ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಮೊಗವೀರ ಯುವ ಸಂಘಟನೆ ಸಾಲಿಗ್ರಾಮ ಘಟಕ ಹಾಗೂ ಮಹಿಳಾ ಸಂಘಟನೆ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ -ಉಡುಪಿ ಇವರ ನೇತೃತ್ವದಲ್ಲಿ ಕರಾವಳಿ ಮೊಗವೀರ ಮಹಾಜನ ಸಂಘ ಕೋಟ, ಎಚ್ ಕೆ. ಫ್ರೆಂಡ್ಸ್‌ಹೊಳೆಕೆರೆ -ಚಿತ್ರಪಾಡಿ, ಗಾಣಿಗ ಯುವ ಸಂಘಟನೆ ಕೋಟ, ಪಾಂಚಜನ್ಯ ಸಂಘ ಅಂಬಾಗಿಲುಕೆರೆ ಸಾಲಿಗ್ರಾಮ ರಕ್ತನಿಧಿ ಕೆ. ಎಮ್. ಸಿ. ಮಣಿಪಾಲ, ಜಿಲ್ಲಾಡಳಿತ ಉಡುಪಿ ಸಹಯೋಗದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವು ಕರಾವಳಿ ಮೊಗವೀರ ಸಭಾಭವನ ಗುಂಡ್ಮಿ -ಸಾಲಿಗ್ರಾಮದಲ್ಲಿ ಭಾನುವಾರ ಜರುಗಿತು.
ಕಾರ್ಯಕ್ರಮದಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ ಪ್ರವರ್ತಕರಾದ ನಾಡೋಜ ಡಾ.ಜಿ ಶಂಕರ್ ಶುಭ ಹಾರೈಸಿದರು. ಮೊಗವೀರ ಯುವ ಸಂಘಟನೆ ಸಾಲಿಗ್ರಾಮ ಘಟಕದ ಅಧ್ಯಕ್ಷರಾದ ಕಿರಣ್ ಕುಂದರ್ ಸಭಾಧ್ಯಕ್ಷತೆ ವಹಿಸಿದ್ದರು.
ಕರಾವಳಿ ಮೊಗವೀರ ಮಹಾಜನ ಸಂಘದ ಡಾ.ಕೃಷ್ಣ ಕಾಂಚನ್, ಉಚ್ಚಿಲ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮೊ.ಯು. ಸಂಘಟನೆಯ ನಿಕಟಪೂರ್ವ ಜಿಲ್ಲಾಧ್ಯಕ್ಷ ಜಯಂತ ಅಮೀನ್, ಮಾಜಿ ಅಧ್ಯಕ್ಷ ಶಿವರಾಮ, ಉಪಾಧ್ಯಕ್ಷರಾದ ಚಂದ್ರ ಬಂಗೇರ, ಮೊ. ಯು. ಸಂಘಟನೆಯ ಮಾಜಿ ಅಧ್ಯಕ್ಷ ಸುರೇಶ ಮರಕಾಲ, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಗಿರಿಜಾ ಸುವರ್ಣ, ಎಚ್. ಕೆ. ಫ್ರೆಂಡ್ಸ್ ಅಧ್ಯಕ್ಷ ಉಮೇಶ್ ಕುಂದರ್, ಗೌರವ ಅಧ್ಯಕ್ಷರಾದ ರಮೇಶ್ ಪೂಜಾರಿ, ಗಾಣಿಗ ಯುವಸಂಘಟನೆಯ ಅಧ್ಯಕ್ಷರಾದ ಗಿರೀಶ್ ಗಾಣಿಗ, ರಕ್ತನಿಧಿ ಕೆ. ಎಮ್. ಸಿ. ಡಾ. ನವಮಿ ಉಪಸ್ಥಿತರಿದ್ದರು.
ಪಾಂಚಜನ್ಯ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ ಮರಕಾಲ ಸ್ವಾಗತಿಸಿ, ಅಕ್ಷಯ ಕುಂದರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
















