ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸೈಬರ್ ವಂಚಕರಿಂದ ವ್ಯಕ್ತಿಯೊಬ್ಬರು ವಂಚನೆಗೆ ಒಳಗಾಗಿ ಕ್ರೆಡಿಟ್ ಕಾರ್ಡ್ ಮೂಲಕ 2.24 ಲಕ್ಷ ರೂ. ಕಳೆದುಕೊಂಡ ಘಟನೆ ಬುಧವಾರ ಕುಂದಾಪುರದಲ್ಲಿ ಸಂಭವಿಸಿದೆ.
ದೂರುದಾರ ಶೇಖರ ವಂಚನೆಗೊಳಗಾದವರು. ಅವರಿಗೆ ಅಪರಿಚಿತ ವ್ಯಕ್ತಿ ಹಿಂದಿ ಭಾಷೆಯಲ್ಲಿ ಕರೆಮಾಡಿ ನೀವು ಸೀನಿಯರ್ ಸಿಟಿಜನ್ ಆಗಿರುವುದರಿಂದ ಕ್ರೆಡಿಟ್ ಕಾರ್ಡ್ ನೀಡುತ್ತಿದ್ದೇವೆ ಎಂದು ಹೇಳಿ ಮಾಹಿತಿ ಪಡೆದು ಎಪಿಕೆ ಫೈಲ್ ಕಳುಹಿಸಿ ಬ್ಯಾಂಕ್ ಆಫ್ ಬರೋಡಾಕ್ಕೆ ಸಂಬಂಧಿಸಿದಂತೆ ವಿವರವನ್ನು ಕೇಳಿದ್ದಾನೆ.
ಸಂಜೆ ಮೊಬೈಲ್ ಇನ್ಬಾಕ್ಸ್ ಚೆಕ್ ಮಾಡಿದಾಗ ಅವರ ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ನಿಂದ 1,30,490 ರೂ., 22,167 ರೂ., 10,000 ರೂ., ಮತ್ತು ಆರ್ಬಿಎಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ನಿಂದ 3,468 ರೂ., 20,000 ರೂ., 37,999 ರೂ. ಸೇರಿ ಒಟ್ಟು 2,24,124 ರೂ. ಹಣವನ್ನು ಸೈಬರ್ ವಂಚಕರು ವರ್ಗಾಯಿಸಿಕೊಂಡಿರುತ್ತಾರೆ.
ಶೇಖರ ಅವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















