ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಪಡಿಯಾರ್ ನರ್ಸಿಂಗ್ ಹೋಮ್ ಸ್ಥಾಪಕ, ಆರ್.ಎಸ್.ಎಸ್ ಪ್ರಮುಖರಾಗಿದ್ದ ಡಾ ಎಸ್. ಎನ್. ಪಡಿಯಾರ್ (84) ಅವರು ನಿಧನರಾಗಿದ್ದಾರೆ.
ಕುಂದಾಪುರದಲ್ಲಿ ಪಡಿಯಾರ ನರ್ಸಿಂಗ್ ಹೋಮ್ ಹಾಗೂ ಆ್ಯಂಬುಲೆನ್ಸ್ ಸೇವೆ ಆರಂಭಿಸಿದ್ದರು. ಡಾ. ಪಡಿಯಾರ್ ಅವರು ವೈದ್ಯಕೀಯ ವೃತ್ತಿಯ ಜೊತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಲವು ಜವಾಬ್ದಾರಿ ನಿಭಾಯಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಸೇವಾ ಸಂಗಮ ಶಿಶುಮಂದಿರಗಳ ಸ್ಥಾಪನೆ, ವಿಷ್ಣು ಸಹಸ್ರನಾಮದ ವಿಶೇಷತೆಯನ್ನು ಸಾರುತ್ತಾ ಜನಸಾಮಾನ್ಯರತ್ತಾ ಕೊಂಡೊಯ್ದ ಹೆಗ್ಗಳಿಕೆ ಇವರದ್ದು. ಮೂಲತಃ ಉಪ್ಪುಂದದವರಾದ ಪಡಿಯಾರ್ ಅವರು ಕುಂದಾಪುರವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದರು.
ಅವರು ಮಡದಿ ಹಾಗೂ ಇಬ್ಬರು ಪುತ್ರರು, ಬಂಧು ಬಳಗವನ್ನು ಅಗಲಿದ್ದಾರೆ.











