Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಮೌಂಟ್ ಎವರೆಸ್ಟ್ ಏರಿದ ಕುಂದಾಪುರ ಮೂಲದ ಯುವಕ ಹರ್ಷದ್ ರಾವ್
    Recent post

    ಮೌಂಟ್ ಎವರೆಸ್ಟ್ ಏರಿದ ಕುಂದಾಪುರ ಮೂಲದ ಯುವಕ ಹರ್ಷದ್ ರಾವ್

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ
    ಸಾಧಿಸುವ ಛಲ, ಪೂರಕ ಧೈರ್ಯ, ಜೊತೆಯಲ್ಲಿ ಆತ್ಮವಿಶ್ವಾಸ ಇದ್ದರೆ ಅಸಾಧ್ಯವೆಂಬುವುದನ್ನು ಸಾಧಿಸಬಹುದು ಎನ್ನುವುದಕ್ಕೆ ಆರ್ಡಿಯ ಹರ್ಷಾದ್ ರಾವ್ ಅವರೇ ಜ್ವಲಂತ ಸಾಕ್ಷಿ. ಇವರು ಮಾಡಿರುವುದು ಅಂತಿಂಥ ಸಾಧನೆಯಲ್ಲ ವಿಶ್ವದ ಅತೀ ಎತ್ತರದ 8,848 ಮೀ. ಎತ್ತರದ ಮೌಂಟ್ ಎವರೆಸ್ಟ್ ಶಿಖರದ ತುತ್ತ ತುದಿ ಏರಿದ್ದು. ಮೂಲತಃ ಕುಂದಾಪುರ ತಾಲೂಕಿನ ಆರ್ಡಿಯ ಕೆರ್ಜಾಡಿಯ ಯುವಕ ಹುಬ್ಬೆರಿಸುವ ಮೇರು ಸಾಧನೆ ಮಾಡಿದ್ದಾರೆ.

    Click Here

    Call us

    Click Here

    ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಯಾದ ಕಮಲಾಕ್ಷ ಮಹಾಲಿಂಗ ರಾವ್ ಮತ್ತು ಹೇಮಾಲತಾ ದಂಪತಿಗಳ ಪುತ್ರ ಹರ್ಷದ್ ಕಮಲಾಕ್ಷ ರಾವ್ ಈ ಸಾಧನೆ ಮಾಡಿರುವ ಅಪ್ರತಿಮ ಸಾಧಕ. ಪುಣೆಯಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಿರುವ ಹರ್ಷದ್ ಮೇ.21ರಂದು ಎವರೆಸ್ಟ್ ತುತ್ತ ತುದಿ ತಲುಪಿ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಈ ಸಾಧನೆ ಮಾಡಲು ಅವರು ೮ ತಿಂಗಳುಗಳ ಕಾಲ ತಯಾರಿ ನಡೆಸಿದ್ದಾರೆ. ಸುಮಾರು ೨೮ಲಕ್ಷಕ್ಕೂ ಹೆಚ್ಚು ಹಣ ವಿನಿಯೋಗಿಸಿದ್ದಾರೆ. ಮಾ.29ರಂದು ಪರ್ವತಾರೋಹಣಕ್ಕೆ ಮುಂದಾದ ಅವರು ಕೊನೆಗೂ ಛಲದಿಂದ ಕುಂದಾಪುರದ ಯುವಕ ಎವರೆಸ್ಟ್ ಶಿಖರ ಏರಿದ ಸಾಧನೆ ಮಾಡಿದ್ದಾರೆ.

    ಹರ್ಷದ್ ತಂದೆ ಕಮಲಾಕ್ಷ ಮಹಾಲಿಂಗ ರಾವ್ ಆರ್ಡಿ ಸಮೀಪದ ಕೆರ್ಜಾಡಿಯವರು. ಬ್ಯಾಂಕ್ ಅಧಿಕಾರಿಯಾಗಿ ಉತ್ತಮ ಹೆಸರು ಗಳಿಸಿದವರು. ಇವರ ಸುಪುತ್ರನೇ ಹರ್ಷಾದ್ ಕಮಲಾಕ್ಷ ರಾವ್. ಬಿಎಸ್‌ಸಿ ಪದವೀಧರರಾಗಿರುವ ಇವರು ವೃತ್ತಿಯಲ್ಲಿ ಕಂಪ್ಯೂಟರ್ ಇಂಜಿನಿಯರ್. ವೃತ್ತಿಯ ಜಂಜಾಡದ ನಡುವೆ ಇವರು ಖುಷಿ ಪಡುವುದು ಪ್ರಕೃತಿ, ಪರಿಸರದ ನಡುವೆ ಚಾರಣ, ಪರ್ವತ ಆರೋಹಣದ ಮೂಲಕ. ಬಾಲ್ಯದಿಂದಲೇ ಸಾಹಸಿ ಮನೋಭಾವ ಬೆಳೆಸಿಕೊಂಡಿರುವ ಈ ಕನ್ನಡಿಗ ಬಾಲ್ಯದಲ್ಲಿ ಗಿರಿ, ಶಿಖರಗಳನ್ನು ಕಂಡಾಗ ಕುತೂಹಲ ಹೊಂದಿದ್ದರು. ಪರ್ವತದ ಶಿಖರ ಮುಟ್ಟಬೇಕು ಎನ್ನುವ ತುಡಿತ ಇವರದ್ದಾಗಿರುತ್ತಿತ್ತು. ಈ ಆಸಕ್ತಿಗೆ ಹೆತ್ತವರು, ಸ್ನೇಹಿತರು ಪ್ರೋತ್ಸಾಹ ನೀಡಿದರು. ಅದರಿಂದ ಹರ್ಷದ್ ಇವತ್ತು ಹತ್ತಾರು ಪರ್ವತಗಳ ಏರಿದ ಕೀರ್ತಿ ಸಂಪಾದಿಸಿದ್ದಾರೆ. ಅವುಗಳಲ್ಲಿ ಮುಕುಟಪ್ರಾಯವಾದುದು ಮೌಂಟ್ ಎವರೆಸ್ಟ್. ಕುಂದಾಪ್ರ ಡಾಟ್ ಕಾಂ ವರದಿ.

