ಕುಂದಾಪ್ರ ಡಾಟ್ ಕಾಂ ಸದ್ದಿ.
ಕುಂದಾಪುರ: ಸುಜ್ಷಾನ ಎಜುಕೇಷನಲ್ ಟ್ರಸ್ಟ್ ಕುಂದಾಪುರ ಹಾಗೂ ಇವರ ಅಂಗಸಂಸ್ಥೆಗಳ ಸಹಭಾಗಿತ್ವದಲ್ಲಿ ಯಡಾಡಿ ಮತ್ಯಾಡಿಯ ವಿದ್ಯಾರಣ್ಯದ ಆವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಜರುಗಿತು.


ಧ್ವಜಾರೋಹಣ ಪೂರ್ಣಗೊಳಿಸಿದ ಮಾನ್ಯ ಮುಖ್ಯಮಂತ್ರಿಯವರ ಮಾಜಿ ಕಾನೂನು ಸಲಹೆಗಾರರಾದ ಕೆ. ದಿವಾಕರ್ ಮಾತನಾಡಿ ”ನಮ್ಮ ದೇಶದ ಇತಿಹಾಸವು ನೂರಾರು ವರ್ಷಗಳು ಊಟಿ, ಸಾಮೂಹಿಕ ಹತ್ಯೆ, ದಾಳಿ, ಹೊರಟಾಗಳೆಂದಲೇ ಕೂಡಿದರೂ ಕೂಡ ನಾವು ಇಂದು ಅಭಿವೃದ್ಧಿ ಪದದಲ್ಲಿ ಅತ್ಯಂತ ವೇಗವಾಗಿ ಸಾಗುತ್ತಿದ್ದೇವೆ. ಇಂದು ಇಲ್ಲಿನ ವಿದ್ಯಾರ್ಥಿಗಳ ಕಣ್ಣುಗಳಲ್ಲಿ ನಮ್ಮ ದೇಶದ ಉಜ್ವಲ ಭವಿಷ್ಯದ ಹೊಳವು ಎದ್ದು ಕಾಣುತ್ತಿದೆ ಎಂದು ಯುವ ಪೀಳೆಗೆಯ ಮೇಲಿನ ಭರವಸೆಯನ್ನು ವ್ಯಕ್ತಪಡಿಸಿದರು.


ವಿಜೃಂಭಣೆಯಿಂದ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೇಸರಿ ಬಿಳಿ ಹಸಿರು ಬಣ್ಣದ ಉಡುವು ತೊಟ್ಟು ರಾಷ್ಟ್ರಧ್ವಜ ರೂಪಿಸಿರುವುದು ಎಲ್ಲ ಗಮನ ಸಳೆಯಿತು. ವಿದ್ಯಾರ್ಥಿಗಳ ಶಿಸ್ತಿನ ಸ್ವಾಗತದ ಜೊತೆಗೆ ನೆರೆದ ಎಲ್ಲರ ಕೈಯಲ್ಲಿ ರಾಷ್ಟ್ರಧ್ವಜ ಗೋಚರಿಸಿದವು. ಕಾರ್ಯಕ್ರಮದ ವಿಶೇಷ ಅಂಗವಾಗಿ ಖ್ಯಾತ ಗಾಯಕರಾಗಿರುವ ಜಗದೀಶ್ ಪುತ್ತೂರು ಇವರ ಸಾರಥ್ಯದಲ್ಲಿ “ಸುನಾದ ಸಂಗಮ’ ದೇಶಭಕ್ತಿ ಗೀತೆಗಳ ಸುಮಧುರ ಗಾಯನ ಕಾರ್ಯಕ್ರಮ ನಡೆಯಿತು.

ಸುಜ್ಞಾನ್ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟ ಉಪಸ್ಥಿತರಿದ್ದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ವಿನಯ್ ಕುಮಾರ್ ನಿರೂಪಿಸಿದರು.
















