Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ರೈತನ ಮಗಳ ಪ್ರತಿಭೆಗೆ ವೀಸಾದಲ್ಲಿ ₹46.33 ಲಕ್ಷದ ಉದ್ಯೋಗ – ಆಳ್ವಾಸ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಸಾಧನೆ
    alvas nudisiri

    ರೈತನ ಮಗಳ ಪ್ರತಿಭೆಗೆ ವೀಸಾದಲ್ಲಿ ₹46.33 ಲಕ್ಷದ ಉದ್ಯೋಗ – ಆಳ್ವಾಸ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಸಾಧನೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಮೂಡುಬಿದಿರೆ: ಹಾವೇರಿಯ ಹಟ್ಟಿಮತ್ತೂರು ಗ್ರಾಮದ ರೈತನ ಮಗಳೊಬ್ಬಳ ಪ್ರತಿಭೆ ಇದೀಗ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಅಂತಿಮ ವರ್ಷದ ಮಾಹಿತಿ ವಿಜ್ಞಾನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸೃಷ್ಟಿ ಮಂಜುನಾಥ ಉಳ್ಳಾಗಡ್ಡಿ, ಜಾಗತಿಕ ಪಾವತಿ ತಂತ್ರಜ್ಞಾನ ಸಂಸ್ಥೆ ವೀಸಾದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಆಯ್ಕೆಯಾಗಿದ್ದು, ವೇತನ ಹಾಗೂ ಇನ್ನಿತರ ಸೌಲಭ್ಯಗಳನ್ನು ಒಳಗೊಂಡಂತೆ ₹46.33 ಲಕ್ಷದ ವಾರ್ಷಿಕ  ವೇತನವನ್ನು ಪಡೆದುಕೊಂಡಿದ್ದಾರೆ.

    Click Here

    Call us

    Click Here

    ಆರನೇ ಸೆಮಿಸ್ಟರ್‌ನ ಸಂದರ್ಶನದಿಂದ ವೀಸಾ ಉದ್ಯೋಗ:
    ಸೃಷ್ಟಿಯ ವೃತ್ತಿಜೀವನಕ್ಕೆ ವೀಸಾದಲ್ಲಿನ ಇಂಟರ್ನ್ಶಿಪ್ ಮಹತ್ವದ ತಿರುವು ನೀಡಿತು. ಆಳ್ವಾಸ್‌ನಲ್ಲಿ ವಿದ್ಯಾರ್ಥಿಗಳ ವೃತ್ತಿಪರ ಕೌಶಲ್ಯ ವೃದ್ಧಿಗೆ ಗುಣಮಟ್ಟದ ಇಂಟರ್ನ್ಶಿಪ್‌ಗೆ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, ಅದರ ಭಾಗವಾಗಿ ಆರನೇ ಸೆಮಿಸ್ಟರ್‌ನಲ್ಲಿ ವೀಸಾದಲ್ಲಿ ಇಂಟರ್ನ್ಶಿಪ್ ಮಾಡಲು ಅವಕಾಶ ಪಡೆದರು.  10 ವಾರಗಳ ಇಂಟರ್ನ್ಶಿಪ್ ಅವಧಿಯಲ್ಲಿ ₹90,000 ಸ್ಟೈಪೆಂಡ್‌ನೊಂದಿಗೆ ಕಾರ್ಯನಿರ್ವಹಿಸಿದ ಅವರು, ಸಂಸ್ಥೆಯ ವಾತಾವರಣದಲ್ಲಿ ತಮ್ಮ ತಾಂತ್ರಿಕ ಜ್ಞಾನ ಹಾಗೂ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದರು. ಅವರ ಇಂಟರ್ನ್ಶಿಪ್ ಸಾಧನೆಯಿಂದ ಮೆಚ್ಚಿದ ವೀಸಾ ಸಂಸ್ಥೆ, ಬಳಿಕ ಅವರನ್ನು ಸಾಫ್ಟ್ವೇರ್ ಎಂಜಿನಿಯರ್ ಹುದ್ದೆಗೆ ಪೂರ್ಣಾವಧಿ ಉದ್ಯೋಗಕ್ಕೆ ಆಯ್ಕೆ ಮಾಡಿತು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಇಂಟರ್ನ್ಶಿಪ್ ಅವಕಾಶಗಳನ್ನು ಕಲ್ಪಿಸುವ ಆಳ್ವಾಸ್‌ನ ಪ್ರಯತ್ನವು ಸೃಷ್ಟಿಯ ಪಾಲಿಗೆ ನೇರವಾಗಿ ಜಾಗತಿಕ ಉದ್ಯೋಗಾವಕಾಶವಾಗಿ ಪರಿಣಮಿಸಿತು.

