Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » 6 ದೇಶದಲ್ಲಿ ಕಲಿತ ಹುಡುಗಿ ಎಸ್.ಎಸ್.ಎಲ್.ಸಿ ಓದಿದ್ದು ಕುಂದಾಪುರದಲ್ಲಿ. ಶ್ರೇಯಾಗೆ ಕನ್ನಡದಲ್ಲಿ 99 ಮಾರ್ಕ್ಸ್!
    Recent post

    6 ದೇಶದಲ್ಲಿ ಕಲಿತ ಹುಡುಗಿ ಎಸ್.ಎಸ್.ಎಲ್.ಸಿ ಓದಿದ್ದು ಕುಂದಾಪುರದಲ್ಲಿ. ಶ್ರೇಯಾಗೆ ಕನ್ನಡದಲ್ಲಿ 99 ಮಾರ್ಕ್ಸ್!

    Updated:17/05/2016No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕನ್ನಡ ತಿಳಿಯದ ಹುಡುಗಿಯ ಛಲಕ್ಕೆ ದಕ್ಕಿತು ಕನ್ನಡದಲ್ಲಿ 99 ಅಂಕ !

    Click Here

    Call us

    Click Here

    ಕುಂದಾಪ್ರ ಡಾಟ್ ಕಾಂ ವರದಿ.
    ಕುಂದಾಪುರ: ಒಂದನೇ ತರಗತಿಯಿಂದ 9ನೇ ತರಗತಿವರೆಗೆ ಪ್ರಪಂಚದ ಆರು ದೇಶಗಳಲ್ಲಿ ಓದಿದ ಹುಡುಗಿ ಹತ್ತನೇ ತರಗತಿ ಓದಿಗೆ ಆಯ್ದುಕೊಂಡದ್ದು ಕುಂದಾಪುರದ ಶಾಲೆಯನ್ನು. ಹನ್ನೊಂದು ವರ್ಷಗಳಿಂದ ಕನ್ನಡ ಓದದೇ ದೇಶ-ವಿದೇಶ ಸುತ್ತಿದ್ದಹುಡುಗಿ ಶ್ರೇಯಾ ಗಣಪತಿ, ಎಸ್.ಎಸ್.ಎಲ್.ಸಿಗೆ ಕುಂದಾಪುರ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡವನ್ನು ದ್ವಿತೀಯ ಭಾಷೆಯಾಗಿ ಆಯ್ದುಕೊಂಡು 100ರಲ್ಲಿ 99 ಅಂಕಗಳಿಸಿ ಕನ್ನಡ ಪ್ರೀತಿ ಮೆರೆದಿದ್ದಾಳೆ.

