ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪ್ರ ಕನ್ನಡ ಭಾಷೆಯ ಬಗೆಗಿನ ಅಭಿಮಾನದಿಂದ ಕುಂದಾಪುರ ಮೂಲದ ಜನರು ವಿಶ್ವದೆಲ್ಲೆಡೆ ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಕಳೆದ ಮೂರು ವರ್ಷದಿಂದ ಆಚರಿಸುತ್ತಿದ್ದಾರೆ.
ನಾಳೆ ಆಸಾಡಿ ಅಮಾವಾಸ್ಯೆ (ಜುಲೈ 28) ಪ್ರಯುಕ್ತ ಬೆಂಗಳೂರಿನ ವಿಜಯನಗರದ ಬಂಟರ ಸಂಘದ ಹಾಲಿನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ.
ಸಂಜೆ ನಾಲ್ಕು ಗಂಟೆಯಿಂದ ಕುಂದಾಪ್ರ ಭಾಷಿ, ಬದ್ಕಿನ ಕುರಿತಾದ ಹಲವು ಕಾರ್ಯಕ್ರಮಗಳು ಆಯೋಜನೆಗೊಂಡಿದೆ. ವಿಶೇಷವಾಗಿ ಕುಂದಾಪುರ ಆಚಾರ-ಸಂಸ್ಕ್ರತಿ-ಆಚರಣೆ ಕುರಿತಾದ ಕುಂದಾಪುರ ಕಟ್ಕಟ್ಲೆ, ಕುಂದಾಪ್ರ ಗೀತಗಾಯನ, ಮನು ಹಂದಾಡಿ ಮಾತು, ಚೇತನ್ ನೈಲಾಡಿ ತಂಡದ ಹೆಂಗಸರ ಪಂಚಾಯ್ತಿ, ಕುಶಲವ ಯಕ್ಷಗಾನ, ಕಿರುಚಿತ್ರ ಬಿಡುಗಡೆ ಸೇರಿ ಹಲವು ಸಾಂಸ್ಕ್ರತಿಕ ಕಾರ್ಯಕ್ರಮಗಳ ರಸದೌತಣ ಇರಲಿದೆ.
ಕಾರ್ಯಕ್ರಮದಲ್ಲಿ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು, ಮಂದಾರ್ತಿ ಮೂಲದ ನಿರ್ದೇಶಕ ಯೋಗರಾಜ್ ಭಟ್, ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಜಯಪ್ರಕಾಶ್ ಹೆಗ್ಡೆ, ನಟ ಪ್ರಮೋದ್ ಶೆಟ್ಟಿ ಸೇರಿ ಹಲವರು ಉಪಸ್ಥಿತರಿರಲಿದ್ದಾರೆ. ಕುಂದಾಪ್ರ ಕನ್ನಡ ಭಾಷಾಭಿಮಾನಿಗಳ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಯೋಜಕರು ವಿನಂತಿಸಿಕೊಂಡಿದ್ದಾರೆ.
ಇದನ್ನೂ ಓದಿ:
► ಜು.28ರಂದು ಕುಂದಾಪುರ, ಬೆಂಗಳೂರು, ದುಬೈ ಸೇರಿದಂತೆ ವಿವಿಧೆಡೆ ಕುಂದಾಪ್ರ ಕನ್ನಡ ದಿನಾಚರಣೆ – https://kundapraa.com/?p=60948 .
















