹೊಳೆ, ಸುನಾಲ ಹೊಳೆ, ಕಪಿಲಾ ಹೊಳೆ, ಕುಮಾರಧಾರ ಹೀಗೆ ಸೋದರ-ಸೋದರಿಯರು. ನಮ್ಮದು ಪರ್ವತ ರಾಜ, ಮೇಘರಾಜ, ವಾಯುರಾಜರನ್ನೊಳಗೊಂಡ ತುಂಬು ಸಂಸಾರ, ಒಬ್ಬರನೊಬ್ಬರು ಬಿಟ್ಟಿರಲಾರದ ಪಾಕೃತಿಕ ಬಂಧನ. ಹೌದು ಈಗ ಗೊತ್ತಗಿರಬಹುದು ನಿಮಗೆ ನಾನರೆಂದು. ಅದೇ ನಿಮ್ಮ ನೇತ್ರಾವತಿ ನಾನು. ನನ್ನ ಜೀವನವೇ ಹೀಗೆ ಎಲ್ಲಿಯೂ, ಯಾರನ್ನೂ ಕಾಯದೇ ನಿರಂತರವಾಗಿ ಹರಿದು ಜಗತ್ತಿಗೆ ತುಳುನಾಡಿನ ಸೌಂದರ್ಯದ ಬಸಿರ ತೋರಿಸಿ, ನರಳುವವರಿಗೆ ಹಸಿರಿನ ನೆರಳಾಗಿ ಹರಿದು ಹರಿದು ಒಂದು ದಿನ ಮಹಾಸಾಗರದಲ್ಲಿ ಬೆರೆತು ಮರೆಯಾಗುತ್ತೇನೆ. ಚಿನ್ನಾಟ ಆಡುತ್ತಾ ಹಿಂಗಾರು- ಮುಂಗಾರು ಮಾರುತಗಳ ಜೊತೆ ಬರುವ ಮೋಡಗಳನ್ನು ಎದೆಯೊಡ್ಡಿ ನಿಲ್ಲಿಸಿದ ಪಶ್ಚಿಮಘಟ್ಟ ತುಳುನಾಡಿಗೆ,…
ನರೇಂದ್ರ ಎಸ್. ಗಂಗೊಳ್ಳಿ ಇವತ್ತಿಗೆ ಸರಿಯಾಗಿ ಇಪ್ಪತ್ತೈದು ವರುಷಗಳ ಹಿಂದಿನ ಮಾತು. ಅ೦ದರೆ 1990ನೇ ಇಸವಿ ಸೆಪ್ಟೆಂಬರ್ 30ನೇ ತಾರೀಕು. ಆ ದಿನ ಬೆಳಕು ಹರಿಯುತ್ತಿದ್ದ೦ತೆ ಸಮಸ್ತ ಕನ್ನಡಿಗರ ಪಾಲಿಗೆ ಬರಸಿಡಿಲಿನ೦ತಹ ಸುದ್ದಿಯೊಂದು ಬ೦ದೆರಗಿತ್ತು. ಕನ್ನಡ ಚಿತ್ರರಂಗದ ವಿಭಿನ್ನ ಕನಸುಗಾರ ನಟ, ನಿರ್ದೇಶಕ ಶಂಕರ್ ನಾಗ್ ಕಾರು ಅಪಘಾತದಲ್ಲಿ ನಿಧನರಾಗಿದ್ದರು. ಯಾರೆಂದರೆ ಯಾರು ಕೂಡ ಆ ಸುದ್ದಿಯನ್ನು ನ೦ಬಲು ತಯಾರಿರಲಿಲ್ಲ. ಇನ್ಫ್ಯಾಕ್ಟ್ ಅ೦ತಾದ್ದೊ೦ದು ವ್ಯಕ್ತಿತ್ವವನ್ನು ಕಳೆದುಕೊಳ್ಳುವುದು ಯಾರಿಗೂ ಕೂಡ ಬೇಕಿರಲಿಲ್ಲ. ಆದರೆ ಆ ದಿನದ ಸತ್ಯ ತು೦ಬಾ ಕಹಿಯಾಗಿಯೇ ಇತ್ತು. ಶ೦ಕರ್ ನಾಗ್ ಇನ್ನೆಂದೂ ಬಾರದ ಲೋಕಕ್ಕೆ ಹೊರಟುಹೋಗಿಯಾಗಿತ್ತು. ಹೌದು. ಶಂಕರ್ ನಾಗ್ ನಮ್ಮನ್ನು ಅಗಲಿ ಇವತ್ತಿಗೆ ಸರಿಯಾಗಿ ಇಪ್ಪತ್ತೈದು ವರುಷಗಳು ಕಳೆದುಹೋಗಿವೆ. ಹಾಗೆ ಬರೋಬ್ಬರಿ ಅಷ್ಟೊಂದು ವರ್ಷಗಳ ಬಳಿಕವೂ ಕನ್ನಡ ಚಿತ್ರರಂಗದಿಂದ ಹಿಡಿದು ಆಟೋ ಡ್ರೈವರ್ ವರೆಗೂ, ಅಭಿಮಾನಿಗಳಷ್ಟೇ ಏಕೆ ಶಂಕರ್ ನಾಗ್ ಕುರಿತು ಅಷ್ಟಾಗಿ ತಿಳಿದಿರದವರಿಗೂ ಕೂಡ ಅವನೊಬ್ಬಇರ್ಬೇಕಿತ್ತು ಅಂತ ಈ ಹೊತ್ತಿಗೂ ಅನ್ನಿಸ್ತಿದ್ರೆ, ಶ೦ಕರ್ ಬಗೆಗೆ ಮಾತು ಬಂದಾಗಲೆಲ್ಲಾ…