    ಹೆಬ್ರಿ ಸಮೀಪದ ಸಂತೆಕಟ್ಟೆಯ ಗಣಪತಿ ಕಾಮತ್ ಹಾಗೂ ಕುಂದಾಪುರದ ಶುಭಾ ಕಾಮತ್ ಅವರ ಪುತ್ರಿಯಾಗಿರುವ ಶ್ರೇಯಾಗೆ ಎಲ್ಕೆಜಿ ಯಿಂದ ಶಿಕ್ಷಣಾಭ್ಯಾಸವನ್ನು ಆರಂಭಿಸಿದ ಬಳಿಕ ಇಲ್ಲಿಯವರೆಗೆ ಭಾರತ ಸೇರಿದಂತೆ ವಿಶ್ವದ ಆರು ಬೇರೆ ಬೇರೆ ದೇಶಗಳಲ್ಲಿ ಶಿಕ್ಷಣ ಪಡೆಯುವಂತಾಗಿತ್ತು. ಸಾರ್ಕ್ ನಲ್ಲಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ತಂದೆ ಗಣಪತಿ ಕಾಮತ್ ಉದ್ಯೋಗ ಕಾರಣದಿಂದ ಕೀನ್ಯಾ, ನೈಜೇರಿಯಾ, ತಾಂಜೇನಿಯಾ, ಭೂತಾನ್, ಉಗಾಂಡದಲ್ಲಿ ವಾಸಿಸುತ್ತಿದ್ದಾಗ ಅವರೊಂದಿಗೆ ಕುಟುಂಬವೂ ತೆರಳಿತ್ತು. ಕುಂದಾಪ್ರ ಡಾಟ್ ಕಾಂ ವರದಿ. ವಿದೇಶದಲ್ಲಿದ್ದಾಗ ಆಂಗ್ಲ ಮಾಧ್ಯಮವನ್ನೂ, ಭಾರತದ ಮುಂಬಯಿ, ಹುಬ್ಬಳ್ಳಿ, ತುಮಕೂರುಗಳಲ್ಲಿ ನೆಲೆಸಿದ್ದಾಗ ಅಲ್ಲಿನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದ್ವಿತೀಯ ಭಾಷೆಯನ್ನಾಗಿ ಇತರೆ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳುವ ಅನೀವಾರ್ಯತೆ ಇದ್ದಿದ್ದರಿಂದ  ಕನ್ನಡದ ಕಲಿಯದೇ ಉಳಿದಿದ್ದಳು ಶ್ರೇಯಾ. ಒಂಬತ್ತನೇ ತರಗತಿವರೆಗಿನ ಪುತ್ರಿಯ ಶಿಕ್ಷಣದಲ್ಲಿ ಏರುಪೇರಾಗುತ್ತಿರುವುದನ್ನು ಗಮನಿಸಿದ ಪೋಷಕರು, ಹತ್ತನೇ ತರಗತಿಯ ಶಿಕ್ಷಣಾಭ್ಯಾಸವನ್ನು ಕುಂದಾಪುರದಲ್ಲಿಯೇ ಪೂರೈಸುವ ತೀರ್ಮಾನ ಮಾಡಿದ್ದರು. ಶ್ರೇಯಾಳ ತಾಯಿಯ ತಂದೆ, ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಉಪನ್ಯಾಸಕ ಮೋಹನ್ದಾಸ್ ಪೈ ಅವರ ಸಲಹೆಯಂತೆ ಕುಂದಾಪುರದಲ್ಲಿಯೇ ತಾಯಿಯೊಂದಿಗೆ ನೆಲೆಸಿ ಹೊಲಿ ರೋಜರಿ ಶಾಲೆಗೆ ಸೇರಿದ್ದಳು. ಕುಂದಾಪ್ರ ಡಾಟ್ ಕಾಂ ವರದಿ.

    ಮನೆಯಲ್ಲಿ ಕೊಂಕಣಿ, ಇಲ್ಲಿಯವರೆಗೆ ಕಲಿತದ್ದು ಇಂಗ್ಲಿಷ್ ಸೇರಿದಂತೆ ಇತರೇ ಭಾಷೆ. ಆದರೂ ಹತ್ತನೇ ತರಗತಿಯಲ್ಲಿ ಕನ್ನಡ ಭಾಷೆಯ ಮೇಲಿನ ಪ್ರೀತಿಯಿಂದಲೇ ಎರಡನೇ ಭಾಷೆಯನ್ನಾಗಿ ಕನ್ನಡವನ್ನುಆಯ್ಕೆ ಮಾಡಿಕೊಂಡಿದ್ದಳು ಶ್ರೇಯಾ. ಓದಲು, ಬರೆಯಲು ಬಾರದ ಕನ್ನಡ ಭಾಷೆಯನ್ನು ಸವಾಲಾಗಿ ಸ್ವೀಕರಿಸಿದ ಆಕೆಯಲ್ಲಿ ಕನ್ನಡ ಕಲಿಯಬೇಕು ಎನ್ನುವ ಛಲವಿತ್ತು. ಈ ಬಾರಿಯ ಪರೀಕ್ಷೆಯಲ್ಲಿ ಒಟ್ಟು 600 ಅಂಕವನ್ನು ಪಡೆದುಕೊಂಡಿರುವ ಆಕೆ ಪ್ರಥಮ ಭಾಷೆಯಾಗಿರುವ ಇಂಗ್ಲೀಷಿಗಿಂತ ಕನ್ನಡದಲ್ಲಿಯೇ ಹೆಚ್ಚು ಅಂಕವನ್ನು ಪಡೆದು ಕನ್ನಡದ ಹುಡುಗಿ ಎನಿಸಿಕೊಂಡಿದ್ದಾಳೆ ಶ್ರೇಯಾ. ಕುಂದಾಪ್ರ ಡಾಟ್ ಕಾಂ ವರದಿ.

