ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಶ್ರೀ ಗುರುನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಸಾಲಿಗ್ರಾಮ ಇದರ ನೂತನ ವಿಸೃತ ಕಟ್ಟಡ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ಇತ್ತೀಚಿಗೆ ಜರಗಿತು.
ಸಂಘದ ಅಧ್ಯಕ್ಷ ಆನಂದ ಸಿ. ಕುಂದರ್ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಿ ಸಂಘದ ನಿವೇಶದಲ್ಲಿ ರೂ.1.50 ಕೋಟಿ ಅಂದಾಜು ವಿನ್ಯಾಸದಲ್ಲಿ ವಿಸ್ತೃತ ಕಟ್ಟಡವನ್ನು ನಿರ್ಮಿಸಿ ಶೀಘ್ರ ಸದಸ್ಯರ ಸೇವೆಗೆ ಅರ್ಪಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರುಗಳಾದ ಸಂಜೀವ ಜಿ., ಮಂಜುನಾಥ ಎಸ್.ಕೆ., ಶಂಕರ ಬಂಗೇರ, ವಸಂತ ಶೆಟ್ಟಿ, ವೈ. ಕೃಷ್ಣಮೂರ್ತಿ ಐತಾಳ್, ಕೃಷ್ಣಪ್ಪ ಮರಕಾಲ, ಸುಂದರ, ವೈ. ಗೋಪಾಲ ಭಟ್ಟ, ಶಾಂತಾ ಭಟ್ಟ, ನಾಗರತ್ನ ಬಾಯರಿ ಮತ್ತು ಸವಿತಾ ಪೂಜಾರಿ ಮತ್ತು ಮುಖ್ಯಕಾರ್ಯನಿರ್ವಾಹಕ ಜಿ.ಎಸ್. ಸೋಮಾಯಾಜಿ ಹಾಗೂ ಶಿಬಂಧಿವರ್ಗ ಮತ್ತು ಸದಸ್ಯವರ್ಗ ಉಪಸ್ಥಿತರಿದ್ದರು.