    ಧಕ್ ಬಾಹಿರಿ, ಡೂಕ್ಸ್ ನೋಸ್, ಕೈಲಾ ಬೈಲಾ, ಖಡಪರ್ಶಿ, ನಾಪ್ತಾ, ವಾಜೀರ್, ಉತ್ತರಖಂಡದ ಜಾನ್ಲಿ, ಗಂಗೊತ್ರಿ ಸಮೀಪದ ಜೋಗಿನ್ ಶಿಖರಗಳನ್ನು ಏರಿ ಸಾಹಸ ಮೆರೆದ ಹರ್ಷದ್ ಮುಂದಿನ ಗುರಿ ಮೌಂಟ್ ಎವರೆಸ್ಟ್ ಆಗಿತ್ತು. ಅದಕ್ಕೆ ಒಂದು ನಿರ್ದಿಷ್ಟ ಗುರಿ ಹಾಕಿಕೊಂಡರು. ಸುಮಾರು ೮ ತಿಂಗಳಿಂದ ತರಬೇತಿ ಆರಂಭಿಸಿದರು. ನುರಿತ ಪರ್ವತರೋಹಿಗಳ ಸಲಹೆ ಪಡೆದರು. ಮೌಂಟ್ ಎವರೆಸ್ಟ್ ಏರುವ ನಿಲುವು ಅಚಲವಾಯಿತು. ಎವರೆಸ್ಟ್ ಶಿಖರ ಮುಟ್ಟಿಯೇ ಬರುತ್ತೇನೆ ಎಂದು ಹೊರಟಿದ್ದು…

    ಮಾರ್ಚ್ 29-2016ರಂದು ಹರ್ಷದ್ ಮೌಂಟ್ ಎವರೆಸ್ಟ್ ಏರಲು ದಿನ ನಿಗದಿ ಪಡಿಸಿಕೊಂಡು ಪುಣೆಯಿಂದ ಹೊರಟರು. ನೇರವಾಗಿ ನೇಪಾಳದ ಕಾಠ್ಮಂಡು ತಲುಪಿದರು. ಅಲ್ಲಿ ಬೇಸ್‌ನ ನುರಿತರಿಂದ ಮಾರ್ಗದರ್ಶನ ತರಬೇತಿಯಲ್ಲಿ ತೊಡಗಿಸಿಕೊಂಡರು. ಕಠಿಣ ಅಭ್ಯಾಸ, ನಿಯಮಿತ ಆಹಾರ, ಹೊಸ ಪರಿಸರದಲ್ಲಿ ಯಾವುದಕ್ಕೂ ಹೆದರದೆ ಅವರು ತರಬೇತಿ ಪಡೆದರು. ಅವರಲ್ಲಿ ಅತುಲ ಛಲವಿತ್ತು. ಕನ್ನಡಿಗನಾಗಿ ನಾನು ಮೌಂಟ್ ಎವರೆಸ್ಟ್ ಏರಲೇ ಬೇಕು ಎಂಬ ಛಲಕ್ಕೆ ಅದಮ್ಯ ಉತ್ಸಾಹ ಅವರಲ್ಲಿ ಇತ್ತು. ಕುಂದಾಪ್ರ ಡಾಟ್ ಕಾಂ ವರದಿ.