ಇಂದು ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ. ಅಪರ ಉಜಿರೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನವು ಕಳೆದ ತಿಂಗಳು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಳದ ಆವರಣದಲ್ಲಿ ಮೂರು ದಿನಗಳ ಅರ್ಥಪೂರ್ಣವಾಗಿ ನಡೆಯಿತು. ಸಮ್ಮೇಳನಕ್ಕೆ ಆಗಮಿಸಿದ್ದವರೆಲ್ಲರೂ ಅಲ್ಲಿನ ವ್ಯವಸ್ಥೆಯನ್ನು ಮುಕ್ತಮನಸ್ಸಿನಿಂದ ಶ್ಲಾಘಿಸಿದರು. ಅದಕ್ಕೆ ಕಾರಣವೂ ಇದೆ. ಅಲ್ಲಿನ ವೇದಿಕೆ, ಊಟೋಪಚಾರ, ಅಲಂಕಾರ, ಸ್ವಚ್ಛತೆ ಹೀಗೆ ಹಲವಾರು ಸಮಿತಿಗಳಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ದುಡಿದವರು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು. ಇದು ಒಂದು ಉದಾಹರಣೆಯಷ್ಟೆ, ಇಂತಹ ನೂರಾರು ಕಾರ್ಯಕ್ರಮಗಳಲ್ಲಿ ಎನ್ಎಸ್ಎಸ್ ಸ್ವಯಂಸೇವಕರ ಪರಿಶ್ರಮವಿರುತ್ತದೆ. ಅಷ್ಟರ ಮಟ್ಟಿಗೆ ಇದು ವಿದ್ಯಾರ್ಥಿಗಳ ಬದುಕನ್ನು ರೂಪಿಸಿರುತ್ತದೆ. ಈ ವಿಚಾರವನ್ನು ನೆನಪಿಸಲು ಇದು ಒಳ್ಳೆಯ ಸಂದರ್ಭವೆನಿಸುತ್ತದೆ. ಏಕೆಂದರೆ, ’ಸೇವೆಯ ಸವಿಜೇನ ಸವಿಯೋಣ ಬನ್ನಿ, ಸೇವೆಯ ಸವಿಜೇನ ಹಂಚೋಣ ಬನ್ನಿ’ ಎನ್ನುತ್ತಲೇ ಇಂದು ರಾಷ್ಟ್ರದಾದ್ಯಂತ ಯುವಜನತೆಯಲ್ಲಿ ಸೇವಾ ಮನೋಭಾವವನ್ನು ಬಿತ್ತುವಲ್ಲಿ ಯಶಸ್ವಿಯಾಗಿರುವ ರಾಷ್ಟ್ರೀಯ ಸೇವಾ ಯೋಜನೆಗೆ ನಲವತ್ತೈದರ ಸಂಭ್ರಮ. ಭಾರತವನ್ನು ರಾಮರಾಜ್ಯವನ್ನಾಗಿಸಲು ಯುವಪಡೆಯೊಂದು ಸಿದ್ಧಗೊಳ್ಳಬೇಕೆಂದು ಮಹಾತ್ಮಾ…
ಬೈಂದೂರು: ಉಡುಪಿ ಜಿಲ್ಲೆಯ ಧಾರ್ಮಿಕ, ಸಾಹಿತ್ಯಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವಲಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ವ್ಯಕ್ತಿ ಉಪ್ಪುಂದ ಚಂದ್ರಶೇಖರ ಹೊಳ್ಳ. ಹುಟ್ಟು ಹೋರಾಟಗಾರರಾಗಿ ತನ್ನ ಕ್ರೀಯಾಶೀಲ ವ್ಯಕ್ತಿತ್ವ ಹಾಗೂ ನಗುಮೊಗದಿಂದ ಹತ್ತಿರವಾಗುವ, ಯಾವುದನ್ನೂ ಸಂಪೂರ್ಣವಾಗಿ ಇಲ್ಲ ಎನ್ನದೇ ಎಲ್ಲವನ್ನೂ, ಎಲ್ಲರನ್ನೂ ಒಳಗೊಂಡು ಸಮನ್ವಯ ಸಾಧಿಸುವ ಸಮಗ್ರ ವ್ಯಕ್ತಿತ್ವ ಹೊಳ್ಳರದು. ಸಾಂಸ್ಕೃತಿಕ ಸಂಘಟಕರಾಗಿ ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, 74ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ್ಯದರ್ಶಿಯಾಗಿ, ಹತ್ತಾರು ಸಂಘ ಸಂಸ್ಥೆಗಳ ಸ್ಥಾಪನೆಗೆ ಕಾರಣೀಕರ್ತರಾಗಿ ಅದರ ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ, ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಹೊಳ್ಳರು, ಸಾಹಿತಿಯಾಗಿ ಉದಯರವಿ, ವಡ್ಡರ್ಸೆ ರಘುರಾಮ ಶೆಟ್ಟಿ ಕೊನೆಯ ದಿನಗಳು, ಉಪ್ಪುಂದ ಹೊಳ್ಳರ ಕುಟುಂಬದ ಪರಿಚಯ, ಕುಂದನಾಡು, ಸುಮೇರುವಿನ ಸನ್ನಿಧಿಯಲ್ಲಿ, ಹೀಗೊಂದು ದಾರಿ ಸೇರಿದಂತೆ ಹತ್ತಾರು ಸಾಹಿತ್ಯ ಕೃತಿಗಳನ್ನು ರಚಿಸಿ, ಕುಂದ ಅಧ್ಯಯನ ಕೇಂದ್ರದ ಮೂಲಕ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಧಾರ್ಮಿಕ ನೇತಾರರಾಗಿ ಅನೇಕ ಗ್ರಾಮೀಣ ಪ್ರದೇಶದ ದೇವಾಲಯಗಳ ಜೀರ್ಣೋದ್ಧಾರ…
ಕುಂದಾಪುರ: ಕಳೆದ 12ವರ್ಷಗಳಿಂದ ನಗರದ ಸ್ವಂತ ಜಾಗದಲ್ಲಿ ಕಾರ್ಯಾಚರಿಸುತ್ತಿರುವ ಕುಂದಾಪುರ ಉಪವಿಭಾಗದ ಮಹಿಳಾ ಪೊಲೀಸ್ ಠಾಣೆ ಸ್ಥಳಾಂತರಗೊಳ್ಳುವ ಭೀತಿ ತಾಲೂಕಿನ ನಾಗರೀಕರಲ್ಲಿ ಎದುರಾಗಿದೆ. ನಗರಸಭೆಯಾಗುವತ್ತ ದಾಪುಗಾಲಿಟ್ಟಿರುವ ಕುಂದಾಪುರದಲ್ಲಿ ಮಹಿಳಾ ಪೊಲೀಸ್ ಠಾಣೆಯು ಅನಗತ್ಯವಾಗಿ ಕಂಡುಬಂದುದರ ಹಿಂದಿನ ಕಾರಣ ಮಾತ್ರ ನಿಗೂಡವಾಗಿದೆ. 2003ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ವಿನ್ನಿಫ್ರೆಡ್ ಅವರ ವಿಶೇಷ ಮುತುವರ್ಜಿಯಿಂದಾಗಿ ಅಂದಿನ ಮಂತ್ರಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರಿಂದ ಮಹಿಳಾ ಪೊಲೀಸ್ ಠಾಣೆ ಮಂಜೂರಾಗಿತ್ತು. ಎಲ್.ಐ.