ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೃಷಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಉದ್ದೇಶದಿಂದ ಸ್ಥಳೀಯ ವಿಶ್ವ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಕೆಸರು ಗದ್ದೆಯಲ್ಲಿ ಭತ್ತದ ನಾಟಿ ನೆಡುವ ಕಾರ್ಯಕ್ರಮವನ್ನು ತೆಕ್ಕಟ್ಟೆ ಗ್ರಾಮದ ದ್ಯಾವಸ ಊರಿನ ಪಾರ್ವತಿ ಶೆಟ್ಟಿ ಅವರ ಗದ್ದೆಯಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಸ್ಥಳೀಯರು ಹಾಗೂ ರೈತರ ಮಾರ್ಗದರ್ಶನದಲ್ಲಿ ಕೆಸರು ಗದ್ದೆಗೆ ಇಳಿದು ಭತ್ತದ ನಾಟಿಯನ್ನು ನೆಟ್ಟರು. ನಾಟಿ ನೆಡುವ ವಿಧಾನ, ಕೃಷಿಯಲ್ಲಿ ಬಳಸುವ ಉಪಕರಣಗಳು ಹಾಗೂ ಭತ್ತದ ಬೆಳೆಯ ಆರೈಕೆಯ ಕುರಿತು ರೈತರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಸಂತೋಷದಿಂದ ನಾಟಿ ನೆಟ್ಟು ಕೃಷಿಯ ಅನುಭವವನ್ನು ಪಡೆದರು ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಹಾಗೂ ರೈತರ ಪರಿಶ್ರಮದ ಬಗ್ಗೆ ಗೌರವವನ್ನು ಹೆಚ್ಚಿಸಿತು.











