ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿಗಳಾದ ನಿಮಗೂ ಅವಕಾಶ ಇದೆ, ನಿಮಗೂ ಸ್ಫೂರ್ತಿ ಆಗಬೇಕು, ತಗೆದುಕೊಂಡವರಿಗೂ ಖುಷಿ ಆಗಬೇಕು, ಕೊಟ್ಟವರಿಗೂ ಆತ್ಮ ತೃಪ್ತಿ ಇರಬೇಕು, ಮುಂದಿನ ದಿನಗಳಲ್ಲಿ ನೀವು ಉಳಿದ ಮಕ್ಕಳಿಗೆ ಕೊಡಬೇಕು ಈ ಉದ್ದೇಶದಿಂದ ಕೊಡುತ್ತಿರುವ ನಗದು ಪುರಸ್ಕಾರ ಮತಷ್ಟ್ಟು ಮಕ್ಕಳಿಗೆ ಉತೇಜನ ಸಿಗಲಿ ಎಂಬ ಆಶಯದೊಂದಿಗೆ ಈ ಕಾರ್ಯ ಕಳೆದ 14 ವರ್ಷಗಳಿಂದ ನಡೆಸುಕೊಂಡು ಬರುತ್ತಿರುವ ಸ್ನೇಹ ಸಂಗಮದ ಸದಸ್ಯರ ಔದ್ಯೋಗಿಕ ಜೀವನದಲ್ಲಿ ಯಶಸ್ಸು ಸಿಗಲಿ ಎಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಇದರ ಉಪ ಪ್ರಾಂಶುಪಾಲರಾದ ಚಂದ್ರಶೇಖರ ಶೆಟ್ಟಿ ಹೇಳಿದರು.

ಅವರು ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗ ಚೇತನಾ ಸಭಾಭವನದಲ್ಲಿ ಶುಕ್ರವಾರ ಜರುಗಿದ 2002-04ನೇ ಸಾಲಿನ ಸ್ನೇಹ ಸಂಗಮ ಹಳೇ ವಿದ್ಯಾರ್ಥಿ ಸಂಘದ 14ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯ ಶಿಕ್ಷಕಿ ಜಯಶ್ರೀ, ಸ್ನೇಹ ಸಂಗಮ ಹಳೇ ವಿದ್ಯಾರ್ಥಿ ಸಂಘದ ಅಧಕ್ಷ ಗೀರಿಶ್ ಪೂಜಾರಿ, ಸದಸ್ಯರಾದ ರವಿ ದೇವಾಡಿಗ, ಯೋಗೀಶ್ ದೇವಾಡಿಗ, ರಾಘವೇಂದ್ರ ಎಸ್ ಬೀಜಾಡಿ ಉಪಸ್ಥಿತರಿದ್ದರು.
ಕಲಿಕೆ, ಸಾಂಸ್ಕೃತಿಕ, ಕ್ರೀಡೆಯಲ್ಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಓಟ್ಟು 29000 ಮೊತ್ತದ ಪ್ರೋತ್ಸಾಹಧನವನ್ನು ವಿತರಿಸಲಾಯಿತು.
ಶಿಕ್ಷಕ ಲಕ್ಷ್ಮೀನಾಯಣ ಸ್ವಾಗತಿಸಿದರು. ಶಿಕ್ಷಕಿಯರಾದ ದಿವ್ಯ ಪ್ರಭಾ ಪ್ರತಿಭಾನ್ವಿತರ ಪಟ್ಟಿ ವಾಚಿಸಿದರು. ಗಣೇಶ ನಾಯ್ಕ್ ವಂದಿಸಿದರು. ಸುಧಾ ನಾಯಕ ಕಾರ್ಯಕ್ರಮ ನಿರ್ವಹಿಸಿದರು.
















