ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ರೋಟರಿ ಕ್ಲಬ್ ತೆಕ್ಕಟ್ಟೆ ತನ್ನ ಸಮಾಜ ಸೇವಾ ಕಾರ್ಯಕ್ರಮದ ಅಂಗವಾಗಿ ಬೇಳೂರು ಗ್ರಾಮದ ಮೊಗೆಬೆಟ್ಟು ಅಂಗನವಾಡಿಗೆ ಕಚೇರಿ ಬಳಕೆಗೆ ಅಗತ್ಯವಿದ್ದ ಒಂದು ಮೇಜನ್ನು ದಾನವಾಗಿ ನೀಡಿದರು.
ಸುಮಾರು ₹5,000 ಮೌಲ್ಯದ ಈ ಕಚೇರಿ ಮೇಜನ್ನು ರೋಟರಿ ವಲಯ–2ರ ಲರ್ನಿಂಗ್ ಫೆಸಿಲಿಟೇಟರ್ ಹಾಗೂ ರೋಟರಿ ಕ್ಲಬ್ ತೆಕ್ಕಟ್ಟೆಯ ಸದಸ್ಯರಾದ ರೋಟೇರಿಯನ್ ಸುರೇಶ್ ಬೇಳೂರು ಅವರು ಪ್ರಾಯೋಜಿಸಿದ್ದರು.
ಸಮಾರಂಭದಲ್ಲಿ ಕ್ಲಬ್ ಅಧ್ಯಕ್ಷ ಟಿ. ರಾಜೀವ್ ಶೆಟ್ಟಿ, ವಲಯ–2ರ ಸಹಾಯಕ ಗವರ್ನರ್ ಟಿ. ಸುಧಾಕರ್ ಶೆಟ್ಟಿ, ವಿಜಯಕುಮಾರ್ ಶೆಟ್ಟಿ, ವಲಯ–2ರ ಇಂಟರ್ಯಾಕ್ಟ್ ಸಂಯೋಜಕರಾದ ಗಣಪತಿ ಶ್ರೀಯಾನ್, ವಿಠ್ಠಲ್ ರಾವ್ ಹಾಗೂ ಕ್ಲಬ್ ಜಂಟಿ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಮೇಜನ್ನು ಅಂಗನವಾಡಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಂಗನವಾಡಿಯ ಶಿಕ್ಷಕಿಯರು ಹಾಗೂ ಪುಟಾಣಿಗಳು ಭಾಗವಹಿಸಿದ್ದರು. ನಂತರ ಎಲ್ಲರಿಗೂ ಸಿಹಿ ವಿತರಿಸಲಾಯಿತು.
ಈ ಕಚೇರಿ ಮೇಜಿನ ಅವಶ್ಯಕತೆ ಅಂಗನವಾಡಿಗೆ ಬಹಳ ದಿನಗಳಿಂದ ಇದ್ದುದರಿಂದ, ಈ ಅಮೂಲ್ಯ ಸಹಾಯಕ್ಕಾಗಿ ಅಂಗನವಾಡಿಯ ಶಿಕ್ಷಕಿಯರು ರೋಟರಿ ಕ್ಲಬ್ ತೆಕ್ಕಟ್ಟೆ ಹಾಗೂ ದಾನಿಗಳಾದ ರೋಟೇರಿಯನ್ ಸುರೇಶ್ ಬೇಳೂರು ಅವರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
















