ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಳೆದ ಹದಿನೇಳು ವರ್ಷಗಳಿಂದ ಸಂಸ್ಥೆಯು ಯಶಸ್ವಿಯಾಗಿ ಮುನ್ನಡೆಯುತ್ತಾ ಬ೦ದಿದೆ. ಹಿರಿಯರ ಮಾರ್ಗದರ್ಶನ, ಪ್ರೇರಣೆಯಿಂದ ಸಂಸ್ಥೆಯು ದಿನದಿಂದ ದಿನಕ್ಕೆ ಅಭಿವೃದ್ಧಿ ಪಥದತ್ತ ಸಾಗಿ ಲಾಭ ಗಳಿಸುತ್ತಾ ಬಂದಿದೆ. ಈ ವರ್ಷ 300 ಕೋಟಿ ವ್ಯವಹಾರವನ್ನು ಮಾಡಿ 80 ಲಕ್ಷಕ್ಕೂ ಮಿಕ್ಕಿಲಾಭ ಗಳಿಸಿದೆ ಎ೦ದು ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಎಸ್. ರಾಜು ಪೂಜಾರಿ ಹೇಳಿದರು.

ಅವರು ಭಾನುವಾರ ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸೊಸೈಟಿಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯು ಸದೃಢವಾಗಿ ನಿಂತಿದೆ. ಸಂಸ್ಥೆಯು 57 ಕೋಟಿ ಠೇವಣಿಯನ್ನು ಹೊಂದಿದೆ. 49 ಕೋಟಿ ಸಾಲ ನೀಡಲಾಗಿದೆ. 1 ಕೋಟಿ 16 ಲಕ್ಷ ಪಾಲು ಬಂಡವಾಳ ಹೊಂದಿದೆ. ವಿವಿಧ ಆರ್ಥಿಕ ಸಂಸ್ಥೆಗಳಲ್ಲಿ 14 ಕೋಟಿ 57 ಲಕ್ಷ ಹೂಡಿಕೆ ಮಾಡಲಾಗಿದೆ. ಸಂಸ್ಥೆಯು 4 ಕೋಟಿಗೂ ಮಿಕ್ಕಿ ನಿಧಿಗಳನ್ನು ಹೊಂದಿದೆ ಎಂದು ತಿಳಿಸಿದ ಎಸ್.ರಾಜು ಪೂಜಾರಿಯವರು ಇದೇ ಸಂದರ್ಭದಲ್ಲಿ 13% ಡಿವಿಡೆಂಡ್ ಘೋಷಣೆ ಮಾಡಿದರು.


ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಟ್ಟಣ್ಣ ರೈ ವಾರ್ಷಿಕ ವರದಿಯನ್ನು ಮಂಡಿಸಿದರು. ಸಂಸ್ಥೆಯ ಅಭಿವೃದ್ಧಿಯನ್ನು ಅಂಕಿಅಂಶ ಸಮೇತ ಸಭೆಯ ಗಮನಕ್ಕೆ ತಂದು ಸದಸ್ಯರ ಒಪ್ಪಿಗೆ ಪಡೆದರು.
ಸಂಸ್ಥೆಯ ಉಪಾಧ್ಯಕ್ಷರಾದ ಎಂ.ವಿನಾಯಕ ರಾವ್ ಮರವಂತೆ, ನಿರ್ದೇಶಕರಾದ ಪ್ರಶಾಂತ ಪೂಜಾರಿ, ಮಂಜು ಪೂಜಾರಿ, ಮಂಜುನಾಥ ಪೂಜಾರಿ, ಸೀತರಾಮ ಮಡಿವಾಳ, ರಾಮಕೃಷ್ಣ ಖಾರ್ವಿ, ಪುಟ್ಟ ಎಂ ಬಿಲ್ಲವ, ಅಣ್ಣಪ್ಪ ಪೂಜಾರಿ, ಬೇಬಿ, ನಾಗರತ್ನ ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿ ಸಂತೋಷ ಸ್ವಾಗತಿಸಿದರು. ಎಂ.ವಿನಾಯಕ ರಾವ್ ವಂದಿಸಿದರು.











