ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಕರ್ನಾಟಕ ರಾಜ್ಯ ಬರಹಗಾರರ ಸಂಘ ರಿ. ಹೂವಿನ ಹಡಗಲಿ ವತಿಯಿಂದ ಕೊಡಲ್ಪಡುವ ಕಾವ್ಯಶ್ರೀ ಪ್ರಶಸ್ತಿಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಹಾಗೂ ಲೇಖಕರಾದ ನರೇಂದ್ರ ಎಸ್. ಗಂಗೊಳ್ಳಿ ಆಯ್ಕೆಯಾಗಿರುತ್ತಾರೆ.
ವೈವಿಧ್ಯಮಯ ವಿಚಾರಗಳ ಲೇಖಕರಾಗಿ ಗುರುತಿಸಿಕೊಂಡಿರುವ ಹಾಗು ಹೇಳದೆ ಹೋದ ಮಗಳಿಗೆ, ನಾಯಿ ನಾನು, ನಿಭ್ರತ, ರೂಮಿನೊಳಗಿಂದ ಸೇರಿದಂತೆ ಒಟ್ಟು ಏಳು ಕೃತಿಗಳನ್ನು ಹೊರತಂದಿರುವ ನರೇಂದ್ರ ಎಸ್ ಗಂಗೊಳ್ಳಿ ಅವರ ಮುಂದಿನ ಕೃತಿ ಅವಳ ಕೂಗು ಬಿಡುಗಡೆಯ ತಯಾರಿಯಲ್ಲಿದೆ.