    Click here

    Click here

    Click here

    Call us

    Call us

    ಕೊನೆಗೂ ತರಬೇತಿ ಮುಗಿಯಿತು. ಮೇ.17-2016ರಂದು ಅವರ ಮೌಂಟ್ ಎವರೆಸ್ಟ್ ಏರುವ ಸಾಹಸ ಆರಂಭವಾಯಿತು. ಮೇ.20ರಂದು ಬೆಳಿಗ್ಗೆ ೮ರಿಂದ ಕ್ಯಾಂಪ್ ಮೂರು ಹಂತದಿಂದ ನಾಲ್ಕರ ಹಂತಕ್ಕೆ ತಲುಪಿದರು. ಶೆರ್ಪಾಗಳು ಎವರೆಸ್ಟ್ ಏರಲು ಅನುಕೂಲವಾಗಿದೆ ಎಂಬ ಸೂಚನೆ ನೀಡದಾಗ ಧೈರ್ಯದಿಂದ ಮುನ್ನುಗಿದ್ದರು. ಮೇ.೨೧ರಂದು ಗಮ್ಯ ತಲುಪಿ, ರಾಷ್ಟ್ರಧ್ವಜವನ್ನು ಹಾರಿಸಿದರು.

    ಈ ಪರ್ವತ ಆರೋಹಣಕ್ಕೆ ಅವರು ವಿನಿಯೋಗಿಸಿದ್ದು 28 ಲಕ್ಷ ರೂಪಾಯಿ. ಸರ್ಕಾರ ಮಟ್ಟದಿಂದ ಯಾವುದೇ ಆರ್ಥಿಕ ಸಹಕಾರ ಸಿಕ್ಕಿಲ್ಲವಂತೆ. ಆದರೆ ಹರ್ಷದ್ ಅತ್ಯಂತ ಸಂತೋಷ ತಂದುಕೊಟ್ಟಿದೆಯಂತೆ. ಹರ್ಷದ್ ರಾವ್ ಸಾಧನೆಗೆ ಮೇ.29ರಂದು ನೇಪಾಲ ಸರಕಾರದ ಮಿಲಿಟರಿ ಗೌರವ ನೀಡಿದೆ. ಮೆರವಣಿಗೆ ಮೂಲಕ ಕರೆತಂದು ನೇಪಾಳದ ಪ್ರಧಾನ ಮಂತ್ರಿ ವಿಶೇಷವಾಗಿ ಸನ್ಮಾನಿಸಿದ್ದಾರೆ.

    ಪುಣೆಯಲ್ಲಿ ಉದ್ಯೋಗದಲ್ಲಿರುವ ಕನ್ನಡದ ಈ ಕುವರ ಕನ್ನಡ ಭಾಷೆಯ ಬಗ್ಗೆ ಅತೀವ ಆಸಕ್ತಿ ಉಳ್ಳವರಾಗಿದ್ದಾರೆ. ಅವರು ಎವರೆಸ್ಟ್ ಏರಿದ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದಾರೆ. ತನ್ನ ಹುಟ್ಟೂರು ಆರ್ಡಿಯ ಕೆರ್ಜಾಡಿಯ ಬಗ್ಗೆ ಹೆಮ್ಮೆಯಿಂದ ಹೇಳಿದ್ದಾರೆ. ಇಂಥಹ ಓರ್ವ ಸಾಧಕ ಮೂಲತಃ ಕುಂದಾಪುರ ತಾಲೂಕಿನವರು ಎನ್ನುವುದು ಹೆಮ್ಮೆಯ ವಿಚಾರ/ಕುಂದಾಪ್ರ ಡಾಟ್ ಕಾಂ ವರದಿ/

    Kundapura origin Harshad Rao climbed mount everest1 Kundapura origin Harshad Rao climbed mount everest2

    Like this:

    Like Loading...

    Related

    Youth of Kundapur origin Harshad Rao scales Mount Everest
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಸೈಕಲ್‌ನಲ್ಲಿ 3,300 ಕಿಮೀ ಕ್ರಮಿಸಿ ಲಡಾಕ್ ಯಾತ್ರೆ ಪೂರೈಸಿದ ಹಳ್ಳಿಹೊಳೆಯ ಯುವಕ ದಿನೇಶ್‌ ಬೋವಿ

    30/09/2025

    ಶಿಥಿಲ ಮನೆಯಲ್ಲಿಯೇ 12 ಮಂದಿ ವಾಸ. ಇದು ಅಸಹಾಯಕ ಕುಟುಂಬದ ಕಣ್ಣೀರ ಕಥೆ

    03/08/2024

    ಹುಲ್ಕಡಿಕೆ ಜನರ ಬದುಕಿಗಿಲ್ಲ ಭರವಸೆ! ಅಪಾಯಕಾರಿ ಹೊಳೆದಾಟಿ ಶಿಕ್ಷಣ ಪಡೆಯುತ್ತಿರುವ ವಿಶೇಷ ಚೇತನ ಮಕ್ಕಳು

    02/07/2024

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಕೋಡಿ ಉಂಜಲೋತ್ಸವ, ಪುಷ್ಪಯಾಗ ಮಹೋತ್ಸವ ಚಪ್ಪರ ಮುಹೂರ್ತ
    • ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ
    • ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ
    • ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್‌ಶಿಪ್ ಗರಿ 
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಸಂಪನ್ನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d