    ₹46.33 ಲಕ್ಷದ ಒಟ್ಟು ಮೌಲ್ಯ:
    ವೀಸಾ ಸಂಸ್ಥೆಯ ಉದ್ಯೋಗ ಕೊಡುಗೆಯಲ್ಲಿ ವೇತನದ ಜತೆಗೆ ಹಲವು ಸೌಲಭ್ಯಗಳನ್ನೂ ಒದಗಿಸಲಾಗಿದೆ. ಕುಟುಂಬಕ್ಕೆ ₹7.50 ಲಕ್ಷ ಮೌಲ್ಯದ ವೈದ್ಯಕೀಯ ವಿಮೆ, ₹25,000ದ ಹೊರರೋಗಿ ಚಿಕಿತ್ಸಾ ಸೌಲಭ್ಯ ಹಾಗೂ ಗರಿಷ್ಠ ₹3 ಲಕ್ಷದವರೆಗೆ ಶಿಕ್ಷಣ ಸಹಾಯಧನ ದೊರೆಯಲಿದೆ. ಇದರೊಂದಿಗೆ ಜಿಮ್ ಸೌಲಭ್ಯ, ಕಚೇರಿ ಸಾರಿಗೆ ಹಾಗೂ ವಾರ್ಷಿಕ ಆರೋಗ್ಯ ತಪಾಸಣೆಯಂತಹ ಹೆಚ್ಚುವರಿ ಸೌಲಭ್ಯಗಳೂ ಲಭ್ಯವಿವೆ.

    ಇಂಟರ್ನ್ಶಿಪ್ ಕನಸಿನ ಉದ್ಯೋಗಕ್ಕೆ ದಾರಿ ಮಾಡಿಕೊಟ್ಟಿತು: ಸೃಷ್ಠಿ
    ಆಳ್ವಾಸ್ ಇಂಟರ್ನ್ಶಿಪ್‌ಗೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಸೂಕ್ತವಾದ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ದೊರೆಯುವಂತೆ ಅವಕಾಶಗಳನ್ನು ಕಲ್ಪಿಸುತ್ತದೆ. ವೀಸಾದಲ್ಲಿ ದೊರೆತ ಇಂಟರ್ನ್ಶಿಪ್ ನನಗೆ ಅಮೂಲ್ಯವಾದ ಉದ್ಯಮ ಅನುಭವ ನೀಡಿತು. ಅದೇ ಅವಕಾಶ ನನ್ನ ಕನಸಿನ ಉದ್ಯೋಗ ಪಡೆಯಲು ನೆರವಾಯಿತು ಎಂದು ಸೃಷ್ಟಿ ತಿಳಿಸಿದರು.

