Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಸಿದ್ದಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಸುವರ್ಣ ಮಹೋತ್ಸವ
    ಊರ್ಮನೆ ಸಮಾಚಾರ

    ಸಿದ್ದಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಸುವರ್ಣ ಮಹೋತ್ಸವ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಹೈನುಗಾರರಿಗೆ ಉತ್ತೇಜನ ನೀಡುವಲ್ಲಿ ಕೇಂದ್ರ ರಾಜ್ಯ ಸರಕಾರಗಳು ಪ್ರೋತ್ಸಾಹ ನೀಡುತ್ತಿವೆ. ಹಿಂದೆ ಬಿ. ಎಸ್. ಯಡಿಯೂರಪ್ಪ ಅವರು ಮುಖ್ಯಮ೦ತ್ರಿಯಾಗಿದ್ದ ಸ೦ದರ್ಭ ಹೈನುಗಾರರಿಗೆ ನೀಡಲು ಆರಂಭಿಸಿದ ಪ್ರೋತ್ಸಾಹಧನ ಇವತ್ತು ಆಶಾಕಿರಣವಾಗಿ ಪರಿಣಮಿಸಿದೆ. ಯಾವುದೇ ಸರಕಾರ ಬ೦ದರೂ ಇದನ್ನು ನಿಲ್ಲಿಸಲು ಸಾಧ್ಯವಿಲ್ಲ. ದ.ಕ ಹಾಲು ಒಕ್ಕೂಟದ ನಂದಿನಿ ಬ್ರಾಂಡ್ ಇವತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿವೆ. ಇದರ ಹಿಂದೆ ಶ್ರಮಜೀವಿ ಹೈನುಗಾರರ ಪರಿಶ್ರಮವಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

    Click Here

    Call us

    Click Here

    ಅವರು ಸಿದ್ಧಾಪುರದ ಶ್ರೀರಂಗನಾಥ ಸಭಾಭವನದಲ್ಲಿ ನಡೆದ ಸಿದ್ದಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ ಐದು ದಶಕಗಳಿಂದ ನಿಸ್ವಾರ್ಥ ಸೇವಾ ಮನೋಭಾವದಿಂದ ಗ್ರಾಮೀಣ ಭಾಗದ ಹಾಲು ಉತ್ಪಾದಕರಿಗೆ, ರೈತ ಬಾಂಧವರಿಗೆ ಹಾಗೂ ಮಹಿಳಾ ಶಕ್ತಿಗೆ ಆರ್ಥಿಕ ಭದ್ರತೆ ನೀಡುತ್ತಾ ಸಹಕಾರ ರಂಗದಲ್ಲಿ ಹೆಮ್ಮೆಯ 50 ವರ್ಷಗಳನ್ನು ಪೂರೈಸಿ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂಭ್ರಮದ ಸಂಗತಿ. ಮುಂದಿನ ದಿನಗಳಲ್ಲಿ ಈ ಹಾಲು ಉತ್ಪಾದಕರ ಸಹಕಾರ ಸಂಘ ಇನ್ನಷ್ಟು ಗುರಿಗಳೊಂದಿಗೆ ಮಾದರಿಯಾಗಿ ಬೆಳೆಯಲಿ ಎ೦ದರು.

