ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಟದ ಮಿತ್ರ ಮಂಡಳಿಯ ಆಶ್ರಯದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಘಟಿಸಿದ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಅವರ 69ನೇಯ ಕೃತಿ, ’ಪಂಚರೂಪಕಗಳು’ ಇದರ ಬಿಡುಗಡೆ ಕಾರ್ಯಕ್ರಮ ಇತ್ತೀಚಿಗೆ ಕೋಟದಲ್ಲಿ ಜರಗಿತು.

ಕೃತಿಯನ್ನು ರಂಗಕರ್ಮಿ ಪ್ರಭಾಕರ ತುಮುರಿ ಅವರು ಬಿಡುಗಡೆ ಮಾಡಿ ನಾಟಕಗಳು ನಡೆದು ಬಂದ ಹಾದಿಯನ್ನು ಸಮೀಕ್ಷಿಸುತ್ತ ಅದು ಹಿಡಿದ ಅಪಸವ್ಯಕ್ಕೆ ಉತ್ತರವಾಗಿ ಈ ಕೃತಿ ಮೂಡಿಬಂದಿದೆ ಎಂದರು.
ನಾಟಕದ ರಂಗ ಪ್ರಯೋಗ ಸಾಧ್ಯತೆಯ ಕುರಿತು ಕಸಾಪ ತಾಲೂಕು ಅಧ್ಯಕ್ಷ ಜಿ. ರಾಮಚಂದ್ರ ಐತಾಳ ಮೌಲ್ಯಗಳ ಕುರಿತು ಗಣೇಶ ಮೂರ್ತಿ ಹೆಬ್ಬಾರ, ವಸ್ತು ವಿಶೇಷದ ಬಗೆಗೆ ಸುಬ್ರಹ್ಮಣ್ಯ ಶೆಟ್ಟಿ ವಿವೇಚಿಸಿದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಮಹಾಲಕ್ಷ್ಮಿಎಂ. ಪಿ. ನಿರೂಪಣೆ, ಶ್ರೀ ದೇವಿಯಿಂದ ಪ್ರಾರ್ಥಿಸಿ, ಉಪೇಂದ್ರ ಸೋಮಯಾಜಿ ವಂದನಾರ್ಪಣೆ ಸಲ್ಲಿಸಿದರು.