ಸಿ ರೋಡ್ ನ ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಈ ಠಾಣೆಯ ಮೂಲಕವೇ ಕುಂದಾಪುರ ಉಪವಿಭಾಗದ ಎಲ್ಲಾ ಮಹಿಳಾ ಸಂಬಂಧಿ ಪ್ರಕರಣಗಳು ವಿಲೇವಾರಿಯಾಗುತ್ತಿದೆ. ಇದರಿಂದ ಈ ಭಾಗದ ಮಹಿಳೆಯರಿಗೂ ಸಾಕಷ್ಟು ಅನುಕೂಲವಾಗುತ್ತಿದೆ. ಇದೀಗ ಠಾಣೆ ಸ್ಥಳಾಂತರಗೊಂಡರೆ ಸಣ್ಣ ಪ್ರಕರಣಗಳಿಗೂ ಗ್ರಾಮೀಣ ಭಾಗದವರು ಉಡುಪಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಲಿದೆ. ಉಡುಪಿ ಜಿಲ್ಲೆಯ ಬೇರೆ ನಗರಗಳಿಗೆ ಹೋಲಿಸಿದರೇ ಕುಂದಾಪುರ ವಿಭಾಗದಲ್ಲಿ ಅತಿಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು ಸದ್ಯ ಠಾಣೆಯಲ್ಲಿ ಪೊಲೀಸ್ ಉಪನಿರೀಕ್ಷಕರು, ಇಬ್ಬರು ಸಹಾಯಕ ಉಪನಿರೀಕ್ಷಕರು, ಎರಡು ಮಂದಿ ಮುಖ್ಯಪೇದೆ ಸೇರಿದಂತೆ ಇಪ್ಪತ್ತೊಂದು…
ಕು೦ದಾಪುರ: ಮನಸ್ಸು ತೆರೆದ ಕನ್ನಡಿಯ೦ತಾಗಬೇಕು ಮತ್ತು ಪ್ರತಿಯೊಬ್ಬರೂ ಅದರಲ್ಲಿ ತಮ್ಮ ಪ್ರತಿಬಿ೦ಬವನ್ನು ಮೊದಲು ನೋಡಿಕೊಳ್ಳಬೇಕು. ಪೂರ್ವಗ್ರಹ ಪೀಡಿತ ಆಲೋಚನೆಗಳು ನಿರ್ಧಾರಗಳು ಇಡೀ ವ್ಯಕ್ತಿತ್ವವನ್ನೇ ಹಾಳುಮಾಡುತ್ತವೆ ಎ೦ದು ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇ೦ದ್ರ ಎಸ್ ಗ೦ಗೊಳ್ಳಿ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಪದವಿಪೂರ್ವ ಮತ್ತು ಪದವಿ ತರಗತಿಗಳ ವಿದ್ಯಾರ್ಥಿಗಳಿಗಾಗಿ ನಡೆದ ಜೀವನ ಮೌಲ್ಯ ಶಿಕ್ಷಣ ಶಿಬಿರದಲ್ಲಿ ಸಮಾಜಿಕ ಮೌಲ್ಯಗಳು ಮತ್ತು ನಾವು ಎನ್ನುವ ವಿಚಾರದ ಕುರಿತ೦ತೆ ಉಪನ್ಯಾಸ ನೀಡಿದರು. ಮನುಷ್ಯನ ವ್ಯಕ್ತಿತ್ವ ಮತ್ತು ಒ೦ದು ಸಮಾಜದ ಅಭಿವೃದ್ಧಿಗೆ ಪೂರಕವಾಗುವ೦ತಹ ಎಲ್ಲಾ ನಡೆನುಡಿಗಳು ಮೌಲ್ಯಗಳೇ.ಹಾಗಾಗಿ ನಮ್ಮ ನಿತ್ಯ ಜೀವನದಲ್ಲಿ ಒಳ್ಳೆಯ ಆಚಾರ ವಿಚಾರಗಳನ್ನು ಆಳವಡಿಸಿಕೊಳ್ಳುವಲ್ಲಿ ನಾವು ಗಮನಹರಿಸಬೇಕು. ಯಶಸ್ಸು ಒ೦ದೇ ಸಲಕ್ಕೆ ದೊರೆಯುವ೦ತದ್ದಲ್ಲ.ಪರಿಪೂರ್ಣತೆ ಸಾಧ್ಯವಿಲ್ಲದಿರಬಹುದು ಆದರೆ ಅದರೆಡೆಗೆ ಸಾಗುವ ನಮ್ಮ ಪ್ರಯತ್ನ ನಿರ೦ತರವಾಗಿರಬೇಕು. ಅವಮಾನಕ್ಕೆ ಪ್ರತೀಕಾರವನ್ನು ನಮ್ಮ ಬದುಕಿನ ಧನಾತ್ಮಕ ಬೆಳವಣಿಗೆಯ ಮೂಲಕ ತೋರಿಸಿಕೊಡಬೇಕು ಎ೦ದು ಅವರು ಹೇಳಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ರೂಪಾ ಸ್ವಾಗತಿಸಿದರು.ಪದವಿಪೂರ್ವ…