    ಸಿದ್ದಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಡಿ. ಗೋಪಾಲಕೃಷ್ಣ ಕಾಮತ್ ಮಾತನಾಡಿ, ಈ ಸಂಸ್ಥೆ ಯಶಸ್ವಿ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುವಲ್ಲಿ ಸಂಘವನ್ನು ಕಟ್ಟಿ ಬೆಳೆಸಿದ ಹಿರಿಯರ ಶ್ರಮವಿದೆ. ಅರ್ಥಪೂರ್ಣ ಸುವರ್ಣಮಹೋತ್ಸವದ ಸಂಕಲ್ಪ ಮಾಡಿ ಕಳೆದ ಮಾರ್ಚ್‌ಗೆ 1700 ಲೀಟರ್ ಹಾಲು ಇದ್ದುದ್ದನ್ನು 3 ಸಾವಿರ ಲೀಟರ್ಗೆಗೆ ಏರಿಸುವ ಗುರಿಯೊಂದಿಗೆ ಹಸು ಖರೀದಿಸುವರಿಗೆ 3 ಸಾವಿರ ರೂ. ಸಹಾಯಧನ, 1 ಚೀಲ ಪಶು ಆಹಾರ ನೀಡುವುದರೊಂದಿಗೆ ಪ್ರೋತ್ಸಾಹಿಸಲಾಯಿತು. ಅದರಲ್ಲಿ ಯಶಸ್ಸು ಕಂಡಿದ್ದು ಇದೀಗ ಸುವರ್ಣ ಮಹೋತ್ಸವದ ನೆನಪಿನಲ್ಲಿ ಐದು ಸಾವಿರ ಲೀಟರ್ ಹಾಲು ಸಂಗ್ರಹಣೆಯ ಗುರಿ ಹೊಂದಿದ್ದೇವೆ. 50 ದನಗಳನ್ನು ನೀಡುವ ಯೋಜನೆಯನ್ನು ಹೊಂದಿದ್ದೇವೆ ಎಂದರು.

    ದ.ಕಹಾಲು ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆ ಕೊಡವೂರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಕಮಲಶಿಲೆ ದೇವಸ್ಥಾನದ ಅನುವಂಶಿಕ ಧರ್ಮದರ್ಶಿ ಎಸ್. ಸಚ್ಚಿದಾನಂದ ಚಾತ್ರ ಶುಭಾಶಂಸನೆಗೈದರು.

    ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ, ಕುಂದಾಪುರ ಕ್ಷೇತ್ರದ ಶಾಸಕ ಕಿರಣ್ ಕುಮಾ‌ರ್ ಕೊಡ್ಗಿ, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಬಿ.ಎಂ.ಸುಕುಮಾರ ಶೆಟ್ಟಿ, ದ.ಕ ಹಾಲು ಒಕ್ಕೂಟದ ಉಪಾಧ್ಯಕ್ಷ ಉದಯ ಎಸ್. ಕೋಟ್ಯಾನ್, ದ.ಕ ಹಾಲು ಒಕ್ಕೂಟದ ನಿರ್ದೇಶಕರಾದ ಐಕಳಬಾವ ಡಾ. ದೇವಿಪ್ರಸಾದ್‌ ಶೆಟ್ಟಿ, ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಎನ್. ಮಂಜಯ್ಯ ಶೆಟ್ಟಿ, ಮಮತಾ ಆ‌ರ್. ಶೆಟ್ಟಿ, ಹೆಚ್. ವಿಠಲ ಶೆಟ್ಟಿ ಶೇಡಿಕೊಡ್ಲು, ದ,ಕ ಹಾಲು ಒಕ್ಕೂಟದ ವ್ಯವಸ್ಥಾಪಕರಾದ ಡಾ. ರವಿರಾಜ್ ಉಡುಪ ಮೊದಲಾದವರು ಉಪಸ್ಥಿತರಿದ್ದರು.

