ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಮೂಕಾಂಬಿಕಾ ಪ್ರೌಢಶಾಲೆ ಮಾವಿನಕಟ್ಟೆ ಮತ್ತು ಶಾಲಾ ಶಿಕ್ಷಣ ಇಲಾಖೆ ಬೈಂದೂರು ಇವರ ಆಶ್ರಯದಲ್ಲಿ ವಂಡ್ಸೆ ಹೋಬಳಿ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ 14 ಮತ್ತು 17ರ ವಯೋಮಿತಿ ಬಾಲಕ, ಬಾಲಕಿಯರ ಕಬ್ಬಡಿ ಪಂದ್ಯಾಟ ಮೂಕಾಂಬಿಕಾ ಕ್ರೀಡಾಂಗಣ ಮಾವಿನಕಟ್ಟೆಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಂಡ್ಲೂರು ಠಾಣಾಧಿಕಾರಿಗಳಾದ ನಿರಂಜನ್ ಗೌಡ ದೀಪ ಬೆಳಗಿಸುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಾಯಣ ನಾಯಕ ನೇರಳಕಟ್ಟೆ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧೀಶ ಶೆಟ್ಟಿ, ಸೌಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಾಡ್ಕಟು ಅಶೋಕ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯ ಕುಶಲ ಶೆಟ್ಟಿ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ಇಂಟರ್ಯಕ್ಟ್ ಕ್ಲಬ್ ಚೇರಮಾನ್ ಶೇಖರ ಎನ್. ಶೆಟ್ಟಿ, ಪ್ರಭಾರ ದೈಹಿಕ ಶಿಕ್ಷಣ ಅಧಿಕಾರ ಅರುಣ ಕುಮಾರ್ ಶೆಟ್ಟಿ, ರೋಟರಿ ಮಿಡ್ ಟೌನ್ ಅಧ್ಯಕ್ಷ ಸಚಿನ್ ಕುಮಾರ್ ಶೆಟ್ಟಿ,ದೈಹಿಕ ಶಿಕ್ಷಣ ಶಿಕ್ಷಕ ಸತೀಶ ಕುಮಾರ್ ಶೆಟ್ಟಿ ಉಪಸ್ಥಿತಿತರಿದರು.
ಮುಖ್ಯೋಪಾಧ್ಯಾಯಿನಿ ಬೇಬಿ ಶೆಟ್ಟಿ ಸ್ವಾಗತಿಸಿದರು, ಅಧ್ಯಾಪಕರಾದ ಅನಿತಾ, ಕಾಂತಿ ಶೆಟ್ಟಿ, ಮಲ್ಲಿಕಾ ಶೆಟ್ಟಿ, ಸರಸ್ವತಿ, ಪ್ರಮೋದಾ ಶೆಟ್ಟಿ ವಿವಿಧ ಚಟುವಟಿಕೆ ನಿರ್ವಹಿಸಿದರು. ಬೇಬಿ ಮತ್ತು ಗಣೇಶ ಸಹಕರಿಸಿದರು. ಶಿಕ್ಷಕಿ ಗೀತಾ ಧನ್ಯವಾದ ಸಲ್ಲಿಸಿದರು. ಶಿಕ್ಷಕ ರವಿಶಂಕರ್ ಹೆಗ್ಡೆ ಕಾರ್ಯ ಕ್ರಮ ನಿರೂಪಿಸಿದರು.















