ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ರೋಟರಿ ಜಿಲ್ಲೆ 3182ರ ವತಿಯಿಂದ ಹಾಸನದಲ್ಲಿ ನಡೆದ ಸದಸ್ಯತ್ವ ಅಭಿವೃದ್ಧಿ, ಸಾರ್ವಜನಿಕ ಚಿತ್ರಣ ಮತ್ತು ಜಿಲ್ಲಾ ಪ್ರಶಸ್ತಿ ಸಮ್ಮೇಳನ 2025-26 ವಿಚಾರ ಸಂಕಿರಣದಲ್ಲಿ ವಲಯ 2ರ ರೋಟರಿ ಕೋಟ ಸಿಟಿಯು 16 ಜಿಲ್ಲಾ ಪ್ರಶಸ್ತಿಗಳನ್ನು ವಿವಿಧ ವಿಭಾಗದಲ್ಲಿ ಮಾಡಿದ ಸಮಾಜ ಮುಖಿ ಕಾರ್ಯಕ್ರಮ ಕ್ಕೆ ಗುರುತಿಸಿ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ಬಿ. ಎಮ್. ಭಟ್ ವಹಿಸಿದ್ದರು. ಪಿ ಡಿ ಜಿ. ಅಭಿನಂದನ್ ಶೆಟ್ಟಿ, ಪಿಡಿಜಿ ಸಿಎ ದೇವಾನಂದ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಶಸ್ತಿಯನ್ನು ರೋಟರಿ ಕೋಟ ಸಿಟಿಯ ಅಧ್ಯಕ್ಷ ರಾಧಾಕೃಷ್ಣ ಬ್ರಹ್ಮಾವರ್ ಸ್ವೀಕರಿಸಿದರು. ರೋಟರಿ ಕೋಟ ಸಿಟಿಯ ಮಾಜಿ ಅಸಿಸ್ಟೆಂಟ್ ಗವರ್ನರ್ ಸತೀಶ್ ಶೆಟ್ಟಿ, ಶ್ಯಾಮ್ ಸುಂದರ್ ನಾಯರಿ, ಕಾರ್ಯದರ್ಶಿ ಉಮೇಶ್ ನಾಯರಿ, ಸದಸ್ಯರಾದ ನಿತ್ಯಾನಂದ ನಾಯರಿ, ಶಿವಾನಂದ ನಾಯರಿ, ವಿಜಯ್ ದೇವಾಡಿಗ, ರವಿ ಬೇಳೂರು, ರಾಘವೇಂದ್ರ ನಾಯರಿ, ರವಿ ಕುಮಾರ್ ಶೆಟ್ಟಿ ನಡೂರ್ ಉಪಸ್ಥಿತರಿದ್ದರು.











