Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕ್ಲೀನ್ ಕಿನಾರ ತಂಡಕ್ಕೆ ಸ್ವಚ್ಛತಾ ಪರಿಕರಗಳ ಹಸ್ತಾಂತರ
    ಊರ್ಮನೆ ಸಮಾಚಾರ

    ಕ್ಲೀನ್ ಕಿನಾರ ತಂಡಕ್ಕೆ ಸ್ವಚ್ಛತಾ ಪರಿಕರಗಳ ಹಸ್ತಾಂತರ

    Updated:01/09/2026No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಬೈಂದೂರು:
    ಸಮೃದ್ಧ ಬೈಂದೂರು ಪರಿಕಲ್ಪನೆಯ ಕ್ಲೀನ್ ಕಿನಾರ ಯೋಜನೆಯಲ್ಲಿ ಭೂಮಿ ಟ್ರಸ್ಟ್ ಸಹಕಾರದೊಂದಿಗೆ 170 ವಾರ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡ ಕ್ಲೀನ್ ಕಿನಾರ ತಂಡಕ್ಕೆ ಸ್ವಚ್ಛತಾ ಪರಿಕರಗಳ ಹಸ್ತಾಂತರ ಕಾರ್ಯಕ್ರಮವನ್ನು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ನೆರವೇರಿಸಿದರು.

    Click Here

    Call us

    Click Here

    ಗಿಡ ನೆಡುವ ಹಾಗೂ ಸ್ವಚ್ಛತಾ ಕಾರ್ಯಗಳಿಗೆ ಅಗತ್ಯವಿರುವ ಉಪಕರಣಗಳನ್ನು ಹಸ್ತಾಂತರಿಸಿ ಮಾತನಾಡಿದ ಶಾಸಕರು ಸತತ 170 ವಾರಗಳ ಕಾಲ ಸಮುದ್ರ ಕಿನಾರ ಮತ್ತು ಊರಿನ ಸ್ವಚ್ಛತೆ ಮಾಡಿಕೊಂಡು ಬರುತ್ತಿರುವುದು ನಿಜವಾಗಲೂ ಒಂದು ತಪ್ಪಸ್ಸು, ದೃಢ ಇಚ್ಚಾ ಶಕ್ತಿ ಇದ್ದಲ್ಲಿ ಮಾತ್ರ ಇದು ಸಾಧ್ಯ ಎಂದು ಅಭಿಪ್ರಾಯಪಟ್ಟರು.

    ಕಾರ್ಯಕ್ರಮದ ನಂತರ ಕ್ಲೀನ್ ಕಿನಾರ ತಂಡ ಹಿಂದೂ ರುದ್ರ ಭೂಮಿ ಆವರಣದ ಸುತ್ತ ಗಿಡ ನೆಟ್ಟು ಸ್ವಚ್ಛತಾ ಕಾರ್ಯ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸ್ವಚ್ಛತಾ ಪರಿಕರಗಳನ್ನು ಕೊಡಿಸುವಲ್ಲಿ ಸಹಕರಿಸಿದ ಚರಣ್ ಬೈಂದೂರು, ಭೂಮಿ ಟ್ರಸ್ಟ್ ಪದಾಧಿಕಾರಿಗಳು, ಮುಕ್ತಿಧಾಮ ಟ್ರಸ್ಟ್‌ನ ಸರ್ವಸದಸ್ಯರು, NECF ಹಾಗೂ ಕ್ಲೀನ್ ಕಿನಾರಾ ಸದಸ್ಯರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟ್ವಾಡಿ, ಪ್ರಮುಖರಾದ ಗೋಪಾಲ್ ಪೂಜಾರಿ ವಸ್ರೆ, ರಾಘು ಶೇರಿಗಾರ್, ದಿನೇಶ್ ಗಾಣಿಗ ಮತ್ತು ರಾಜೇಶ್ ಆಚಾರ್, ಶ್ರೀಧರ್ ಜಿ. ಪಡುವರಿ ಸೇರಿದಂತೆ ಹಲವರು ಭಾಗವಹಿಸಿದರು.

    ಕ್ಲೀನ್ ಕಿನಾರಾ ಕಾರ್ಯದರ್ಶಿ ನಿತೇಶ್ ನಿರೂಪಿಸಿದರು. ಸಂಯೋಜಕರಾದ ರಾಘವೇಂದ್ರ ಸುರಭಿ ಕಾರ್ಯಕ್ರಮ ಸಂಯೋಜಿಸಿದರು. NECF ಸದಸ್ಯ ದಿನೇಶ್ ಗಾಣಿಗ ವಂದಿಸಿದರು. NECF ಮುಖ್ಯಸ್ಥರಾದ ಶಶಿಧರ್ ಶೆಟ್ಟಿ ಅವರು ದೂರವಾಣಿ ಮೂಲಕ ಶುಭ ಹಾರೈಸಿದರು. ಸ್ವಚ್ಛತಾ ಪರಿಕರಗಳನ್ನು ಒದಗಿಸಿದ ಶಾಸಕರು ಹಾಗೂ ಭೂಮಿ ಟ್ರಸ್ಟ್ ಸದಸ್ಯರಿಗೆ ಕ್ಲೀನ್ ಕಿನಾರ ತಂಡ ಧನ್ಯವಾದಗಳನ್ನು ಸಲ್ಲಿಸಿದರು.

    Click here

    Click here

    Click here

    Call us

    Call us

    Byndoor
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಬೈಂದೂರು ಕಾಮಾಕ್ಷಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ – ಶೇ.14 ಡಿವಿಡೆಂಡ್ ಘೋಷಣೆ

    12/09/2026

    ಐಎಂಜೆಐಎಸ್‌ಸಿಯಲ್ಲಿ ಹಣಕಾಸು ಸಾಕ್ಷರತೆ ಮತ್ತು ಬುದ್ಧಿವಂತ ಹೂಡಿಕೆ ಕುರಿತು ವೆಬಿನಾರ್

    12/09/2026

    ಬಸ್ರೂರು ಶ್ರೀ ಶಾರದಾ ಕಾಲೇಜು: ಆರುಣ್ಯ 2026ರ ಸಮಾರೋಪ ಸಮಾರಂಭ

    12/09/2026
    Leave A Reply Cancel Reply

    twelve − 6 =

    Call us

    Click Here

    Call us

    Call us

    Call us
    Highest Viewed Recently
    • ರಷ್ಯಾದ ಬ್ರಿಕ್ಸ್ ಪರಿಸರ ಸಮ್ಮೇಳನದಲ್ಲಿ ವಿವೇಕ್ ಆಳ್ವ ಉಪನ್ಯಾಸ
    • ಬೈಂದೂರು ಕಾಮಾಕ್ಷಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ – ಶೇ.14 ಡಿವಿಡೆಂಡ್ ಘೋಷಣೆ
    • ಸನ್ಮತಿ ಪತ್ರಿಕೆ ಬಿಡುಗಡೆ – ತಿಂಗಳ ಅಂಗಳ ಸಂವಾದ ಕಾರ್ಯಕ್ರಮ
    • ಐಎಂಜೆಐಎಸ್‌ಸಿಯಲ್ಲಿ ಹಣಕಾಸು ಸಾಕ್ಷರತೆ ಮತ್ತು ಬುದ್ಧಿವಂತ ಹೂಡಿಕೆ ಕುರಿತು ವೆಬಿನಾರ್
    • ಬಸ್ರೂರು ಶ್ರೀ ಶಾರದಾ ಕಾಲೇಜು: ಆರುಣ್ಯ 2026ರ ಸಮಾರೋಪ ಸಮಾರಂಭ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.