    ಶ್ರೇಯಾಳ ಸಾಧನೆಯನ್ನು ಪ್ರಶಂಸಿಸುವ ಶಾಲೆಯ ಮುಖ್ಯೋಪಾಧ್ಯಾಯಿನಿ ಜೋಯ್ಸ್ಲೀನ್ ಎ.ಸಿ ಹಾಗೂ ಕನ್ನಡ ಅಧ್ಯಾಪಕ ಪ್ರಶಾಂತ ಲೂಯಿಸ್, ಕ್ಲಾಸಿನಲ್ಲಿ ಒಮ್ಮೆ ಹೇಳಿದ್ದನ್ನು ಕೇಳಿದರೆ ಸಾಕು ಅದು ಆಕೆಯ ಮನ:ಸ್ಪಟಲದಲ್ಲಿ ಗಟ್ಟಿಯಾಗಿ ಕುಳಿತುಕೊಳ್ಳುತ್ತದೆ. ಕೇವಲ ಕಲಿಯುವಿಕೆಯಲ್ಲಿ ಮಾತ್ರವಲ್ಲ ಚಿತ್ರಕಲೆ, ಈಜು, ಕಥೆ, ಕವನ, ಸ್ಕೇಟಿಂಗ್, ಹಾಡು, ಡ್ಯಾನ್ಸ್ ಸೇರಿದಂತೆ ಪಠ್ಯೇತರ ಚಟುವಟಿಕೆಯಲ್ಲಿಯೂ ಆಕೆಯದು ವಿಶಿಷ್ಠ ಸಾಧನೆ. ಕನ್ನಡ ಭಾಷೆಯ ಮೇಲಿನ ಆಕೆಯ ಹಿಡಿತ ಮೆಚ್ಚಲೇಬೇಕಾದ್ದು ಎನ್ನುತ್ತಾರೆ. ತಾಯಿಯೂ ಮಗಳ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. / ಕುಂದಾಪ್ರ ಡಾಟ್ ಕಾಂ ವರದಿ./

    Click here

    Click here

    Click here

    Call us

    Call us

    Like this:

    Like Loading...

    Related

    SSLC - Shreya Ganapathi 99 marks in Kannada
    Share. Facebook Twitter Pinterest LinkedIn Tumblr Telegram Email
    ಸುನಿಲ್ ಹೆಚ್. ಜಿ. ಬೈಂದೂರು
    • Website
    • Facebook
    • X (Twitter)
    • LinkedIn

    ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

    Related Posts

    ಸೈಕಲ್‌ನಲ್ಲಿ 3,300 ಕಿಮೀ ಕ್ರಮಿಸಿ ಲಡಾಕ್ ಯಾತ್ರೆ ಪೂರೈಸಿದ ಹಳ್ಳಿಹೊಳೆಯ ಯುವಕ ದಿನೇಶ್‌ ಬೋವಿ

    30/09/2025

    ಶಿಥಿಲ ಮನೆಯಲ್ಲಿಯೇ 12 ಮಂದಿ ವಾಸ. ಇದು ಅಸಹಾಯಕ ಕುಟುಂಬದ ಕಣ್ಣೀರ ಕಥೆ

    03/08/2024

    ಹುಲ್ಕಡಿಕೆ ಜನರ ಬದುಕಿಗಿಲ್ಲ ಭರವಸೆ! ಅಪಾಯಕಾರಿ ಹೊಳೆದಾಟಿ ಶಿಕ್ಷಣ ಪಡೆಯುತ್ತಿರುವ ವಿಶೇಷ ಚೇತನ ಮಕ್ಕಳು

    02/07/2024

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಕೋಡಿ ಉಂಜಲೋತ್ಸವ, ಪುಷ್ಪಯಾಗ ಮಹೋತ್ಸವ ಚಪ್ಪರ ಮುಹೂರ್ತ
    • ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ
    • ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ
    • ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್‌ಶಿಪ್ ಗರಿ 
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಸಂಪನ್ನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d