ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೋಗಿ ಸಮಾಜ ಸೇವಾ ಸಂಘ ಬೈಂದೂರು ತಾಲೂಕು ಇದರ ನಾಲ್ಕನೇ ವರ್ಷದ ಮಹಾಸಭೆಯ ಕಾರ್ಯಕ್ರಮ ಭಾನುವಾರದಂದು ನಾವುಂದ ಸ್ಕಂದ ಸಭಾಭವನದ ಆಷಾಢದಲ್ಲಿ ಒಂದು ದಿನ ಕಾರ್ಯಕ್ರಮದೊಂದಿಗೆ ಆಚರಣೆಗೊಂಡಿದೆ.
ಸಭಾ ಕಾರ್ಯಕ್ರಮದಲ್ಲಿ ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಮಾತನಾಡಿ, ಸಮುದಾಯದ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುವಂತೆ ಕರೆಕೊಟ್ಟು, ಸಾಧಕರನ್ನು ಸನ್ಮಾನಿಸಿ ಎಲ್ಲರಿಗೂ ಶುಭವನ್ನು ಹಾರೈಸಿದರು.

ಮಾಜಿ ಶಾಸಕರಾದ ಗೋಪಾಲ ಪೂಜಾರಿ ಅವರು ಮಾತನಾಡಿ, ಸಂಘದ ಆದರ್ಶಗಳನ್ನು ಕೊಂಡಾಡಿ, ಸಮಾಜವು ಶ್ರಮಿಸುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಸಮಾಜದ ಹಿರಿಯ ವ್ಯಕ್ತಿಗಳನ್ನು ಗೌರವಿಸಿ ಬಹುಮಾನ ವಿತರಿಸಿದರು.
ಚಂದ್ರ ಬಳೆಗಾರ ಕೊಲ್ಲೂರು ಅವರು ಮುಂದಿನ ಎರಡು ವರ್ಷಗಳವರೆಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿವೇತನ, ಸಾಧಕರಿಗೆ ಸನ್ಮಾನ, ಹಿರಿಯರಿಗೆ ಗೌರವ, ಬಹುಮಾನ ವಿತರಣೆ ಮತ್ತು ಸಮಾಜ ಬಾಂಧವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
ವೇದಿಕೆಯಲ್ಲಿ ದಯಾನಂದ ಜೋಗಿ ನಾವುಂದ, ದೇವರಾಜ ಜೋಗಿ ಬೈಂದೂರು, ಗಣೇಶ ಜೋಗಿ ಕುಂದಾಪುರ, ಟಿ.ಎಸ್. ನಾಗೇಶ ಜೋಗಿ ಹಳಗೇರಿ, ಗೋವಿಂದ ಜೋಗಿ ಪಳ್ಳಿ, ಶಿವರಾಮ ಬಳೆಗಾರ್ ಮುರುಡೇಶ್ವರ, ಸುರೇಶ ಜೋಗಿ ಕೊರ್ಗಿ, ಸುರೇಶ ಜೋಗಿ ಹಳಗೇರಿ, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜೋಗಿ ಸಮಾಜದ ಹಲವಾರು ಮುಖಂಡರು ಮತ್ತು ಸಮಾಜದ ಸರ್ವ ಬಾಂಧವರು ಹಾಜರಿದ್ದರು.
ಕಾರ್ಯದರ್ಶಿಯವರಾದ ಕೆ. ರಮೇಶ್ ಜೋಗಿ ಕೆಳಾಮನೆ ಪ್ರಾಸ್ತಾವಿಕ ಮಾತನಾಡಿ, ರಾಘವೇಂದ್ರ ಜೋಗಿ ಕಟ್ ಬ್ಯಾಲ್ತೂರು ಕಾರ್ಯಕ್ರಮವನ್ನು ನಿರೂಪಿಸಿದರು.
