    ಗ್ರಾಮೀಣ ಪ್ರತಿಭೆಗೆ ಜಾಗತಿಕ: ಡಾ ಆಳ್ವ
    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ,  ಸೃಷ್ಟಿಯ ಸಾಧನೆಯನ್ನು ಅಭಿನಂದಿಸಿ, ಆಳ್ವಾಸ್‌ನ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು. “ಗ್ರಾಮೀಣ ಹಿನ್ನೆಲೆಯ ರೈತ ಕುಟುಂಬದಿಂದ ಬಂದಿರುವ ಸೃಷ್ಟಿ ಅವರು ತಮ್ಮ ಪ್ರತಿಭೆ, ಪರಿಶ್ರಮ ಹಾಗೂ ಕಾರ್ಯಕ್ಷಮತೆಯ ಮೂಲಕ ಜಾಗತಿಕ ಸಂಸ್ಥೆಯಲ್ಲಿ ಅವಕಾಶ ಪಡೆದಿರುವುದು ಗಮನಾರ್ಹ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಸೂಕ್ತ ಉದ್ಯಮ ಸಂಪರ್ಕ, ಇಂಟರ್ನ್ಶಿಪ್ ಹಾಗೂ ಪ್ರಾಯೋಗಿಕ ಅನುಭವ ದೊರೆತಾಗ ಅವರ ಪ್ರತಿಭೆಗೆ ಜಾಗತಿಕ ಮಟ್ಟದಲ್ಲಿ ಅವಕಾಶಗಳು ತೆರೆದುಕೊಳ್ಳುತ್ತವೆ. ಸೃಷ್ಟಿ ಅವರ ಸಾಧನೆ ಇದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದರು.  ವಿದ್ಯಾರ್ಥಿಯ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ, ಪ್ರಾಚರ‍್ಯರು, ಅಧ್ಯಾಪಕ ವೃಂದದವರು ಶ್ಲಾಘಿಸಿದ್ದಾರೆ. 

    Click here

    Click here

    Click here

    Call us

    Call us

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ನಾವು ಎಲ್ಲೇ ಹೋದರೂ ನಮ್ಮ ಮಾತೃಭಾಷೆಯ ಸೊಗಡನ್ನು ಬಿಡಬಾರದು: ಡಾ. ಶ್ರೀಕಾಂತ್ ಸಿದ್ದಾಪುರ

    01/09/2026

    ಆಳ್ವಾಸ್ ಕಾಲೇಜಿನಲ್ಲಿ ಮಣಿಪುರಿ ಭಾಷಾ ದಿನಾಚರಣೆ

    31/08/2026

    ಭಂಡಾರ್ಕಾರ್ಸ್ ಕಾಲೇಜು: ʼಕುಂದಗನ್ನಡದ ಮಾಳಿ-ಗುಡ್ಗ್ – ಮಿಂಚ್’ ಕಾರ್ಯಕ್ರಮ

    31/08/2026
    Leave A Reply Cancel Reply

    eighteen + 9 =

    Call us

    Click Here

    Call us

    Call us

    Call us
    Highest Viewed Recently
    • ನಾವು ಎಲ್ಲೇ ಹೋದರೂ ನಮ್ಮ ಮಾತೃಭಾಷೆಯ ಸೊಗಡನ್ನು ಬಿಡಬಾರದು: ಡಾ. ಶ್ರೀಕಾಂತ್ ಸಿದ್ದಾಪುರ
    • ಯಡ್ತರೆ: ವಿಷಕಾರಿ ಹಾವು ಕಚ್ಚಿ ವ್ಯಕ್ತಿ ಸಾವು
    • ರೈತನ ಮಗಳ ಪ್ರತಿಭೆಗೆ ವೀಸಾದಲ್ಲಿ ₹46.33 ಲಕ್ಷದ ಉದ್ಯೋಗ – ಆಳ್ವಾಸ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಸಾಧನೆ
    • ಅಂಡರ್-15 ರಾಷ್ಟ್ರೀಯ ಚೆಸ್ ಚಾಂಪಿಯನ್‌ಶಿಪ್‌ಗೆ ಆರಾಧ್ಯ ಎಸ್. ಶೆಟ್ಟಿ ಆಯ್ಕೆ
    • ಹದಿನಾರು ಜಿಲ್ಲಾ ಪ್ರಶಸ್ತಿಗಳನ್ನು ಮುಡಿಗೇರಿಸಿದ ರೋಟರಿ ಕೋಟ ಸಿಟಿ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.