    Click here

    Click here

    Click here

    Call us

    Call us

    ಸಂಘದ ಉಪಾಧ್ಯಕ್ಷ ಭಾಸ್ಕರ ಶೆಟ್ಟಿ, ದ.ಕ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಶಂಕರ ನಾಯ್ಕ ವಿಸ್ತರಣಾಧಿಕಾರಿ ಮಂಜುನಾಥ ಮೊಗವೀರ, ಸಲಹಾ ಪಶುವೈದ್ಯರಾದ ಡಾ. ಇಂದ್ರಜಿತ್, ಮುಖ್ಯಕಾರ್ಯನಿರ್ವಹಣಾಧಿಕಾರಿ ರತೇಶ ಕೊಠಾರಿ, ನಿರ್ದೇಶಕರಾದ ಸೂರ್ಯನಾರಾಯಣ ಜೋಯ್ಸ ಗುರುಬಸವನಡಿ, ಸಂಪತ್ ಕುಮಾರ ಶೆಟ್ಟಿ ಹೊಳೆಶಂಕರನಾರಾಯಣ, ರಘುರಾಮ ಶೆಟ್ಟಿ ಹೆಗ್ಗೋಡು, ಹೆಚ್. ರಘುರಾಮ ಶೆಟ್ಟಿ ಆನೆಮಕ್ಕಿ, ಸತೀಶ ಶೆಟ್ಟಿ ತುಂಬಿಮನೆ, ನಾರಾಯಣ ಪೂಜಾರಿ ಕರಿಮನೆ, ನಾರಾಯಣ ನಾಯ್ಕ ಹೆಗ್ಗೋಡು, ಗಿರಿಜಾ ಶೆಡ್ತಿ ಹರ್ಕೆಬಾಳು, ಜಯ ಪೂಜಾರಿ ಋಷಿಕೆರೆ, ಸುಶೀಲಾ ಕುಲಾಲ್ತಿ ದಕ್ಕೇರಬಾಳು, ಟಿ. ಬಾಬಿ ತೆಂಕಬೈಲು ಹಾಜರಿದ್ದರು.

    ದಯಾನಂದ ರಾವ್ ಕಾರ್ಯಕ್ರಮ ನಿರ್ವಹಿಸಿ, ಟಿ.ಜಿ ಪಾಂಡುರಂಗ ಪೈ ವಂದಿಸಿದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಗುಜ್ಜಾಡಿ ಲೈಟ್‌ಹೌಸ್ ಪ್ರದೇಶದಲ್ಲಿ ಕಡಲ ಕೊರೆತ ವೀಕ್ಷಿಸಿದ ಶಾಸಕ ಗುರುರಾಜ್ ಗಂಟಿಹೊಳೆ

    03/08/2026

    ಯುವ ಜನತೆ ರಾಷ್ಟ್ರೀಯ ಸಂಗೀತದತ್ತ ಒಲವು ತೋರಿಸುವಂತೆ ಪ್ರೇರಣೆ ಅಗತ್ಯ: ಪೂರ್ಣಿಮಾ

    03/08/2026

    ಮಿತ ಬಂಡವಾಳದಿಂದಲೂ ಉತ್ತಮ ಉದ್ಯಮವನ್ನು ಆರಂಭಿಸಿ ಯಶಸ್ಸು ಸಾಧಿಸಬಹುದು: ಶಾಮಿಲಿ ಅಜಯ್ ಶೆಟ್ಟಿ

    03/08/2026
    Leave A Reply Cancel Reply

    seven − five =

    Call us

    Click Here

    Call us

    Call us

    Call us
    Highest Viewed Recently
    • ಸಿದ್ದಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಸುವರ್ಣ ಮಹೋತ್ಸವ
    • ಗುಜ್ಜಾಡಿ ಲೈಟ್‌ಹೌಸ್ ಪ್ರದೇಶದಲ್ಲಿ ಕಡಲ ಕೊರೆತ ವೀಕ್ಷಿಸಿದ ಶಾಸಕ ಗುರುರಾಜ್ ಗಂಟಿಹೊಳೆ
    • ಯುವ ಜನತೆ ರಾಷ್ಟ್ರೀಯ ಸಂಗೀತದತ್ತ ಒಲವು ತೋರಿಸುವಂತೆ ಪ್ರೇರಣೆ ಅಗತ್ಯ: ಪೂರ್ಣಿಮಾ
    • ಮಿತ ಬಂಡವಾಳದಿಂದಲೂ ಉತ್ತಮ ಉದ್ಯಮವನ್ನು ಆರಂಭಿಸಿ ಯಶಸ್ಸು ಸಾಧಿಸಬಹುದು: ಶಾಮಿಲಿ ಅಜಯ್ ಶೆಟ್ಟಿ
    • ಹಂಗಾರಕಟ್ಟೆ-ಪಂಚವರ್ಣದ 312ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.